45 Movie: ಬಹು ನಿರೀಕ್ಷಿತ ಮಲ್ಟಿಸ್ಟಾರರ್ '45' ಚಿತ್ರದ 'AFRO ಟಪಾಂಗ್' ಪ್ರಮೋಷನ್ ಸಾಂಗ್ ಬಿಡುಗಡೆ
Afro Tapaang song: ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿರುವ ಈ ಪ್ರಮೋಷನ್ ಸಾಂಗ್‌ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಈ ಹಾಡಿನಲ್ಲಿ ಉಗಾಂಡ ದೇಶದ ಹೆಸರಾಂತ ಜಿಟೊ ಕಿಡ್ಸ್ ಜತೆಗೆ ಚಿತ್ರದ ನಾಯಕರಾದ ಶಿವರಾಜಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ.
-
Prabhakara R
Nov 2, 2025 4:32 PM
ಬೆಂಗಳೂರು, ನ.2: ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದ ಹಾಗೂ ಎಂ. ರಮೇಶ್ ರೆಡ್ಡಿ ಅವರು ತಮ್ಮ ಸೂರಜ್ ಪ್ರೊಡಕ್ಷನ್ ಬ್ಯಾನರ್‌ನಲ್ಲಿ ನಿರ್ಮಿಸುತ್ತಿರುವ ಕನ್ನಡದ ಬಹುನಿರೀಕ್ಷಿತ ಮಲ್ಟಿಸ್ಟಾರರ್ ʼ45ʼ ಚಿತ್ರ (45 Movie) ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಪ್ರಸ್ತುತ ʼ45ʼ ಚಿತ್ರದ ʼAFRO ಟಪಾಂಗ್ʼ ಅದ್ಧೂರಿ ಪ್ರಮೋಷನ್ ಸಾಂಗ್ ಬಿಡುಗಡೆಯಾಗಿದೆ.
ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿರುವ ಈ ಪ್ರಮೋಷನ್ ಸಾಂಗ್‌ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಈ ಹಾಡಿನಲ್ಲಿ ಉಗಾಂಡ ದೇಶದ ಹೆಸರಾಂತ ಜಿಟೊ ಕಿಡ್ಸ್ ಜತೆಗೆ ಚಿತ್ರದ ನಾಯಕರಾದ ಶಿವರಾಜಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಕನ್ನಡ ರಾಜ್ಯೋತ್ಸವದ ದಿನ ಈ ಹಾಡಿನ ಬಿಡುಗಡೆ ಸಮಾರಂಭ ಅದ್ಧೂರಿಯಾಗಿ ನೆರವೇರಿತು. ಹಾಡು ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.
ನಮ್ಮ ಚಿತ್ರದ ʼAFRO ಟಪಾಂಗ್ʼ ಪ್ರಮೋಷನ್ ಸಾಂಗ್ ಅದ್ಧೂರಿಯಾಗಿ ಮೂಡಿಬಂದಿದೆ. ಇದೇ ಮೊದಲ ಬಾರಿಗೆ ಈ ಹಾಡಿಗೆ ನೃತ್ಯ ಮಾಡಲು ಉಗಾಂಡದಿಂದ ಜಿಟೊ ಕಿಡ್ಸ್ ಎಂಬ ಹೆಸರಾಂತ ನೃತ್ಯಗಾರರು ಭಾರತಕ್ಕೆ ಬಂದಿದ್ದಾರೆ. ಅವರು ಅಭಿನಯಿಸಿರುವ ಮೊದಲ ಭಾರತದ ಚಿತ್ರ ಕೂಡ ʼ45ʼ ಆಗಿದೆ. ಯಾವುದೇ ಕೊರತೆ ಬಾರದ ಹಾಗೆ ಈ ಹಾಡನ್ನು ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದೇವೆ. ತೆರೆಯ ಮೇಲೆ ನೋಡಿದಾಗ ಹಾಡು ತುಂಬಾ ಚೆನ್ನಾಗಿ ಮೂಡಿಬಂದಿದೆ. ಇದರ ಕ್ರೆಡಿಟ್ ನಿರ್ದೇಶಕರಿಗೆ ಸೇರಬೇಕು. ಇನ್ನೂ, ನಮ್ಮ ಚಿತ್ರ ಡಿಸೆಂಬರ್ 25 ರಂದು ತೆರೆಗೆ ಬರುತ್ತಿದೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ರಮೇಶ್ ರೆಡ್ಡಿ.
AFRO ಟಪಾಂಗ್ ಹಾಡಿನ ವಿಡಿಯೊ ನೋಡಿ
"To the fans who make it all worth it... 🙏 #AfroTapang is all yours 🔥
— Arjun Janya (@ArjunJanyaMusic) November 1, 2025
Keep blessing !!
#45themovie
YT links
Kannada : https://t.co/BkmE5T0qPm
Teglu: https://t.co/k5jDyYdAal
Malayalam : https://t.co/kuTMj6RON3
Tamil : https://t.co/fwU7Dd4KgH
Hindhi :… pic.twitter.com/Kzy9LUK0wZ
ನಾನು ನಿರ್ದೇಶಕನಾಗಲು ಶಿವರಾಜಕುಮಾರ್ ಅವರೇ ಕಾರಣ ಎಂದು ಮಾತನಾಡಿದ ನಿರ್ದೇಶಕ ಅರ್ಜುನ್ ಜನ್ಯ, ನಮ್ಮ ʼ45ʼ ಚಿತ್ರದಲ್ಲಿ ಹಾಡಿಲ್ಲ. ಆದರೆ, ಪ್ರಮೋಷನಲ್ ಸಾಂಗ್ ಮಾಡಬೇಕೆಂಬ ಆಸೆ ಇತ್ತು. ಮಾಮೂಲಿ ತರಹ ಮಾಡುವುದು ಬೇಡ ಅಂದುಕೊಂಡೆವು. ಆಗ ನನಗೆ ಉಗಾಂಡದ ಜಿಟೊ ಕಿಡ್ಸ್ ಈ ಪ್ರಮೋಷನ್ ಸಾಂಗ್‌ನಲ್ಲಿ ಅಭಿನಯಿಸಿದರೆ ಚೆಂದ ಎನಿಸಿತು. ಕಷ್ಟಪಟ್ಟು ಅವರನ್ನು ಸಂಪರ್ಕ ಮಾಡಿದ್ದೆವು. ಇವರ ಜತೆಗೆ ನಮ್ಮ ಚಿತ್ರದ ಮೂರು ಜನ ನಾಯಕರು ಅಭಿನಯಿಸಿದ್ದಾರೆ. ಎಂ.ಸಿ.ಬಿಜ್ಜು ಈ ಹಾಡನ್ನು ಬರೆದು ಹಾಡಿದ್ದಾರೆ. ಜಾನಿ ಮಾಸ್ಟರ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಈ ಹಾಡು ಇಷ್ಟು ಚೆನ್ನಾಗಿ ಮೂಡಿಬರಲು ಸಹಕಾರ ನೀಡಿದ ಚಿತ್ರತಂಡಕ್ಕೆ ಹಾಗೂ ವಿಶೇಷವಾಗಿ ನಿರ್ಮಾಪಕರಿಗೆ ಧನ್ಯವಾದ ಎಂದರು.
ʼ45ʼ ಚಿತ್ರ ಬರೀ ಕರ್ನಾಟಕ ಮಾತ್ರ ಅಲ್ಲ. ಭಾರತದಾದ್ಯಂತ ಯಶಸ್ವಿಯಾಗಲಿ. ಏಕೆಂದರೆ ಅಂತಹ ಕಂಟೆಟ್‌ವುಳ್ಳ ಸಿನಿಮಾ ಇದು. ಅರ್ಜುನ್ ಜನ್ಯ ಈ ಚಿತ್ರದ ಕಥೆ ಹೇಳಿದಾಗ ನೀವೆ ನಿರ್ದೇಶನ ಮಾಡಿ ಎಂದು ಹೇಳಿದ್ದೆ. ಈಗ ಈ ಹಾಡು ನೋಡಿದಾಗ ಅವರ ನಿರ್ದೇಶನದ ಬಗ್ಗೆ ತಿಳಿಯುತ್ತಿದೆ. ನಾನು, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಮೂರು ಜನ ಈ ಚಿತ್ರದ ನಾಯಕರು. ಅಭಿನಯದಲ್ಲಿ ಎಲ್ಲರಿಗೂ ಸಮಾನವಾದ ಅವಕಾಶವಿದೆ ಎಂದು ಶಿವರಾಜಕುಮಾರ್ ತಿಳಿಸಿದರು.
ಈ ಚಿತ್ರದ ಬಗ್ಗೆ ನನಗೆ ಆರಂಭದಿಂದಲೂ ಪ್ರೀತಿ. ಚಿತ್ರದ ಕುರಿತು ನಾನು ಅರ್ಜುನ್ ಜನ್ಯ ಅವರಿಗೆ ಕರೆ ಮಾಡಿ ಕೇಳುತ್ತಿರುತ್ತೇನೆ. ನಾನು ನೋಡಿ ಬೆಳೆದ ಇಬ್ಬರು ಕನ್ನಡ ಚಿತ್ರರಂಗದ ಮಹಾನ್ ನಟರ ಜತೆಗೆ ಅಭಿನಯಿಸಿರುವುದು ಬಹಳ ಖುಷಿಯಾಗಿದೆ. ಅವರಿಬ್ಬರು ತೆರೆಯ ಮೇಲೆ ಒಟ್ಟಿಗೆ ಬಂದಾಗ ವಿಷಲ್ ಹಾಕಿ ಸಂಭ್ರಮಿಸಿದ್ದೇನೆ ಎಂದು ರಾಜ್ ಬಿ ಶೆಟ್ಟಿ ಹೇಳಿದರು.
ಈ ಸುದ್ದಿಯನ್ನೂ ಓದಿ | 45 Movie: ‘45’ ಚಿತ್ರದ ಪ್ರಮೋಷನ್ ಹಾಡಿಗೆ ನೃತ್ಯಕ್ಕಾಗಿ ಉಗಾಂಡದಿಂದ ಆಗಮಿಸಿದ ನೃತ್ಯಗಾರರು!
ವಿ.ಎಫ್.ಎಕ್ಸ್ ಉಸ್ತುವಾರಿ ವಹಿಸಿಕೊಂಡಿರುವ ಕೆನಡಾದ ಯಶ್ ಶೆಟ್ಟಿ ಮಾತನಾಡಿ, ಡಿಸೆಂಬರ್ 25 ಕ್ಕೆ ಚಿತ್ರ ತೆರೆಗೆ ಬರಲಿದೆ. ಅನೇಕ ಹಾಲಿವುಡ್ ಚಿತ್ರಗಳಿಗೆ ವಿ.ಎಫ್.ಎಕ್ಸ್ ಮಾಡಿರುವ ನಮ್ಮ ಸಂಸ್ಥೆ ವಿ.ಎಫ್.ಎಕ್ಸ್ ಮಾಡಿರುವ ಮೊದಲ ಕನ್ನಡದ ಹಾಗೂ ಭಾರತದ ಚಿತ್ರ ಎಂದರು. ಛಾಯಾಗ್ರಹಣದ ಕುರಿತು ಛಾಯಾಗ್ರಾಹಕ ಸತ್ಯ ಹೆಗ್ಡೆ ಮಾತನಾಡಿದರು.