Amruthadhaare serial: ಜೆಡಿ ಕಿತಾಪತಿಗೆ ಕರಗಲ್ಲ ಈ ಟೀಚರ್, ಮತ್ತೆ ಬಂದ್ಲು ಭೂಮಿ!
Amruthadhaare serial: ಜೈದೇವ ಮತ್ತು ಶಕುಂತಲಾ, ಭೂಮಿಕಾ ವಿರುದ್ಧ ಹೊಸ ಷಡ್ಯಂತ್ರ ರೂಪಿಸಲು ಮುಂದಾಗಿದ್ದಾರೆ. ಜೈದೇವನ ಕುತಂತ್ರದಿಂದ ಭೂಮಿಕಾ ಪ್ರಾಣಕ್ಕೆ ಕುತ್ತು ಉಂಟಾಗಿದೆ. ಭೂಮಿಕಾ ಜಾಗದಲ್ಲಿ ಅವಳ ಅವಳಿ ಸಹೋದರಿ ದೀಪಿಕಾಳನ್ನು ತರಲು ಸ್ಕೆಚ್ ಹಾಕ್ತಿರೋ ಜೈದೇವ್ ಮತ್ತು ಶಕುಂತಲಾ, ಭೂಮಿಕಾ ಕಾರನ್ನು ಪ್ರಪಾತಕ್ಕೆ ಬೀಳಿಸಿ ಕೊಲೆ ಮಾಡಲು ಹೊರಟಿದ್ದು, ಅದರಂತೆಯೇ ಕಾರು ಪ್ರಪಾತಕ್ಕೆ ಬಿದ್ದಿದೆ. ಆದರೀಗ ಏಕಾಏಕಿ ಭೂಮಿಕಾ ಪ್ರತ್ಯಕ್ಷವಾಗಿದ್ದಾಳೆ.
ಅಮೃತಧಾರೆ ಧಾರಾವಾಹಿ -
ಅಮೃತಧಾರೆ ಧಾರಾವಾಹಿಯಲ್ಲಿ (Amruthadhaare Serial) ಭೂಮಿಕಾಳ ಅವಳಿ ಸಹೋದರಿ ದೀಪಿಕಾ ಎಂಟ್ರಿಯಾಗಿದೆ. ಇವಳನ್ನು ನೋಡಿದ ಜೈದೇವ ಮತ್ತು ಶಕುಂತಲಾ, ಭೂಮಿಕಾ ವಿರುದ್ಧ ಹೊಸ ಷಡ್ಯಂತ್ರ ರೂಪಿಸಲು ಮುಂದಾಗಿದ್ದಾರೆ. ಜೈದೇವನ (Jaidev) ಕುತಂತ್ರದಿಂದ ಭೂಮಿಕಾ ಪ್ರಾಣಕ್ಕೆ ಕುತ್ತು ಉಂಟಾಗಿದೆ. ಭೂಮಿಕಾ ಜಾಗದಲ್ಲಿ ಅವಳ ಅವಳಿ ಸಹೋದರಿ ದೀಪಿಕಾಳನ್ನು ತರಲು ಸ್ಕೆಚ್ ಹಾಕ್ತಿರೋ ಜೈದೇವ್ ಮತ್ತು ಶಕುಂತಲಾ, ಭೂಮಿಕಾ (Bhoomika) ಕಾರನ್ನು ಪ್ರಪಾತಕ್ಕೆ ಬೀಳಿಸಿ ಕೊಲೆ ಮಾಡಲು ಹೊರಟಿದ್ದು, ಅದರಂತೆಯೇ ಕಾರು ಪ್ರಪಾತಕ್ಕೆ ಬಿದ್ದಿದೆ. ಆದರೀಗ ಏಕಾಏಕಿ ಭೂಮಿಕಾ ಪ್ರತ್ಯಕ್ಷವಾಗಿದ್ದಾಳೆ.
ಭೂಮಿಕಾ ಅಲ್ಲ ದೀಪಿಕಾ!
ಹೌದು ಭೂಮಿ ಈಗ ಶಕುಂತಲಾ, ಜೈದೇವ್ ಮುಂದೆ ನಿಂತಿದ್ದಾಳೆ. ಬಂದು ಯಾಕೆ ಶಾಕ್ ಆಗಿದ್ದೀರಾ? ಹೇಗೆ ವಾಪಸ್ ಬಂದ್ಲು ಅಂತನಾ? ಸತ್ತೇ ಇಲ್ಲ ಅಂತನಾ? ನಿಮ್ಮಂಥ ಎಷ್ಟೇ ಜನ ಬಂದ್ರು ಈ ಭೂಮಿಕಾಗೆ ಏನೂ ಮಾಡೋಕೆ ಆಗಲ್ಲ ಎಂದಿದ್ದಾಳೆ. ಆದರೀಗ ಈ ಪ್ರೋಮೋ ಕಂಡ ವೀಕ್ಷಕರು ಇದು ಭೂಮಿಕಾ ಅಲ್ಲ ದೀಪಿಕಾ ಅಂತ ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Bigg Boss kannada 13: ದೊಡ್ಮನೆಯಲ್ಲಿ ದಿಢೀರ್ ಮೂವರಿಗೆ ಎಮರ್ಜೆನ್ಸಿ ಎಕ್ಸಿಟ್?
ದೀಪಿಕಾ ಬಳಸಿಕೊಂಡು ಭೂಮಿಕಾ ವಿರುದ್ಧ ಷಡ್ಯಂತ್ರ ರಚಿಸುವ ತಂತ್ರಗಾರಿಕೆ ರೂಪಿಸುತ್ತಿದ್ದಾನೆ ಜೈದೇವ. ಶಕುಂತಲಾಳನ್ನು ದೀಪಿಕಾ ಇರುವಲ್ಲಿಗೆ ಕರೆದುಕೊಂಡು ಬಂದಿದ್ದಾನೆ. ಆರಂಭದಲ್ಲಿ ಶಕುಂತಲಾಗೆ ಏನು ಎಂದೇ ತಿಳಿಯಲಿಲ್ಲ. ಬಳಿಕ ದೀಪಿಕಾಳನ್ನು ನೋಡಿ ಶಾಕ್ ಆಗಿದ್ದಳು. ಪ್ರತಿಸಲವೂ ಜೈದೇವ ಆರಂಭದಲ್ಲಿ ಗೆಲ್ಲುತ್ತಲೇ ಬಂದಿದ್ದಾನೆ. ಕೊನೆಗೆ ಸೋಲಾದರೂ ಒಂದಷ್ಟು ದಿನ ಭೂಮಿಕಾ ಮತ್ತು ಗೌತಮ್ಗೆ ಕಾಟ ತಪ್ಪಿದ್ದಲ್ಲ. ಸೀರಿಯಲ್ ಮುಗಿಯತ್ತೆ ಮುಗಿಯತ್ತೆ ಎನ್ನುವಾಗಲೇ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಾ ಸಾಗಿದೆ.
ಈ ಹಿಂದೆಯೂ ಅಮೃತಧಾರೆ ಕಥೆಯಲ್ಲಿ ಈ ರೀತಿಯ ದಿಢೀರ್ ಬದಲಾವಣೆಗಳನ್ನು ತೆಗೆದುಕೊಂಡು ಬರಲಾಗಿತ್ತು. ಈ ಹೊಸ ಅಧ್ಯಾಯದಲ್ಲಿ ದೀಪಿಕಾ ಎಂಟ್ರಿ ಆಗಿದೆ. ಅವಳಿ ಜವಳಿ ಹೆತ್ತವಳು ನಾನು. ಆದರೆ ನನ್ನದೇ ಪ್ರತಿರೂಪ ಕಣ್ಣಿಗೆ ಬೀಳದೇ ಇರೋ ಹಾಗೆ ಆಯ್ತು ಅಂತ ಭೂಮಿಕಾ ಹೇಳಿದ್ದಾಳೆ. ಅದುವೇ ದೀಪಿಕಾ. ಬಡ್ಡಿ ಬಂಗಾರಮ್ಮ ಆಗಿ ದೀಪಿಕಾ ಬಂದಿದ್ದಾಳೆ. ಊಹಿಸಕ್ಕೆ ಆಗದೇ ಇರೋ, ಕಲ್ಪನೆಗೂ ಮೀರದ ಅಮೃತಧಾರೆ ವೀಕ್ಷಕರ ಮುಂದೆ ಬರುತ್ತಿದೆ.
ಇದನ್ನೂ ಓದಿ: Amruthadhaare Serial: ಹೊಸ ರೂಪ - ಹೊಸ ತಿರುವು! ಭೂಮಿಕಾ ಪ್ರತಿರೂಪ, ಯಾರಿದು ದೀಪಿಕಾ ?
ಅಮೃತಧಾರೆʼ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ೭ ಗಂಟೆಗೆ ಪ್ರಸಾರ ಕಾಣುತ್ತಿದೆ.