AT Raghu passes away: ʼಮಂಡ್ಯದ ಗಂಡುʼ ಖ್ಯಾತಿಯ ಚಿತ್ರ ನಿರ್ದೇಶಕ ಎ.ಟಿ ರಘು ಇನ್ನಿಲ್ಲ
ʼಮಂಡ್ಯದ ಗಂಡು’ ಸೇರಿದಂತೆ 55 ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ಎ.ಟಿ ರಘು (AT Raghu passes away) ಅವರು ಅಂಬರೀಷ್ ಅವರ ಅಚ್ಚುಮೆಚ್ಚಿನ ನಿರ್ದೇಶಕರಾಗಿದ್ದರು. ಇವರು ನಿರ್ದೇಶಿಸಿದ ಚಿತ್ರಗಳಲ್ಲಿ ಹೆಚ್ಚಿನವುಗಳ ನಾಯಕ ನಟ ಅಂಬರೀಷ್ ಆಗಿದ್ದು, ಗಲ್ಲಾಪೆಟ್ಟಿಗೆಯಲ್ಲಿ ಬಹುತೇಕ ಯಶಸ್ಸು ಕಂಡಿವೆ.

ಚಿತ್ರ ನಿರ್ದೇಶಕ ಎ.ಟಿ ರಘು

ಬೆಂಗಳೂರು : ಅನಾರೋಗ್ಯದಿಂದ ಬಳಲುತ್ತಿದ್ದ ಸ್ಯಾಂಡಲ್ವುಡ್ನ (Kannada Film Director) ಖ್ಯಾತ ನಿರ್ದೇಶಕ, ನಿರ್ಮಾಪಕ, ನಟ ಎ.ಟಿ. ರಘು (AT Raghu passes away) ನಿಧನರಾಗಿದ್ದಾರೆ. ದೀರ್ಘಕಾಲದ ಅಸೌಖ್ಯದಿಂದ ಬಳಲುತ್ತಿದ್ದ ರಘು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ʼಮಂಡ್ಯದ ಗಂಡು’ ಸೇರಿದಂತೆ 55 ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ಅವರು ಅಂಬರೀಷ್ (Ambareesh) ಅವರ ಅಚ್ಚುಮೆಚ್ಚಿನ ನಿರ್ದೇಶಕರಾಗಿದ್ದರು. ಅಂಬರೀಶ್ ಅವರ ಅಭಿನಯದ 27 ಸಿನಿಮಾಗಳನ್ನು ಎ.ಟಿ. ರಘು ನಿರ್ದೇಶನ ಮಾಡಿದ್ದಾರೆ.
ಅನೇಕ ಚಿತ್ರಗಳಲ್ಲಿ ಅವರು ಅಭಿನಯಿಸಿರುವ ರಘು ನಿರ್ದೇಶಕರು ಆಗಿರುವಂತೆ ನಿರ್ಮಾಪಕರೂ ನಟರೂ ಹೌದು. 1980ರಿಂದ 1998ರವರೆಗೆ ಸುಮಾರು ಇಪ್ಪತ್ತೈದಕ್ಕಿಂತಲೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಇವರು ನಿರ್ದೇಶಿಸಿದ ಚಿತ್ರಗಳಲ್ಲಿ ಹೆಚ್ಚಿನವುಗಳ ನಾಯಕ ನಟ ಅಂಬರೀಷ್ ಆಗಿದ್ದಾರೆ. ಬಹುತೇಕ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಯಶಸ್ಸನ್ನು ಕಂಡಿವೆ. ಆ ದೃಷ್ಟಿಯಲ್ಲಿ ಇವರೊಬ್ಬ ಜನಪ್ರಿಯ ಹಾಗೂ ಜಯಶೀಲ ನಿರ್ದೇಶಕರು. ಕೊಡಗಿನಲ್ಲಿ ಜನಿಸಿದ ಇವರು ಕೊಡವ ಜನಾಂಗದವರಾಗಿದ್ದು, ಆಪಾಡಂಡ ಮನೆತನಕ್ಕೆ ಸೇರಿದವರು.
ನ್ಯಾಯ ನೀತಿ ಧರ್ಮ, ಅವಳ ನೆರಳು, ಅವಳ ನೆರಳು, ಅಂತಿಮ ತೀರ್ಪು, ಇನ್ಸ್ಪೆಕ್ಟರ್ ಕ್ರಾಂತಿಕುಮಾರ್, ಮಿಡಿದ ಹೃದಯಗಳು, ಮಂಡ್ಯದ ಗಂಡು, ಅಗ್ನಿಸಾಕ್ಷಿ ಸೇರಿದಂತೆ ಸುಮಾರು 55 ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ದೇಶಿಸಿದ್ದರು.
ಇದನ್ನೂ ಓದಿ: Vamana Nandavara: ತುಳು- ಕನ್ನಡ ವಿದ್ವಾಂಸ ವಾಮನ ನಂದಾವರ ನಿಧನ