Huma Qureshi: ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡ್ರಾ ಬಾಲಿವುಡ್‌ನ ಖ್ಯಾತ ನಟಿ?
Huma Qureshi: ಹುಮಾ ಅವರ ಆಪ್ತ ಸ್ನೇಹಿತೆ ಅಕ್ಸಾ ಸಿಂಗ್ ಇತ್ತೀಚೆಗಷ್ಟೇ ರಚಿತ್ ಮತ್ತು ಹುಮಾ ಜೊತೆಯಲ್ಲಿರುವ ಫೋಟೊಗಳನ್ನು ಹಂಚಿಕೊಂಡಿದ್ದರು. ಈ ಮೂಲಕ ಆ ಪೋಸ್ಟ್ ನಲ್ಲಿ ಹುಮಾ ಅವರಿಗೆ ಶುಭಾಶಯಗಳನ್ನು ಕೂಡ ತಿಳಿಸಿದ್ದಾರೆ. ಈ ಹಿನ್ನೆಲೆ ಅವರಿಬ್ಬರು ತಮ್ಮ ಆಪ್ತರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

-

ನವದೆಹಲಿ: ಆರ್ಮಿ ಆಫ್ ದಿ ಡೇ, ಹೈವೇ, ಕಾಲಾ ಸಿನಿಮಾ ಮೂಲಕ ಖ್ಯಾತಿ ಪಡೆದ ಬಾಲಿವುಡ್ ನಟಿ ನಟಿ ಹುಮಾ ಖುರೇಷಿ (Huma Qureshi) ಅವರು ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲಿರುತ್ತಾರೆ. ದೆಹಲಿ ಮೂಲದವರಾದ ಇವರು ತಮ್ಮ ಕಾಲೇಜು ಶಿಕ್ಷಣವನ್ನು ಪೂರ್ಣಗೊಳಿಸಿದ ಬಳಿಕ ತಮ್ಮ ಓದಿನ ಜೊತೆಗೆ ಮಾಡೆಲಿಂಗ್ ಮತ್ತು ರಂಗಭೂಮಿಯಲ್ಲಿ ತೊಡಗಿ ಕೊಂಡರು. ಬಳಿಕ ನಿರ್ದೇಶಕ ಮತ್ತು ನಟ ಅನುರಾಗ್ ಕಶ್ಯಪ್ ನಿರ್ದೇಶನದ 2012 ರ 'ಗ್ಯಾಂಗ್ಸ್ ಆಫ್ ವಾಸೇಪುರ್' ಚಿತ್ರದಲ್ಲಿ ಮೋನಿಷಾ ಎಂಬ ಪೋಷಕ ಪಾತ್ರದಲ್ಲಿ ನಟಿಸುವ ಅವಕಾಶ ದೊರಕಿ ಸಾಲು ಸಾಲು ಸಿನಿಮಾದಲ್ಲಿ ನಟಿಸಿ ಮಿಂಚಿದ್ದಾರೆ.. ಸದ್ಯ ಅವರು ಯಶ್ ಅಭಿನಯದ ಟಾಕ್ಸಿಕ್ ಸಿನಿಮಾದಲ್ಲಿ ಕೂಡ ಅಭಿನಯಿಸಿದ್ದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಿಂಚಲಿದ್ದಾರೆ. ಇದೀಗ ಅವರು ಗುಟ್ಟಾಗಿ ತಮ್ಮ ಬಹುಕಾಲದ ಗೆಳೆಯ ರಚಿತ್ ಸಿಂಗ್ ಅವರ ಜೊತೆ ನಿಶ್ಚಿತಾರ್ಥ ಮಾಡಿ ಕೊಂಡಿದ್ದಾರೆ ಹಾಗೂ ಸದ್ಯದಲ್ಲೇ ಮದುವೆ ಕೂಡ ಆಗುತ್ತಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ.
ನಟಿ ಹುಮಾ ಖುರೇಷಿ ಅವರು ಸಿನಿಮಾದಲ್ಲಿ ಸಕ್ರಿಯ ವಾಗುವಾಗಿದ್ದಂತೆ ಸೋಶಿಯಲ್ ಮಿಡಿಯಾದಲ್ಲಿ ಕೂಡ ಸಕ್ರಿಯವಾಗಿದ್ದಾರೆ. ಸದ್ಯ ಹುಮಾ ಅವರ ಆಪ್ತ ಸ್ನೇಹಿತೆ ಅಕ್ಸಾ ಸಿಂಗ್ ಅವರು ಇತ್ತೀಚೆಗಷ್ಟೇ ರಚಿತ್ ಮತ್ತು ಹುಮಾ ಜೊತೆಯಲ್ಲಿರುವ ಫೋಟೊಗಳನ್ನು ಹಂಚಿ ಕೊಂಡಿದ್ದರು. ಈ ಮೂಲಕ ಆ ಪೋಸ್ಟ್ ನಲ್ಲಿ ಹುಮಾ ಅವರಿಗೆ ಶುಭಾಶಯಗಳನ್ನು ಕೂಡ ತಿಳಿಸಿದ್ದಾರೆ. ಈ ಹಿನ್ನೆಲೆ ಅವರಿಬ್ಬರು ತಮ್ಮ ಆಪ್ತರ ಸಮ್ಮುಖದಲ್ಲಿ ನಿಶ್ಚಿತಾರ್ಥದ ಮಾಡಿ ಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ರಚಿತ್ ಯಾರು?
ನಟಿ ಹುಮಾ ಖುರೇಷಿ ಅವರ ಮನಕದ್ದ ರಚಿತ್ ಸಿಂಗ್ ಕೂಡ ಈಗ ಫೇಮಸ್ ಆಗಿದ್ದಾರೆ. ವೃತ್ತಿಯಲ್ಲಿ ಅವರು ಫಿಟ್ನೆಸ್ ಟ್ರೈನರ್ ಆಗಿದ್ದು ಸ್ಟಾರ್ ಸೆಲೆಬ್ರಿಟಿಗಳ ಜೊತೆಗೆ ಉತ್ತಮ ಒಡನಾಟ ಕೂಡ ಅವರಿಗಿದೆ. ನಟಿ ಆಲಿಯಾ ಭಟ್, ಬಾಲಿವುಡ್ ನಟ ರಣ್‌ವೀರ್ ಸಿಂಗ್ ಸೇರಿದಂತೆ ಅನೇಕ ಫೇಮಸ್ ಸ್ಟಾರ್ ಗಳಿಗೆ ಪಿಟ್ನೆಸ್ ಟ್ರೈನರ್ ಆಗಿದ್ದಾರೆ. ಅದರೊಂದಿಗೆ ನಟನಾಗಿ ಕೂಡ ರಚಿತ್ ಅವರು 'ಕರ್ಮ ಕಾಲಿಂಗ್' ಎಂಬ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಇದನ್ನು ಓದಿ:Full Meals Movie: ಕ್ಯಾಸೆಟ್‌ನಲ್ಲಿ ʼವಾಹ್ ಏನೋ ಹವಾʼ ಸಾಂಗ್ ರಿಲೀಸ್ ಮಾಡಿದ ʼಫುಲ್ ಮೀಲ್ಸ್ʼ ಚಿತ್ರತಂಡ
ಇವರಿಬ್ಬರ ನಡುವೆ ಲವ್ ಹೇಗೆ ಆಯ್ತು ಎಂದು ಇಬ್ಬರು ಹೇಳಿಕೊಂಡಿಲ್ಲ. ಹಾಗಿದ್ದರೂ ಶಾರುಖ್ ಖಾನ್ ಮತ್ತು ಗೌರಿ ಖಾನ್ ಹಮ್ಮಿಕೊಂಡಿದ್ದ ಖಾಸಗಿ ಪಾರ್ಟಿಯಲ್ಲಿ ಇವರಿಬ್ಬರು ಜೊತೆಯಲ್ಲಿ ಮೊದಲ ಕಾಣಿಸಿಕೊಂಡಿದ್ದರು. ಈ ಪಾರ್ಟಿಯಲ್ಲಿ ಇವರ ಆತ್ಮೀಯತೆ ಕಂಡು ಅವರಿಬ್ಬರ ನಡುವೆ ಏನೊ ಇದೆ ಎಂಬ ಅನುಮಾನ ಮೂಡಿತ್ತು. ಅಂತೆಯೇ ಸೋನಾಕ್ಷಿ ಸಿನ್ಹಾ ಲಾವರ ಮದುವೆ ಕಾರ್ಯಕ್ರಮದಲ್ಲಿಯೂ ಇಬ್ಬರು ಭಾಗ ವಹಿಸಿದ್ದರು.ಹೀಗಾಗಿ ಈ ಗಾಸಿಪ್ ಅನೇಕ ದಿನದಿಂದ ಹರಿದಾಡಿದ್ದು ಇದೀಗ ಇಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಸದ್ಯ ಅವರು 'ಜಾಲಿ ಎಲ್ ಎಲ್ ಬಿ 3' ಚಿತ್ರದಲ್ಲಿ ಅಭಿನಯಿಸಿದ್ದು ಈ ಸಿನಿಮಾ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಇವರ ಅಭಿನಯದ 'ಬಯಾನ್' ಚಿತ್ರ ಮೊನ್ನೆಯಷ್ಟೇ ಟೊರೊಂಟೋ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರದರ್ಶನ ಕಂಡಿದೆ. ಅದರಂತೆ ರಾಕಿಂಗ್ ಸ್ಟಾರ್ ಯಶ್ ಅಭಿನ ಯಿಸುತ್ತಿರುವ 'ಟಾಕ್ಸಿಕ್' ಚಿತ್ರದಲ್ಲಿ ಕೂಡ ಅಭಿನಯಿಸಿದ್ದಾರೆ. ಸದ್ಯ ಅವರು ನಿಶ್ಚಿತಾರ್ಥ ಮಾಡಿಕೊಂಡ ಬಗ್ಗೆ ಇದುವರೆಗೆ ಯಾವ ಸ್ಪಷ್ಟನೆ ನೀಡಿಲ್ಲ.