Amruthadhaare Serial: ಹೆಂಡತಿ ಯಶಸ್ಸಿನ ಹಿಂದಿದೆ ಗಂಡನ ಶ್ರಮ; ಗೌತಮ್ - ಭೂಮಿಕಾ ಜೋಡಿ ಕಂಡು ವೀಕ್ಷಕರು ಖುಷ್!
Amruthadhaare: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ ಕೆಡಿ ಜೈದೇವ್ ದರ್ಪ ಮಿತಿ ಮೀರುತ್ತಿದೆ. ಇದರ ನಡುವೆಯೂ ಗೌತಮ್ ತನ್ನ ಗುರಿ ಮಾತ್ರ ಮರೆತಿಲ್ಲ. ಜೈದೇವ್ ಎಷ್ಟೇ ತೊಂದರೆ ಕೊಟ್ಟರೂ ಗೌತಮ್ ಗೆಲ್ಲುತ್ತಲೇ ಇದ್ದಾನೆ. ಈಗ ಭೂಮಿಕಾಗೂ ಸಾಥ್ ಕೊಡುತ್ತಿದ್ದಾನೆ ಗೌತಮ್.
ಅಮೃತಧಾರೆ ಧಾರಾವಾಹಿ -
ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (amruthadhaare serial) ಕೆಡಿ ಜೈದೇವ್ ದರ್ಪ ಮಿತಿ ಮೀರುತ್ತಿದೆ. ಇದರ ನಡುವೆಯೂ ಗೌತಮ್ ತನ್ನ ಗುರಿ ಮಾತ್ರ ಮರೆತಿಲ್ಲ. ಜೈದೇವ್ ಎಷ್ಟೇ ತೊಂದರೆ ಕೊಟ್ಟರೂ ಗೌತಮ್ (Gowtham) ಗೆಲ್ಲುತ್ತಲೇ ಇದ್ದಾನೆ. ಈಗ ಭೂಮಿಕಾಗೂ (Bhoomika) ಸಾಥ್ ಕೊಡುತ್ತಿದ್ದಾನೆ ಗೌತಮ್.
ಹೆಂಡತಿ ಯಶಸ್ಸಿನ ಹಿಂದಿದೆ ಗಂಡನ ಶ್ರಮ
ಗೌತಮ್ ಈಗ ಭೂಮಿಕಾರನ್ನ ಸ್ಕೂಲ್ ಹತ್ತಿರ ಕರೆದುಕೊಂಡು ಬಂದಿದ್ದಾನೆ. ಈ ಸ್ಕೂಲ್ ನಡೆಸುವ ತಾಕತ್ ನಿಮಗೆ ಇದೆ ಎಂದು ಭೂಮಿಯನ್ನ ಕರೆದುಕೊಂಡು ಬಂದಿದ್ದಾನೆ. ಈ ಕೆಲಸ ಸಾಧ್ಯ ಇಲ್ಲ ಎಂದು ಭೂಮಿಕಾ ಹೇಳಿದ್ದರೂ, ತೊಟ್ಟಿಲು ತೂಗೋ ಕೈಗೆ ಜಗತ್ತೇ ತೂಗೋ ಶಕ್ತಿ ಎಂದಿದ್ದಾರೆ ಗೌತಮ್. ತಾನು ಜೊತೆಗಿರುವೆ ಅಂತ ಭೂಮಿಕಾಗೆ ಸಾಥ್ ಕೊಟ್ಟಿದ್ದಾನೆ ಗೌತಮ್. ಹೀಗಾಗಿ ಇನ್ಮುಂದೆ ಸ್ಕೂಲ್ ಜವಬ್ದಾರಿ ಭೂಮಿಕಾ-ಗೌತಮ್ ಹೊಣೆ ಹೊತ್ತಿದ್ದಾರೆ.
ಇದನ್ನೂ ಓದಿ: Rohit Shetty: ರೋಹಿತ್ ಶೆಟ್ಟಿ ಮನೆ ಮೇಲೆ ಗುಂಡಿನ ದಾಳಿ ಪ್ರಕರಣ; ಪ್ರಮುಖ ಆರೋಪಿ ಅರೆಸ್ಟ್
ಮನೆಗೆ ಬಾರದ ಶಕುಂತಲಾ ಮಕ್ಕಳು
ಮತ್ತೊಂದು ಕಡೆ ಶಕುಂತಲಾ ಮನೆಯಲ್ಲಿ ಅವ್ಯವಸ್ಥೆ ಆಗಿದೆ. ಜೈದೇವ್ ಕಾಟದಿಂದ ಮಕ್ಕಳ ಮಧ್ಯೆಯೇ ಬಿರುಕು ಮೂಡಿದೆ. ಜೈದೇವ್ ಹೇಳಿದ ಮಾತಿಗೆ ಮಹಿ ಹಾಗೂ ಪಾರ್ಥ, ಮನೆಗೆ ಬರೋದಿಲ್ಲ ಅಂತ ಶಪಥ ಮಾಡಿದ್ದಾಳೆ. ಜೈದೇವ್‌ನಿಂದಾಗಿ ಶಕುಂತಲಾ ತಲೆ ತಗ್ಗಿಸುವಂತಾಗಿದೆ.
ಜೈದೇವ್ ಅಟ್ಟಹಾಸ
ಈಗಾಗಲೇ ಲೋಗೋ ವಿಚಾರಕ್ಕೆ ತತ್ತರಿಸಿ ಹೋದ ಜೈದೇವ್‌ಗೆ ಅಮ್ಮ ಹೇಳಿದ ಒಂದು ಮಾತು ಕೋಪ ಬರಿಸಿದೆ. ಶಕುಂತಲಾ ಜೈದೇವ್ ಬಳಿ ಬಂದು ಚೆಕ್‌ಗೆ ಸಹಿ ಹಾಕಲು ಹೇಳಿದ್ದಾಳೆ. ಹಣವನ್ನು ಕಳೆದುಕೊಂಡೆ. ಮೂರು ಕೋಟಿ ಬೇಕು ಅಂತ ಹೇಳಿದ್ದಾಳೆ. ಅದಕ್ಕೆ ಜೈದೇವ್ ಶಾಕ್ ಆಗಿದ್ದಾನೆ. ಮೂರು ಕೋಟಿಯನ್ನ ಮೂರು ಸಾವಿರ ತರ ಕೇಳುತ್ತೀಯಲ್ಲ ಅಂತ ಹೇಳಿದ್ದಾನೆ. ಇದರಿಂದ ಕೋಪಗೊಂಡ ಶಕುಂತಲಾ, ಗೌತಮ್‌ಗೂ ನಿನಗೂ ಎಷ್ಟು ವ್ಯತ್ಯಾಸ ಇದೆ ನೋಡೋ ಅಂತ ಹೇಳಿದ್ದಾಳೆ.
ಇದು ಜೈದೇವ್‌ಗೆ ಕೋಪ ಬರುವಂತೆ ಆಗಿದೆ. ಶಕುಂತಲಾಳಿಗೆ ಏಕವಚನ ಬಳಸಿ, ಗಟ್ಟಿಯಾಗಿ ಹೆಡೆಮುರಿ ಕೊಟ್ಟಿ, ನನ್ನ ಮುಂದೆಯೇ ನನ್ನ ಶತ್ರು ಹೋಗಳುತ್ತೀಯಾ ಅಂತ, ಹೆತ್ತ ತಾಯಿಯನ್ನೇ ಮನೆಯಿಂದ ಆಚೆ ಹಾಕಿದ್ದಾನೆ ಜೈದೇವ್. ಕೇಡಿ ಜೇಡಿಯ ಅಟ್ಟಹಾಸಕ್ಕೆ ನಲುಗಿ ಕಣ್ಣೀರಿಟ್ಟಿದ್ದಾಳೆ ಶಕುಂತಲಾ.
ಗೌತಮ್ ದಿವಾನ್ ಹೊಸ ಕಂಪನಿ ಲೋಗೋ ವಿಚಾರವಾಗಿ ಜೈದೇವ್ ಹಾಗೂ ಗೌತಮ್ ಮಧ್ಯೆ ಲೀಗಲ್ ವಾರ್ ಆಗೋಗಿದೆ. ಲೋಗೋ ಗೌತಮ್ ಹೆಸರನಿಲ್ಲಿದೆ. ಜೈದೇವ್‌ಗೆ ಕ್ಲಾರಿಟಿನೂ ಕೊಟ್ಟಿದ್ದಾನೆ ಗೌತಮ್. ತನ್ನ ಕುಟುಂಬದ ಸುದ್ದಿಗೆ ಬರದಂತೆ ಜೈದೇವ್‌ಗೆ ವಾರ್ನ್ ಮಾಡಿದ್ದಾನೆ ಗೌತಮ್.
ಮುಂದೆ ಗೌತಮ್ ದಿವಾನ್, ಜೈದೇವ್ ಮುಂದೆ ಎತ್ತರಕ್ಕೆ ಬೆಳೆಯುತ್ತಾನಾ? ಜೈದೇವ್ ಇದ್ದ ಆಸ್ತಿಯನ್ನೂ ಕಳೆದುಕೊಳ್ತಾನಾ? ಮನೆಯಿಂದ ಹೊರಗೆ ಬಿದ್ದ ಶಕುಂತಲಾ ಗತಿ ಏನು? ಗೌತಮ್ ಮುಂದೆಯೇ ಶಕುಂತಲಾ ಸಹಾಯ ಕೇಳಿ ಬರ್ತಾಳಾ? ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.
ಇದನ್ನೂ ಓದಿ: Amruthadhaare Serial: ತಾಯಿಯನ್ನೇ ಮನೆಯಿಂದ ಹೊರ ಹಾಕಿದ ಮಗ; ಕೇಡಿ ಜೇಡಿಯ ಅಟ್ಟಹಾಸ!
ʻಅಮೃತಧಾರೆ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ.