Actress Meena: ಡಿವೋರ್ಸ್ ಆದ ನಟನ ಜೊತೆ ನಟಿ ಮೀನಾ ಎರಡನೇ ಮದುವೆ?
Actress Meena second marriage: ಇತ್ತೀಚೆಗೆ ನಟಿ ಮೀನಾ 'ಜಯಮ್ಮು ನಿಶ್ಚಯಮ್ಮುರಾʼ ಎಂಬ ಟಾಕ್ ಶೋನಲ್ಲಿ ಭಾಗವಹಿಸಿದ್ದು ತಮ್ಮ ಎರಡನೇ ಮದುವೆ ಕುರಿತು ಹರಡಿದ್ದ ಸುದ್ದಿಗಳಿಗೆ ತೀವ್ರವಾಗಿ ಪ್ರತಿಕ್ರಯಿಸಿ ದ್ದಾರೆ. ಮದುವೆ ಬಗ್ಗೆ ಮೀನಾ ಅವರು ಇತ್ತೀಚಿನ ಕಾರ್ಯಕ್ರಮದಲ್ಲಿ ಅಚ್ಚರಿ ಹೇಳಿಕೆಗಳನ್ನು ಬಹಿರಂಗಪಡಿಸಿದ್ದಾರೆ.

-

ನವದೆಹಲಿ: ಬಹುಭಾಷಾ ನಟಿ ಮೀನಾ (Actress Meena) ಸಿನಿಮಾರಂಗದಲ್ಲೇ ಸಖತ್ ಬೇಡಿಕೆಯುಳ್ಳ ನಟಿಯಾಗಿದ್ದಾರೆ. ತನ್ನ ಸೌಂದರ್ಯ, ನಟನೆಯಲ್ಲೇ ಮೋಡಿ ಮಾಡುವ ಮೂಲಕ ಸಾಕಷ್ಟು ಜನಪ್ರಿಯ ರಾಗಿದ್ದಾರೆ. ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸಿ ಫೇಮ್ ಗಿಟ್ಟಿಸಿಕೊಂಡ ಇವರು ಬಾಲ್ಯದಲ್ಲೇ ಸಿನಿಮಾ ಪ್ರವೇಶ ಮಾಡಿದ್ದರು. ಆದರೆ ಇವರ ವೈಯಕ್ತಿಕ ವಿಚಾರ ಹೆಚ್ಚು ಸುದ್ದಿಯಲ್ಲಿದ್ದು ಇವರು ಎರಡನೇ ಮದುವೆ ಆಗುತ್ತಾರೆ ಎನ್ನುವ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಹರಿದಾ ಡುತ್ತಿದೆ. ಇದೀಗ ಮದುವೆ ಬಗ್ಗೆ ಮೀನಾ ಅವರು ಇತ್ತೀಚಿನ ಸಂದರ್ಶನದಲ್ಲಿ ಅಚ್ಚರಿ ಹೇಳಿಕೆಗಳನ್ನು ಬಹಿರಂಗ ಪಡಿಸಿದ್ದಾರೆ.
ಮೀನಾ 2009ರಲ್ಲಿ ಸಾಫ್ಟ್‌ವೇರ್ ಡೆವಲಪರ್ ವಿದ್ಯಾಸಾಗರ್ ಅವರನ್ನು ವಿವಾಹವಾದರು. 2022ರಲ್ಲಿ ಪತಿ ಅನಾ ರೋಗ್ಯದಿಂದ ನಿಧನರಾದರು. ಇತ್ತೀಚೆಗೆ ನಟಿ ಮೀನಾ 'ಜಯಮ್ಮು ನಿಶ್ಚಯಮ್ಮುರಾʼ ಎಂಬ ಟಾಕ್ ಶೋನಲ್ಲಿ ಭಾಗವಹಿಸಿದ್ದು ತಮ್ಮ ಎರಡನೇ ಮದುವೆ ಕುರಿತು ಹರಡಿದ್ದ ಸುದ್ದಿಗಳಿಗೆ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ., 'ನನ್ನ ಪತಿ ನಿಧನರಾದ ಕೇವಲ ಒಂದು ವಾರಕ್ಕೆ ತಾನು ಎರಡನೇ ಮದುವೆಗೆ ಸಿದ್ಧಳಾಗಿದ್ದೇನೆ ಎಂದು ಸುದ್ದಿ ಹರಡಿಸಿದ್ದಾರೆ. ಸಿನಿಮಾ ನಟರಲ್ಲಿ ಯಾರಿಗೇ ಡಿವೋರ್ಸ್ ಆದರೂ ಅವರೊಂದಿಗೆ ನನ್ನ ಎರಡನೇ ಮದುವೆ ಆಗುತ್ತಿದ್ದೇನೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ರು. ಈ ರೀತಿ ಅಸಹ್ಯವಾಗಿ ಸುಳ್ಳು ಹಬ್ಬಿಸುವವರಿಗೆ ನಿಜವಾಗಿ ಕುಟುಂಬ ಗಳಿವೆಯೇ?' ಮೀನಾ ಗಂಭೀರವಾಗಿ ಪ್ರಶ್ನಿಸಿದ್ದಾರೆ. ಆದರೆ ರೀತಿ ಇಂತಹ ಮಾತುಗಳ ಬಗ್ಗೆ ತನಗೆ ಬಹಳಷ್ಟು ಬೇಸರ ಇದೆ ಎಂದು ಎರಡನೇ ಮದುವೆ ಬಗ್ಗೆ ಮೌನ ಮುರಿದಿದ್ದಾರೆ.
ಈ ವೇಳೆ ಸ್ನೇಹಿತೆ ಸೌಂದರ್ಯ ಬಗ್ಗೆ ಮೀನಾ ಪ್ರತಿಕ್ರಿಯಿಸಿದ್ದಾರೆ. ಅವತ್ತು ನಾನು ಅವಳೊಟ್ಟಿಗೆ ಹೋಗ ಬೇಕಿತ್ತು.ಆದರೆ ನಾನು ಸಿನಿಮಾ ಕೆಲಸದಲ್ಲಿ ಬ್ಯುಸಿ ಇದ್ದೆ. ನಾನು ಅವಳು ಒಳ್ಳೆ ಸ್ನೇಹಿತೆಯರಾಗಿದ್ದೆವು. ಚುನಾವಣೆ ಪ್ರಚಾರಕ್ಕಾಗಿ ತೆರಳುವಾಗ ಆಕೆ ದುರಂತ ಅಂತ್ಯ ಕಂಡಿದ್ದು ದುರಾದೃಷ್ಟಕರ. ಆದರೆ ಅವತ್ತು ಆ ಪ್ರಚಾರಕ್ಕೆ ನಾನು ಕೂಡ ಹೋಗಬೇಕಿತ್ತು. ನನ್ನನ್ನು ಕೂಡ ಕರೆದಿದ್ದರು. ಆದರೆ ಚುನಾವಣೆ ಪ್ರಚಾರದ ಬಗ್ಗೆ ಹೆಚ್ಚು ಆಸಕ್ತಿ ಇರಲಿಲ್ಲ. ಹಾಗಾಗಿ ಹೋಗಲಿಲ್ಲ ಎಂದು ಸೌಂದರ್ಯ ನೆನೆದು ಭಾವುಕರಾಗಿದ್ದಾರೆ ..