ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Indore Couple Missing: ಇಂದೋರ್‌ ದಂಪತಿ ಮಿಸ್ಸಿಂಗ್‌ ಕೇಸ್‌ನಲ್ಲಿ ಬಿಗ್‌ ಟ್ವಿಸ್ಟ್‌; ಪತಿಯ ಹತ್ಯೆಗೆ ಪತ್ನಿಯಿಂದಲೇ ಸುಪಾರಿ; ಹಂತಕಿ ಅರೆಸ್ಟ್‌

ಇಂದೋರ್‌ ದಂಪತಿ ಮಿಸ್ಸಿಂಗ್‌ ಪ್ರಕರಣದಲ್ಲಿ(Indore Couple Missing) ಬಿಗ್‌ ಟ್ವಿಸ್ಟ್‌ ಸಿಕ್ಕಿದ್ದು, ಪತ್ನಿಯೇ ಪತಿಯ ಹತ್ಯೆಗೆ ಸುಪಾರಿ ಕೊಟ್ಟಿದ್ದಳೆಂಬ ಭಯಾನಕ ಸಂಗತಿ ಬಯಲಾಗಿದೆ. ಕಳೆದ ಎರಡು ವಾರಗಳಿಂದ ನಾಪತ್ತೆಯಾಗಿದ್ದ ಹಂತಕಿ ಮತ್ತು ಆಕೆಯ ಮೂವರು ಸಹಚರರನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.

ಹನಿಮೂನ್‌ ಕಪಲ್‌ ಮಿಸ್ಸಿಂಗ್‌-ಪತಿಯ ಹತ್ಯೆಗೆ ಪತ್ನಿಯಿಂದಲೇ ಸುಪಾರಿ!

Profile Rakshita Karkera Jun 9, 2025 8:52 AM

ಶಿಲ್ಲಾಂಗ್‌: ಮೇಘಾಲಯಕ್ಕೆ ಹನಿಮೂನ್‌ಗೆ ಹೋದ ಇಂದೋರ್‌ ದಂಪತಿ ಮಿಸ್ಸಿಂಗ್‌ ಪ್ರಕರಣದಲ್ಲಿ(Indore Couple Missing) ಬಿಗ್‌ ಟ್ವಿಸ್ಟ್‌ ಸಿಕ್ಕಿದ್ದು, ಪತ್ನಿಯೇ ಪತಿಯ ಹತ್ಯೆಗೆ ಸುಪಾರಿ ಕೊಟ್ಟಿದ್ದಳೆಂಬ ಭಯಾನಕ ಸಂಗತಿ ಬಯಲಾಗಿದೆ. ಕಳೆದ ಎರಡು ವಾರಗಳಿಂದ ನಾಪತ್ತೆಯಾಗಿದ್ದ ಹಂತಕಿ ಮತ್ತು ಆಕೆಯ ಮೂವರು ಸಹಚರರನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. ವಿಚಾರಣೆ ವೇಳೆ ಸುಪಾರಿ ಕಿಲ್ಲರ್‌ಗಳು ಆರೋಪಿ ಸೋನಂ ತನ್ನ ಪತಿ ರಾಜಾ ರಘುವಂಶಿ ಹತ್ಯೆಗೆ ಸುಪಾರಿ ಕೊಟ್ಟಿದ್ದಳು ಎಂಬುದನ್ನು ಒಪ್ಪಿಕೊಂಡಿದ್ದಾರೆ. ಉತ್ತರಪ್ರದೇಶದ ಗಾಜಿಪುರರದಲ್ಲಿ ಎಲ್ಲಾ ಆರೋಪಿಗಳನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.

ಈ ಬಗ್ಗೆ ಡಿಐಜಿ ಮಾಹಿತಿ ನೀಡಿದ್ದು, ಮೇಘಾಲಯದಲ್ಲಿ ನಿಗೂಢವಾಗಿ ನಾಪತ್ತೆಯಾಗಿ ಕೊಲೆಯಾಗಿದ್ದ ರಾಜಾ ರಘುವಂಶೀ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ಪತ್ನಿ ಸೇರಿದಂತೆ ನಾಲ್ವರನ್ನು ಅರೆಸ್ಟ್‌ ಮಾಡಲಾಗಿದೆ. ಪತ್ನಿ ಸೋನಂ ರಾಜಾ ಹತ್ಯೆಗೆ ಸುಪಾರಿ ಕಿಲ್ಲರ್‌ಗಳನ್ನು ನೇಮಿಸಿದ್ದಳು. ಸದ್ಯ ಎಲ್ಲಾ ಆರೋಪಿಗಳನ್ನು ಅರೆಸ್ಟ್‌ ಮಾಡಲಾಗಿದೆ. ಇನ್ನು ಈ ಕೃತ್ಯಕ್ಕೆ ಕಾರಣ ಏನೆಂಬುದರ ಬಗ್ಗೆ ತನಿಖಗೆ ಮುಂದುವರಿದಿದೆ. ಇನ್ನು ಈ ಪ್ರಕರಣದಲ್ಲಿ ಮತ್ತಷ್ಟು ಜನ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ. ಇಂದೋರ್‌ನಲ್ಲಿ ಅವರಿಗಾಗಿ ಬಲೆ ಬೀಸಿದ್ದೇವೆ ಎಂದಿದ್ದಾರೆ.

ಈ ಸುದ್ದಿಯನ್ನೂ ಓದಿ: Couple missing: ಇಂದೋರ್ ದಂಪತಿ ಮಿಸ್ಸಿಂಗ್‌ ಕೇಸ್‌; ನಾಪತ್ತೆಗೂ ಮೊದಲಿನ ಸಿಸಿಟಿವಿ ಫೂಟೇಜ್‌ ವೈರಲ್‌

ಮೇಘಾಲಯಕ್ಕೆ ಹನಿಮೂನ್‌ಗೆಂದು ತೆರಳಿದ್ದ ನವದಂಪತಿ ರಾಜಾ ಮತ್ತು ಸೋನಂ, ಮೇ 23 ರಂದು ನೊಂಗ್ರಿಯಾಟ್ ಗ್ರಾಮದ ಹೋಮ್‌ಸ್ಟೇಯಿಂದ ಚೆಕ್‌ಔಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಕಾಣೆಯಾಗಿದ್ದರು. ಒಂಬತ್ತು ದಿನಗಳ ಬಳಿಕ, ಪತಿ 30 ವರ್ಷದ ರಾಜಾ ರಘುವಂಶಿ (Raja Raghuvanshi) ಮೃತದೇಹ ಜೂನ್ 2 ರಂದು ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯ ಸೊಹ್ರಾ ಪ್ರದೇಶದ ಜಲಪಾತದ ಬಳಿಯ ಕಂದಕದಲ್ಲಿ ಪತ್ತೆಯಾಗಿತ್ತು. ಆದರೆ ಆತನ ಪತ್ನಿ ಸೋನಂ ಮಾತ್ರ ಸಿಕ್ಕಿರಲಿಲ್ಲ. ಆಕೆಯನ್ನು ಯಾರೋ ಕಿಡ್ನಾಪ್‌ ಮಾಡಿರಬಹುದು ಎಂದು ಶಂಕಿಸಲಾಗಿತ್ತು. ಇನ್ನು ಕಾಣೆಯಾಗಿರುವ ಸೋನಂ ಅನ್ನು ಸುರಕ್ಷಿತವಾಗಿ ಹುಡುಕಿಕೊಡುವಂತೆ ಕುಟುಂಬಸ್ಥರು ಪ್ರಧಾನಿ ನರೇಂದ್ರ ಮೋದಿಗೂ ಮನವಿ ಮಾಡಿದ್ದರು.