Actor Trivikram : ಅಪ್ಪ ತೀರಿ ಹೋದ ದಿನವೇ ಬ್ರೇಕಪ್! ತಮ್ಮ ಲವ್‌ಸ್ಟೋರಿಯನ್ನ ನೆನೆದ ತ್ರಿವಿಕ್ರಮ್
Actor Trivikram : ತ್ರಿವಿಕ್ರಮ್ ಕನ್ನಡ ಕಿರುತರೆ ಹಾಗೂ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟ. ಮೊದಲು ಕ್ರಿಕೆಟ್ ಆಟಗಾರರಾಗಿದ್ದ ಇವರು, ಕಾಲಿಗೆ ಬಿದ್ದ ಗಾಯದಿಂದಾಗಿ ಜಿಮ್ ಟ್ರೈನರ್ ಆದರು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಪದ್ಮಾವತಿ ಧಾರಾವಾಹಿಯಲ್ಲಿ ಸಾಮ್ರಾಟ್ ಪಾತ್ರದ ಮೂಲಕ ಕರ್ನಾಟಕದ ಮನೆಮಾತಾದರು. ಪ್ರಸ್ತುತ ಕಲರ್ಸ್ ಕನ್ನಡ ವಾಹಿನಿಯ ʻಮುದ್ದು ಸೊಸೆʼ ಧಾರಾವಾಹಿಯಲ್ಲಿ ನಾಯಕನ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ತ್ರಿವಿಕ್ರಮ್ ತಮ್ಮ ಹಳೆಯ ಲವ್‌ಸ್ಟೋರಿ ಮತ್ತು ಬ್ರೇಕಪ್ ಬಗ್ಗೆ ಸಂದರ್ಶನವೊಂದರಲ್ಲಿ ಭಾವುಕವಾಗಿ ಮಾತನಾಡಿದ್ದಾರೆ.
ನಟ ತ್ರಿವಿಕ್ರಮ್ -
ತ್ರಿವಿಕ್ರಮ್ (Trivikram) ಕನ್ನಡ ಕಿರುತರೆ ಹಾಗೂ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟ. ಮೊದಲು ಕ್ರಿಕೆಟ್ ಆಟಗಾರರಾಗಿದ್ದ ಇವರು, ಕಾಲಿಗೆ ಬಿದ್ದ ಗಾಯದಿಂದಾಗಿ ಜಿಮ್ ಟ್ರೈನರ್ ಆದರು. ಕಲರ್ಸ್ ಕನ್ನಡ ವಾಹಿನಿಯಲ್ಲಿ (Colors Kannada) ಪ್ರಸಾರವಾದ ಪದ್ಮಾವತಿ ಧಾರಾವಾಹಿಯಲ್ಲಿ ಸಾಮ್ರಾಟ್ ಪಾತ್ರದ ಮೂಲಕ ಕರ್ನಾಟಕದ ಮನೆಮಾತಾದರು. ತ್ರಿವಿಕ್ರಮ್ ಅವರು ನವರಾತ್ರಿ, ಪ್ರೇಮ ಬರಹ, ಸಕೂಚಿ, ರಂಗನಾಯಕಿ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಬಿಗ್‌ಬಾಸ್ ಕನ್ನಡ ಸೀಸನ್ 11ರಲ್ಲಿ 9ನೇ ಸ್ಪರ್ಧಿಯಾಗಿ ಪ್ರವೇಶ ಮಾಡಿದ್ದ ತ್ರಿವಿಕ್ರಮ್, ಈ ಸೀಸನ್‌ನ ರನ್ನರ್ ಅಪ್ ಆಗಿದ್ದಾರೆ. ತ್ರಿವಿಕ್ರಮ್ ಪ್ರಸ್ತುತ ಕಲರ್ಸ್ ಕನ್ನಡ ವಾಹಿನಿಯ ʻಮುದ್ದು ಸೊಸೆʼ (Muddu Sose) ಧಾರಾವಾಹಿಯಲ್ಲಿ ನಾಯಕನ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ತ್ರಿವಿಕ್ರಮ್ ತಮ್ಮ ಹಳೆಯ ಲವ್‌ಸ್ಟೋರಿ (Love story) ಮತ್ತು ಬ್ರೇಕಪ್ (Breakup) ಬಗ್ಗೆ ಸಂದರ್ಶನವೊಂದರಲ್ಲಿ ಭಾವುಕವಾಗಿ ಮಾತನಾಡಿದ್ದಾರೆ.
ಡಿಗ್ರಿ ಸಮಯದಲ್ಲೇ ಬ್ರೇಕಪ್
ತ್ರಿವಿಕ್ರಮ್ ಈ ಬಗ್ಗೆ ಮಾತನಾಡಿ, ʻನನ್ನದು ಡಿಗ್ರಿ ಸಮಯದಲ್ಲೇ ಬ್ರೇಕಪ್ ಆಗಿತ್ತು. ಫ್ಯಾಮಿಲಿ ಮಧ್ಯೆನೇ ಆಗಿಲ್ಲ. ನಾವು ಫ್ರೆಂಡ್ಸ್ ಆಗೇ ಇದ್ವಿ. ಅದು ಹೇಗಾಯ್ತು ಅಂತಂದರೆ, ಫೀಮೇಲ್ ವರ್ಷನ್ ಆಫ್ ತ್ರಿವಿಕ್ರಮ್ ಅನ್ನೋ ರೀತಿ ಆಯ್ತು. ಯಾವಗ ರೈಟ್ ಟೈಮ್ ಅನ್ಸತ್ತೋ ಆಗ ಮದುವೆ ಆಗೋಣ ಅಂತ ನಿರ್ಧಾರ ಮಾಡಿದ್ದೇವು. ಸರಿ ಆಗೋಣ ನನಗೆ ಕರಿಯರ್ ಟೈಮ್ ಸೆಟ್ ಆಗೋಕೆ ಟೈಮ್ ಬೇಕು, ಇಂಡಸ್ಟ್ರೀ ಹೇಗೆ ಏನೂ ಅನ್ನೋದು ನಿಮಗೆ ಗೊತ್ತು ಅಂದಿದ್ದೆʼ.
ಇದನ್ನೂ ಓದಿ: Bhagyalakshmi Serial: ಭಾಗ್ಯ ಪ್ರಾಣಕ್ಕೆ ಅಪಾಯ; ತಾಂಡವ್ ಕೆನ್ನೆಗೆ ಬಾರಿಸಿದ ಆದಿ!
ʻಬ್ರೇಕಪ್ ಆಗೋವರೆಗೂ ಫ್ರೆಂಡ್ಸ್ ತರಹನೇ ಇದ್ವಿ. ಆರಾಮಾಗಿ ಇದ್ದೆವು. ಅದೇನೋ ಈ ಹೆಣ್ಣುಮಕ್ಕಳಿಗೆ ಸೆನ್ಸ್ ಹೊಡೆಯುತ್ತೆ ಅನ್ಸತ್ತೆ. ಇಲ್ಲಿಂದ ಆಗಲ್ಲ ಇನ್ನು ಮುಂದಕ್ಕೆ ಅಂತ ಸೆನ್ಸ್ ಆಗುತ್ತೆ ಅನ್ಸತ್ತೆ. ಲೌಕ್‌ಡೌನ್ ಆಯ್ತು, ಏನು ಮಾಡೋಕಾಗ್ತಿಲ್ಲ. ನಾಲ್ಕು ಸಿನಿಮಾಗಳು ಸೈನ್ ಆಗಿದೆ. ಆದರೆ ಟೇಕಾಫ್ ಆಗ್ತಿಲ್ಲ ಅಂದ್ರೆ ಏನ್ ಮಾಡೋದು. ಈ ರೀತಿ ವಿಷಯಗಳು ಚರ್ಚೆ ಆಗ್ತಿತ್ತು. ಆರ್ಥಿಕ ಬಿಕ್ಕಟ್ಟು ಏನಿರಲಿಲ್ಲ. ಮನೆಯಲ್ಲಿ ಅಪ್ಪ ಇದ್ರು, ಜೀವನ ನಾರ್ಮಲ್ ಆಗಿ ನಡೀತಿತ್ತು. ಯಾವಾಗ ಅಪ್ಪ ಹೋದ್ರು, ಆಗ ಮನೆಗೆ ಬಂದು ಅತ್ತೂ ಕರೆದು ಹೋದರು. ಅಪ್ಪನ ಅಂತ್ಯ ಸಂಸ್ಕಾರ ಮುಗಿಸಿ, ಸಂಜೆ ನನಗೆ ಒಂದು ಫೋನ್ ಬಂತುʼ ಎಂದರು.
ʻಆ ಸಮಯದಲ್ಲಿ ಒಂದು ಕ್ಷಣ ಏನು ಅರ್ಥವಾಗಲಿಲ್ಲ ನಾನು ಕಾಲ್‌ನಲ್ಲಿ ಇರುವಾಗಲ್ಲೇ ಒಂದು ಮೆಸೇಜ್ ಬಂತು ಮನೆಯಲ್ಲಿ ನೋಡಿದ ಹುಡುಗ ಲೈನ್‌ನಲ್ಲಿದ್ದಾನೆ. ನೀನು ನಾನು ಜಸ್ಟ್ ಫ್ರೆಂಡ್ಸ್ ಅಂತ ಹೇಳು ಸಾಕು ಅಂತಾ ರಿಕ್ವೆಸ್ಟ್ ಮಾಡಿದ್ದರು.
ಇದನ್ನೂ ಓದಿ: Amruthadhaare Serial: ಗೌತಮ್ ಮನಸ್ಸನ್ನು ಘಾಸಿಗೊಳಿಸಿದೆ ಜೈದೇವ್ ಹಾಕಿರೋ ಷರತ್ತು!
ಆರು ವರ್ಷ ಜೊತೆಗಿದ್ದವರು, ನನ್ನ ವಿಷಯನೂ ಎಲ್ಲಾ ನಿನಗೆ ಗೊತ್ತು. ಅಂತ್ಯ ಸಂಸ್ಕಾರ ಮುಗಿಸಿ ಬಂದವನಿಗೆ ಸಂಜೆ ಫೋನ್ ಮಾಡಿದ್ರೆ ಏನಾಗುತ್ತೆ ಅಂತ ಗೊತ್ತು. ಅದಾದ ಮೇಲೆ ತುಂಬಾ ಸಲ ಫೋನ್ ಮಾಡಿದ್ರು, ಜಸ್ಟ್ ಫ್ರೆಂಡ್ ಹತ್ರಾ ನಾನು ಏನ್ ಮಾತಾಡೋಕಾಗುತ್ತೆ? ಅಂತ ಸುಮ್ಮನಾದೆ. ಅದು ನನ್ನ ಜೀವನದ ಬ್ಲಾಕ್ ಡೇʼ ಎಂದಿದ್ದಾರೆ ತ್ರಿವಿಕ್ರಮ್. ಅಂದೇ ಅವರ ಜೊತೆಗಿದ್ದ ಫ್ರೆಂಡ್‌ಶಿಪ್ ಎಲ್ಲವೂ ಕಟ್ಆಫ್ ಮಾಡಿದೆ ಅಂತಾ ತ್ರಿವಿಕ್ರಮ ಭಾವುಕರಾಗಿದ್ದಾರೆ.