ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಜೀ ಕನ್ನಡದಲ್ಲಿ ಹೊಸ ರಿಯಾಲಿಟಿ ಶೋ 'ಹಳ್ಳಿ ಪವರ್ ರಿಲೋಡೆಡ್'; ಅಕುಲ್ ಬಾಲಾಜಿ ನಿರೂಪಣೆ, ಆಗಸ್ಟ್ 8ರಿಂದ ಪ್ರಸಾರ!

ಜೀ ಕನ್ನಡ ವಾಹಿನಿಯು ‘ಹಳ್ಳಿ ಪವರ್ ರಿಲೋಡೆಡ್’ ಎಂಬ ವಿನೂತನ ರಿಯಾಲಿಟಿ ಶೋವನ್ನು ತರಲು ಸಂಪೂರ್ಣ ಸಜ್ಜಾಗಿದೆ. ಆಗಸ್ಟ್ 8ರಿಂದ ಪ್ರಸಾರವಾಗಲಿರುವ ಈ ಕಾರ್ಯಕ್ರಮವನ್ನು ಜನಪ್ರಿಯ ನಿರೂಪಕ ಅಕುಲ್ ಬಾಲಾಜಿ ನಡೆಸಿಕೊಡಲಿದ್ದಾರೆ. ನಗರದ ಐಷಾರಾಮಿ ವಾತಾವರಣದಲ್ಲಿ ಬೆಳೆದ 16 ಮಹಿಳಾ ಸ್ಪರ್ಧಿಗಳು 'ಹಳ್ಳಿ ಪವರ್' ಪಟ್ಟಕ್ಕಾಗಿ ಫೈಟ್‌ ಮಾಡಲಿದ್ದಾರೆ.

ಜೀ ಕನ್ನಡದಲ್ಲಿ ʻಹಳ್ಳಿ ಪವರ್ ರಿಲೋಡೆಡ್ʼ! ಯಾವಾಗ ಶುರುವಾಗಲಿದೆ ಈ ಶೋ?

-

Avinash GR
Avinash GR Aug 6, 2026 5:04 PM

ಕಿರುತೆರೆ ಪ್ರೇಕ್ಷಕರಿಗೆ ಸದಾ ಹೊಸತನದ ಮನರಂಜನೆ ನೀಡುವ 'ಜೀ ಕನ್ನಡ' ವಾಹಿನಿಯು ಇದೀಗ 'ಹಳ್ಳಿ ಪವರ್ ರಿಲೋಡೆಡ್' ಎಂಬ ವಿನೂತನ ರಿಯಾಲಿಟಿ ಶೋವನ್ನು ಪರಿಚಯಿಸಲು ಸಂಪೂರ್ಣ ಸಜ್ಜಾಗಿದೆ. ಗ್ರಾಮೀಣ ಕರ್ನಾಟಕದ ಭವ್ಯ ಸಂಸ್ಕೃತಿ, ಬದುಕಿನ ಸೊಗಡು ಹಾಗೂ ಹಳ್ಳಿಗಾಡಿನ ಸವಾಲುಗಳನ್ನು ಅನಾವರಣಗೊಳಿಸುವ ಈ ಕಾರ್ಯಕ್ರಮವು ಪ್ರೇಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿದೆ. ಕರ್ನಾಟಕದ ಜನಪ್ರಿಯ ನಿರೂಪಕ ಅಕುಲ್ ಬಾಲಾಜಿ ಅವರು ಈ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.

ಟಿವಿ, ಮೊಬೈಲ್ ಇಲ್ಲ; ಸಿಟಿ ಹುಡುಗಿಯರಿಗೆ ಹಳ್ಳಿ ಜೀವನ!

ನಗರದ ಐಷಾರಾಮಿ ವಾತಾವರಣದಲ್ಲಿ ಬೆಳೆದ 16 ಜನ ಮಹಿಳಾ ಸ್ಪರ್ಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಇವರಿಗೆ ಟೆಲಿವಿಷನ್, ಮೊಬೈಲ್, ಇಂಟರ್ನೆಟ್ ಸೇರಿದಂತೆ ಯಾವುದೇ ಆಧುನಿಕ ಸೌಲಭ್ಯಗಳು ಸಿಗುವುದಿಲ್ಲ. ಕುಟುಂಬದವರಿಂದ ಸಂಪೂರ್ಣವಾಗಿ ದೂರವಿದ್ದು, ಹಳ್ಳಿಯ ಸರಳ ಹಾಗೂ ಕಠಿಣ ಜೀವನಕ್ಕೆ ಒಗ್ಗಿಕೊಳ್ಳಬೇಕಾಗುತ್ತದೆ. ಕೃಷಿ ಕೆಲಸ, ಜಾನುವಾರುಗಳ ಪಾಲನೆ-ಪೋಷಣೆ, ಸೌದೆ ಒಲೆಯ ಅಡುಗೆ ಹಾಗೂ ಮನೆಯ ದಿನನಿತ್ಯದ ಜವಾಬ್ದಾರಿಗಳನ್ನು ನಿರ್ವಹಿಸುವ ಮೂಲಕ ಸ್ಪರ್ಧಿಗಳು ತಮ್ಮ ದೈಹಿಕ ಸಾಮರ್ಥ್ಯ ಮತ್ತು ಮಾನಸಿಕ ಸ್ಥಿರತೆಯನ್ನು ಪರೀಕ್ಷಿಸಿಕೊಳ್ಳಲಿದ್ದಾರೆ.

ರಾಜ್ಯದ ಅಮ್ಮಂದಿರಿಗಾಗಿ ಜೀ ಕನ್ನಡದಲ್ಲಿ ಬರಲಿದೆ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ - ಸೂಪರ್ ಮಾಮ್’ ಶೋ; ಆಡಿಷನ್ ಎಲ್ಲಿ, ಯಾವಾಗ?

ಇವರೇ ನೋಡಿ 16 ಜನ ಸ್ಪರ್ಧಿಗಳು

ಸ್ನೇಹ ಎಚ್

ಬಿ ಬಿ ಹಾಜಿರಾ

ಏಂಜೆಲೀನ್

ರಿಗ್ಮ್ಯಾ ರಾಜಶ್ರೀ

ದರ್ಶಿನಿ ಗೌಡ

ಪೂಜಾ ಚಂದ್ರಶೇಖರ್

ಅನಿಷಾ ಲಕ್ಷ್ಮಣ್

ಸುಷ್ಮಾ ತೊಗರೆ

ತೇಜಸ್ವಿನಿ

ಅಂಕಿತ ದೇವ್

ಪೂರ್ವಿಕ ಆರ್ ಕೆ

ಚಿತ್ರಶ್ರೀ

ಪೂರ್ವ ವೈ

ರಚನಾ

ನಿಖಿತಾ ಸ್ವಾಮಿ

ನಿವೇದಿತಾ ರೈ

ಹಳ್ಳಿ 'ಪವರ್' ಪಟ್ಟಕ್ಕಾಗಿ ಪೈಪೋಟಿ

ನಗರದ ಸ್ಪರ್ಧಿಗಳು ಹಳ್ಳಿಯ ವಾತಾವರಣಕ್ಕೆ ಹೊಂದಿಕೊಳ್ಳುವಾಗ ಎದುರಾಗುವ ಸವಾಲುಗಳು, ಅವರ ನಡುವಿನ ಸ್ನೇಹ, ವಿರೋಧ, ಗೆಲುವು-ಸೋಲು ಮತ್ತು ಆತ್ಮವಿಶ್ವಾಸದ ಪಯಣವನ್ನು ಈ ಶೋ ಅನಾವರಣಗೊಳಿಸಲಿದೆ. ಅಂತಿಮವಾಗಿ 'ಹಳ್ಳಿ ಪವರ್' ಪಟ್ಟವನ್ನು ತನ್ನದಾಗಿಸಿಕೊಳ್ಳಲು ಪ್ರತಿಯೊಬ್ಬ ಸ್ಪರ್ಧಿಯೂ ಕಠಿಣ ಶ್ರಮ ಹಾಕಲಿದ್ದು, ಈ ರಿಯಾಲಿಟಿ ಶೋ ಪ್ರೇಕ್ಷಕರಿಗೆ ಪೂರ್ಣ ಪ್ರಮಾಣದ ಮನರಂಜನೆಯ ಜೊತೆಗೆ ಸ್ಫೂರ್ತಿಯನ್ನೂ ನೀಡಲಿದೆ.

ಆಗಸ್ಟ್ 8ರಿಂದ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಈ ಶೋ ಶುರುವಾಗಲಿದ್ದು, ಸೋಮವಾರದಿಂದ ಶುಕ್ರವಾರದ ತನಕ ರಾತ್ರಿ 9.30ಕ್ಕೆ ಪ್ರಸಾರವಾಗಲಿದೆ.