Amruthadhaare Serial: ಮಲ್ಲಿ ಬದುಕಲ್ಲಿ ಮತ್ತೆ ಅರಳುತಿದೆ ಅನುರಾಗ; ಸುನಿಲ್ ಮುಖವಾಡ ಕಳಚಿಬಿದ್ರೆ?
Amruthadhaare Kannada Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ ಮಲ್ಲಿ ಬದುಕಲ್ಲಿ ಮತ್ತೆ ಅನುರಾಗ ಅರಳುತಿದೆ. ಜೈದೇವ್‌ನ ಪೈಲ್ವಾನ್ ಸಚಿನ್ ಹಾಗೂ ಮಲ್ಲಿಯ ನಿಶ್ಚಿರ್ತಾರ್ಥವನ್ನು ಹಮ್ಮಿಕೊಂಡಿದ್ದಾರೆ ಗೌತಮ್ ಹಾಗೂ ಭೂಮಿಕಾ. ಈ ಸಂಭ್ರಮಕ್ಕೆ ಗೌತಮ್ ಮನೆಯವರೆಲ್ಲರನ್ನೂ ಕರೆಸಿದ್ದಾನೆ. ಅಪ್ಪಿ ಹಾಗೂ ಪಾರ್ಥ ಕೂಡ ಬಂದಿದ್ದಾರೆ. ಹೀಗಾಗಿ ನಿಶ್ಚಿತಾರ್ಥ ಸಂಭ್ರಮದಲ್ಲಿ ಸುನಿಲ್ ಮುಖವಾಡ ಕಳಚುತ್ತಾ? ಪಾರ್ಥ ಮಾವ ಹೇಳಿರೋ ವಿಚಾರ ಹೇಳಿಬಿಡ್ತಾನಾ?
ಅಮೃತಧಾರೆ ಧಾರಾವಾಹಿ -
ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (Amruthadhaare Serial) ಮಲ್ಲಿ ಬದುಕಲ್ಲಿ ಮತ್ತೆ ಅನುರಾಗ ಅರಳುತಿದೆ. ಜೈದೇವ್‌ನ (Jaidev) ಪೈಲ್ವಾನ್ ಸಚಿನ್ ಹಾಗೂ ಮಲ್ಲಿಯ ನಿಶ್ಚಿರ್ತಾರ್ಥವನ್ನು ಹಮ್ಮಿಕೊಂಡಿದ್ದಾರೆ ಗೌತಮ್ ಹಾಗೂ ಭೂಮಿಕಾ. ಈ ಸಂಭ್ರಮಕ್ಕೆ ಗೌತಮ್ ಮನೆಯವರೆಲ್ಲರನ್ನೂ ಕರೆಸಿದ್ದಾನೆ. ಅಪ್ಪಿ ಹಾಗೂ ಪಾರ್ಥ ಕೂಡ ಬಂದಿದ್ದಾರೆ. ಹೀಗಾಗಿ ನಿಶ್ಚಿತಾರ್ಥ ಸಂಭ್ರಮದಲ್ಲಿ ಸುನಿಲ್ (Sunil) ಮುಖವಾಡ ಕಳಚುತ್ತಾ? ಪಾರ್ಥ (Partha) ಮಾವ ಹೇಳಿರೋ ವಿಚಾರ ಹೇಳಿಬಿಡ್ತಾನಾ?
ಕೆಡಿ ಜೈದೇವ್ ಮೇಲೆ ಒಂದು ಕಣ್ಣು
ಜೈದೇವ್ ಪ್ಲ್ಯಾನ್‌ನಂತೆ ಎಲ್ಲವೂ ಈಗ ಹೋಗ್ತಾ ಇದೆ. ಜೈದೇವ್ ಮನೆಯಲ್ಲಿ ಮಾವ ಲಕ್ಷ್ಮೀಕಾಂತ ಕೆಡಿ ಜೈದೇವ್ ಮೇಲೆ ಒಂದು ಕಣ್ಣು ಇಟ್ಟಿದ್ದ. ಪಾರ್ಥ ಜೊತೆ ಜೈದೇವ್ ಜೊತೆ ಇರುವ ಸುನಿ ಬಗ್ಗೆ ಚರ್ಚಿಸಿದ್ದ. ಪಾರ್ಥ ಯಾವುದೇ ವಿಚಾರವನ್ನು ಅಷ್ಟಾಗಿ ಸೀರೆಯೆಸ್ ಆಗಿ ತೆಗೆದುಕೊಳ್ಳದೇ ಇದ್ದರೂ, ಲಕ್ಷ್ಮೀಕಾಂತ ಮಾವ ಮಾತ್ರ ಜೈದೇವ್‌ನ ಹಾಗೇ ನಂಬೋ ಹಾಗಿಲ್ಲ. ಯಾವುದೇ ಉದ್ದೇಶ ಇಲ್ಲದೇ ಆತ ಯಾರ ಬಳಿ ಇಷ್ಟು ಕ್ಲೋಸ್ ಆಗಲ್ಲ. ಜೈದೇವ್ ಹಾಗೂ ಸುನಿ ಮೇಲೆ ಒಂದು ಕಣ್ಣಿಡು ಎಂದು ಹೇಳಿದ್ದ. ಈಗ ಪಾರ್ಥನ ಮುಂದೆ ಸುನಿ ಮುಖಾಮುಖಿ ಆಗ್ತಾನಾ ಅನ್ನೋದೇ ಸಂಚಿಕೆಯಲ್ಲಿ ಗೊತ್ತಾಗಲಿದೆ.
ಇದನ್ನೂ ಓದಿ: Actor Darshan: ಧನ್ವೀರ್‌ಗೆ ಸಾಥ್ ಕೊಟ್ಟ ದರ್ಶನ್; `ಡಿ ಬಾಸ್' ಪೋಸ್ಟ್‌ನಲ್ಲಿ ಏನಿದೆ?
ಜೈದೇವ್ ಕುತಂತ್ರ ಗೌತಮ್ ಮುಂದೆ ರಿವೀಲ್ ಆಗುತ್ತಾ?
ಮಲ್ಲಿ ನಿಶ್ಚಿತಾರ್ಥಕ್ಕೆ ಪಾರ್ಥ ಅಪ್ಪಿ ಸೇರಿದಂತೆ ಮನೆಯವರೆಲ್ಲರೂ ಬಂದಿದ್ದಾರೆ. ಈ ವೇಳೆ ಪಾರ್ಥ ಹುಡುಗ ಯಾರು ಅಂತ ಕೇಳಿದ್ದಾನೆ. ಅದೇ ಹೊತ್ತಿಗೆ ಸುನಿ ಕಾಲ್‌ನಲ್ಲಿ ಬ್ಯುಸಿಯಾಗಿದ್ದ. ಗೌತಮ್ ಕೂಡ ಪಾರ್ಥನಿಗೆ ಹುಡುಗ ನಿಮ್ಮ ಆಫೀಸ್‌ನಲ್ಲೇ ಕೆಲಸ ಮಾಡೋದು ಎಂದಿದ್ದಾನೆ. ಪಾರ್ಥನ ಕಣ್ಣಿಗೆ ಸುನಿ ಕಾಣಿಸಿಕೊಂಡರೆ, ಪಾರ್ಥ ಗೌತಮ್ ಬಳಿ ಎಲ್ಲ ವಿಚಾರ ಹೇಳ್ತಾನಾ? ಜೈದೇವ್ ಕುತಂತ್ರ ಗೌತಮ್ ಮುಂದೆ ರಿವೀಲ್ ಆಗುತ್ತಾ? ಅನ್ನೋದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.
ಸಿಂಹದ ಗರ್ಜನೆಗೆ ನರಿಗಳು ತತ್ತರ
ಇದಕ್ಕೂ ಮುಂಚೆ ಗೌತಮ್ ಹಾಗೂ ಶಕುಂತಲಾ ಹಲವು ವರ್ಷಗಳ ಬಳಿಕ ಮುಖಾಮುಖಿಯಾಗಿದೆ. ತಂದೆಯ ಕಾರ್ಯಕ್ಕೆ ಒಂದಾಗಿದೆ ಕುಟುಂಬ. ಗೌತಮ್ ಕುಟುಂಬ ಕಾರ್ಯಕ್ಕೆ ಬರುತ್ತಿರುವ ವಿಚಾರ ಜೈದೇವ್‌ಗೆ ಗೊತ್ತಿರುವುದಿಲ್ಲ. ಹೀಗಾಗಿ ಬಂದೊಡನೇ ಕೊಂಕು ಮಾತನಾಡಿದ್ದಾನೆ. ಅಷ್ಟೇ ಅಲ್ಲ ಗೌತಮ್ ಕೂಡ ಜೈದೇವ್ ಅಹಂಕಾರದ ಮಾತುಗಳಿಗೆ ತಕ್ಕ ಉತ್ತರವನ್ನೂ ನೀಡಿದ್ದಾನೆ. ಜೈದೇವ್ ಕೆನ್ನೆಗೆ ಬಾರಿಸಿದ್ದೂ ಆಗಿದೆ. ಅಲ್ಲಿಂದ ಮಧ್ಯದಲ್ಲೇ ಎದ್ದು ಹೋಗಿದ್ದಾನೆ ಜೈದೇವ್.
ಒಟ್ಟಾರೆಯಾಗಿ ಜೈದೇವ್ ಈಗ ಗೌತಮ್ ಮೇಲೆ ಗರಂ ಆಗಿರೋದು ಫಿಕ್ಸ್ ಆಗಿದೆ. ಇನ್ನು ಸುನೀಲ್ ಮುಖವಾಡವೂ ಕಳಚಿ ಬಿದ್ದರೆ ಗೌತಮ್ ಕೂಡ ಸಿಡಿದೇಳೋದು ಗ್ಯಾರಂಟಿ ಆಗುತ್ತದೆ.
ಇದನ್ನೂ ಓದಿ: Amruthadhaare Serial: ಸಿಂಹದ ಗರ್ಜನೆಗೆ ನರಿಗಳು ತತ್ತರ; ಗೌತಮ್ ದಿವಾನ್ ನೀಡ್ತಾನಾ ಕೇಡಿಯ ಅಹಂಕಾರಕ್ಕೆ ತಕ್ಕ ಉತ್ತರ?
ʻಅಮೃತಧಾರೆ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ