ಕ್ರಿಕೆಟರ್ ತಿಲಕ್ ವರ್ಮಾ ಜೊತೆ ನಟಿ ಶ್ರೀಲೀಲಾ ಡೇಟಿಂಗ್ ಮಾಡ್ತಿರೋದು ನಿಜವೇ? ಇಲ್ಲಿದೆ ನೋಡಿ ಅಸಲಿ ಸತ್ಯ!
ಬಹುಭಾಷಾ ನಟಿ ಶ್ರೀಲೀಲಾ ಮತ್ತು ಮುಂಬೈ ಇಂಡಿಯನ್ಸ್ ಕ್ರಿಕೆಟಿಗ ತಿಲಕ್ ವರ್ಮಾ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿವೆ. ಆದರೆ, ಈ ಸುದ್ದಿ ನಿಜವೇ? ಇಂತಹದ್ದೊಂದು ಗಾಸಿಪ್ ಹುಟ್ಟಿಕೊಳ್ಳಲು ಕಾರಣವೇನು?
-
ಬಹುಭಾಷಾ ನಟಿ ಶ್ರೀಲೀಲಾ ಅವರು ಈ ಹಿಂದೆ ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಜೊತೆ ಡೇಟಿಂಗ್‌ನಲ್ಲಿದ್ದಾರೆ ಎಂಬ ಟಾಕ್ ಕೇಳಿಬಂದಿತ್ತು. ಇದೀಗ ಮುಂಬೈ ಇಂಡಿಯನ್ಸ್ ತಂಡದ ಕ್ರಿಕೆಟಿಗ ತಿಲಕ್ ವರ್ಮಾ ಜೊತೆ ಶ್ರೀಲೀಲಾಗೆ ಪ್ರೇಮಾಂಕುರವಾಗಿದೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇಬ್ಬರ ನಡುವೆ ಡೇಟಿಂಗ್ ನಡೆಯುತ್ತಿರುವುದು ನಿಜ ಎಂಬ ಮಾತುಗಳು ಕೇಳಿಬಂದಿವೆ. ಆದರೆ ಇದೆಲ್ಲವೂ ನಿಜವೇ?
ಈ ವಿಷಯಕ್ಕೆ ಹತ್ತಿರವಿರುವ ಮೂಲವೊಂದು ಈ ಎಲ್ಲ ವದಂತಿಗಳನ್ನು ತಳ್ಳಿಹಾಕಿದ್ದು, ಈ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಇವೆಲ್ಲವೂ ಆಧಾರರಹಿತ ಎಂದು ಸ್ಪಷ್ಟಪಡಿಸಿದೆ. ವರದಿಗಳ ಪ್ರಕಾರ, "ತಿಲಕ್ ವರ್ಮಾ ಮತ್ತು ಶ್ರೀಲೀಲಾ ಅವರ ಸುತ್ತ ಕೇಳಿಬರುತ್ತಿರುವ ವದಂತಿಗಳು ಸಂಪೂರ್ಣ ಆಧಾರರಹಿತ ಮತ್ತು ಸುಳ್ಳು. ಅವರಿಬ್ಬರು ಇದುವರೆಗೆ ಎಂದಿಗೂ ಭೇಟಿ ಕೂಡ ಆಗಿಲ್ಲ, ಒಮ್ಮೆಯೂ ಮಾತನಾಡಿಲ್ಲ. ಹೀಗಿರುವಾಗ ಡೇಟಿಂಗ್ ಹೇಗೆ ಸಾಧ್ಯ" ಎಂದು ಪ್ರಶ್ನೆ ಮಾಡಿವೆ.
Actress Sreeleela: ವೇದಿಕೆಯಲ್ಲಿ ನಟ ಮಹೇಶ್ ಕಂಡು ಶ್ರೀಲೀಲಾ ಗರಂ? ಅಸಲಿ ಮ್ಯಾಟರ್ ಏನು?
ಎಲ್ಲವೂ ಊಹಾಪೋಹ ಅಷ್ಟೇ
"ಈ ವದಂತಿಗಳಲ್ಲಿ ಯಾವುದೇ ಸತ್ಯಾಂಶವಿಲ್ಲ. ಇಂತಹ ಸೃಷ್ಟಿ ಮಾಡಿದ ಕಥೆಗಳನ್ನು ಯಾವುದೇ ಆಧಾರವಿಲ್ಲದೆ ಹರಡಬಾರದು" ಎಂದು ಮೂಲಗಳು ಹೇಳಿವೆ. ಈ ಸ್ಪಷ್ಟೀಕರಣದ ಬೆನ್ನಲ್ಲೇ, ಸಾಮಾಜಿಕ ಜಾಲತಾಣಗಳಲ್ಲಿ ಈ ವದಂತಿಗಳು ಹೇಗೆ ಶುರುವಾದವು ಎಂಬುದರ ಕಡೆಗೆ ಎಲ್ಲರ ಗಮನ ನೆಟ್ಟಿದೆ. ಅಭಿಮಾನಿಗಳ ಪೇಜ್‌ಗಳು ಮತ್ತು ಗಾಸಿಪ್ ಖಾತೆಗಳಿಂದ ಇಂತಹ ಊಹಾಪೋಹ ಸುದ್ದಿಗಳನ್ನ ಹಬ್ಬಿಸಿವೆ.
ಅಂದಹಾಗೆ, ಇವರಿಬ್ಬರೂ ಒಂದೇ ಅವಧಿಯಲ್ಲಿ ಬೇರೆ ಬೇರೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ, ಅಂದರೆ ದೇವಸ್ಥಾನದ ಭೇಟಿಗಳು ಮತ್ತು ಕ್ರೀಡಾ ಪಂದ್ಯಾವಳಿಗಳಲ್ಲಿ ಕಾಣಿಸಿಕೊಂಡ ನಂತರ ಈ ವದಂತಿಗಳು ಜೀವ ಪಡೆದುಕೊಂಡಿವೆ. ಆದರೆ, ಇವುಗಳಲ್ಲಿ ಯಾವುದೇ ಒಂದು ಘಟನೆಯೂ ಅವರಿಬ್ಬರ ನಡುವಿನ ನೇರ ಸಂಪರ್ಕವನ್ನು ಖಚಿತಪಡಿಸಿಲ್ಲ ಎಂಬುದನ್ನು ಗಮನಿಸಬೇಕು.
Sreeleela: ಧನುಷ್ ʼಡಿ55ʼಗೆ ಜೋಡಿಯಾದ ಶ್ರೀಲೀಲಾ; ಕನ್ನಡತಿಗೆ ಬಂಪರ್ ಆಫರ್
ನಟಿ ಶ್ರೀಲೀಲಾ ಅವರು ತಮ್ಮ ವೃತ್ತಿ ಬದುಕಿನಲ್ಲಿ ಬಹುಬೇಗನೇ ಬೆಳದಿದ್ದಾರೆ. ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮಹೇಶ್ ಬಾಬು, ಪವನ್ ಕಲ್ಯಾಣ್, ಶಿವಕಾರ್ತಿಕೇಯನ್, ನಂದಮೂರಿ ಬಾಲಕೃಷ್ಣ ಅವರಂತಹ ಸ್ಟಾರ್ ಕಲಾವಿದರ ಜೊತೆ ನಟಿಸಿದ್ದಾರೆ. ಮುಂದಿನ ದಿನಗಳಲ್ಲಿ ಧನುಷ್, ಕಾರ್ತಿಕ್ ಆರ್ಯನ್ ಜೊತೆಗಿನ ಅವರ ಹೊಸ ಸಿನಿಮಾಗಳು ತೆರೆಗೆ ಬರಲಿವೆ. ಇಂತಹ ಹೊತ್ತಿನಲ್ಲಿ ಇಂಥದ್ದೊಂದು ತಲೆಬುಡವಿಲ್ಲದ ಗಾಸಿಪ್ ಸಖತ್ ವೈರಲ್ ಆಗಿರುವುದು ಫ್ಯಾನ್ಸ್‌ಗೆ ಬೇಸರ ಮೂಡಿಸಿದೆ.
ಇನ್ನು, ಹೈದರಾಬಾದ್ ಮೂಲದ ಎಡಗೈ ಬ್ಯಾಟರ್ ಆಗಿರುವ ತಿಲಕ್ ವರ್ಮಾ, ಪ್ರಸ್ತುತ ಮುಂಬೈ ಇಂಡಿಯನ್ಸ್ ಪರ ಆಡುತ್ತಿದ್ದಾರೆ.