Actor Darshan: ʼದಿ ಡೆವಿಲ್ʼ ಚಿತ್ರಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ ದರ್ಶನ್; ಪತಿಯ ಸಂದೇಶ ಹಂಚಿಕೊಂಡ ವಿಜಯಲಕ್ಷ್ಮೀ
Vijayalkshmi: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮತ್ತೆ ಜೈಲು ಸೇರಿದ್ದಾರೆ. ಇದೀಗ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರ ಸಂದೇಸವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ದರ್ಶನ್, ʼದಿ ಡೆವಿಲ್ʼ ಚಿತ್ರಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ.


ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ (Actor Darshan) ಮತ್ತೆ ಜೈಲು ಸೇರಿದ್ದಾರೆ. ಇದರಿಂದ ಅವರ ಅಭಿಮಾನಿಗಳಿ ಆಘಾತಕ್ಕೀಡಾಗಿದ್ದಾರೆ. ದರ್ಶನ್ ಅಭಿನಯದ ʼದಿ ಡೆವಿಲ್ʼ (The Devil) ಚಿತ್ರದ ಬಿಡುಗಡೆ ಹೊಸ್ತಿಲಿನಲ್ಲೇ ಅವರ ಜಾಮೀನು ರದ್ದಾಗಿರುವುದು ತೀವ್ರ ನಿರಾಸೆ ತಂದಿದೆ. ಇದೀಗ ದರ್ಶನ್ ಅವರ ಸಂದೇಶವನ್ನು ಪತ್ನಿ ವಿಜಯಲಕ್ಷ್ಮೀ (Vijayalkshmi) ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ʼದಿ ಡೆವಿಲ್ʼ ಚಿತ್ರಕ್ಕೆ ತಮ್ಮೆಲ್ಲ ಸಹಕಾರ ಇದೆ ಎಂದು ದರ್ಶನ್ ತಿಳಿಸಿದ್ದಾರೆ.
ʼʼನಾನು ವಿಜಯಲಕ್ಷ್ಮಿ ದರ್ಶನ್. ನಿಮ್ಮ ಪ್ರೀತಿಯ ದರ್ಶನ್ ಅವರು ನಿಮಗೆ ಕಳಿಸಿರುವ ಸಂದೇಶ. ಕನ್ನಡ ಕಲಾಭಿಮಾನಿಗೆ ಹಾಗೂ ನನ್ನ ಸೆಲೆಬ್ರಿಟಿಗಳಿಗೆ ಈ ನಿಮ್ಮ ಪ್ರೀತಿಯ ದಾಸನ ಶಿರ ಸಾಷ್ಟಾಂಗ ನಮಸ್ಕಾರಗಳು. ನನ್ನ ಸುಖದಲ್ಲಿ ಭಾಗಿಯಾಗಿ, ಕಷ್ಟದಲ್ಲಿ ಬೆನ್ನೆಲುಬಾಗಿ ನಿಂತ ನಿಮ್ಮ ಪ್ರೀತಿ ಅಭಿಮಾನಕ್ಕೆ ನಾನು ಜೀವನ ಪರ್ಯಂತ ಆಭಾರಿ. ನಾನು ಎಲ್ಲೆ ಇದ್ದರು ಹೇಗೆ ಇದ್ದರು ನಿಮ್ಮ ಶ್ರೇಯೋಭಿಲಾಷೆಯನ್ನೆ ಬಯಸುತ್ತೇನೆ.
ಪ್ರಸಕ್ತ ವಿದ್ಯಮಾನ ಏನೇ ಇದ್ದರು, ನನ್ನ ನಂಬಿ ಕನಸು ಕಂಡಿರುವ ನಿರ್ದೇಶಕರ ಹಾಗೂ ನನ್ನ ಮೇಲೆ ಕೊಟ್ಯಂತರ ಹಣ ಹೂಡಿರುವ ನಿರ್ಮಾಪಕರ ಬೆಂಬಲವಾಗಿ ನಿಲ್ಲಬೇಕಾದ್ದು ನನ್ನ ಆದ್ಯ ಕರ್ತವ್ಯ . ಹಾಗಾಗಿ ನನ್ನ ʼದಿ ಡೆವಿಲ್ʼ ಚಿತ್ರದ ಎಲ್ಲ ಕೆಲಸ ಕಾರ್ಯಗಳು ಯಾವುದೆ ಅಡೆತಡೆ ಇಲ್ಲದೆ ಸಾಗಲಿ ಎಂಬುದು ನನ್ನ ಆಶಯ. ಹಾಗಾಗಿ ಅದಕ್ಕೆ ನನ್ನ ಸಂಪೂರ್ಣಸಹಕಾರವಿದೆ ಎಂದು ಈ ಮೂಲಕ ತಿಳಿಸುತ್ತಿದ್ದೇನೆ. ಇದಕ್ಕೆ ನನ್ನ ಸೆಲೆಬ್ರಿಟಿಗಳ ಸಹಮತವಿದೆಯೆಂದು ದೃಢವಾಗಿ ನಂಬಿದ್ದೇನೆ.
ಸಿನಿಮಾ ಒಂದು ಮನರಂಜನೆಯ ಮಾಧ್ಯಮ. ಅದನ್ನ ಕೇವಲ ಮನರಂಜನೆಯ ದೃಷ್ಟಿಯಿಂದ ಮಾತ್ರ ನೋಡಬೇಕು-ನಿಮ್ಮ ಪ್ರೀತಿಯ ದಾಸ ಎಂದು ವಿಜಯಲಕ್ಷ್ಮೀ ಬರೆದುಕೊಂಡಿದ್ದಾರೆ. ಮೂಲಗಳ ಪ್ರಕಾರ ಪ್ರಕಾಶ್ ನಿರ್ದೇಶನದ ʼದಿ ಡೆವಿಲ್ʼ ಚಿತ್ರದ ಶೂಟಿಂಗ್ ಮತ್ತು ಡಬ್ಬಿಂಗ್ ಅನ್ನು ದರ್ಶನ್ ಪೂರ್ಣಗೊಳಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಆಗಸ್ಟ್ 15ರಂದು ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಬೇಕಿತ್ತು. ಆದರೆ ದರ್ಶನ್ ಮತ್ತೆ ಜೈಲಿಗೆ ಹೋಗಿದ್ದರಿಂದ ಇದನ್ನು ಮುಂದೂಡಲಾಗಿದೆ.
ಈ ಸುದ್ದಿಯನ್ನೂ ಓದಿ: Actor Darshan: ದರ್ಶನ್ ಜೈಲಿಗೆ, ಪತ್ನಿ ವಿಜಯಲಕ್ಷ್ಮಿಯಿಂದ ಒಡೆದ ಹೃದಯದ ಪೋಸ್ಟ್
ಒಡೆದ ಹೃದಯದ ಪೋಸ್ಟ್ ಹಾಕಿದ ವಿಜಯಲಕ್ಷ್ಮೀ
ಇದಕ್ಕೂ ಮೊದಲು ವಿಜಯಲಕ್ಷ್ಮೀ ಒಡೆದ ಹೃದಯದ ಪೋಸ್ಟ್ ಹಂಚಿಕೊಂಡಿದ್ದರು. ನಟ ದರ್ಶನ್ ಜೈಲಿಗೆ ತೆರಳಿರುವ ಹಿನ್ನೆಲೆಯಲ್ಲಿ, ದುಃಖಿತರಾಗಿರುವ ವಿಜಯಲಕ್ಷ್ಮೀ ಒಡೆದ ಹೃದಯದ ಎಮೋಜಿಯನ್ನು ಬಳಸಿಕೊಂಡು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದರು. ತಮ್ಮ ಫಾರಂ ಹೌಸ್‌ನಲ್ಲಿ ದರ್ಶನ್ ತಾವು ಸಾಕಿದ ಪ್ರಾಣಿಗಳ ನಡುವೆ ವಾಕಿಂಗ್ ಮಾಡುತ್ತಿರುವ ಫೋಟೊವನ್ನು ಅವರು ಪೋಸ್ಟ್ ಮಾಡಿದ್ದರು.
ಕಳೆದ ಡಿಸೆಂಬರ್‌ನಲ್ಲಿ ಜಾಮೀನು ಪಡೆದು ಹೊರ ಬಂದಿದ್ದ ದರ್ಶನ್ ಜತೆಗೆ ವಿಜಯಲಕ್ಷ್ಮೀ ಹೆಚ್ಚಿನ ಸಮಯ ಕಳೆದಿದ್ದರು. ರಾಜಸ್ಥಾನ ಹಾಗೂ ವಿದೇಶದಲ್ಲಿ 'ದಿ ಡೆವಿಲ್' ಸಿನಿಮಾದ ಶೂಟಿಂಗ್ ಇದ್ದಾಗಲೂ ಕೂಡ ಅಲ್ಲಿಗೆ ವಿಜಯಲಕ್ಷ್ಮೀ ಹೋಗಿದ್ದರು. ಅಸ್ಸಾಂನ ಕಾಮಾಖ್ಯ ದೇವಾಲಯಕ್ಕೂ ಜತೆಯಾಗಿ ಭೇಟಿ ನೀಡಿದ್ದರು. ಹೊಸಕೆರೆಹಳ್ಳಿಯ ಪ್ರತಿಷ್ಠಿತ ಅಪಾರ್ಟ್‌ಮೆಂಟ್‌ನಲ್ಲಿ ವಿಜಯಲಕ್ಷ್ಮೀ ಮನೆ ಇದ್ದರೆ, ಆರ್‌ಆರ್ ನಗರದಲ್ಲಿ ದರ್ಶನ್ ಮನೆಯಿದೆ. ಜೈಲಿಗೆ ಹೋಗಿ ಬಂದಾಗಿನಿಂದ ದರ್ಶನ್ ಅವರು ಪತ್ನಿ ಜತೆಗೆ ಇದ್ದಿದ್ದೇ ಜಾಸ್ತಿ.