ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Chaitra Reddy: ಡಿವೋರ್ಸ್‌ ಹಂತದಲ್ಲಿ ಕನ್ನಡದ ಪ್ರಖ್ಯಾತ ಸೀರಿಯಲ್‌ ನಟಿ!

Chaitra Reddy: . ಚೈತ್ರಾ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಿಂದ ಪತಿಯೊಂದಿಗಿನ ಎಲ್ಲಾ ಫೋಟೋಗಳನ್ನು ಅಳಿಸಿಹಾಕಿದ್ದಾರೆ. ಆರು ವರ್ಷಗಳ ಹಿಂದೆ ಅದ್ದೂರಿಯಾಗಿ ಇವರ ವಿವಾಹ ನೆರವೇರಿತ್ತು. ಕನ್ನಡ ಮಾತ್ರವಲ್ಲದೆ ಈಗ ಹೆಚ್ಚಾಗಿ ತೆಲುಗು ಸೀರಿಯಲ್‌ಗಳಲ್ಲಿಯೇ ಬ್ಯೂಸಿಯಾಗಿರುವ ನಟಿ ಚೈತ್ರಾ ಲತಾ ರೆಡ್ಡಿ ಹಾಗೂ ನಿರ್ಮಾಪಕ ಕಮ್ ಸಿನಿಮಾಟೋಗ್ರಾಫರ್ ರಾಕೇಶ್ ಸಮಲಗೆ ವಿಚ್ಛೇದನ ನೀಡುವ ಹಾದಿಯಲ್ಲಿದ್ದಾರೆ ಎಂದು ವರದಿಯಾಗಿದೆ.

ಡಿವೋರ್ಸ್‌ ಹಂತದಲ್ಲಿ ಕನ್ನಡದ ಪ್ರಖ್ಯಾತ ಸೀರಿಯಲ್‌ ನಟಿ!

ಅವನು ಮತ್ತು ಶ್ರಾವಣಿ -

Yashaswi Devadiga
Yashaswi Devadiga Aug 5, 2026 6:31 PM

'ಅವನು ಮತ್ತು ಶ್ರಾವಣಿ' (Avau mattu shravani) ಖ್ಯಾತಿಯ ನಟಿ ಚೈತ್ರಾ ರೆಡ್ಡಿ (Chaitra Reddy) ಡಿವೋರ್ಸ್‌ ಹಂತದಲ್ಲಿ ಇದ್ದಾರೆ ಎನ್ನಲಾಗುತ್ತಿದೆ. ಚೈತ್ರಾ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಿಂದ ಪತಿಯೊಂದಿಗಿನ ಎಲ್ಲಾ ಫೋಟೋಗಳನ್ನು ಅಳಿಸಿಹಾಕಿದ್ದಾರೆ. ಆರು ವರ್ಷಗಳ ಹಿಂದೆ ಅದ್ದೂರಿಯಾಗಿ ಇವರ ವಿವಾಹ (Marrige) ನೆರವೇರಿತ್ತು.

ಕನ್ನಡ ಮಾತ್ರವಲ್ಲದೆ ಈಗ ಹೆಚ್ಚಾಗಿ ತೆಲುಗು ಸೀರಿಯಲ್‌ಗಳಲ್ಲಿಯೇ ಬ್ಯೂಸಿಯಾಗಿರುವ ನಟಿ ಚೈತ್ರಾ ಲತಾ ರೆಡ್ಡಿ ಹಾಗೂ ನಿರ್ಮಾಪಕ ಕಮ್ ಸಿನಿಮಾಟೋಗ್ರಾಫರ್ ರಾಕೇಶ್ ಸಮಲಗೆ ವಿಚ್ಛೇದನ ನೀಡುವ ಹಾದಿಯಲ್ಲಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: Jason Sanjay : ಸಿಎಂ ವಿಜಯ್‌ ಪುತ್ರನಿಗೆ ಈ ಕನ್ನಡ ಸಿನಿಮಾ ಅಂದ್ರೆ ಸಿಕ್ಕಾಪಟ್ಟೆ ಇಷ್ಟವಂತೆ!

ಕಯಲ್‌’ ಎಂಬ ಧಾರಾವಾಹಿಯಲ್ಲಿ ನಾಯಕಿ ‘ಕಯಲ್‌’ ಪಾತ್ರಕ್ಕೆ ಜೀವ ತುಂಬಿದ ಚೈತ್ರಾಗೆ ‘ತಮಿಳುನಾಡು ರಾಜ್ಯ ಪ್ರಶಸ್ತಿ’ ಲಭಿಸಿತ್ತು. . ಅತ್ಯುತ್ತಮ ಟೆಲಿವಿಷನ್‌ ನಟಿ (ಬೆಸ್ಟ್‌ ಟೆಲಿವಿಷನ್‌ ಆಕ್ಟ್ರೆಸ್‌) ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು.

'ಪ್ರೀತಿ ಕೇಳಿ ಸ್ನೇಹ ಕಳೆದುಕೊಳ್ಳಬೇಡಿ' ಸಿನಿಮಾದ ಮೂಲಕ ಬೆಳ್ಳಿತೆರೆಗೆ ಪಾದಾಪ ಮಾಡಿದ ಚೈತ್ರಾ ರೆಡ್ಡಿ ಮುಂದೆ 'ರಗಡ್' ಸಿನಿಮಾದಲ್ಲಿ ವಿನೋದ್ ಪ್ರಭಾಕರ್ ಜೊತೆಗೆ ತೆರೆ ಹಂಚಿಕೊಂಡಿದ್ದರು. ನಂದಕುಮಾರ್ ರಾಜು ನಿರ್ದೇಶನದ 'ಮಾಯಾ ತೋಟ' ಎನ್ನುವ ಆಕ್ಷನ್ ಕ್ರೈಂ ಥ್ರಿಲ್ಲರ್ ನಲ್ಲಿಯೂ ಚೈತ್ರಾ ರೆಡ್ಡಿ ಬಣ್ಣ ಹಚ್ಚಿದ್ದಾರೆ. ಒಂದು ಸೀಸನ್ ಈಗಾಗಲೇ ಹೊರಬಂದಿದ್ದು ಅದರಲ್ಲಿ ಆರು ಸೀಸನ್‌ಗಳಿವೆ.

ನವೆಂಬರ್ 11, 2020 ರಂದು ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ಇಬ್ಬರೂ ಅದ್ದೂರಿಯಾಗಿ ವಿವಾಹವಾಗಿದ್ದರು. ಇತ್ತೀಚಿನ ಎಲ್ಲಾ ಫೋಟೋಗಳಲ್ಲಿ ಚೈತ್ರಾರೆಡ್ಡಿ ತನ್ನ ತಂದೆಯೊಂದಿಗೆ ಇರುವ ಚಿತ್ರಗಳನ್ನು ಮಾತ್ರವೇ ಪೋಸ್ಟ್‌ ಮಾಡಿದ್ದು, ಎಲ್ಲಿಯೂ ಆಕೆಯ ಪತಿ ರಾಕೇಶ್‌ ಅವರ ಸುಳಿವಿಲ್ಲ.ಮೂಲತಃ ಬೆಂಗಳೂರಿನವರಾದ ಚೈತ್ರಾ ರೆಡ್ಡಿ, ಕನ್ನಡದಲ್ಲಿ 'ಅವನು ಮತ್ತೆ ಶ್ರಾವಣಿ' ಸೀರಿಯಲ್ ಮೂಲಕ ನಟನಾ ವೃತ್ತಿ ಆರಂಭಿಸಿದ್ದರು.

ಇದು ಅವರಿಗೆ ಭಾರೀ ಜನಪ್ರಿಯತೆ ತಂದುಕೊಟ್ಟಿತು. ತಮಿಳಿನಲ್ಲಿ 'ಕಲ್ಯಾಣಂ ಮುದಲ್ ಕಾದಲ್ ವರೈ' ಮತ್ತು 'ಯಾರಡಿ ನೀ ಮೋಹಿನಿ' ಧಾರಾವಾಹಿಗಳಲ್ಲಿ ನಟಿಸಿ ಇನ್ನೂ ದೊಡ್ಡ ಯಶಸ್ಸು ಕಂಡಿದ್ದರು.ಟಿವಿಯಲ್ಲಿ ಪ್ರಸಾರವಾಗಿದ್ದ 'ಸುಭದ್ರಾ ಪರಿಣಯಂ' ಸೀರಿಯಲ್‌ನಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ ಚೈತ್ರಾ, ನಟ ಬಾಲಾದಿತ್ಯ ಅವರ ತಂಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: Tumbadchi Manjula OTT : ಮರಾಠಿಗೆ ರೀಮೇಕ್ ಆದ ಈ ಕನ್ನಡದ ಸೂಪರ್ ಹಿಟ್ ಮೂವಿ ಒಟಿಟಿಗೆ ಎಂಟ್ರಿ!

2019ರಲ್ಲಿ ವಿನೋದ್‌ ಪ್ರಭಾಕರ್‌ ಅಭಿನಯದ ರಗಡ್‌ ಸಿನಿಮಾದಲ್ಲಿ ಹೀರೋಯಿನ್‌ ಆಗಿಯೂ ಚೈತ್ರಾ ರೆಡ್ಡಿ ನಟಿಸಿದ್ದರು. ಚೈತ್ರಾ ರೆಡ್ಡಿ ಅವರ ಸಹೋದರಿಯ ಮದುವೆಯಲ್ಲಿ ರಾಕೇಶ್‌ ಸಮುಲ ಅವರ ಜೊತೆ ಕಾಣಿಸಿಕೊಳ್ಳುವ ಮೂಲಕ ತಮ್ಮ ಲವ್‌ ಬಹಿರಂಗಪಡಿಸಿದ್ದರು.