ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೃತ್ತಿ ಜೀವನದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆದ ನಟಿ ರಶ್ಮಿಕಾ ಮಂದಣ್ಣ; ಇಷ್ಟೊಂದು ದುಡ್ಡು ಕೊಟ್ಟ ಆ ಚಿತ್ರತಂಡ ಯಾವುದು?

ಸ್ಯಾಂಡಲ್‌ವುಡ್‌ನ 'ಕಿರಿಕ್ ಪಾರ್ಟಿ' ಮೂಲಕ ಚಿತ್ರರಂಗಕ್ಕೆ ಬಂದ ರಶ್ಮಿಕಾ ಮಂದಣ್ಣ, ಇದೀಗ ತಮ್ಮ ವೃತ್ತಿಜೀವನದ ಸರ್ವಕಾಲಿಕ ಗರಿಷ್ಠ 15 ಕೋಟಿ ರೂ. ಸಂಭಾವನೆ ಪಡೆದುಕೊಳ್ಳುವ ಮಟ್ಟಕ್ಕೆ ಬೆಳೆದಿದ್ದಾರೆ. ಅಷ್ಟಕ್ಕೂ ರಶ್ಮಿಕಾ ಇಷ್ಟೊಂದು ದೊಡ್ಡಮೊತ್ತದ ಸಂಭಾವನೆ ನೀಡಿದವರು ಯಾರು? ಮುಂದೆ ಓದಿ.

ದುಬಾರಿ ಸಂಭಾವನೆ ಪಡೆದು ಅಚ್ಚರಿ ಮೂಡಿಸಿದ ನಟಿ ರಶ್ಮಿಕಾ ಮಂದಣ್ಣ

-

Avinash GR
Avinash GR Jun 1, 2026 8:13 PM

ʻಕಿರಿಕ್‌ ಪಾರ್ಟಿʼ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ರಶ್ಮಿಕಾ ಮಂದಣ್ಣ ಎಂಟ್ರಿ ಕೊಟ್ಟರು. ಆನಂತರ ತೆಲುಗು, ತಮಿಳು, ಹಿಂದಿ ಚಿತ್ರರಂಗದಲ್ಲಿ ಭಾರಿ ಬೇಡಿಕೆಯನ್ನು ರಶ್ಮಿಕಾ ಸೃಷ್ಟಿಸಿಕೊಂಡಿದ್ದಾರೆ. ಇಂದು ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ಹೆಚ್ಚು ಬೇಡಿಕೆ ಇರುವ ನಟಿಯರಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ. 2021ರಲ್ಲಿ ತೆರೆಕಂಡ ಅಲ್ಲು ಅರ್ಜುನ್ ನಟನೆಯ 'ಪುಷ್ಪ' ಸಿನಿಮಾ ರಶ್ಮಿಕಾ ಅವರ ಜನಪ್ರಿಯತೆಯನ್ನು ಪ್ಯಾನ್-ಇಂಡಿಯಾ ಮಟ್ಟಕ್ಕೆ ಕೊಂಡೊಯ್ಯಿತು.

15 ಕೋಟಿ ರೂ. ಬಾಚಿಕೊಂಡ ರಶ್ಮಿಕಾ

ವರದಿಗಳ ಪ್ರಕಾರ, ರಶ್ಮಿಕಾ ಮಂದಣ್ಣ ಅವರು ತಮ್ಮ ಸಿನಿಮಾ ವೃತ್ತಿಜೀವನದಲ್ಲೇ ಅತ್ಯಂತ ಗರಿಷ್ಠ ಸಂಭಾವನೆಯನ್ನು ಪಡೆಯುತ್ತಿದ್ದು, ಪ್ರಸ್ತುತ ಚಿತ್ರವೊಂದಕ್ಕೆ ಬರೋಬ್ಬರಿ 15 ಕೋಟಿ ರೂಪಾಯಿಗಳನ್ನು ಪಡೆಯುತ್ತಿದ್ದಾರೆ ಎನ್ನಲಾಗಿದೆ. ಹೌದು, ರಶ್ಮಿಕಾ ಮಂದಣ್ಣ ಅವರು ಬಾಲಿವುಡ್‌ನ ಬಹುನಿರೀಕ್ಷಿತ ‘ಕಾಕ್‌ಟೇಲ್ 2’ (Cocktail 2) ಚಿತ್ರಕ್ಕಾಗಿ ಬರೋಬ್ಬರಿ 15 ಕೋಟಿ ರೂಪಾಯಿಗೂ ಹೆಚ್ಚು ಸಂಭಾವನೆ ಪಡೆದುಕೊಂಡಿದ್ದು, ಇದು ಅವರ ವೃತ್ತಿಜೀವನದ ಅತಿ ದೊಡ್ಡ ಮೊತ್ತವಾಗಿದೆ. ಈ ಚಿತ್ರದಲ್ಲಿ ಅವರು ಕೃತಿ ಸನೋನ್ ಮತ್ತು ಶಾಹಿದ್ ಕಪೂರ್ ಅವರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಈ ಚಿತ್ರವು ಇದೇ ಜೂನ್ 19 ರಂದು ಬಿಡುಗಡೆಯಾಗಲು ಸಿದ್ಧವಾಗಿದೆ.

Photos: ರಶ್ಮಿಕಾ-ವಿಜಯ್ ದೇವರಕೊಂಡ ವೆಡ್ಡಿಂಗ್ ರಿಸೆಪ್ಷನ್; ಹೈದರಾಬಾದ್‌ನಲ್ಲಿ ನಡೆದ ಈ ಕಲರ್‌ಫುಲ್‌ ಸಮಾರಂಭಕ್ಕೆ ಯಾರೆಲ್ಲಾ ಬಂದಿದ್ರು?

ಶಾಹಿದ್ ಕಪೂರ್‌ಗೆ ಸಿಕ್ಕಿದ್ದೆಷ್ಟು ಕೋಟಿ?

ಇನ್ನು, ನಟ ಶಾಹಿದ್ ಕಪೂರ್ ಈ ಚಿತ್ರಕ್ಕಾಗಿ 35 ಕೋಟಿ ರೂಪಾಯಿಗಳ ಭರ್ಜರಿ ಸಂಭಾವನೆಯನ್ನು ಪಡೆಯುತ್ತಿದ್ದಾರೆ. ಕೃತಿ ಸನೋನ್ ಕೂಡ ರಶ್ಮಿಕಾಗೆ ಸಮನಾದ ಸಂಭಾವನೆಯನ್ನೇ ಪಡೆಯುತ್ತಿರುವುದು ವಿಶೇಷ. ರಶ್ಮಿಕಾ ಮಂದಣ್ಣ ಅವರು ಕೃತಿ ಸನೋನ್‌ಗೆ ಹೋಲಿಸಿದರೆ ಕೊಂಚ ಜೂನಿಯರ್ ಆಗಿದ್ದರೂ, ಇಬ್ಬರೂ ಒಂದೇ ಪ್ರಮಾಣದ ಸಂಭಾವನೆ ಪಡೆಯುತ್ತಿರುವುದು ವಿಶೇಷ. ಪ್ರಸ್ತುತ ಉತ್ತರ ಭಾರತದಲ್ಲಿ ರಶ್ಮಿಕಾಗೆ ಭಾರಿ ಸ್ಟಾರ್‌ಡಮ್ ಇದೆ. ಆದರೂ ಅವರು ಅವಸರದಲ್ಲಿ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ.

Rashmika Mandanna: ರಶ್ಮಿಕಾ-ವಿಜಯ್ ದೇವರಕೊಂಡ ಅರಿಶಿಣ ಶಾಸ್ತ್ರದ ಫೋಟೋಗಳಿವು!

ಸದ್ಯ ರಶ್ಮಿಕಾ ಸಂಭಾವನೆ ಬಗ್ಗೆಯೇ ಮಾತು!

ನಟಿ ರಶ್ಮಿಕಾ ಸಂಭಾವನೆ ಸಂಭಾವನೆ ವಿಚಾರ ಈಗ ಭಾರಿ ಸದ್ದು ಮಾಡುತ್ತಿದೆ. ಆರಂಭದಲ್ಲಿ 'ಪುಷ್ಪ: ದಿ ರೈಸ್' ಚಿತ್ರಕ್ಕಾಗಿ ರಶ್ಮಿಕಾ 2 ಕೋಟಿ ರೂಪಾಯಿಗಿಂತ ಹೆಚ್ಚು ಸಂಭಾವನೆ ಪಡೆದಿದ್ದರು. ಆದರೆ ಆ ಚಿತ್ರದ ಭರ್ಜರಿ ಯಶಸ್ಸಿನ ನಂತರ ಅವರು ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡರು. 'ಸೀತಾ ರಾಮಂ' ಮತ್ತು 'ಆಡವಾಳ್ಳು ಮೀಕು ಜೋಹಾರ್ಲು' ಚಿತ್ರಗಳಿಗೆ ತಲಾ 3 ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದರು.

ಅಮಿತಾಬ್ ಬಚ್ಚನ್ ಜೊತೆಗಿನ 'ಗುಡ್ ಬೈ' ಚಿತ್ರಕ್ಕಾಗಿ 4 ಕೋಟಿ ರೂಪಾಯಿಗಿಂತ ಹೆಚ್ಚು ಸಂಭಾವನೆಯನ್ನು ಪಡೆದಿದ್ದ ರಶ್ಮಿಕಾ, 'ಪುಷ್ಪ 2' ಚಿತ್ರಕ್ಕಾಗಿ ಬರೋಬ್ಬರಿ 10 ಕೋಟಿ ರೂಪಾಯಿ ಬಾಚಿಕೊಂಡಿದ್ದರು. ವಿಕ್ಕಿ ಕೌಶಲ್ ಜೊತೆಗಿನ 'ಚಾವಾ' ಚಿತ್ರಕ್ಕೆ 4 ಕೋಟಿ ರೂ. ಸಲ್ಮಾನ್ ಖಾನ್ ಅಭಿನಯದ 'ಸಿಕಂದರ್' ಚಿತ್ರಕ್ಕೆ 5 ಕೋಟಿ ರೂ. ಹಾಗೂ ಧನುಷ್‌ ಅವರ 'ಕುಬೇರ' ಚಿತ್ರಕ್ಕಾಗಿ 4 ಕೋಟಿ ರೂ. ಸಂಭಾವನೆ ಪಡೆದುಕೊಂಡಿದ್ದರು ಎನ್ನುತ್ತವೆ ಮೂಲಗಳು.

ಕಳೆದ ವರ್ಷ ಬಂದ ಆಯುಷ್ಮಾನ್ ಖುರಾನಾ ಜೊತೆಗಿನ ʻಥಾಮಾʼ ಚಿತ್ರಕ್ಕಾಗಿ 7 ಕೋಟಿ ರೂಪಾಯಿ ಪಡೆದಿದ್ದ ರಶ್ಮಿಕಾ, ಇದೀಗ 15 ಕೋಟಿ ರೂ.ಗಳಿಗೆ ತಮ್ಮ ಸಂಭಾವನೆಯನ್ನು ಏರಿಸಿಕೊಂಡಿರುವುದು ಅಚ್ಚರಿ ಮೂಡಿಸಿದೆ.