Bigg Boss: ಬಿಗ್ ಬಾಸ್ ಮನೆ ಧಗ ಧಗ.... ಕಾಂಡೋಮ್ ಮಾರುತ್ತಿದ್ರಾ ಈ ಸ್ಪರ್ಧಿ?
Bigg Boss Hindi 19: ಹಿಂದಿ ಬಿಗ್ ಬಾಸ್ 19ರ ಇತ್ತೀಚಿನ ಎಪಿಸೋಡಿನಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಪಡೆದ ಮಾಲ್ತಿ ಚಾಹರ್, ತಮ್ಮ ಸಹ ಸ್ಪರ್ಧಿ ತಾನ್ಯಾ ಮಿತ್ತಲ್ ಬಗ್ಗೆ ಆಘಾತಕಾರಿ ಹೇಳಿಕೆ ನೀಡಿದ್ದು, ಮನೆಯಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಮಾಲ್ತಿ ಚಾಹರ್, ಮತ್ತೊಬ್ಬ ಸ್ಪರ್ಧಿ ತಾನ್ಯಾ ಮಿತ್ತಲ್ ಅವರು ವಯಸ್ಕರ ಆಟಿಕೆಗಳು ಹಾಗೂ ಕಾಂಡೋಮ್‍ಗಳನ್ನು ಮಾರಾಟ ಮಾಡುತ್ತಾರೆ ಎಂದು ಹೇಳಿದ್ದಾರೆ. ತಾನ್ಯಾ ತಾನು ಸತಿ ಸಾವಿತ್ರಿಯಂತೆ ನಟಿಸುತ್ತಾಳೆ, ಆದರೆ ಅವಳ ಇನ್ನೊಂದು ಮುಖ ನಿಮಗೆ ಯಾರಿಗೂ ತಿಳಿದಿಲ್ಲ ಎಂದು ಹೇಳಿದ್ದಾರೆ. ಈ ಸುದ್ದಿ ಹೊಸ ಆಘಾತದ ಅಲೆಯನ್ನೇ ಎಬ್ಬಿಸಿದೆ.
ತಾನ್ಯಾ ಮಿತ್ತಲ್ ಕಾಂಡೋಮ್ ಮಾರುತ್ತಿದ್ದಳು ಎಂದು ಮಾಲ್ತಿ ಚಾಹರ್ ಆರೋಪ -
Priyanka P
Nov 3, 2025 4:25 PM
ಮುಂಬೈ: ಹಿಂದಿ ಬಿಗ್ ಬಾಸ್ ಸೀಸನ್ 19ರ (Bigg Boss Hindi 19) ಇತ್ತೀಚಿನ ಎಪಿಸೋಡಿನಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಪಡೆದ ಮಾಲ್ತಿ ಚಾಹರ್, ತಮ್ಮ ಸಹ ಸ್ಪರ್ಧಿ ತಾನ್ಯಾ ಮಿತ್ತಲ್ (Tanya Mittal) ಬಗ್ಗೆ ಆಘಾತಕಾರಿ ಹೇಳಿಕೆ ನೀಡಿದ್ದು, ಮನೆಯಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಮಾಲ್ತಿ, ಮನೆಯ ಸದಸ್ಯರ ಜೊತೆ ಮಾತುಕತೆಯಲ್ಲಿ ತಾನ್ಯಾ ಅವರ ಹಿಂದಿನ ವ್ಯವಹಾರಗಳ ಕುರಿತು ಮಾತನಾಡಿ, ಅವಳ ಹಲವಾರು ವ್ಯವಹಾರಗಳು ಮುಚ್ಚಿವೆ ಎಂದು ಕೇಳಿದ್ದೇನೆ. ಒಂದು ವ್ಯವಹಾರವಿತ್ತು, ಆದರೆ ಅದರ ಬಗ್ಗೆ ಇಲ್ಲಿ ಹೇಳಲು ಸಾಧ್ಯವಿಲ್ಲ ಎಂದು ಹೇಳಿ ಕುತೂಹಲ ಹುಟ್ಟಿಸಿದರು. ಬಳಿಕ ಅವರು ತಾನ್ಯಾ ವಯಸ್ಕರ ಆಟಿಕೆ (adult toys) ಮತ್ತು ಕಾಂಡೋಮ್ (condoms) ಮಾರಾಟ ಮಾಡುತ್ತಿದ್ದಳು ಎಂದು ಆರೋಪಿಸಿದಾಗ, ಮನೆಯವರಲ್ಲಿ ಆಘಾತ ಉಂಟಾಯಿತು.
ನೀಲಂ ಗಿರಿಯೊಂದಿಗೆ ಕುಳಿತಿದ್ದ ತಾನ್ಯಾ, ಮಾಲ್ತಿ ತನ್ನ ಬಗ್ಗೆ ಮಾತನಾಡುತ್ತಿದ್ದಾಳೆ ಎಂದು ತಿಳಿದುಕೊಂಡು ಅಸಹನೆಯಿಂದ ಪ್ರತಿಕ್ರಿಯಿಸಿದಳು. ಕುನಿಕಾ ತಾನ್ಯಾಳಿಗೆ, ಇತರರನ್ನು ಕಳುಹಿಸದೆ ನೀನೇ ನಿಂತು ಸ್ಪಷ್ಟನೆ ಕೊಡು, ಎಂದು ಸಲಹೆ ನೀಡಿದಳು. ನಂತರ ನೆಹಾಲ್ ಮತ್ತು ಗೌರವ್ ತಾನ್ಯಾಳನ್ನು ವಿಚಾರಿಸಿದಾಗ, ತಾನ್ಯಾ ಎಲ್ಲ ಆರೋಪಗಳನ್ನೂ ಖಂಡಿಸಿ, ನಾನು ಅಂತಹ ಯಾವುದೇ ವ್ಯವಹಾರಗಳಲ್ಲಿ ಭಾಗಿಯಾಗಿಲ್ಲ, ಎಂದು ಸ್ಪಷ್ಟಪಡಿಸಿದಳು.
ಇದನ್ನೂ ಓದಿ: BBK 12: ಬಿಗ್ ಬಾಸ್ ಮನೆಯಲ್ಲಿ ಕಾವ್ಯಾ ವಿಚಾರವಾಗಿ ಗಿಲ್ಲಿ-ರಿಷಾ ನಡುವೆ ಜಗಳ
ತಾನ್ಯಾಳ ಪರವಾಗಿ ನೆಹಾಲ್ ಮತ್ತು ಕುನಿಕಾ ಮಾತನಾಡುತ್ತಾ, ಅವಳು ಏನು ಮಾಡಿದರೂ ಅದು ಅವಳ ವೈಯಕ್ತಿಕ ಆಯ್ಕೆ. ಯಾರಿಗೂ ಅವಳ ಜೀವನದ ಬಗ್ಗೆ ತೀರ್ಪು ಕೊಡುವ ಹಕ್ಕಿಲ್ಲ, ಎಂದು ಹೇಳಿದರು. ಆದರೆ, ಮಾಲ್ತಿ ಅಲ್ಲಿಗೆ ನಿಲ್ಲಲಿಲ್ಲ. ಅವರು ತಾನ್ಯಾಳ ಮೇಲೆ ಮತ್ತಷ್ಟು ಟೀಕೆಗಳನ್ನು ಮಾಡುತ್ತಾ, ಅವಳು ಸತಿ ಸಾವಿತ್ರಿಯಂತೆ ನಟಿಸುತ್ತಾಳೆ. ಆದರೆ ನಿಜ ಜೀವನದಲ್ಲಿ ಅವಳು ಹಾಗಲ್ಲ ಎಂದು ಹೇಳಿದರು.
ನಿಮಗೆ ಅವಳ ಒಂದು ಮುಖ ಮಾತ್ರ ಗೊತ್ತಿದೆ, ಇನ್ನೊಂದು ಮುಖ ತಿಳಿದಿಲ್ಲ. ನಾನು ಅವಳ ಇನ್ನೊಂದು ಮುಖ ನೋಡಿದ್ದೇನೆ ಎಂದು ಮಾಲ್ತಿ ಹೇಳಿದ್ದಾರೆ. ಈ ವೇಳೆ ಆಕೆ, ಅಭಿಷೇಕ್ ಬಜಾಜ್ ಅವರ ಅಭಿಪ್ರಾಯ ಕೇಳಿದಾಗ ಅವರು, ತಾನ್ಯಾ ಯಾವಾಗಲೂ ಸೀರೆ ಧರಿಸುವ ಸಂಸ್ಕಾರಿ ಹುಡುಗಿಯಂತೆ ಕಾಣುತ್ತಾಳೆ ಎಂದು ಹೇಳಿದರು.
ಇದಕ್ಕೆ ಮಾಲ್ತಿ ತೀವ್ರವಾಗಿ ಪ್ರತಿಕ್ರಿಯಿಸಿ, ಮನೆಯವರಿಗೆ ಅವಳ ನಿಜವಾದ ಮುಖ ಗೊತ್ತಿಲ್ಲ. ಅವಳ ಮಿನಿ ಸ್ಕರ್ಟ್‌ನಲ್ಲಿ ವಿಡಿಯೊಗಳಿವೆ, ಬ್ಲೌಸ್ ಇಲ್ಲದೆ ಪೆಟಿಕೋಟ್ ಧರಿಸಿದ ರೀಲ್ ಕೂಡ ಇದೆ ಎಂದು ಹೇಳಿದರು. ಮಾಲ್ತಿ ನೀಡಿರುವ ಈ ಹೇಳಿಕೆಗಳು ಮನೆಯಲ್ಲಿ ಹೊಸ ಅಲೆಯನ್ನು ಹುಟ್ಟುಹಾಕಿದ್ದು, ಬಿಗ್ ಬಾಸ್ 19 ಮನೆಯಲ್ಲಿ ಮತ್ತೆ ಒತ್ತಡದ ವಾತಾವರಣ ಉಂಟಾಗಿದೆ.
ಕನ್ನಡ ಬಿಗ್‍ಬಾಸ್‍ನಲ್ಲಿ ಯಾರಾಗುತ್ತಾರೆ ಸ್ಟೂಡೆಂಟ್ ಆಫ್ ದಿ ವೀಕ್?
ಬಿಗ್‍ಬಾಸ್ ಕನ್ನಡ ಸೀಸನ್ 12ರಲ್ಲಿ ಈ ವಾರ ದೊಡ್ಡ ಡ್ರಾಮವೇ ನಡೆದು ಹೋಗಿದೆ. ಸ್ಟೂಡೆಂಟ್ ಆಫ್ ದಿ ವೀಕ್ಗಾಗಿ ನಡೆದ ಟಾಸ್ಕ್ಗಳಲ್ಲಿ ಒಂದು ತಂಡ ಜಯ ಸಾಧಿಸಿದರೂ ಅವರಲ್ಲಿ ಒಮ್ಮತದ ನಿರ್ಧಾರ ಇರದ ಕಾರಣ ಬಿಗ್‍ಬಾಸ್ ದೊಡ್ಡ ನಿರ್ಧಾರ ತೆಗೆದುಕೊಂಡರು. ಇದೀಗ ಇಂದು ಕ್ಯಾಪ್ಟನ್ ಪಟ್ಟಕ್ಕಾಗಿ ಸ್ಟೂಡೆಂಟ್ ಆಫ್ ದಿ ವೀಕ್ ಟಾಸ್ಕ್ ನಡೆಯಲಿದೆ.