Byrati Basavaraj: ರೌಡಿಶೀಟರ್ ಹತ್ಯೆ: ನಾಲ್ವರು ಸುಪಾರಿ ಕಿಲ್ಲರ್‌ಗಳ ಬಂಧನ, ನಾಳೆ ಶಾಸಕ ಬೈರತಿ ಬಸವರಾಜ್ ವಿಚಾರಣೆ
Rowdy Sheeter Murder Case: ಪ್ರಕರಣದ ಎ1 ಜಗದೀಶ್ ಅಲಿಯಾಸ್ ಜಗ್ಗ ಇನ್ನು ಪೊಲೀಸರ ಕೈಗೆ ಸಿಕ್ಕಿಲ್ಲ. ಪ್ರಕರಣ ಸಂಬಂಧ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಐವರು ಸುಪಾರಿ ಕಿಲ್ಲರ್‌ಗಳ ಗುಂಪಿನಲ್ಲಿ 4 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಇವರೆಲ್ಲಾ ಕೋಲಾರ ಮೂಲದ ಸುಪಾರಿ ಕಿಲ್ಲರ್ಗಳಾಗಿದ್ದಾರೆ.


ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ ಹತ್ಯೆ (Rowdy Sheeter murder Case) ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಇದುವರೆಗೂ ನಾಲ್ಕು ಮಂದಿ ಸುಪಾರಿ ಕಿಲ್ಲರ್‌ಗಳನ್ನು ಬಂಧಿಸಿದ್ದಾರೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಬೈರತಿ ಬಸವರಾಜ್ ಅವರು ಎ5 ಆಗಿದ್ದು, ನಾಳೆ (ಬುಧವಾರ) ಅವರನ್ನು ಮತ್ತೆ ವಿಚಾರಣೆಗೆ ಹಾಜರಾಗಲು ಪೊಲೀಸರು ತಿಳಿಸಿದ್ದಾರೆ.
ರೌಡಿ ಬಿಕ್ಲು ಶಿವ ಹತ್ಯೆ ಹಿಂದೆ ನಡೆದ ಪ್ಲಾನ್ಗಳು ಈಗ ಬಯಲಾಗಿವೆ. ಹತ್ಯೆ ಹಿಂದಿದೆ ಯಾರ್ಯಾರ ಕೈವಾಡವಿದೆ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಕರಣದ ಎ1 ಜಗದೀಶ್ ಅಲಿಯಾಸ್ ಜಗ್ಗ ಇನ್ನು ಪೊಲೀಸರ ಕೈಗೆ ಸಿಕ್ಕಿಲ್ಲ. ಪ್ರಕರಣ ಸಂಬಂಧ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಐವರು ಸುಪಾರಿ ಕಿಲ್ಲರ್‌ಗಳ ಗುಂಪಿನಲ್ಲಿ 4 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಇವರೆಲ್ಲಾ ಕೋಲಾರ ಮೂಲದ ಸುಪಾರಿ ಕಿಲ್ಲರ್ಗಳಾಗಿದ್ದಾರೆ. ಪುಲಿಕೇಶಿನಗರ ಠಾಣೆಯಲ್ಲಿ ಆರೋಪಿಗಳ ತೀವ್ರ ವಿಚಾರಣೆ ನಡೆಯುತ್ತಿದೆ.
ಶಿವ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಜಗದೀಶ್ ಅಲಿಯಾಸ್ ಜಗ್ಗನಿಗಾಗಿ ಪೊಲೀಸರು ಒಂದು ವಾರದಿಂದ ಹುಡುಕಾಟ ನಡೆಸುತ್ತಿದ್ದರೂ ಜಗ್ಗನ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಶಿವನನ್ನು ಕೊಲೆ ಮಾಡುವ ಮುನ್ನವೇ ಜಗ್ಗ ತನ್ನ ಮನೆಯನ್ನು ಖಾಲಿ ಮಾಡಿದ್ದಾನೆ. ಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾನೆ. ಕೇಸ್ ದಾಖಲಾದ ಎರಡನೇ ದಿನವೇ ಜಗ್ಗ ಅರ್ಜಿ ಸಲ್ಲಿಸಿದ್ದಾನೆ ಎನ್ನಲಾಗುತ್ತಿದೆ. ಜಗ್ಗನ ಜಾಮೀನು ಅರ್ಜಿ ವಿಚಾರಣೆ ಇಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಡೆಯಲಿದೆ.
ಪ್ರಕರಣದಲ್ಲಿ ಶಾಸಕ ಬೈರತಿ ಬಸವರಾಜ್ ಎ5 ಆಗಿದ್ದು, ಒಮ್ಮೆ ಪೊಲೀಸ್ ಠಾಣೆಗೆ ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ. ನಾಳೆ ಬೈರತಿ ಬಸವರಾಜ್ ಮತ್ತೆ ವಿಚಾರಣೆಗೆ ಹಾಜರಾಗಬೇಕಾಗಿದೆ. ಮೊನ್ನೆಯ ವಿಚಾರಣೆ ವೇಳೆ ಅಪೂರ್ಣ ಮಾಹಿತಿ ನೀಡಿದ್ದ ಕಾರಣ, ಮತ್ತೊಮ್ಮೆ ವಿಚಾರಣೆಗೆ ಬರಲು ಸೂಚನೆ ನೀಡಲಾಗಿದೆ. ಬಿಕ್ಲು ಶಿವ ಕೊಲೆ ಕೇಸ್ ಜೊತೆಗೆ, ಜಗ್ಗನೊಂದಿಗೆ ಇರುವ ವ್ಯವಹಾರದ ಕುರಿತು ವಿಚಾರಣೆ ನಡೆಯುತ್ತಿದೆ.
ಇದನ್ನೂ ಓದಿ: Byrati Basavaraj: ರೌಡಿಶೀಟರ್ ಹತ್ಯೆ, ಇಂದು ವಿಚಾರಣೆಗೆ ಶಾಸಕ ಬೈರತಿ ಬಸವರಾಜ್ ಹಾಜರು