Megha Shenoy: ‘ಅಮೃತಧಾರೆ’ಯಿಂದ ಹೊರ ಬಂದ್ರಾ ಮೇಘಾ ಶೆಣೈ? ಬಿಗ್ ಅಪ್‌ಡೇಟ್ ಕೊಟ್ಟೇ ಬಿಟ್ರು ನಟಿ
Megha Shenoy: ಗೌತಮ್ ದಿವಾನ್ ತಂಗಿ ಸುಧಾ ಪಾತ್ರದಲ್ಲಿ ನಟಿ ಮೇಘಾ ಶೆಣೈ ಅಭಿನಯಿಸುತ್ತಿದ್ದರು. ಹಲವು ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿರೋ ಮೇಘಾ ಜನಪ್ರಿಯತೆ ಪಡೆದಿರೋದು ಅಮೃತಧಾರೆಯ ಸುಧಾ ಪಾತ್ರದ ಮೂಲಕ. ಆ ಬಳಿಕ ನಟಿ ಭರತ್ ಸಿಂಗ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದೀಗ ಮದುವೆಯಾಗುತ್ತಿದ್ದಂತೆ, ನಟನೆಯಿಂದ ದೂರ ಸರಿದು ಹೊಸ ಬ್ಯುಸಿನೆಸ್ ಶುರು ಮಾಡಿದ್ದಾರೆ. ಈ ಕುರಿತು ನಟಿ ತಮ್ಮ ಸೋಶಿಯಲ್ ಮಿಡೀಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಅಮೃತಧಾರೆ ಧಾರಾವಾಹಿ -
ಗೌತಮ್ ದಿವಾನ್ (Gowtham Dowan) ತಂಗಿ ಸುಧಾ ಪಾತ್ರದಲ್ಲಿ ನಟಿ ಮೇಘಾ ಶೆಣೈ (Megha Shenoy) ಅಭಿನಯಿಸುತ್ತಿದ್ದರು. ಹಲವು ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿರೋ ಮೇಘಾ ಜನಪ್ರಿಯತೆ ಪಡೆದಿರೋದು ಅಮೃತಧಾರೆಯ ಸುಧಾ ಪಾತ್ರದ ಮೂಲಕ. ಆ ಬಳಿಕ ನಟಿ ಭರತ್ ಸಿಂಗ್ (Bharath singh) ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದೀಗ ಮದುವೆಯಾಗುತ್ತಿದ್ದಂತೆ, ನಟನೆಯಿಂದ ದೂರ ಸರಿದು ಹೊಸ ಬ್ಯುಸಿನೆಸ್ ಶುರು ಮಾಡಿದ್ದಾರೆ. ಈ ಕುರಿತು ನಟಿ ತಮ್ಮ ಸೋಶಿಯಲ್ ಮಿಡೀಯಾದಲ್ಲಿ (Social Media) ಮಾಹಿತಿ ಹಂಚಿಕೊಂಡಿದ್ದಾರೆ.
ಹೊಸ ಉದ್ಯಮ
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಅಮೃತಧಾರೆ’ ಧಾರಾವಾಹಿಯಲ್ಲಿ ಗೌತಮ್ ದಿವಾನ್ ಮುದ್ದಿನ ತಂಗಿ ಸುಧಾ ಪಾತ್ರದಲ್ಲಿ ಮೇಘಾ ಶೆಣೈ ನಟಿಸುತ್ತಿದ್ದರು.
ಆ ಬಳಿಕ ಧಾರಾವಾಹಿಯಲ್ಲಿ ಕಥೆಯೂ ಬೇರೆ ಕಡೆಯುತ್ತವೇ ಸಾಗಿತ್ತು. ಇಲ್ಲಿಯ ತನಕ ಗೌತಮ್ ತಂಗಿಯ ಪಾತ್ರ ಬರಲೇ ಇಲ್ಲ. ಮೇಘಾ ಶೆಣೈ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ, ಸೀರಿಯಲ್ ನಿಂದ ದೂರ ಉಳಿದಿದ್ದರು. ತಮ್ಮ ಹುಟ್ಟುಹಬ್ಬದ ದಿನವೇ ಮೇಘಾ ನವಜಾತ ಶಿಶುಗಳ ಆರೈಕೆಗಾಗಿ ಹೊಸ ಉದ್ಯಮವನ್ನು ಆರಂಭಿಸಿದ್ದು ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Narendra Modi: ರಾಜ್ಕುಮಾರ್ ಅವರ ಜನಪ್ರಿಯ ಸಿನಿಮಾ ಗೀತೆ ಹಂಚಿಕೊಂಡ ಪ್ರಧಾನಿ ನರೇಂದ್ರ ಮೋದಿ; ಕಾರಣ ಏನು?
ಪೋಸ್ಟ್‌ನಲ್ಲಿ ನಟಿ ಹಂಚಿಕೊಂಡಿದ್ದು ಹೀಗೆ, ನನ್ನ ಹೊಸ ಉದ್ಯಮ "ಮೈ ಫಸ್ಟ್ ಸ್ಪಾ" ಪ್ರಾರಂಭಿಸುವುದಾಗಿ ಘೋಷಿಸಲು ನನಗೆ ಸಂತೋಷವಾಗಿದೆ. ನವಜಾತ ಶಿಶುಗಳ ಆರೈಕೆ ಮತ್ತು ಪ್ರಸವಾನಂತರದ ಬೆಂಬಲಕ್ಕಾಗಿ ಮೀಸಲಾದ ಮನೆ ಸೇವೆ ಇದಾಗಿದೆ ಎಂದಿದ್ದಾರೆ ಮೇಘಾ ಶೆಣೈ. ಇದೀಗ ನಟಿಯ ಫ್ಯಾನ್ಸ್ ಶುಭ ಹಾರೈಸುತ್ತಿದ್ದಾರೆ.
ಮೇಘಾ ಕಿರುತೆರೆ ಜರ್ನಿ
ಅಮೃತಧಾರೆ ಧಾರಾವಾಹಿಯಲ್ಲಿ ಮತ್ತೆ ಗೌತಮ್ ದಿವಾನ್ ತಂಗಿ ಸುಧಾ ಬರುತ್ತಾರಾ? ಅಥವಾ ಈ ಪಾತ್ರಕ್ಕೆ ಬೇರೆ ನಟಿ ಬರ್ತಾರಾ ಅನ್ನೋದು ವೀಕ್ಷಕರಲ್ಲಿ ಕುತೂಹಲ ಇದೆ. ಮೇಘಾ ಅವರು ಮಾಡೆಲ್ ಆಗಿ ಗಮನ ಸೆಳೆದವರು.
ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಸುಂದರಿ ಧಾರಾವಾಹಿ ಪ್ರಸಾರವಾಗುತ್ತಿತ್ತು. ಇದರಲ್ಲಿ ಮೇಘಾ ಶೆಣೈ ಅವರು ಖಳನಾಯಕಿಯಾಗಿ ಕಾಣಿಸಿಕೊಂಡಿದ್ದರು. ಬಳಿಕ ಕಾವೇರಿ ಧಾರಾವಾಹಿಯಲ್ಲಿ ಹಾಸಿನಿ ಪಾತ್ರಕ್ಕೆ ಜೀವ ತುಂಬಿದರು. ಇದರಲ್ಲೂ ಮೇಘಾ ಅವರು ಖಳನಾಯಕಿಯಾಗಿಯೇ ನಟಿಸಿದ್ದರು.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಕ್ಷಾಬಂಧನ ಧಾರಾವಾಹಿಯಲ್ಲಿ ನಟಿಸಿದ ಮೇಘಾ ಶೆಣೈ ನಾಯಕ ಕಾರ್ತಿಕ್ ಪ್ರೇಯಸಿ ರಮ್ಯಾ ಆಗಿ ಕಾಣಿಸಿಕೊಂಡಿದ್ದರು. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಎರಡು ಧಾರಾವಾಹಿಗಳಲ್ಲಿ ನಟಿಸಿದರು.
ಇದನ್ನೂ ಓದಿ: Rashmika Mandanna: ಹನಿಮೂನ್ ಮೂಡ್ನಲ್ಲಿ ರಶ್ಮಿಕಾ-ವಿಜಯ್; ಕ್ಯೂಟ್ ಫೋಟೊ ವೈರಲ್
ಆರತಿಗೊಬ್ಬ ಕೀರ್ತಿಗೊಬ್ಬ ಧಾರಾವಾಹಿಯಲ್ಲಿ ರಗಡ್ ಲುಕ್ ನಲ್ಲಿ ಕೀರ್ತಿ ಆಗಿ ಬಣ್ಣ ಹಚ್ಚಿದರು. ಆಮೇಲೆ ಜೀವ ಹೂವಾಗಿದೆ ಧಾರಾವಾಹಿಯಲ್ಲಿ ನಾಯಕ ವಿಶಾಲ್ನನ್ನು ಪ್ರೀತಿಸುವ ಹುಡುಗಿಯಾಗಿ ಈಕೆ ಕಾಣಿಸಿಕೊಂಡರೂ ಖಳನಾಯಕಿ ಪಾತ್ರ ಇದಾಗಿತ್ತು.