Abhishek Bachchan: ಮೊದಲ ಬಾರಿಗೆ ಅತ್ಯುತ್ತಮ ನಟ ಪ್ರಶಸ್ತಿ- ಅಭಿಷೇಕ್ ಬಚ್ಚನ್ ಖುಷಿಗೆ ಪಾರವೇ ಇಲ್ಲ!
Best Actor Award to Abhishek Bachchan: 2024ರಲ್ಲಿ ತೆರೆಕಂಡ ಐ ವಾಂಟ್ ಟು ಟಾಕ್ ಸಿನಿಮಾದಲ್ಲಿ ಅಭಿಷೇಕ್ ಬಚ್ಚನ್ ಅವರು ತಮ್ಮ ಅತ್ಯದ್ಭುತ ನಟನೆಗೆ ಮೊದಲ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದಿದ್ದಾರೆ. 70ನೇ ಫಿಲ್ಮ್‌ಫೇರ್ ಪ್ರಶಸ್ತಿಯಲ್ಲಿ ಅವರು ಈ ಪ್ರಶಸ್ತಿ ಗೆದ್ದಿದ್ದು ಅವರ ಅಭಿಮಾನಿಗಳಿಗೆ ಹಾಗೂ ಬಚ್ಚನ್ ಕುಟುಂಬದ ಆಪ್ತರಿಗೆ ಈ ವಿಚಾರ ಸಂತಸ ತಂದಿದ್ದು ಅನೇಕರು ಶುಭಕೋರಿದ್ದಾರೆ. ಪ್ರಶಸ್ತಿ ಸ್ವೀಕರಿಸಿದ ಬಳಿಕ ತಮ್ಮ ಪತ್ನಿ ಐಶ್ವರ್ಯ (Aishwarya) ಹಾಗೂ ಮಗಳನ್ನು ನೆನೆದು ಅವರು ಭಾವನಾತ್ಮಕವಾಗಿ ಮಾತನಾಡಿದ್ದಾರೆ.

-

ನವದೆಹಲಿ: ಬಾಲಿವುಡ್ ಖ್ಯಾತ ನಟರಲ್ಲಿ ಅಭಿಷೇಕ್ ಬಚ್ಚನ್ (Abhishek Bachchan) ಕೂಡ ಒಬ್ಬರಾಗಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಅನೇಕ ಹಿಟ್ ಸಿನಿಮಾದಲ್ಲಿ ಅದ್ಭುತವಾಗಿ ನಟಿಸಿದ್ದ ಇವರು ಅಪಾರ ಅಭಿಮಾನಿಗಳ ಮನಗೆದ್ದಿದ್ದಾರೆ. ಇವರ ಸಿನಿಮಾ ಕ್ಷೇತ್ರದ ಸಾಧನೆಗೆ ಈಗಾಗಲೇ ಅನೇಕ ಪ್ರಶಸ್ತಿಗಳು ಲಭಿಸಿವೆ. ವೃತ್ತಿ ಜೀವನ ಆರಂಭವಾಗಿ 25ವರ್ಷ ಕಳೆದಿದ್ದರು ಅವರಿಗೆ ಅತ್ಯು ತ್ತಮ ನಟ ಪ್ರಶಸ್ತಿ ಮಾತ್ರ ಇವರಿಗೆ ಸಿಕ್ಕಿರಲಿಲ್ಲ. ಇದೀಗ 2024 ರಲ್ಲಿ ತೆರೆಕಂಡ ಐ ವಾಂಟ್ ಟು ಟಾಕ್ (I Want to Talk) ಸಿನಿಮಾದಲ್ಲಿ ಅಭಿಷೇಕ್ ಬಚ್ಚನ್ ಅವರು ತಮ್ಮ ಅತ್ಯದ್ಭುತ ನಟನೆಗೆ ಮೊದಲ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದಿದ್ದಾರೆ. 70ನೇ ಫಿಲ್ಮ್‌ಫೇರ್ ಪ್ರಶಸ್ತಿಯಲ್ಲಿ ಅವರು ಈ ಪ್ರಶಸ್ತಿ ಗೆದ್ದಿದ್ದು ಅವರ ಅಭಿಮಾನಿಗಳಿಗೆ ಹಾಗೂ ಬಚ್ಚನ್ ಕುಟುಂಬದ ಆಪ್ತರಿಗೆ ಈ ವಿಚಾರ ಸಂತಸ ತಂದಿದ್ದು, ಅನೇಕರು ಶುಭಕೋರಿದ್ದಾರೆ. ಪ್ರಶಸ್ತಿ ಸ್ವೀಕರಿಸಿದ ಬಳಿಕ ತಮ್ಮ ಪತ್ನಿ ಐಶ್ವರ್ಯ (Aishwarya) ಹಾಗೂ ಮಗಳನ್ನು ನೆನೆದು ಅವರು ಭಾವನಾತ್ಮಕವಾಗಿ ಮಾತನಾಡಿದ್ದಾರೆ.
ಮೊದಲಿನಿಂದಲೂ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ ಸಂಬಂಧ ಸರಿಯಿಲ್ಲ. ಅವರಿಬ್ಬರು ಪ್ರತ್ಯೇಕ ವಾಸವಿದ್ದಾರೆ. ಸಿನಿಮಾ ಕಾರ್ಯಕ್ರಮ, ಕುಟುಂಬದ ಕಾರ್ಯಕ್ರಮ ಎಲ್ಲಿಯೂ ಅವರು ಒಟ್ಟಿಗೆ ಕಾಣಿಸಿಕೊಳ್ಳುತ್ತಿಲ್ಲ ಎಂಬ ಮಾತುಗಳು ಕೇಳಿಬಂದಿತ್ತು. ಹೀಗಾಗಿ ಅವರಿಬ್ಬರು ಡಿವೋರ್ಸ್ ತೆಗೆದುಕೊಳ್ಳುತ್ತಿದ್ದಾರೆ ಎಂಬ ವದಂತಿ ಸಹ ಹರಿದಾಡಿತ್ತು. ಆದರೆ ಈಗ ಅಭಿಷೇಕ್ ಅವರು ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ತಮ್ಮ ಪತ್ನಿ ಹಾಗೂ ಮಗಳ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದು ಉಂಟಾದ ಎಲ್ಲ ವದಂತಿಗೂ ತಿರುಗೇಟು ನೀಡಿದಂತಾಗಿದೆ.
ಈ ಬಗ್ಗೆ ಮಾತನಾಡಿದ ಅವರು, ಚಲನಚಿತ್ರೋದ್ಯಮದಲ್ಲಿ ನಾನು ನನ್ನ ವೃತ್ತಿ ಜೀವನ ಆರಂಭಿಸಿ 25 ವರ್ಷಗಳನ್ನು ಪೂರೈಸಿದ್ದೇನೆ. ಈ ಪ್ರಶಸ್ತಿಯ ಸ್ವೀಕಾರ ಇದು ನನ್ನ ಒಂದು ದೊಡ್ಡ ಕನಸಾಗಿತ್ತು, ನನ್ನ ಕುಟುಂಬದ ಮುಂದೆ, ಆಪ್ತರ ಮುಂದೆ ಈ ಪ್ರಶಸ್ತಿ ಸ್ವೀಕರಿಸುವುದು ಬಹಳ ವಿಶೇಷ ಕ್ಷಣ ಎಂದೇ ಹೇಳಬಹುದು. ನನಗೆ ಸಹಕರಿಸಿದ ಎಲ್ಲರಿಗೂ ನಾನು ಧನ್ಯವಾದ ತಿಳಿಸಬೇಕು. ನನ್ನೊಂದಿಗೆ ಕೆಲಸ ಮಾಡಿದ, ಕಳೆದ 25 ವರ್ಷಗಳಿಂದ ನನಗೆ ಅವಕಾಶಗಳನ್ನು ನೀಡಿದ ಎಲ್ಲಾ ನಿರ್ದೇಶಕರು ಮತ್ತು ನಿರ್ಮಾಪಕರಿಗೆ ಧನ್ಯವಾದ ತಿಳಿಸುತ್ತಿದ್ದೇನೆ... ಎಂದು ಹೇಳಿದರು.
ಬಳಿಕ ಮಾತನಾಡಿ, ತಮ್ಮ ಪತ್ನಿ ಐಶ್ವರ್ಯ ಮತ್ತು ಮಗಳು ಆರಾಧ್ಯ (Aaradhya) ಅವರನ್ನು ಕೂಡ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ. ಐಶ್ವರ್ಯ ಮತ್ತು ಆರಾಧ್ಯ ಅವರಿಗೂ ನಾನು ವಿಶೇಷ ಥ್ಯಾಂಕ್ಸ್ ತಿಳಿಸುವೆ. ಏಕೆಂದರೆ ನನ್ನ ಕನಸುಗಳನ್ನು ಅನುಸರಿಸಲು ನನಗೆ ಅವಕಾಶ ನೀಡಿ ವೈಯಕ್ತಿಕ ಹಾಗೂ ವೃತ್ತಿ ಬದುಕು ಎರಡಕ್ಕೂ ಸಹಕರಿಸಿದ್ದಾರೆ. ಅದ್ದಕ್ಕಾಗಿ ಧನ್ಯವಾದಗಳು. ಈ ಪ್ರಶಸ್ತಿಯನ್ನು ಗೆಲ್ಲಲು ನನ್ನ ಕುಟುಂಬ ಹಾಗೂ ನನ್ನ ಪತ್ನಿಯೇ ಮುಖ್ಯ ಕಾರಣ.. ಅವರ ತ್ಯಾಗ ಗಳಿಂದಲೇ ನಾನು ಇಂದು ಇಲ್ಲಿ ನಿಲ್ಲಲು ಸಾಧ್ಯವಾಯಿತು. ಅವರ ಬಗ್ಗೆ ನನಗೆ ಹೆಮ್ಮೆ ಪ್ರೀತಿ ಇದೆ.. ಥ್ಯಾಂಕ್ಯು ಆಲ್ ಎಂದು ಹೇಳಿದ್ದಾರೆ.
ಇದನ್ನೂ ಓದಿ:Monk the Young Movie: ಇಂದಿನಿಂದ ಸಿನಿಮಾ ಬಜಾರ್‌ನಲ್ಲಿ ʼಮಾಂಕ್ ದಿ ಯಂಗ್ʼ; ಸ್ಕ್ಯಾನ್ ಮಾಡಿ ಚಿತ್ರ ನೋಡಿ
ಅನಂತರ ಮಾತನಾಡಿದ್ದ ಅವರು, ನಾನು ಈ ಪ್ರಶಸ್ತಿಯನ್ನು ಇಬ್ಬರು ವಿಶೇಷ ವ್ಯಕ್ತಿಗಳಿಗೆ ಅರ್ಪಿ ಸಲು ಬಯಸುತ್ತೇನೆ. ಈ ಚಿತ್ರವು ತಂದೆ ಮತ್ತು ಮಗಳ ಬಗ್ಗೆ ಕಥಾ ಹಂದರ ಉಳ್ಳದ್ದಾಗಿದ್ದು ಪಾತ್ರದಲ್ಲಿ ಅಭಿನಯಿಸುವಾಗ ನನಗೆ ಹೆಚ್ಚು ನೆನಪಾಗಿದ್ದು ನನ್ನ ತಂದೆ ಮತ್ತು ನನ್ನ ಮಗಳು. ಹೀಗಾಗಿ ಈ ಪ್ರಶಸ್ತಿ ಅವರಿಗೆ ಅರ್ಪಿಸಲು ಬಯಸುವುದಾಗಿ ಅವರು ತಿಳಿಸಿದರು. ಐ ವಾಂಟ್ ಟು ಟಾಕ್ ಸಿನಿಮಾವು ತಂದೆಯು ತನ್ನ ಮಗಳೊಂದಿಗೆ ಮತ್ತೆ ಸಂಪರ್ಕ ಸಾಧಿಸಲು ಬಯಸುವ ವಿಭಿನ್ನ ಕಥೆವುಳ್ಳ ಸಿನಿಮಾವಾಗಿದೆ. ಈ ಸಿನಿಮಾದಲ್ಲಿ ಮಾರಕ ಖಾಯಿಲೆ ಉಳ್ಳ ತಂದೆಯಾಗಿ ನಟ ಅಭಿ ಷೇಕ್ ಅವರು ನಟಿಸಿದ್ದಾರೆ. ವಿಕಿ ಡೋನರ್, ಸರ್ದಾರ್ ಉದ್ಧಮ್, ಪಿಕು ಇತರ ಚಿತ್ರಗಳನ್ನು ನಿರ್ಮಿಸಿದ್ದ ಖ್ಯಾತ ನಿರ್ದೇಶಕ ಶೂಜಿತ್ ಸಿರ್ಕಾರ್ ಅವರ ನಿರ್ದೇಶನದ ಈ ಸಿನಿಮಾದಲ್ಲಿ ನಟ ಅಭೀಷೇಕ್ ಅವರು ನಟಿಸಿದ್ದಾರೆ. ಈ ಮೂಲಕ ಇದೇ ಸಿನಿಮಾ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ದೊರೆಯುವಂತೆ ಕೂಡ ಮಾಡಿದೆ.