Anupam Kher: ನೂರಾರು ಸಿನಿಮಾಗಳಲ್ಲಿ ನಟನೆ... ಅನೇಕ ವರ್ಷಗಳ ಸಿನಿ ಜರ್ನಿ! ಆದ್ರೂ ಇರೋದು ಮಾತ್ರ ಬಾಡಿಗೆ ಮನೆಯಲ್ಲಿ
Anupam Kher: ಬಾಲಿವುಡ್ ನಟ ಅನುಪಮ್ ಖೇರ್ ಅವರು ಅದ್ಭುತವಾದ ನಟನೆ ಮೂಲಕ ಹೆಸರು ಗಳಿಸಿದ್ದಾರೆ. ಕನ್ನಡದ 'ಘೋಸ್ಟ್' ಸಿನಿಮಾ ಮೂಲಕ ಅನುಪಮ್ ಖೇರ್ ಸ್ಯಾಂಡಲ್ ವುಡ್ ನಲ್ಲೂ ನಟಿಸಿದ್ದು ವಿವಿಧ ಭಾಷೆಗಳಲ್ಲಿ 540ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಪಡೆದಿದ್ದಾರೆ. ಆದರೆ ಇಷ್ಟೆಲ್ಲಾ ಸಾಧನೆ ಗೈದಿರುವ ಇವರು ಇಂದಿಗೂ ಬಾಡಿಗೆ ಮನೆಯಲ್ಲಿ ವಾಸ ಮಾಡುವುದಾಗಿ ಬಹಿರಂಗಪಡಿಸಿದ್ದಾರೆ..

-

ನವದೆಹಲಿ: ಬಾಲಿವುಡ್ ನಟ ಅನುಪಮ್ ಖೇರ್ (Anupam Kher) ಅವರು ಅದ್ಭುತವಾದ ನಟನೆ ಮೂಲಕ ಹೆಸರು ಗಳಿಸಿದ್ದಾರೆ. ಕನ್ನಡದ 'ಘೋಸ್ಟ್' ಸಿನಿಮಾ ಮೂಲಕ ಅನುಪಮ್ ಖೇರ್ ಸ್ಯಾಂಡಲ್ವುಡ್ ನಲ್ಲೂ ನಟಿಸಿದ್ದು ವಿವಿಧ ಭಾಷೆಗಳಲ್ಲಿ 540ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಪಡೆ ದಿದ್ದಾರೆ. ಆದರೆ ಇಷ್ಟೆಲ್ಲಾ ಸಾಧನೆ ಗೈದಿರುವ ಇವರು ಇಂದಿಗೂ ಬಾಡಿಗೆ ಮನೆಯಲ್ಲಿ ವಾಸ ಮಾಡುವುದಾಗಿ ಬಹಿರಂಗಪಡಿಸಿದ್ದಾರೆ. ಈ ನಿರ್ಧಾರಕ್ಕೆ ಕಾರಣವೇನು ಎಂಬುದನ್ನು ಅವರು ಸ್ಪಷ್ಟ ಪಡಿಸಿದ್ದಾರೆ. ಅಪಾರ ಯಶಸ್ಸು ಮತ್ತು ಹಣವನ್ನು ಗಳಿಸಿದ್ದರೂ, ತಾವು ಇನ್ನೂ ಬಾಡಿಗೆ ಮನೆಯಲ್ಲಿ ವಾಸಿಸಲು ಪ್ರಮುಖ ಕಾರಣವೆಂದರೆ ಕುಟುಂಬದ ಆಸ್ತಿ ವಿವಾದಗಳನ್ನು ತಪ್ಪಿಸುವುದು ಎಂದು ಅವರು ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ.
ಖಾಸಗಿ ಸಂದರ್ಶನ ವೊಂದರಲ್ಲಿ ಮಾತನಾಡಿದ ಅನುಪಮ್ ಖೇರ್ ತಾನು ಇನ್ನೂ ಬಾಡಿಗೆ ಮನೆ ಯಲ್ಲೇ ವಾಸ ಮಾಡುತ್ತಿರುವುದಾಗಿ ಬಹಿರಂಗಪಡಿಸಿದ್ದಾರೆ. ತಮ್ಮ ಈ ನಿರ್ಧಾರವು ಕುಟುಂಬದ ಸಾಮರಸ್ಯ ಮತ್ತು ಮನಸ್ಸಿನ ಶಾಂತಿಗೆ ಕಾರಣ ವಾಗಿದೆ. ಅಣ್ಣ- ತಮ್ಮಂದಿರು ಆಸ್ತಿಗಾಗಿ ಒಬ್ಬರ ನ್ನೊಬ್ಬರ ಜಗಳ, ನೋವು ನೋಡಿದಾಗ ನನಗೆ ಬಹಳ ಬೇಸರವಾಗುತ್ತದೆ. ಆಸ್ತಿಗಾಗಿ ಸಹೋದರರು ಪರಸ್ಪರ ಕೊಲ್ಲುವುದನ್ನು ನೋಡಿದಾಗ ನಾನು ತುಂಬಾ ಅಸಮಾಧಾನ ಗೊಂಡಿದ್ದೇನೆ. ಹಾಗಾಗಿ ನಾನು ಬಾಡಿಗೆ ಮನೆಯಲ್ಲಿ ವಾಸಿಸಲು ಇದು ಒಂದು ಕಾರಣವಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:Kannada New Movie: ವಿಭಿನ್ನ ಶೀರ್ಷಿಕೆಯ ‘4.30 - 6 ಮುಹೂರ್ತ. ನಾಲ್ವರು ಕಾಣಿಸುತ್ತಿಲ್ಲ’ ಚಿತ್ರಕ್ಕೆ ಮುಹೂರ್ತ
ಅನುಪಮ್ ಖೇರ್ ತಮ್ಮ ಕಿರಿಯ ಸಹೋದರ, ನಟ ರಾಜು ಖೇರ್ ಅವರೊಂದಿಗಿನ ಬಾಂಧವ್ಯದ ಬಗ್ಗೆಯೂ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಅನುಪಮ್ ಅವರು ತಮ್ಮ ಸಹೋದರನ ಹಣ ಕಾಸನ್ನು ವರ್ಷಗಳಿಂದ ನಿರ್ವಹಿಸುತ್ತಿರುವುದಾಗಿ ಹೇಳಿಕೊಂಡಿದ್ದು ಅವರ ಪತ್ನಿ ಕಿರಣ್ ಖೇರ್ ಅವರು ಬೆಂಬಲ ನೀಡುತ್ತಾರೆ ಅಂದಿದ್ದಾರೆ. ತನ್ನ ಪತ್ನಿ ಕಿರಣ್ ಖೇರ್ "ನಾನು ನನ್ನ ಸಹೋದರ ನಿಗಾಗಿ ಇಷ್ಟೊಂದು ಏಕೆ ಸಹಾಯ ಮಾಡುತ್ತೇನೆ ಎಂದು ಕಿರಣ್ ಒಮ್ಮೆಯೂ ಕೇಳಿಲ್ಲ. ಸಮಸ್ಯೆಗಳು ಪ್ರಾರಂಭ ವಾಗುವುದೇ ಅಲ್ಲಿಂದ ..ಹಾಗಾಗಿ ತಮ್ಮ ಸಹೋದರ ರಾಜು ಖೇರ್ ತಮ್ಮ ಯಶಸ್ಸಿನ ಬಗ್ಗೆ ಎಂದಿಗೂ ಅಸೂಯೆ ಪಟ್ಟಿಲ್ಲ ಎಂದೂ ಅವರು ಸಂತೋಷ ವ್ಯಕ್ತಪಡಿಸಿದ್ದಾರೆ.
ಭಾರತೀಯ ಚಿತ್ರರಂಗದಲ್ಲಿ 40 ವರ್ಷಗಳಿಗೂ ಅಧಿಕ ಕಾಲ ತೊಡಗಿಸಿಕೊಂಡಿರುವ ಅನುಪಮ್ ಖೇರ್, 540ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. 'ಸಾರಾಂಶ್', 'ದಿಲ್‌ವಾಲೆ ದುಲ್ಹನಿಯಾ ಲೇ ಜಾಯೇಂಗೆ' , 'ದ ಕಾಶ್ಮೀರ್ ಫೈಲ್ಸ್'ನಂತಹ ಸಿನಿಮಾಗಳ ಮೂಲಕ ಖ್ಯಾತಿ ಪಡೆದಿದ್ದಾರೆ.ಅನುಪಮ್ ಖೇರ್ ಹಾಗೂ ಮಧುಮಾಲ್ತಿ ಕಪೂರ್ ಅವರು ಮದುವೆಯಾಗಿ, ಡಿವೋರ್ಸ್ ಪಡೆದಿದ್ದು ಆ ಬಳಿಕ 1985ರಲ್ಲಿ ಕಿರಣ್ ಖೇರ್ ಅವರನ್ನು ಮದುವೆಯಾದರು