Dog Satish: ಸುದೀಪ್ ನಟ ಆದ ಮಾತ್ರಕ್ಕೆ ತಲೆ ಮೇಲೆ ಕೊಂಬು ಇರುತ್ತಾ? ಡಾಗ್ ಸತೀಶ್
Sudeep: ಡಾಗ್ ಸತೀಶ್ ಅವರ ಒಂದು ವಿಡಿಯೋದಲ್ಲಿ ಸುದೀಪ್ ಹಾಡು ಬಳಸಿದ್ದಕ್ಕೆ ವಿವಾದ ಸೃಷ್ಟಿಯಾಗಿದೆ. ಇತ್ತೀಚೆಗಷ್ಟೆ ರಜತ್ ಮತ್ತು ವಿನಯ್ ವಿರುದ್ಧ ದೂರು ನೀಡಿದ್ದರು, ಆ ವಿಚಾರ ಈಗ ವಿವಾದಕ್ಕೆ ತಿರುಗಿದೆ. ಸುದೀಪ್ ಅವರ ಹಾಡನ್ನು ಈ ರೀತಿ ಬಳಕೆ ಮಾಡಿದ್ದು ಸರಿಯೇ ಎಂಬ ಪ್ರಶ್ನೆಗೆ ಡಾಗ್ ಸತೀಶ್ ಅವರು ಮಾಧ್ಯಮವೊಂದಕ್ಕೆ ಉತ್ತರ ನೀಡಿದ್ದಾರೆ. ನಟ ಆದ್ರೆ ತಲೆ ಮೇಲೆ ಕೊಂಬು ಇರತ್ತಾ? ಅಂತ ನೇರವಾಗಿ ಪ್ರಶ್ನೆ ಇಟ್ಟಿದ್ದಾರೆ.
ಡಾಗ್ ಸತೀಶ್ -
ಡಾಗ್ ಸತೀಶ್ (Dog Satish) ಅವರ ಒಂದು ವಿಡಿಯೋದಲ್ಲಿ ಸುದೀಪ್ ಹಾಡು ಬಳಸಿದ್ದಕ್ಕೆ ವಿವಾದ ಸೃಷ್ಟಿಯಾಗಿದೆ. ಇತ್ತೀಚೆಗಷ್ಟೆ ರಜತ್ ಮತ್ತು ವಿನಯ್ (Rajath Vinay) ವಿರುದ್ಧ ದೂರು ನೀಡಿದ್ದರು, ಆ ವಿಚಾರ ಈಗ ವಿವಾದಕ್ಕೆ ತಿರುಗಿದೆ. ಸುದೀಪ್ (Sudeep) ಅವರ ಹಾಡನ್ನು ಈ ರೀತಿ ಬಳಕೆ ಮಾಡಿದ್ದು ಸರಿಯೇ ಎಂಬ ಪ್ರಶ್ನೆಗೆ ಡಾಗ್ ಸತೀಶ್ ಅವರು ಮಾಧ್ಯಮವೊಂದಕ್ಕೆ ಉತ್ತರ ನೀಡಿದ್ದಾರೆ. ನಟ ಆದ್ರೆ ತಲೆ ಮೇಲೆ ಕೊಂಬು ಇರತ್ತಾ? ಅಂತ ನೇರವಾಗಿ ಪ್ರಶ್ನೆ ಇಟ್ಟಿದ್ದಾರೆ.
ತಲೆ ಮೇಲೆ ಕೊಂಬು ಇರತ್ತಾ?
ಡಾಗ್ ಸತೀಶ್ ಮಾತನಾಡಿ, ಸುದೀಪ್ ಅವರು ಕಷ್ಟ ಪಟ್ಟು ಹೀರೋ ಆಗಿದ್ದಾರೆ ಅನ್ನೋಕೆ, ಗೂಗಲ್ ಅಲ್ಲಿ ಅವರ ಹೆಸರು ಹಾಕಿದರೆ ನಂಬರ್ 1 ಹೀರೋ ಅಂತ ಏನಾದರೂ ಬರತ್ತಾ? ನಟ ಆದ್ರೆ ತಲೆ ಮೇಲೆ ಕೊಂಬು ಇರತ್ತಾ? ಇನ್ನು ನಾನು ನಾಯಿ ಫಿಲ್ಡ್ ಅಲ್ಲಿ ನಂಬರ್ 1 ಅಂತ ನೋಡಿದ್ರೆ ನನ್ನ ಹೆಸರು ಬರತ್ತೆ.ಅದೂ ವರ್ಲ್ಡ್ ಅಲ್ಲಿ. ಅವರು ಕರ್ನಾಟಕಕ್ಕೆ ಇರಬಹುದು ಅಥವಾ ಅರ್ಧ ಭಾರತಕ್ಕೆ ಇರಬಹುದು. ಇಂಡಿಯಾಗೆ ನಂಬರ್ ಒನ್ ಹೀರೋ ಅಂತ ಗೂಗಲ್ನಲ್ಲಿ ಹಾಕಿದರೆ ಸುದೀಪ್ ಸರ್ ಬರುತ್ತಾರಾ’ ಎಂದು ಡಾಗ್ ಸತೀಶ್ ಪ್ರಶ್ನೆ ಮಾಡಿದ್ದಾರೆ.
ಏನೇ ಪೋಸ್ಟ್ ಹಾಕಿದರೂ ಅದು ನನ್ನಿಷ್ಟ
ಸುದೀಪ್ ಅವರು ಕಷ್ಟಪಟ್ಟು ಅವರ ಕ್ಷೇತ್ರದಲ್ಲಿ ಕರ್ನಾಟಕಕ್ಕೆ ನಂಬರ್ 1 ಆಗಿದ್ದಾರೆ. ಹಾಗೇ ನಾನು ಕೂಡ ನಾಯಿ ಫಿಲ್ಡ್ ಅಲ್ಲಿ ನಂಬರ್ 1 ಆಗಿದ್ದೀನಿ. ನನಗೆ ತಲೆ ಮೇಲೆ ಎರಡು ಕೊಂಬು ಇದೆ ಅಂತ ನಾನು ಹೇಳಲ್ಲ. ಸೋಷಿಯಲ್ ಮೀಡಿಯಾದಲ್ಲಿ ಏನೇ ಪೋಸ್ಟ್ ಹಾಕಿದರೂ ಅದು ನನ್ನಿಷ್ಟ. ಸೋಶಿಯಲ್ ಮೀಡಿಯಾದಲ್ಲಿ ದಾದಾ ಯಾರ್ ಗೊತ್ತಾ ಹಾಡನ್ನು ನಾನು ಬಳಸಿದ್ದು ತಪ್ಪಲ್ಲ.
ಈಗ ವಿಡಿಯೋದಿಂದ ಯಾರೆಗೆ ಲಾಸ್ ಆಗಿದೆ? ‘ರಜತ್, ವಿನಯ್ ಮತ್ತು ಧನರಾಜ್ ಪ್ರಚೋದನೆ ಮಾಡಿದ್ದರಿಂದಲೇ ಇಷ್ಟೆಲ್ಲ ಆಗಿದ್ದು ಕೆಟ್ಟದಾಗಿ ಕಮೆಂಟ್ ಹಾಕಿದ್ದು ಅವರೇ ತಾನೇ? ಅವರು ಸುಮ್ಮನೇ ಇದ್ದಿದ್ದರೆ ಮಾಮೂಲಿಯಾಗಿ ಇಷ್ಟೊಂದು ಸುದ್ದಿ ಆಗುತ್ತಿತ್ತಾ? ಎಂದು ಹೇಳಿದ್ದಾರೆ.
ನನ್ನ ಮೇಲೆ ದೂರು ಕೊಡಲು ಚೆನ್ನಮ್ಮನ ಕೆರೆಗೆ ಹೋಗಿದ್ದಾರೆ. ಬನಶಂಕರಿ ಪೊಲೀಸ್ ಸ್ಟೇಷನ್ ಹೋಗಿದ್ದಾರೆ. ಎಲ್ಲ ಕಡೆ ಬೈದು ಕಳಿಸಿದ್ದಾರೆ. ಅವರು ದೂರು ಕೊಡದೇ ಸುಳ್ಳು ಹೇಳುತ್ತಿದ್ದಾರೆ ಎಂದರು.
ಇದನ್ನೂ ಓದಿ: Dog Satish: ಶ್ವಾನಗಳ ಬಗ್ಗೆ ಡಾಗ್ ಸತೀಶ್ ಕೆಟ್ಟ ಮಾತು; ದಾಖಲಾಯ್ತು ದೂರು
ಇದರ ಜೊತೆಗೆ ಡಾಗ್ ಸತೀಶ್ ವಿರುದ್ಧ ದೂರು ದಾಖಲಾಗಿದೆ. ಶ್ವಾನ ಬಗ್ಗೆ ಅಸಭ್ಯ ಪದ ಬಳಕೆ ಮಾಡಿದ್ದಾರೆ ಎಂಬ ಆರೋಪದ ಮೇಲೆ ಅನಿಮಲ್ ವೆಲ್ಫೇರ್ ಸಪೋರ್ಟ್ ಲಕ್ಷ್ಮೀ ಅವರು ದೂರು ದಾಖಲು ಮಾಡಿದ್ದರು. ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ನಕ್ಕನ್ಲೇ ಸುಭಾಷ್ ಕೇಳಿದ ಪ್ರಶ್ನೆಗೆ ಅಸಭ್ಯ ಉತ್ತರವನ್ನು ಸತೀಶ್ ನೀಡಿದ್ದಾರೆ ಎಂದು ಆರೋಪಿಸಿದ್ದರು.