ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Amruthadhaare Serial: ಅಮೃತಧಾರೆಯ ಹೊಸ ಅಧ್ಯಾಯ! ಭೂಮಿಕಾ ಬದುಕಿನ ಹಾದಿಗೆ ಬಿಗ್‌ ಟ್ವಿಸ್ಟ್‌

Amruthadhaare Serial: ಅಮೃತಧಾರೆಯಲ್ಲಿ ರೋಚಕ ಟ್ವಿಸ್ಟ್‌ ಪಡೆದು ಸಾಗುತ್ತಿದೆ. ಆದರೀಗ ವೀಕ್ಷಕರು ಊಹಿಸದೇ ಇರೋ ಅನೌನ್ಸ್‌ಮೆಂಟ್‌ ಮಾಡಿದೆ. ನೀವು ಪ್ರೀತಿ ಕೊಟ್ಟು ಬೆಳಸಿರೋ ಗೌತಮ್ - ಭೂಮಿಕಾ ಬದುಕಿನ ಹಾದಿ ಸುಲಭದಲ್ಲ.ಊಹಿಸೋಕಾಗ್ದಿರೋ ಅಮೃತಧಾರೆಯ ಹೊಸ ಅಧ್ಯಾಯ ಕಾಯ್ತಾ ಇರಿ ಎಂದು ಹೊಸ ಪ್ರೋಮೋ ಹಂಚಿಕೊಂಡಿದೆ.

ಅಮೃತಧಾರೆಯ ಹೊಸ ಅಧ್ಯಾಯ! ಭೂಮಿಕಾ ಬದುಕಿನ ಹಾದಿಗೆ ಬಿಗ್‌ ಟ್ವಿಸ್ಟ್‌

ಅಮೃತಧಾರೆ ಧಾರಾವಾಹಿ -

Yashaswi Devadiga
Yashaswi Devadiga Sep 8, 2026 9:43 AM

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (Amruthadhaare Serial) ರೋಚಕ ಟ್ವಿಸ್ಟ್‌ ಪಡೆದು ಸಾಗುತ್ತಿದೆ. ಆದರೀಗ ವೀಕ್ಷಕರು ಊಹಿಸದೇ ಇರೋ ಅನೌನ್ಸ್‌ಮೆಂಟ್‌ ಮಾಡಿದೆ. ನೀವು ಪ್ರೀತಿ ಕೊಟ್ಟು ಬೆಳಸಿರೋ ಗೌತಮ್ - ಭೂಮಿಕಾ (Gowtham Bhoomika) ಬದುಕಿನ ಹಾದಿ ಸುಲಭದಲ್ಲ.ಊಹಿಸೋಕಾಗ್ದಿರೋ ಅಮೃತಧಾರೆಯ ಹೊಸ ಅಧ್ಯಾಯ ಕಾಯ್ತಾ ಇರಿ ಎಂದು ಹೊಸ ಪ್ರೋಮೋ ಹಂಚಿಕೊಂಡಿದೆ.

ಕಾನೂನು ಬ್ರೇಕ್‌

ಹೌದು ಜೈದೇವ್‌ ಪಾತ್ರ ಅಂತ್ಯವಾಗಿದೆ. ಮಧುರಾ ಮತ್ತು ಮಿಂಚುವನ್ನು ಕಿಡ್​ನ್ಯಾಪ್ ಮಾಡಿದ್ದ ಜೈದೇವ, ಮಿಂಚುವನ್ನು ಕೊಲ್ಲಲು ಬಂದ ಕಾರಣದಿಂದ ಜೈದೇವ್, ಭೂಮಿಕಾಳ (Bhoomika) ಹೊಡೆತಕ್ಕೆ ಬಲಿಯಾಗಿದ್ದಾನೆ. ಜೈದೇವ್ ಸಾವಿನ ವಿಷಯವನ್ನು ಯಾರಿಗೂ ಹೇಳದೇ ಹೆಣವನ್ನು ಮುಚ್ಚಿದ್ದಾರೆ. ಜೊತೆಯಲ್ಲಿಯೇ ಪೊಲೀಸ್ ಅಧಿಕಾರಿ ಮಧುರಾ ಇದ್ರೂ ಕಾನೂನು ಬ್ರೇಕ್‌ ಮಾಡಿದ್ದಾರೆ. ಈಗ ಜೈದೇವ್ ಸಾವಿನ ವಿಷಯವನ್ನು ಯಾರಿಗೂ ಹೇಳದೇ ಹೆಣವನ್ನು ಮುಚ್ಚಿದ್ದಾರೆ. ಜೈದೇವ್ ಕಾಲ್‌ಗೆ ಸಿಗುತ್ತಿಲ್ಲ ಎಂದು ಶಕುಂತಲಾ ಗಾಬರಿ ಆಗಿದ್ದಾಳೆ.

ಇದನ್ನೂ ಓದಿ: Bigg Boss Kannada 13: ಮಂಜನಿಗೆ ಕಚಡ, ಹಂದಿ ಎಂದ ಕಿರಣ್ ಶಾಸ್ತ್ರಿ; ಕೊನೆಗೆ ಗೋಳೋ ಅಂತ ಅತ್ತ ಸ್ಪರ್ಧಿ

ಕಥೆಯು ಹೊಸ ತಿರುವು

ಧಾರಾವಾಹಿ ಮುಗಿಯುವ ಊಹಾಪೋಹಗಳ ನಡುವೆ, ಕಥೆಯು ಹೊಸ ತಿರುವು ಪಡೆಯುವ ಸೂಚನೆ ನೀಡಿದೆ. ಈ ಪ್ರೋಮೋದಲ್ಲಿ ಗೌತಮ್ ಜೊತೆಗಿನ ಬದುಕು ಹೇಗಿತು ಎಂಬುದನ್ನು ಭೂಮಿಕಾ ವಿವರಿಸಿದ್ದು, ಮುಂದಿನ ಕಥೆ ಎಷ್ಟು ವಿಶೇಷ ಮತ್ತು ವಿಭಿನ್ನವಾಗಿರಲಿದೆ ಎಂಬುದರ ಸುಳಿವು ನೀಡಲಾಗಿದೆ. ಜೈದೇವ್‌ ಸಾವಿನ ಹೊಣೆ ಹೊತ್ತು ಭೂಮಿಕಾ ಜೈಲು ಸೇರಬಹುದು. ನಂತರ ಸೀರಿಯಲ್ ಹಲವು ವರ್ಷಗಳ ನಂತರದ ಕತೆಗೆ ಮರಳಬಹುದು ಎಂದು ಊಹಿಸಲಾಗುತ್ತದೆ.

ಇದಕ್ಕೂ ಮುಂಚೆಯೂ ಧಾರಾವಾಹಿಯಲ್ಲಿ ಹಲವು ಬದಲಾವನೆಗಳು ಆಗಿದ್ದವು. ಭೂಮಿ ಅದೆಷ್ಟೋ ವರ್ಷಗಳ ಕಾಲ ಗೌತಮ್‌ ಬಿಟ್ಟು ಜೀವಿಸಿದ್ದಳು. ನಂತರ ಮತ್ತೆ ಒಂದಾದರು. ಆನಂತರ ಭೂಮಿಕಾ ಕ್ಯಾನ್ಸರ್‌ನಿಂದ ಗುಣಮುಖಳಾಗಿ ಜೈದೇವ್ ರಹಸ್ಯ ಹುಡುಕಲು ಮುಂದಾಗಿದ್ದಳು. ಇದೀಗ ಪ್ರಮುಖ ಪಾತ್ರ ಜೈದೇವ್‌ ಅಂತ್ಯವಾಗಿದೆ. ಈ ಹೊಸ ಅಧ್ಯಾಯದಲ್ಲಿ ಭೂಮಿಕಾ-ಗೌತಮ್ ಮಕ್ಕಳು ದೊಡ್ಡವರಾಗ್ತಾರಾ ಅಂತ ಕಾದು ನೋಡಬೇಕಿದೆ. ಮುಂದೆ ಹೇಗೆ ಕಥೆ ತಿರುವು ಪಡೆದುಕೊಳ್ಳಲಿದೆ ಎಂದು ಕಾದು ನೋಡಬೇಕಿದೆ.

ಇದನ್ನೂ ಓದಿ: Bigg Boss Kannada 13: ಮಂಜನಿಗೆ ಕಚಡ, ಹಂದಿ ಎಂದ ಕಿರಣ್ ಶಾಸ್ತ್ರಿ; ಕೊನೆಗೆ ಗೋಳೋ ಅಂತ ಅತ್ತ ಸ್ಪರ್ಧಿ

ಅಮೃತಧಾರೆʼ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ೭ ಗಂಟೆಗೆ ಪ್ರಸಾರ ಕಾಣುತ್ತಿದೆ.