ಅಯ್ಯೋ, ಟಾಕ್ಸಿಕ್ ರಿಲೇಷನ್‌ಶಿಪ್‌ನಿಂದ ನಲುಗಿಹೋದರೇ ನಟಿ ಅನುಪಮಾ ಪರಮೇಶ್ವರನ್? ಎಲ್ಲರ ಕಣ್ಣು ಆ ಸ್ಟಾರ್ ಹೀರೋ ಪುತ್ರನ ಮೇಲೆ ಬಿತ್ತು!
ನಟಿ ಅನುಪಮಾ ಪರಮೇಶ್ವರನ್ ತಮ್ಮ ಕಳೆದ ಎರಡು ವರ್ಷಗಳ ಟಾಕ್ಸಿಕ್ ರಿಲೇಶನ್‌ಶಿಪ್ ಕುರಿತು ಸಂದರ್ಶನವೊಂದರಲ್ಲಿ ಶಾಕಿಂಗ್ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಮಾಜಿ ಪ್ರೇಮಿಯ ನಾರ್ಸಿಸಿಸ್ಟಿಕ್ ನಡವಳಿಕೆಯನ್ನು 'ಅನ್ನಿಯನ್' ಚಿತ್ರದ ಪಾತ್ರಕ್ಕೆ ಹೋಲಿಸಿರುವ ಅವರು, ಆತ್ಮಹತ್ಯೆಯ ಹಂತಕ್ಕೆ ತಲುಪಿದ್ದಾಗಿ ಹೇಳಿದ್ದಾರೆ!
-
ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ 'ಸ್ವಾತಂತ್ರ್ಯ ಸಿಕ್ಕಿದೆ', 'ಈಗ ಯಾರ ಅನುಮತಿಯೂ ಅಗತ್ಯವಿಲ್ಲ', 'ಯಾವುದೇ ಭಯಗಳಿಲ್ಲ' ಎಂಬ ಅರ್ಥಪೂರ್ಣ ಪೋಸ್ಟ್‌ಗಳನ್ನು ಹಾಕುವ ಮೂಲಕ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದ್ದ ನಟಿ ಅನುಪಮಾ ಪರಮೇಶ್ವರನ್, ಇದೀಗ ತಮ್ಮ ವೈಯಕ್ತಿಕ ಜೀವನ ಹಾಗೂ ಬ್ರೇಕಪ್ ಕುರಿತು ಮುಕ್ತವಾಗಿ ಮಾತನಾಡುವ ಮೂಲಕ ತಮ್ಮ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.
ತಾವು ಕಳೆದ ಎರಡು ವರ್ಷಗಳಿಂದ ತೀವ್ರವಾದ ಮಾನಸಿಕ ಮತ್ತು ಶಾರೀರಿಕ ಕಿರುಕುಳವನ್ನು ಎದುರಿಸಿದ್ದಾಗಿ ಹಾಗೂ ಅತ್ಯಂತ ಅಪಾಯಕಾರಿ 'ಟಾಕ್ಸಿಕ್' ಸಂಬಂಧದಿಂದ ಹೊರಬಂದಿರುವುದಾಗಿ ಇತ್ತೀಚಿನ ಸಂದರ್ಶನವೊಂದರಲ್ಲಿ ಅವರು ಶಾಕಿಂಗ್ ಸತ್ಯಗಳನ್ನು ಹೊರಹಾಕಿದ್ದಾರೆ.
"ಆ ಪೋಸ್ಟ್‌ನ ಹಿಂದೆ 2 ವರ್ಷಗಳ ನೋವಿದೆ"
ತಮ್ಮ ಸೋಶಿಯಲ್ ಮೀಡಿಯಾ ಪೋಸ್ಟ್‌ಗಳ ಕುರಿತು ವ್ಯಕ್ತವಾಗುತ್ತಿರುವ ಪರ-ವಿರೋಧ ಅಭಿಪ್ರಾಯಗಳಿಗೆ ಪ್ರತಿಕ್ರಿಯಿಸಿದ ಅನುಪಮಾ, "ಜನರು ನನ್ನ ಪೋಸ್ಟ್‌ಗಳ ಬಗ್ಗೆ ಎರಡು ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಕೆಲವರು ನಾನು ಚೇತರಿಸಿಕೊಳ್ಳುತ್ತಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದರೆ, ಇನ್ನು ಕೆಲವರು ಅನಗತ್ಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಆದರೆ ಆ ಪೋಸ್ಟ್ ರಾತ್ರೋರಾತ್ರಿ ಮಾಡಿದ್ದಲ್ಲ. ಅದರ ಹಿಂದೆ ನನ್ನ ಎರಡು ವರ್ಷಗಳ ಶಾರೀರಿಕ ಮತ್ತು ಮಾನಸಿಕ ಹಿಂಸೆಯ ನೋವಿದೆ. ನಾನು ಸಂಪೂರ್ಣವಾಗಿ ಚೇತರಿಸಿಕೊಂಡ ನಂತರವೇ ಧ್ವನಿ ಎತ್ತಲು ನಿರ್ಧರಿಸಿದ್ದೆ" ಎಂದು ಸ್ಪಷ್ಟಪಡಿಸಿದ್ದಾರೆ.
"ಅಪಾಯಕಾರಿ 'ನಾರ್ಸಿಸಿಸ್ಟಿಕ್' ಕಿರುಕುಳ ಎದುರಿಸಿದೆ"
ತಮ್ಮ ಮಾಜಿ ಪ್ರೇಮಿಯಿಂದ ಎದುರಿಸಿದ ಕಿರುಕುಳದ ಸ್ವರೂಪವನ್ನು ವಿವರಿಸಿದ ಅವರು, ಇದೊಂದು 'ನಾರ್ಸಿಸಿಸ್ಟಿಕ್ ಅಬ್ಯೂಸ್' (Narcissistic Abuse) ಎಂದು ಹೇಳಿದ್ದಾರೆ. "ಈ ರೀತಿಯ ಕಿರುಕುಳ ಏನೆಂದು ತಿಳಿಯದವರಿಗೆ 'ಅನ್ನಿಯನ್' ಸಿನಿಮಾದ ಪಾತ್ರದ ಉದಾಹರಣೆ ನೀಡಬಹುದು. ಆ ವ್ಯಕ್ತಿ ಒಂದು ದಿನ 'ರೆಮೊ' ತರಹ ಅತ್ಯಂತ ಪ್ರೀತಿಯಿಂದ ವರ್ತಿಸಿ, ಕನಸು ನನಸಾದಂತೆ ಭಾವನೆ ಮೂಡಿಸುತ್ತಿದ್ದ. ಆದರೆ ಮಾರನೇ ದಿನವೇ 'ಅನ್ನಿಯನ್' ರೀತಿಯಲ್ಲಿ ಅತ್ಯಂತ ಕ್ರೂರವಾಗಿ ಬದಲಾಗುತ್ತಿದ್ದ. ಯಾರಾದರೂ ಬಂದು ನನ್ನನ್ನು ಚುಚ್ಚಿ ಕೊಲ್ಲುತ್ತಿದ್ದರೂ ಕನಿಷ್ಠ ತಲೆಯನ್ನೂ ತಿರುಗಿಸದೆ ನಿರ್ಲಕ್ಷಿಸುತ್ತಿದ್ದ. ಮರುದಿನ 'ಅಂಬಿ'ಯಾಗಿ ಬದಲಾಗಿ 'ಇನ್ನೊಮ್ಮೆ ಹೀಗೆ ಮಾಡುವುದಿಲ್ಲ' ಎಂದು ಮಗುವಿನಂತೆ ಅತ್ತು ಗೋಗರೆಯುತ್ತಿದ್ದ. ಈ ವಿಷಕಾರಿ ಚಕ್ರ ಪುನರಾವರ್ತನೆಯಾಗುತ್ತಲೇ ಇತ್ತು" ಎಂದು ಅನುಪಮಾ ಹೇಳಿದ್ದಾರೆ.
ನಟಿ ಅನುಪಮಾ ಪರಮೇಶ್ವರನ್ ಬ್ರೇಕಪ್ ಪೋಸ್ಟ್ ವೈರಲ್: ಧ್ರುವ್ ವಿಕ್ರಮ್ ಜೊತೆಗಿನ ಸಂಬಂಧಕ್ಕೆ ಬಿತ್ತಾ ಫುಲ್‌ಸ್ಟಾಪ್?
ಹಾಳುಮಾಡಿಕೊಳ್ಳುತ್ತಾರೆ ಅಥವಾ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ
ಈ ಟಾಕ್ಸಿಕ್ ಸಂಬಂಧದಿಂದಾಗಿ ತಾನು ಮಾನಸಿಕವಾಗಿ ತೀವ್ರ ಕುಗ್ಗಿಹೋಗಿದ್ದಾಗಿ ಹಾಗೂ ತಮ್ಮ 'ಡ್ರಾಗನ್' ಸಿನಿಮಾವನ್ನು ಪ್ರಮೋಟ್ ಮಾಡಲು ಕೂಡ ಆ ವ್ಯಕ್ತಿ ಬಿಡಲಿಲ್ಲ ಎಂದು ಅನುಪಮಾ ಬೇಸರ ತೋಡಿಕೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕೊನೆಯಲ್ಲಿ ಜನರು ಬ್ರೇಕಪ್ ಮಾಡಿಕೊಳ್ಳುತ್ತಾರೆ, ತಮ್ಮನ್ನು ತಾವು ಹಾಳುಮಾಡಿಕೊಳ್ಳುತ್ತಾರೆ ಅಥವಾ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಅಂತಹ ಪರಿಸ್ಥಿತಿಯಲ್ಲಿದ್ದವರಿಗೆ ಅರಿವು ಮೂಡಿಸಲು ಈ ವಿಷಯವನ್ನು ಹಂಚಿಕೊಂಡಿರುವುದಾಗಿ ಅವರು ತಿಳಿಸಿದ್ದಾರೆ.
Anupama Parameswaran: ಬ್ರೇಕಪ್ ಬಗ್ಗೆ ಮೌನ ಮುರಿದ ಅನುಪಮಾ ಪರಮೇಶ್ವರನ್!
ನಟ ಧ್ರುವ್ ವಿಕ್ರಮ್ ಮೇಲೆ ಎಲ್ಲರ ಕಣ್ಣು
ತಮಿಳು ಚಿತ್ರರಂಗದ ಖ್ಯಾತ ನಟ ವಿಕ್ರಮ್ ಅವರ ಪುತ್ರ ಧ್ರುವ್ ವಿಕ್ರಮ್ ಮತ್ತು ಅನುಪಮಾ ಪರಮೇಶ್ವರನ್ ನಡುವೆ ಪ್ರೀತಿಯಿದೆ ಎಂಬ ವದಂತಿಗಳು ಸುದೀರ್ಘ ಕಾಲದಿಂದ ಹರಿದಾಡುತ್ತಿದ್ದವು. ಆದರೆ ಇಬ್ಬರೂ ಈ ವಿಷಯವನ್ನು ಅಧಿಕೃತವಾಗಿ ಒಪ್ಪಿಕೊಂಡಿರಲಿಲ್ಲ. ಇದೀಗ ಅನುಪಮಾ ತಮ್ಮ 'ಟಾಕ್ಸಿಕ್' ಪ್ರೇಮಕಥೆ ಹಾಗೂ ಬ್ರೇಕಪ್ ಬಗ್ಗೆ ಬಿಚ್ಚಿಟ್ಟಿರುವುದು, ಆ ವ್ಯಕ್ತಿ ಧ್ರುವ್ ವಿಕ್ರಮ್ ಇರಬಹುದಾ ಎಂಬ ಶಂಕೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಹುಟ್ಟುಹಾಕಿದೆ. ಆದರೆ ಈ ಯಾವುದೇ ಆರೋಪಗಳು ಅಥವಾ ವದಂತಿಗಳಿಗೆ ನಟ ಧ್ರುವ್ ವಿಕ್ರಮ್ ಕಡೆಯಿಂದ ಇದುವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ಲಭ್ಯವಾಗಿಲ್ಲ.