BBK 12: ಬಿಗ್ ಬಾಸ್ನಲ್ಲಿ ಬಿಗ್ ಟ್ವಿಸ್ಟ್: ಜಂಟಿ-ಒಂಟಿ ಆಟ ದಿಢೀರ್ ಸ್ಟಾಪ್
ಬಿಗ್ ಬಾಸ್ ಮೂರನೇ ವಾರದ ಮೊದಲ ದಿನವೇ ಒಂಟಿಗಳನ್ನು ಬೇರೆ ಬೇರೆ ಮಾಡಿ ಎಲ್ಲರನ್ನೂ ಒಂಟಿಯಾಗಲು ಬಿಟ್ಟಿದ್ದಾರೆ. ಸದ್ಯ ಮನೆಯೊಳಗೆ ಅಭಿಷೇಕ್ - ಅಶ್ವಿನಿ ಎಸ್.ಎನ್, ಕಾವ್ಯ ಶೈವ - ಗಿಲ್ಲಿ ನಟ, ಸ್ಪಂದನಾ - ಮಾಳು ನಿಪನಾಳ, ರಾಶಿಕಾ - ಮಂಜು ಭಾಷಿಣಿ, ಚಂದ್ರಪ್ರಭ - ಡಾಗ್ ಸತೀಶ್ ಜಂಟಿ ಆಗಿ ಇದ್ದಾರೆ.

Janti Onti BBK 12 -

ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada 12) ಶುರುವಾಗಿ ಎರಡು ವಾರ ಕಳೆದಿದೆ. ಈ ಸೀಸನ್ ಜಂಟಿ ಹಾಗೂ ಒಂಟಿ ಎಂಬ ಕಾನ್ಸೆಪ್ಟ್ ಮೂಲಕ ಶುರುವಾಯಿತು. ಗ್ರ್ಯಾಂಡ್ ಓಪನಿಂಗ್ ದಿನ ಕಿಚ್ಚ ಸುದೀಪ್ ಅವರು ಓಟಿಂಗ್ ಆಧಾರದ ಮೇಲೆ ಕೆಲ ಸ್ಪರ್ಧಿಗಳನ್ನು ಒಂಟಿಯಾಗಿ ಹಾಗೂ ಇನ್ನೂ ಕೆಲ ಸ್ಪರ್ಧಿಗಳನ್ನು ಜಂಟಿಯಾಗಿ ಮನೆಯೊಳಗೆ ಕಳುಹಿಸಿದರು. ಒಂಟಿ ಸದಸ್ಯರು ಮನೆಯೊಳಗೆ ಒಬ್ಬೊಬ್ಬರೆ ಆರಾಮವಾಗಿ ಇದ್ದರೆ, ಜಂಟಿ ಸದಸ್ಯರು ತಮ್ಮ ಪಾರ್ಟ್ನರ್ ಜೊತೆ ಹಗ್ಗ ಕಟ್ಟಿಕೊಂಡು ಜೊತೆಯಲ್ಲೇ ಇರಬೇಕಿತ್ತು. ಮೊದಲ ಎರಡು ವಾರ ಹೀಗೆ ನಡೆದಿದೆ. ಇದೀಗ ಜಂಟಿ-ಒಂಟಿ ಆಟಕ್ಕೆ ಬ್ರೇಕ್ ಬಿದ್ದಿದೆ.
ಹೌದು, ಬಿಗ್ ಬಾಸ್ ಮೂರನೇ ವಾರದ ಮೊದಲ ದಿನವೇ ಒಂಟಿಗಳನ್ನು ಬೇರೆ ಬೇರೆ ಮಾಡಿ ಎಲ್ಲರನ್ನೂ ಒಂಟಿಯಾಗಲು ಬಿಟ್ಟಿದ್ದಾರೆ. ಸದ್ಯ ಮನೆಯೊಳಗೆ ಅಭಿಷೇಕ್ - ಅಶ್ವಿನಿ ಎಸ್.ಎನ್, ಕಾವ್ಯ ಶೈವ - ಗಿಲ್ಲಿ ನಟ, ಸ್ಪಂದನಾ - ಮಾಳು ನಿಪನಾಳ, ರಾಶಿಕಾ - ಮಂಜು ಭಾಷಿಣಿ, ಚಂದ್ರಪ್ರಭ - ಡಾಗ್ ಸತೀಶ್ ಜಂಟಿ ಆಗಿ ಇದ್ದಾರೆ.
ಹೀಗಿರುವಾಗ, ‘‘ಜಂಟಿಗಳ ಮಧ್ಯೆ ಇರುವ ಈ ಬಂಧವನ್ನು ಮುರಿದು ಜಂಟಿ-ಒಂಟಿ ಆಟಕ್ಕೆ ಪೂರ್ಣ ವಿರಾಮ ನೀಡುವ ಸಮಯ’’ ಎಂದು ಬಿಗ್ ಬಾಸ್ ಹೇಳಿದ್ದಾರೆ. ಜಂಟಿ ಸದಸ್ಯರು ಒಂಟಿ ಆಗಲು ಸೂಕ್ತ ಕಾರಣವನ್ನು ಕೂಡ ನೀಡಬೇಕು. ಈ ಸಂದರ್ಭ, ‘‘ಗಿಲ್ಲಿ ನನ್ನ ಜೊತೆ ಎಲ್ಲ ಅಂದ್ರೆ ನನ್ನ ವೈಯಕ್ತಿಕ ಆಟ ಕೂಡ ಕಾಣುತ್ತೆ.. ನನ್ಗೆ ಜಂಟಿಯಿಂದ ಮುಕ್ತಿ ಬೇಕು’’ ಎಂದು ಕಾವ್ಯ ಹೇಳಿದ್ದಾರೆ. ಆಗ ಇವರಿಬ್ಬರ ಹಗ್ಗವನ್ನು ಕಟ್ ಮಾಡಲಾಗಿದೆ.
ಆದರೆ, ಈ ಬಂಧವನ್ನು ಮುರಿಯುವ ಸಂದರ್ಭ ಡಾಗ್ ಸತೀಶ್ ಹಾಗೂ ಚಂದ್ರಪ್ರಭ ನಡುವೆ ಗಲಾಟೆ ನಡೆದಿದೆ. ಡಾಗ್ ಸತೀಶ್ ಮಾತನಾಡುತ್ತ, ನಾವು ಹಿಂದಿನ ರಾತ್ರಿ ಜಂಟಿಯಿಂದ ಮುಕ್ತಿ ಪಡೆಯುವುದಕ್ಕೆ ಏನಾದರೂ ನ್ಯೂಸೆನ್ಸ್ ಕ್ರಿಯೇಟ್ ಮಾಡೋಣ ಎಂದು ಮಾತನಾಡಿದ್ದೆವು. ಅದಕ್ಕೋಸ್ಕರ ಮನೆಯವರ ಮುಂದೆ ದೊಡ್ಡದಾಗಿ ಜಗಳ ಕೂಡ ಮಾಡಿದ್ದೆವು. ನಾವು ಬೇರೆ ಬೇರೆಯಾಗಿ ಇರಬೇಕು ಎಂದೇ ಡ್ರಾಮಾ ಮಾಡಿದ್ದೆವು ಎಂದು ಹೇಳಿದ್ದಾರೆ.
ಸತೀಶ್ ಮಾತಿನಿಂದ ರೊಚ್ಚಿಗೆದ್ದ ಚಂದ್ರಪ್ರಭ ಅವರು, ನಾವು ಪ್ಲ್ಯಾನ್ ಮಾಡಿಕೊಂಡು ಮಾಡಿದ್ದೀವಿ ಎಂದು ಹೇಳಬೇಡಿ. ನಾನು ನಿಮ್ಮ ಜೊತೆಗೆ ಇರುವಷ್ಟು ದಿನ ನೀವು ಕೊಟ್ಟಿರುವ ಕಾಟಕ್ಕೆ ನಾನು ಕಣ್ಣೀರು ಹಾಕಿದ್ದೇನೆ ಎನ್ನುತ್ತಾರೆ. ಇದಕ್ಕೆ ತಿರುಗೇಟು ಕೊಟ್ಟ ಸತೀಶ್ ನೀವು ಒಳ್ಳೆಯವರಾಗಲು ನನ್ನನ್ನು ಕೆಟ್ಟವರನ್ನಾಗಿ ಮಾಡಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಚಂದ್ರಪ್ರಭ ನೀವೇ ನನ್ನನ್ನು ಕೆಟ್ಟವರನ್ನಾಗಿ ಮಾಡುತ್ತಿದ್ದೀರಿ. ನಿಮ್ಮ ಜೊತೆಗೆ ಮಾತನಾಡಿದರೆ ಹುಚ್ಚು ಬರ್ತದೆ ಎಂದು ತಮ್ಮ ಕೈಗೆ ಕಟ್ಟಿದ್ದ ಹಗ್ಗವನ್ನು ಕಿತ್ತೆಸೆದು ಹೊರ ನಡೆದಿದ್ದಾರೆ.
BBK 12: ಈ ವಾರಾಂತ್ಯದಲ್ಲಿ ಅರ್ಧಕ್ಕರ್ಧ ಸ್ಪರ್ಧಿಗಳು ಬಿಗ್ ಬಾಸ್ ಮನೆಯಿಂದ ಖಾಲಿ