ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

RCB vs MI ಪಂದ್ಯದ ವೇಳೆ ಮಧ್ಯದ ಬೆರಳು ತೋರಿಸಿದ ಟಿಮ್‌ ಡೇವಿಡ್‌ ಬಿತ್ತು ಭಾರಿ ದಂಡ!

IPL 2026: ಮುಂಬೈ ಇಂಡಿಯನ್ಸ್‌ ವಿರುದ್ಧದ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಂದ್ಯದಲ್ಲಿ ಮಧ್ಯದ ಬೆರಳು ತೋರಿಸಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಟಿಮ್‌ ಡೇವಿಡ್‌ಗೆ ಭಾರಿ ದಂಡವನ್ನು ವಿಧಿಸಲಾಗಿದೆ. ಅವರಿಗೆ ಪಂದ್ಯದ ಸಂಭಾವನೆಯಲ್ಲಿ ಶೇಕಡಾ 30 ರಷ್ಟು ದಂಡವನ್ನು ವಿಧಿಸಲಾಗಿದೆ.

RCB vs MI ಪಂದ್ಯದಲ್ಲಿ ಮಧ್ಯದ ಬೆರಳು ತೋರಿಸಿದ ಟಿಮ್‌ ಡೇವಿಡ್‌ಗೆ ದಂಡ!

ಮಧ್ಯದ ಬೆರಳು ತೋರಿಸಿದ ಟಿಮ್‌ ಡೇವಿಡ್‌ಗೆ ಭಾರಿ ದಂಡ. -

Profile
Ramesh Kote May 11, 2026 8:10 PM

ನವದೆಹಲಿ: ಮುಂಬೈ ಇಂಡಿಯನ್ಸ್‌ ವಿರುದ್ಧದ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯ ಪಂದ್ಯದಲ್ಲಿ ಅಸಭ್ಯವಾಗಿ ವರ್ತಿಸಿ ಐಪಿಎಲ್‌ ನಿಯಮವನ್ನು ಉಲ್ಲಂಘಿಸಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಟಿಮ್‌ ಡೇವಿಡ್‌ಗೆ (Tim David) ಪಂದ್ಯದ ಸಂಭಾವನೆಯಲ್ಲಿ ಶೇ 30 ರಷ್ಟು ದಂಡವನ್ನು ವಿಧಿಸಲಾಗಿದೆ. ಮೇ 10 ರಂದು ಭಾನುವಾರ ರಾಯ್ಪುರದ ಶಾಹೀದ್‌ ವೀರ್‌ ನಾರಾಯಣ್‌ ಸಿಂಗ್‌ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಈ ಘಟನೆ ನಡೆದಿತ್ತು, ಹಾಗಾಗಿ ಐಪಿಎಲ್‌ ಆಡಳಿತ ಮಂಡಳಿ ಈ ಕ್ರಮವನ್ನು ಜರುಗಿಸಿದೆ.

ಪಂದ್ಯದಲ್ಲಿ ಆಕ್ಷೇಪಾರ್ಹ ಸನ್ನೆ ತೋರಿಸಿ ಐಪಿಎಲ್‌ನ ಕೋಡ್‌ ಆಫ್‌ ಕಂಡಕ್ಟ್‌ ಆರ್ಟಿಲಕ್‌ 2.6 ನಿಯಮವನ್ನು ಉಲ್ಲಂಘನೆ ಮಾಡಿದ ಆಸ್ಟ್ರೇಲಿಯನ್‌ ಪವರ್‌ ಹಿಟ್ಟರ್‌ ಪ್ರಮಾದ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಆರ್‌ಸಿಬಿ ತಂಡ ಮುಂಬೈ ಇಂಡಿಯನ್ಸ್‌ ವಿರುದ್ದದ ಕೊನೆಯ ಎಸೆತದಲ್ಲಿ ರೋಚಕ ಗೆಲುವು ಸಾಧಿಸಿದ ಬೆನ್ನಲ್ಲೆ ಡಗೌಟ್‌ನಲ್ಲಿ ನಿಂತಿದ್ದ ಟಿಮ್‌ ಡೇವಿಡ್‌ ಎರಡೂ ಕೈಗಳ ಮಧ್ಯದ ಬೆರಳುಗಳನ್ನು ತೋರಿಸಿದ್ದರು. ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದ್ದು, ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು.

ಮುಂಬೈ ವಿರುದ್ಧ ಅಸಭ್ಯ ರೀತಿಯ ಸಂಭ್ರಮಾರಣೆ ಮಾಡಿದ ಟಿಮ್‌ ಡೇವಿಡ್‌; ವಿಡಿಯೊ ವೈರಲ್

ಐಪಿಎಲ್ ಆಡಳಿತ ಮಂಡಳಿ ಈ ಶಿಕ್ಷೆ ಕುರಿತು ಶೀಘ್ರದಲ್ಲೇ ಅಧಿಕೃತ ಪ್ರಕಟಣೆ ಹೊರಡಿಸುವ ನಿರೀಕ್ಷೆಯಿದೆ. ಟಿಮ್‌ ಡೇವಿಡ್‌ ಮಾತ್ರವಲ್ಲದೆ , ಆರ್‌ಸಿಬಿ ತಂಡದ ಮುಖ್ಯ ಕೋಚ್ ಆಂಡಿ ಫ್ಲವರ್‌ ಅವರಿಗೂ ಪಂದ್ಯದ ವೇಳೆ ‘ಅಶ್ಲೀಲ ಪದ ಬಳಕೆ’ ಮಾಡಿದ ಆರೋಪದ ಮೇರೆಗೆ ಪಂದ್ಯದ ಸಂಭಾವನೆಯ ಶೇಕಡಾ 15 ರಷ್ಟು ದಂಡವನ್ನು ವಿಧಿಸಲಾಗಿದೆ. ಅವರು ಐಪಿಎಲ್ ನಡವಳಿಕೆ ಸಂಹಿತೆಯ 2.3ನೇ ವಿಧಿಯನ್ನು ಉಲ್ಲಂಘಿಸಿದ್ದಾಗಿ ತಿಳಿಸಲಾಗಿದೆ. ಈ ಘಟನೆ ಆರ್‌ಸಿಬಿ ಇನಿಂಗ್ಸ್‌ನ 17ನೇ ಓವರ್ ವೇಳೆ ನಡೆದಿದೆ. ಆ ಸಂದರ್ಭದಲ್ಲಿ ಆಂಡಿ ಫ್ಲವರ್ ನಾಲ್ಕನೇ ಅಂಪೈರ್ ಜೊತೆ ತೀವ್ರ ವಾಗ್ವಾದದಲ್ಲಿ ತೊಡಗಿದ್ದರು.



ಟಿಮ್‌ ಡೇವಿಡ್‌ಗೆ ಮೋಹಿತ್‌ ಶರ್ಮಾ ಬೆಂಬಲ

ಕ್ರಿಕ್‌ಬಝ್‌ ಜೊತೆ ಮಾತನಾಡಿದ ಮೋಹಿತ್‌ ಶರ್ಮಾ ಅವರು ಆರ್‌ಸಿಬಿ ಬ್ಯಾಟರ್‌ ಟಿಮ್‌ ಡೇವಿಡ್‌ ಅವರನ್ನು ಟೀಕಿಸಿದ್ದಾರೆ. "ನಾನು ಧೋನಿ, ಪಂತ್ ಮತ್ತು ಕೊಹ್ಲಿ ಡಗೌಟ್‌ನಿಂದ ಮಧ್ಯಪ್ರವೇಶ ಮಾಡಿರುವುದನ್ನು ನೋಡಿದ್ದೇನೆ. ಆದರೆ ವಿದೇಶಿ ಆಟಗಾರರು ಇಂತಹ ರೀತಿಯಲ್ಲಿ ಪ್ರತಿಕ್ರಿಯಿಸಿದುದನ್ನು ನಾನು ಎಂದಿಗೂ ನೋಡಿಲ್ಲ. ಟಿಮ್ ಡೇವಿಡ್ ಸಾಮಾನ್ಯವಾಗಿ ಬಹಳ ಶಾಂತ ಸ್ವಭಾವದ ಆಟಗಾರರಾಗಿರುವುದನ್ನು ಗಮನಿಸಿದರೆ, ಈ ಬಾರಿ ಅವರು ನಿಜವಾಗಿಯೂ ತಮಗೆ ಅನ್ಯಾಯವಾದಂತೆ ಭಾವಿಸಿದ್ದಿರಬೇಕು,” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Bhuvneshwar Kumar: ಆರ್‌ಸಿಬಿ ವೇಗಿಗೆ ಭಾರತ ತಂಡದಲ್ಲಿ ಸ್ಥಾನ ನೀಡಬೇಕೆಂದ ಆರ್‌ ಅಶ್ವಿನ್‌!

"2019ರಲ್ಲಿ ಲಸಿತ್‌ ಮಾಂಲಿಂಗಾ ನೋ ಬಾಲ್‌ಗೆ ಸಿಕ್ಸರ್‌ ಬಾರಿಸಿದ್ದು ಹಾಗೂ ಇಂದು (ಮೇ 10) ಕೃಣಾಲ್‌ ಪಾಂಡ್ಯ ಸಿಕ್ಸ್‌ ಬಾರಿಸಿದ್ದನ್ನು ಡಾಟ್‌ ಬಾಲ್‌ ಎಂದು ಪರಿಗಣಿಸಲಾಗಿದೆ. ಆರ್‌ಸಿಬಿ ಹಾಗೂ ಎಂಐ ನಡುವಣ ಪಂದ್ಯದಲ್ಲಿ ಅಂಪೈರಿಂಗ್‌ ತುಂಬಾ ಕಳಪೆಯಿಂದ ಕೂಡಿತ್ತು. ಹಾಗಾಗಿ ಟಿಮ್‌ ಡೇವಿಡ್‌ ಪ್ರತಿಕ್ರಿಯೆ ನೀಡಿದ್ದರಲ್ಲಿ ಯಾವುದೇ ತಪ್ಪಿಲ್ಲ," ಎಂದು ಮೋಹಿತ್‌ ಶರ್ಮಾ ಆರ್‌ಸಿಬಿ ಆಟಗಾರನಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.