Weekend With Ramesh: ಮತ್ತೆ ಶುರುವಾಗಲಿದ್ಯಾ ವೀಕೆಂಡ್ ವಿತ್ ರಮೇಶ್; ಕಾರ್ಯಕ್ರಮದ ಮೊದಲ ಅತಿಥಿ ಯಾರು?
Weekend With Ramesh: ಬಹುಭಾಷಾ ನಟ ರಮೇಶ್ ಅರವಿಂದ್ ನಡೆಸಿಕೊಡುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಶೀಘ್ರದಲ್ಲೇ ಆರಂಭವಾಗಲಿದೆ ಎನ್ನುವ ಸುದ್ದಿ ಹಬ್ಬಿದೆ. ಈಗಾಗಲೇ 5 ಸೀಸನ್ ಗಳನ್ನು ಯಶಸ್ವಿಯಾಗಿ ಜನರ ಮನ ಗೆದ್ದಈ ಶೋ ಬಗ್ಗೆ ಚರ್ಚೆ ಶುರುವಾಗಿದೆ. ಇದಕ್ಕೆ ಮುಖ್ಯ ಕಾರಣ ಅಂದರೆ ಇತ್ತೀಚಿಗಷ್ಟೇ ನಡೆದ ಜೀ ಕುಟುಂಬ ಅವಾರ್ಡ್ ವೇದಿಕೆಯಲ್ಲಿ ನಡೆದ ಈ ಸನ್ನಿವೇಶವೇ ಕಾರಣವಾಗಿದೆ.

Weekend With Ramesh -

ಬೆಂಗಳೂರು: ಈಗಾಗಲೇ ಕಲರ್ಸ್ ಕನ್ನಡದಲ್ಲಿ ಬಿಗ್ ಬಾಸ್ ಶೋ ಆರಂಭವಾಗಿದ್ದು ಜನರಿಗೆ ಮೋಸ್ಟ್ ಥ್ರಿಲ್ಲಿಂಗ್ ಮನೋರಂಜನೆ ನೀಡುತ್ತಿದೆ. ಈ ನಡುವೆ ಪ್ರೇಕ್ಷಕರಿಗೆ ಜೀ ಕನ್ನಡ (Zee Kannada) ಕೂಡ ಗುಡ್ ನ್ಯೂಸ್ ಸುದ್ದಿ ನೀಡಿದೆ. ಹೌದು ಬಹುಭಾಷಾ ನಟ ರಮೇಶ್ ಅರವಿಂದ್ ನಡೆಸಿಕೊಡುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ (Weekend With Ramesh) ಶೀಘ್ರದಲ್ಲೇ ಆರಂಭವಾಗಲಿದೆ ಎನ್ನುವ ಸುದ್ದಿ ಹಬ್ಬಿದೆ. ಈಗಾಗಲೇ 5 ಸೀಸನ್ ಗಳನ್ನು ಯಶಸ್ವಿಯಾಗಿ ಜನರ ಮನಗೆದ್ದ ಈ ಶೋ ಬಗ್ಗೆ ಚರ್ಚೆ ಶುರುವಾಗಿದೆ. ಇದಕ್ಕೆ ಮುಖ್ಯ ಕಾರಣ ಅಂದರೆ ಇತ್ತೀಚಿಗಷ್ಟೇ ನಡೆದ ಜೀ ಕುಟುಂಬ ಅವಾರ್ಡ್ ವೇದಿಕೆಯಲ್ಲಿ ನಡೆದ ಈ ಸನ್ನಿವೇಶವೇ ಕಾರಣವಾಗಿದೆ.
ಇತ್ತೀಚೆಗೆ ಜೀ ಕನ್ನಡ ವಾಹಿನಿಯೂ ಜೀ ಕುಟುಂಬ ಅವಾರ್ಡ್ಸ್ ಗ್ರ್ಯಾಂಡ್ ಆಗಿ ಆಯೋಜನೆ ಮಾಡಿತ್ತು. ಈ ಕಾರ್ಯಕ್ರಮಕ್ಕೆ ನಟ ನಿರ್ದೇಶಕ ಹಾಗೂ ನಿರ್ಮಾಪಕ ರಿಷಬ್ ಶೆಟ್ಟಿ ಅಥಿತಿಯಾಗಿ ಆಗಮಿಸಿದ್ದರು.ಇದೇ ಸಂದರ್ಭದಲ್ಲಿ ರಮೇಶ್ ಅರವಿಂದ್, ರಿಷಬ್ ಅವ್ರನ್ನು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಚೇರ್ ನಲ್ಲಿ ಕೂರಿಸಿ ಕಾಂತಾರ ಸಿನಿಮಾದ ಯಶಸ್ಸಿನ ಬಗ್ಗೆ ಮಾತ ನಾಡಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ .ಅದರಲ್ಲೂ ಈ ವಿಡಿಯೊ ನೋಡಿ ಜನರು 'ವೀಕೆಂಡ್ ವಿತ್ ರಮೇಶ್' ಶೋ ಹೊಸ ಸೀಸನ್ ಅರಂಭ ಆಯ್ತಾ ಎಂದು ಕೆಲವರು ಅಚ್ಚರಿಗೊಂಡಿದ್ದಾರೆ. ರಿಷಭ್ ಶೆಟ್ಟಿ ಕಾಂತರ ಚಾಪ್ಟರ್ 1 ಯಶಸ್ವಿಯಾಗಿ ಸಾಗುತ್ತಿದ್ದಂತೆ ರಿಷಬ್ ಅವ್ರೇ ಮೊದಲ ಅಥಿತಿಯಾಗಿರಲಿ ಅನ್ನೋ ಅಭಿಪ್ರಾಯ ಸಹ ಸೋಷಿ ಯಲ್ ಮಿಡಿಯಾದಲ್ಲಿ ಕೇಳಿಬರುತ್ತಿದೆ.
ಇದನ್ನು ಓದಿ:BRAT Movie: ಡಾರ್ಲಿಂಗ್ ಕೃಷ್ಣ ಅಭಿನಯದ ʼಬ್ರ್ಯಾಟ್ʼ ಚಿತ್ರದ ಟ್ರೇಲರ್ ಔಟ್
ಉತ್ತಮ ರೇಟಿಂಗ್ ಹಾಗೂ ಹೆಚ್ಚು ವೀಕ್ಷಕರ ಬಳಗ ಹೊಂದಿರುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ವಿವಿಧ ಸಾಧಕರ ಜೊತೆ ಮಾತುಕತೆ ನಡೆಯುತ್ತದೆ. ಈಗಾಗಲೇ ರಮೇಶ್ ಅವರ ನಿರೂಪಣೆ ಶೈಲಿ, ಸಾಧಕರ ಜೊತೆ ಮಾತನಾಡುವ ರೀತಿಗೆ ಜನರು ಫಿದಾ ಆಗಿದ್ದು ಈ ಶೋ ಮತ್ತೆ ಶುರುವಾಗಲಿ ಅನ್ನೋದು ವೀಕ್ಷಕರ ಅಭಿಪ್ರಾಯ ಆಗಿದೆ. ಸದ್ಯ ಜೀ ವೇದಿಕೆ ಮೇಲೆ ಈ ದೃಶ್ಯ ತೋರಿಸ ಲಾಗಿದ್ದು ರಮೇಶ್ ಅರವಿಂದ್ ಸಾಧಕರ ಸಾಧನೆ ಅನಾವರಣ ಮಾಡಲು ಮತ್ತೆ ಬರ್ತಾರಾ ಅಂತ ಕಾದು ನೋಡಬೇಕಿದೆ.