ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Actor Yash: ʼರಾವಣʼನಾಗುವ ಮುನ್ನ ಉಜ್ಜಯಿನಿಯ ಮಹಾಕಾಲನ ದರ್ಶನ ಪಡೆದ ರಾಕಿಂಗ್‌ ಸ್ಟಾರ್‌ ಯಶ್

ʼರಾಮಾಯಣʼ ಚಿತ್ರದಲ್ಲಿ ನಟಿಸುವುದರ ಜೊತೆಗೆ ತಮ್ಮ ಮಾನ್ಸ್‌ರ್ ಮೈಂಡ್ ಕ್ರಿಯೇಷನ್ಸ್ ಅಡಿಯಲ್ಲಿ ಈ ಚಿತ್ರವನ್ನು ಅವರು ನಿರ್ಮಾಣ ಸಹ ಮಾಡುತ್ತಿದ್ದಾರೆ. 2026ರಲ್ಲಿ ಇದು ಬಿಡುಗಡೆಯಾಗಲಿದೆ ಎನ್ನಲಾಗಿದೆ. ರಾವಣನಾಗಿ ರಾಕಿಂಗ್ ಸ್ಟಾರ್ ಅಬ್ಬರಿಸುವುದನ್ನು ನೋಡಲು ಸಿನಿರಸಿಕರು ಕಾಯುತ್ತಿದ್ದಾರೆ.

ʼರಾವಣʼನಾಗುವ ಮುನ್ನ ಉಜ್ಜಯಿನಿ ಮಹಾಕಾಲನ ದರ್ಶನ ಪಡೆದ ನಟ ಯಶ್

ಉಜ್ಜಯಿನಿ ದೇವಾಲಯಕ್ಕೆ ಯಶ್‌ ಭೇಟಿ

ಹರೀಶ್‌ ಕೇರ ಹರೀಶ್‌ ಕೇರ Apr 21, 2025 9:44 AM

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ (actor Yash) ಅವರು ಇಂದು ಉಜ್ಜಯಿನಿಯ (Ujjain) ಮಹಾಕಾಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಮಾಡಿ ಪೂಜೆ ಸಲ್ಲಿಸಿದರು. ʼರಾಮಾಯಣʼ ಸಿನಿಮಾ ಶೂಟಿಂಗ್ ಆರಂಭಕ್ಕೂ ಮುನ್ನ ರಾಕಿ ಭಾಯ್ (Rocking Star) ಉಜ್ಜಯಿನಿ ದೇವರ ದರ್ಶನ ಮಾಡಿದ್ದಾರೆ. ನಾಳೆಯಿಂದ ಅವರು ರಾಮಾಯಣ (Ramayana) ಶೂಟಿಂಗ್‌ನಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿದುಬಂದಿದೆ. ಪ್ರತಿ ಸಿನಿಮಾದ ಶೂಟಿಂಗ್‌ ಆರಂಭಕ್ಕೂ ಮುನ್ನ ದೇವಸ್ಥಾನಕ್ಕೆ ಭೇಟಿ ನೀಡುವ ಅವರ ರೂಢಿಯನ್ನು ಈ ಮೂಲಕ ಅವರು ಮುಂದುವರಿಸಿದ್ದಾರೆ.

ʼರಾಮಾಯಣʼ ಚಿತ್ರದಲ್ಲಿ ನಟಿಸುವುದರ ಜೊತೆಗೆ ತಮ್ಮ ಮಾನ್ಸ್‌ರ್ ಮೈಂಡ್ ಕ್ರಿಯೇಷನ್ಸ್ ಅಡಿಯಲ್ಲಿ ಈ ಚಿತ್ರವನ್ನು ಅವರು ನಿರ್ಮಾಣ ಸಹ ಮಾಡುತ್ತಿದ್ದಾರೆ. 2026ರಲ್ಲಿ ಇದು ಬಿಡುಗಡೆಯಾಗಲಿದೆ ಎನ್ನಲಾಗಿದೆ. ರಾವಣನಾಗಿ ರಾಕಿಂಗ್ ಸ್ಟಾರ್ ಅಬ್ಬರಿಸುವುದನ್ನು ನೋಡಲು ಸಿನಿರಸಿಕರು ಕಾಯುತ್ತಿದ್ದಾರೆ. ಅದರ ಟಾಕ್ಸಿಕ್‌ ಕೂಡ ಮುಂದಿನ ವರ್ಷವೇ ರಿಲೀಸ್‌ ಎನ್ನಲಾಗುತ್ತಿದೆ. ಹೀಗೆ ಯಶ್ ಎರಡು ಅತಿದೊಡ್ಡ ಚಿತ್ರಗಳಿಂದ ಭಾರತೀಯ ಚಿತ್ರರಂಗದಲ್ಲಿ ಇನ್ನೊಂದು ಮಹಾ ಸಂಚಲನಕ್ಕೆ ಸಜ್ಜಾಗುತ್ತಿದ್ದಾರೆ.

ಯಶ್ ಮಹಾಕಾಲೇಶ್ವರ ಆಲಯಕ್ಕೆ ಭೇಟಿ ನೀಡಿರುವ ಫೋಟೊ, ವೀಡಿಯೋಗಳು ವೈರಲ್ ಆಗುತ್ತಿದೆ. ಶೀಘ್ರದಲ್ಲೇ ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ ಸಿನಿಮಾ ಚಿತ್ರೀಕರಣದಲ್ಲಿ ರಾಕಿಂಗ್ ಸ್ಟಾರ್ ಭಾಗಿ ಆಗಲಿದ್ದಾರೆ. ಚಿತ್ರದಲ್ಲಿ ಶ್ರೀರಾಮನಾಗಿ ರಣ್‌ಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ಎರಡು ಭಾಗಗಳಾಗಿ ರಾಮಾಯಣ ಸಿನಿಮಾ ತೆರೆಗೆ ಬರಲಿದೆ. ಮುಂದಿನ ವರ್ಷ ದೀಪಾವಳಿಗೆ ಮೊದಲ ಭಾಗ ಬಿಡುಗಡೆ ಆಗಲಿದೆ. ರಣ್‌ಬೀರ್ ಕಪೂರ್, ಸಾಯಿ ಪಲ್ಲವಿ, ಯಶ್ ಜೊತೆಗೆ ಘಟಾನುಘಟಿ ಕಲಾವಿದರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

600 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಲಕ್ಷ್ಮಣನಾಗಿ ರವಿ ದುಬೇ, ದಶರಥನಾಗಿ ಅರುಣ್ ಗೋವಿಲ್, ಕೈಕೇಯಿ ಆಗಿ ಲಾರಾ ದತ್ತಾ, ಇಂದ್ರದೇವನಾಗಿ ಕುನಾಲ್ ಕಪೂರ್, ಮಂಥರಾ ಆಗಿ ಶೀಬಾ ಚಡ್ಡಾ ಸೇರಿ ದೊಡ್ಡ ತಾರಾಗಣ 'ರಾಮಾಯಣ' ಚಿತ್ರದಲ್ಲಿದೆ. ರಣ್‌ಬೀರ್ ಹಾಗೂ ಸಾಯಿ ಪಲ್ಲವಿ ತಮ್ಮ ಭಾಗದ ಚಿತ್ರೀಕರಣ ಮುಗಿಸಿದ್ದಾರೆ ಎನ್ನಲಾಗ್ತಿದೆ. ಮೊದಲ ಭಾಗದಲ್ಲಿ ರಾವಣನ ಪಾತ್ರಕ್ಕೆ ಕಡಿಮೆ ಅವಕಾಶವಿದೆ ಎನ್ನಲಾಗ್ತಿದೆ.

'ಟಾಕ್ಸಿಕ್' ಶೆಡ್ಯೂಲ್ ಮುಗಿಸಿ ಯಶ್ 'ರಾಮಾಯಣ' ತಂಡ ಸೇರಿಕೊಳ್ಳುತ್ತಿದ್ದಾರೆ. ಮುಂಬೈನಲ್ಲೇ ಸೆಟ್ ಹಾಕಿ ಬಹಳ ಅದ್ಧೂರಿಯಾಗಿ ಸಿನಿಮಾ ಚಿತ್ರೀಕರಣ ನಡೆಸಲಾಗುತ್ತಿದೆ. ಅಧಿಕೃತವಾಗಿ ಚಿತ್ರದ ಪೋಸ್ಟರ್, ಟೀಸರ್ ಹೊರ ಬಂದಿಲ್ಲ. ಆದರೆ ಅಭಿಮಾನಿಗಳು ತಮ್ಮದೇ ಕಲ್ಪನೆಯಲ್ಲಿ ಶ್ರೀರಾಮನಾಗಿ ರಣ್‌ಬೀರ್, ಸೀತೆಯಾಗಿ ಸಾಯಿ ಪಲ್ಲವಿ, ರಾವಣನಾಗಿ ಯಶ್ ಎಐ ಲುಕ್‌ ಪೋಸ್ಟರ್‌ಗಳನ್ನು ವೈರಲ್ ಮಾಡುತ್ತಿದ್ದಾರೆ.

ಪ್ರಮುಖ ಪಾತ್ರವನ್ನು ನಿರ್ವಹಿಸುವುದರ ಜೊತೆಗೆ, ಯಶ್ ತಮ್ಮ ಬ್ಯಾನರ್ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಅಡಿಯಲ್ಲಿ ನಿಮಿತ್ ಮಲ್ಹೋತ್ರಾ ಅವರ ಪ್ರೈಮ್ ಫೋಕಸ್ ಸ್ಟುಡಿಯೋಸ್ ಜೊತೆಗೆ ರಾಮಾಯಣ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇದು ಸಹಜವಾಗಿಯೇ ಕುತೂಹಲ ಹೆಚ್ಚಿಸಿದೆ. ಕನ್ನಡ ಕಲಾವಿದರು, ತಂತ್ರಜ್ಞರು ಬಾಲಿವುಡ್ ಸಿನಿಮಾಗಳಲ್ಲಿ ಕೆಲಸ ಮಾಡುವುದೇ ದೊಡ್ಡ ವಿಚಾರ ಎನ್ನುವ ಕಾಲವೊಂದಿತ್ತು. ಇದೀಗ ಯಶ್ 'ರಾಮಾಯಣ' ರೀತಿಯ ಅದ್ಭುತ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಉಜ್ಜಯಿನಿಯಲ್ಲಿರುವ ಪೂಜ್ಯ ಶ್ರೀ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಮಾಧ್ಯಮಕ್ಕೆ ಯಶ್ ಪ್ರತಿಕ್ರಿಯಿಸಿದ್ದಾರೆ. "ಬಹಳ ಖುಷಿ ಆಗುತ್ತಿದೆ. ಶಿವನ ಆಶೀರ್ವಾದ ಪಡೆಯಲು ಬಂದೆ. ನಾನು ಚಿಕ್ಕಂದಿನಿಂದ ಶಿವನ ದೊಡ್ಡ ಭಕ್ತ. ನಾವು ಮನೆದೇವರು ಎಂದು ಕರೆಯುತ್ತೇನೆ. ಕುಲದೇವರು ಶಿವ. ಇಲ್ಲಿಗೆ ಬಂದಿರುವುದು ಸಂತಸ ತಂದಿದೆ. ದೇವರ ಸನ್ನಿಧಿಯಲ್ಲಿ ಧ್ಯಾನ ಮಾಡುತ್ತಾ ಕುಳಿತಾಗ ಸಮಯ ಕಳೆದಿದ್ದೇ ಗೊತ್ತಾಗಲಿಲ್ಲ. ಅದ್ಭುತ ಅನುಭವ ಸಿಕ್ಕಿದೆ" ಎಂದು ಯಶ್ ಹೇಳಿದ್ದಾರೆ.

ಇದನ್ನೂ ಓದಿ: KGF 3 Update: ಯಶ್‌ ಫ್ಯಾನ್ಸ್‌ಗೆ ಭರ್ಜರಿ ಗಿಫ್ಟ್‌ ಕೊಟ್ಟ ಹೊಂಬಾಳೆ ಫಿಲ್ಮ್ಸ್‌; ʼಕೆಜಿಎಫ್‌ 3ʼ ಚಿತ್ರದ ಬಗ್ಗೆ ಬಿಗ್‌ ಅಪ್‌ಡೇಟ್‌