ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಹಿರಿಯ ನಾಗರಿಕರಿಗೆ ಬಹುಮಾನಗಳ ವಿತರಿಸಿದ ಎಂ ಸಿ ಎಸ್ ಅಭಿಮಾನಿ ಬಳಗ

ಇತ್ತೀಚೆಗೆ ಚಿಂತಾಮಣಿ ನಗರದ ಜಾನ್ಸಿ ರಾಣಿ ಕ್ರೀಡಾಂಗಣದಲ್ಲಿ ಎಂ ಸಿ ಎಸ್ ಅಭಿಮಾನಿ ಬಳಗದ ವತಿಯಿಂದ ಹಿರಿಯ ನಾಗರೀಕರಿಗೆ ವಿವಿಧ ರೀತಿಯ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿವಿಧ ರೀತಿಯ ಸ್ಪರ್ಧೆಗಳಾದ ವಾಕಿಂಗ್,ಮಡಿಕೆ ಹೊಡೆಯುವುದು, ಗುಂಡು ಎಸೆತ, ಮ್ಯೂಸಿಕಲ್ ಛೇರ್ ಹಾಗೂ ಚಮಚ ಮತ್ತು ನಿಂಬೆ ಹಣ್ಣಿನ ಓಟಗಳನ್ನು 60,70,80,90 ವರ್ಷ ಮೇಲ್ಪಟ್ಟರ ಶ್ರೇಣಿಗಳನ್ನು ವರ್ಗೀಕರಿಸಿ ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ಆಟೋಟಗಳನ್ನು ಏರ್ಪಡಿಸಿದ್ದರು.

ಹಿರಿಯ ನಾಗರಿಕರಿಗೆ ಬಹುಮಾನಗಳ ವಿತರಿಸಿದ ಎಂ ಸಿ ಎಸ್ ಅಭಿಮಾನಿ ಬಳಗ

Ashok Nayak Ashok Nayak Aug 16, 2025 1:35 PM

ಚಿಂತಾಮಣಿ: ಇತ್ತೀಚೆಗೆ ಚಿಂತಾಮಣಿ ನಗರದ ಜಾನ್ಸಿ ರಾಣಿ ಕ್ರೀಡಾಂಗಣದಲ್ಲಿ ಎಂ ಸಿ ಎಸ್ ಅಭಿಮಾನಿ ಬಳಗದ ವತಿಯಿಂದ ಹಿರಿಯ ನಾಗರೀಕರಿಗೆ ವಿವಿಧ ರೀತಿಯ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ವಿವಿಧ ರೀತಿಯ ಸ್ಪರ್ಧೆಗಳಾದ ವಾಕಿಂಗ್,ಮಡಿಕೆ ಹೊಡೆಯುವುದು, ಗುಂಡುಎಸೆತ,ಮ್ಯೂಸಿಕಲ್ ಛೇರ್ ಹಾಗೂ ಚಮಚ ಮತ್ತು ನಿಂಬೆ ಹಣ್ಣಿನ ಓಟಗಳನ್ನು 60,70,80,90 ವರ್ಷ ಮೇಲ್ಪಟ್ಟರ ಶ್ರೇಣಿಗಳನ್ನು ವರ್ಗೀಕರಿಸಿ ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ಆಟೋಟಗಳನ್ನು ಏರ್ಪಡಿಸಿದ್ದರು.

ಇದನ್ನೂ ಓದಿ: Chikkaballapur News: ತಾಲೂಕು ಆರೋಗ್ಯ ಅಧಿಕಾರಿಗೆ ಸನ್ಮಾನಿಸಿದ ಭೋವಿ ಸಮಾಜ

ಆ ಸ್ಪರ್ಧೆಗಳಲ್ಲಿ ವಿಜೇತರಾದ ಹಿರಿಯರಿಗೆ ಸ್ವಾತಂತ್ರ್ಯದಿನಾಚರಣೆ ದಿನದಂದು ಬಹುಮಾನಗಳನ್ನು ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಸಚಿವರಾದ ಡಾ!ಎಂ ಸಿ ಸುಧಾಕರ್ ಅವರ ಅಣ್ಣನಾದ ಎಂ ಸಿ ಬಾಲಾಜಿ ರವರು ವಿತರಿಸಿದರು.

ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿಗಳಾದ ಸುದರ್ಶನ್ ಯಾದವ್,ತಾಲೂಕು ಪಂಚಾ ಯಿತಿ ಕಾರ್ಯನಿರ್ವಹಣಾಧಿಕಾರಿ ಆನಂದ್, ಡಿವೈಎಸ್ಪಿ ಮುರುಳಿಧರ್, ಪೌರಾಯುಕ್ತರಾದ ಚಲಪತಿ, ನಗರ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ವಿಜಿ ಕುಮಾರ್, ಶಿವರಾಜ್, ಡಾ!ವಿ ಅಮರ್, ನಗರ ಸಭಾ ಅಧ್ಯಕ್ಷರಾದ ಜಗನ್ನಾಥ್, ಉಪಾಧ್ಯಕ್ಷೆ ರಾಣಿಯಮ್ಮ,ಫಾರೂಕ್,ಆರ್.ಡಿ. ಮಂಜುನಾಥ್, ಎಸ್.ಮಂಜುನಾಥ್,ಮುನಿರಾಜು ಮತ್ತಿತರಿದ್ದರು.