ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: ʻದಯವಿಟ್ಟು ನಿವೃತ್ತಿ ಪಡೆಯಿರಿʼ-ರೋಹಿತ್‌ ಶರ್ಮಾ ವಿರುದ್ದ ಫ್ಯಾನ್ಸ್‌ ಕಿಡಿ!

Fans Trolls Rohit sharma after Failure in 1st ODI: ಇಂಗ್ಲೆಂಡ್‌ ವಿರುದ್ಧ ಮೊದಲನೇ ಏಕದಿನ ಪಂದ್ಯದಲ್ಲಿಯೂ ಭಾರತ ತಂಡದ ನಾಯಕ ರೋಹಿತ್‌ ಶರ್ಮಾ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತ ತಂಡದ ನಾಯಕ ನಿವೃತ್ತಿ ಪಡೆಯಬೇಕೆಂದು ಅಭಿಮಾನಿಗಳು ಒತ್ತಾಯಿಸಿದ್ದಾರೆ.

IND vs ENG: ʻಹುಟ್ಟೂರಿನಲ್ಲಿಯೂ ವೈಫಲ್ಯʼ-ರೋಹಿತ್‌ ಶರ್ಮಾ ನಿವೃತ್ತಿಗೆ ಆಗ್ರಹಿಸಿದ ಫ್ಯಾನ್ಸ್‌!

Rohit Sharma Failure

Profile Ramesh Kote Feb 6, 2025 8:11 PM

ನಾಗ್ಪುರ: ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ (IND vs ENG) ಮೊದಲ ಪಂದ್ಯದಲ್ಲಿ ಟೀಮ್‌ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿದ್ದಾರೆ. ಯಶಸ್ವಿ ಜೈಸ್ವಾಲ್ ಜೊತೆ ಇನಿಂಗ್ಸ್‌ ಆರಂಭಿಸಿದ ರೋಹಿತ್ ಶರ್ಮಾ, ಕೇವಲ 2 ರನ್ ಗಳಿಸಿ ಅತ್ಯಂತ ಹೀನಾಯವಾಗಿ ವಿಕೆಟ್‌ ಒಪ್ಪಿಸಿದರು. ಈ ಇನಿಂಗ್ಸ್‌ನಲ್ಲಿ ಖಾತೆ ತೆರೆಯಲು ರೋಹಿತ್ ಶರ್ಮಾಗೆ 5 ಎಸೆತಗಳು ಬೇಕಾಯಿತು ಆದರೆ ದುರದೃಷ್ಟವಶಾತ್ ಅವರು ಈ ಪಂದ್ಯದಲ್ಲಿ ಎರಡಂಕಿ ವೈಯಕ್ತಿಕ ಮೊತ್ತವನ್ನು ಕಲೆ ಹಾಕಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ರೋಹಿತ್‌ ಶರ್ಮಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕ್ರಿಕೆಟ್‌ ವೃತ್ತಿ ಜೀವನಕ್ಕೆ ವಿದಾಯ ಹೇಳಿ ಎಂದು ಆಗ್ರಹಿಸಿದ್ದಾರೆ.

ಇದಕ್ಕೂ ಮುನ್ನ ಆಸ್ಟ್ರೇಲಿಯಾ ಪ್ರವಾಸದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್‌ ಸರಣಿಯಲ್ಲಿಯೂ ರೋಹಿತ್ ಶರ್ಮಾ ವಿಫಲರಾಗಿದ್ದರು. ಆಸ್ಟ್ರೇಲಿಯಾ ವಿರುದ್ಧದ ಈ ಟೆಸ್ಟ್ ಸರಣಿಯಲ್ಲಿ ರೋಹಿತ್ ಶರ್ಮಾ ಕೇವಲ 31 ರನ್ ಗಳಿಗೆ ಸೀಮಿತರಾಗಿದ್ದರು. ಈ ಹಿನ್ನೆಲೆಯಲ್ಲಿ ಅವರ ಕ್ರಿಕೆಟ್‌ ವೃತ್ತಿ ಬದುಕಿನ ಬಗ್ಗೆ ಪ್ರಶ್ನೆಗಳು ಎದ್ದಿದ್ದವು. ಆದಾಗ್ಯೂ, ಆಸ್ಟ್ರೇಲಿಯಾದಿಂದ ತವರಿಗೆ ಮರಳಿದ ನಂತರ, ಅವರು ಮುಂಬೈ ಪರ ರಣಜಿ ಟ್ರೋಫಿ ಪಂದ್ಯದಲ್ಲಿ ಆಡಿದ್ದರು. ಆದರೆ, ದೇಶಿ ಪಂದ್ಯದಲ್ಲಿಯೂ ವೈಫಲ್ಯ ಅನುಭವಿಸಿದ್ದರು. ಇದೀಗ ಮೊದಲನೇ ಏಕದಿನ ಪಂದ್ಯದಲ್ಲಿಯೂ ತಮ್ಮ ಬ್ಯಾಟಿಂಗ್‌ ವೈಫಲ್ಯವನ್ನು ಮುಂದುವರಿಸಿದ್ದಾರೆ.

IND vs ENG: ಇಂಗ್ಲೆಂಡ್‌ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ ವಿಶೇಷ ದಾಖಲೆ ಬರೆದ ರವೀಂದ್ರ ಜಡೇಜಾ!

ದಯವಿಟ್ಟು ನಿವೃತ್ತಿ ಘೋಷಿಸಿ

ಮೊದಲನೇ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ ಬೆನ್ನಲ್ಲೆ ಅಭಿಮಾನಿಗಳು ರೋಹಿತ್‌ ಶರ್ಮಾ ವಿರುದ್ಧ ಕಿಡಿ ಕಾರಿದ್ದಾರೆ. ದಯವಿಟ್ಟು ಕ್ರಿಕೆಟ್‌ ವೃತ್ತಿ ಜೀವನಕ್ಕೆ ವಿದಾಯ ಹೇಳಿ ಎಂದು ಆಗ್ರಹಿಸಿದ್ದಾರೆ. "ರೋಹಿತ್‌ ಶರ್ಮಾ ಅವರು ಕ್ರಿಕೆಟ್‌ ವೃತ್ತಿ ಜೀವನಕ್ಕೆ ವಿದಾಯ ಹೇಳಬೇಕೆಂದರೆ ಈ ರೀತಿಯ ಪೋಸ್ಟ್‌ ಹಾಕಿ," ಎಂದು ಅಭಿಮಾನಿಯೊಬ್ಬರು ಟ್ವೀಟ್‌ ಮಾಡಿದ್ದಾರೆ.



ರೋಹಿತ್‌ ಶರ್ಮಾ ಪರಿಣಾಮಕಾರಿಯಾಗಿ ಇಲ್ಲ

"ರೋಹಿತ್‌ ಶರ್ಮಾ ಅವರು ಪರಿಣಾಮಕಾರಿಯಾಗಿ ಆಡುವುದನ್ನು ಕಳೆದುಕೊಂಡಿದ್ದಾರೆ. ಭಾರತ ಅಥವಾ ಭಾರತದ ಹೊರಗೆ ಟೆಸ್ಟ್‌ ಆಗಲಿ, ಒಡಿಐ ಆಗಲಿ ಅಥವಾ ಟಿ20ಐ ಆಗಲಿ, ಪವರ್‌ಪ್ಲೇನಲ್ಲಿ ಹಾಗೂ ಪವರ್‌ಪ್ಲೇ ಹೊರಗೆ ಅವರು ಪರಿಣಾಮಕಾರಿಯಾಗಿ ಆಡುತ್ತಿಲ್ಲ," ಎಂದು ಮತ್ತೊಬ್ಬ ಅಭಿಮಾನಿ ಟ್ವೀಟ್‌ ಮಾಡಿ ಆಗ್ರಹಿಸಿದ್ದಾರೆ.



ಇಂಗ್ಲೆಂಡ್‌ 248ಕ್ಕೆ ಆಲ್‌ಔಟ್‌

ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದಿದ್ದ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದರು. ಆದಾಗ್ಯೂ, ಜೋಸ್ ಬಟ್ಲರ್ ಮತ್ತು ಜಾಕೋಬ್ ಬೆಥೆಲ್ ಹೊರತುಪಡಿಸಿ, ಇಂಗ್ಲೆಂಡ್‌ನ ಬೇರೆ ಯಾವುದೇ ಬ್ಯಾಟ್ಸ್‌ಮನ್ ಬ್ಯಾಟಿಂಗ್‌ನಲ್ಲಿ ಛಾಪು ಮೂಡಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಪ್ರವಾಸಿ ತಂಡ ಕೇವಲ 248 ರನ್‌ಗಳಿಗೆ ಆಲ್‌ಔಟ್‌ ಆಗಿತ್ತು. ಇಂಗ್ಲೆಂಡ್‌ ಪರ 52 ರನ್‌ ಗಳಿಸಿದರೆ, ಜಾಕೋಬ್‌ ಬೆಥೆಲ್‌ 51 ರನ್‌ಗಳನ್ನು ಕಲೆ ಹಾಕಿದ್ದರು.

IND vs ENG: ಒಂದೇ ಓವರ್‌ನಲ್ಲಿ 26 ರನ್ ನೀಡಿ ಅನಗತ್ಯ ದಾಖಲೆ ಹೆಗಲೇರಿಸಿಕೊಂಡ ಹರ್ಷಿತ್ ರಾಣಾ!

ಭಾರತ ತಂಡದ ಪರ ಬೌಲಿಂಗ್‌ನಲ್ಲಿ ಹರ್ಷಿತ್ ರಾಣಾ ಅದ್ಭುತ ಬೌಲಿಂಗ್‌ ಪ್ರದರ್ಶನವನ್ನು ತೋರಿದರು. ಇದು ಹರ್ಷಿತ್‌ ರಾಣಾಗೆ ಏಕದಿನ ಕ್ರಿಕೆಟ್‌ ಪದಾರ್ಪಣೆ ಪಂದ್ಯವಾಗಿದ್ದು, 3 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಹರ್ಷಿತ್ ರಾಣಾ ಜೊತೆಗೆ ರವೀಂದ್ರ ಜಡೇಜಾ ಕೂಡ ಮೂರು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಮೊಹಮ್ಮದ್ ಶಮಿ, ಅಕ್ಷರ್ ಪಟೇಲ್ ಮತ್ತು ಕುಲ್‌ದೀಪ್ ಯಾದವ್ ಕೂಡ ತಲಾ ಒಂದೊಂದು ವಿಕೆಟ್ ಪಡೆದರು.