Ram Charan: ʻಪೆದ್ದಿʼ ಚಿತ್ರಕ್ಕಾಗಿ ನಟಿ ಜಾನ್ವಿ ಕಪೂರ್ ಪಡೆದ ಹಣವೆಷ್ಟು? ವಿವಾದದ ನಂತರ ಸದ್ದು ಮಾಡಿದ ಸಂಭಾವನೆ ಮ್ಯಾಟರ್!
ತೆಲುಗು ನಟ ರಾಮ್ ಚರಣ್ ಅಭಿನಯದ 'ಪೆದ್ದಿ' ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಗಳಿಸಿದ್ದರೂ, ನಾಯಕಿ ಜಾನ್ವಿ ಕಪೂರ್ ಅವರ 'ಅಚ್ಚೀಯಮ್ಮ' ಪಾತ್ರ ತೀವ್ರ ವಿವಾದಕ್ಕೆ ಈಡಾಗಿದ್ದು ಗೊತ್ತೇ ಇದೆ. ಈ ಮಧ್ಯೆ ಈ ಚಿತ್ರಕ್ಕಾಗಿ ಜಾನ್ವಿ ತಮ್ಮ ವೃತ್ತಿಜೀವನದಲ್ಲೇ ಗರಿಷ್ಠ ಮೊತ್ತದ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.
-
ʻಮೆಗಾ ಪವರ್‌ಸ್ಟಾರ್' ರಾಮ್ ಚರಣ್ ಮತ್ತು ನಿರ್ದೇಶಕ ಬುಚ್ಚಿಬಾಬು ಸಾನಾ ಕಾಂಬಿನೇಷನ್‌ನಲ್ಲಿ ಮೂಡಿಬಂದಿರುವ ‘ಪೆದ್ದಿ’ ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸಿನೊಂದಿಗೆ ಮುನ್ನುಗ್ಗುತ್ತಿದೆ. ಹಳ್ಳಿಗಾಡಿನ ಹಿನ್ನೆಲೆಯಲ್ಲಿ ಸಾಗುವ ಈ ಕಥೆಯಲ್ಲಿ ರಾಮ್ ಚರಣ್ ತಮ್ಮ ಅಭಿನಯದ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಆದರೆ, ಸಿನಿಮಾ ಗಳಿಸಿರುವ ಭರ್ಜರಿ ಯಶಸ್ಸಿನ ಜೊತೆಗೆ ಈ ಚಿತ್ರದ ನಾಯಕಿ ಜಾನ್ವಿ ಕಪೂರ್ ಅವರ ಪಾತ್ರದ ಬಗ್ಗೆ ಸಾಕಷ್ಟು ವಿವಾದಗಳು ಕೇಳಿಬಂದಿದ್ದವು. ಅವರನ್ನು ಕೆಟ್ಟದಾಗಿ ತೋರಿಸಲಾಗಿದೆ ಎಂದು ನಿರ್ದೇಶಕರನ್ನು ಟೀಕೆ ಮಾಡಲಾಗಿತ್ತು.
ಪೆದ್ದಿ ಚಿತ್ರಕ್ಕಾಗಿ 8 ಕೋಟಿ ರೂ. ಸಂಭಾವನೆ
ಇದೀಗ ಈ ಚಿತ್ರಕ್ಕಾಗಿ ಜಾನ್ವಿ ಕಪೂರ್ ಅವರು ಪಡೆದಿರುವ ಸಂಭಾವನೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಈ ಬಿಗ್ ಬಜೆಟ್ ಚಿತ್ರದಲ್ಲಿ 'ಅಚ್ಚೀಯಮ್ಮ' ಎಂಬ ಪಾತ್ರವನ್ನು ಪೋಷಿಸಿದ್ದಕ್ಕಾಗಿ ಜಾನ್ವಿ ಕಪೂರ್ ಬರೋಬ್ಬರಿ 8 ಕೋಟಿ ರೂಪಾಯಿಗಳ ಭಾರಿ ಸಂಭಾವನೆಯನ್ನು ಪಡೆದಿದ್ದಾರೆ ಎಂಬ ಮಾತು ಬಲವಾಗಿ ಕೇಳಿಬರುತ್ತಿದೆ.
Ram Charan: 'ಪೆದ್ದಿ' ಚಿತ್ರದ ವಿರುದ್ಧ ಕೇಸ್ ದಾಖಲಿಸುವಂತೆ ಆಗ್ರಹ; ಏನಿದು ವಿವಾದ?
ದೇವರ ಸಿನಿಮಾಕ್ಕೆ 5 ಕೋಟಿ ರೂ. ಚಾರ್ಜ್ ಮಾಡಿದ್ದ ಜಾನು
ಈ ಹಿಂದೆ ಜೂನಿಯರ್ ಎನ್‌ಟಿಆರ್ ಜೋಡಿಯಾಗಿ ನಟಿಸಿದ್ದ ‘ದೇವರ’ ಚಿತ್ರಕ್ಕೆ ಜಾನ್ವಿ ಸುಮಾರು 5 ಕೋಟಿ ರೂಪಾಯಿ ಚಾರ್ಜ್ ಮಾಡಿದ್ದರು ಎಂಬ ವದಂತಿ ಇತ್ತು. ಆ ಲೆಕ್ಕಾಚಾರದಲ್ಲಿ ನೋಡಿದರೆ, ಪೆದ್ದಿ ಸಿನಿಮಾಗಾಗಿ ಅವರು ತಮ್ಮ ಸಂಭಾವನೆಯನ್ನು ಅನ್ನು ಏಕಾಏಕಿ ಏರಿಸಿಕೊಳ್ಳುವ ಮೂಲಕ ತಮ್ಮ ವೃತ್ತಿಜೀವನದಲ್ಲೇ ಅತ್ಯಂತ ಅತಿ ಹೆಚ್ಚಿನ ಸಂಭಾವನೆಯನ್ನು ಪಡೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.
ಜಾನ್ವಿ ಪಾತ್ರದ ಬಗ್ಗೆ ಅಸಮಾಧಾನ
ಪೆದ್ದಿ ಸಿನಿಮಾ ಕಮರ್ಷಿಯಲ್ ಆಗಿ ಸೆನ್ಸೇಷನಲ್ ಹಿಟ್ ಆಗಿದ್ದರೂ, ಕಥೆಯಲ್ಲಿ ಜಾನ್ವಿ ಕಪೂರ್ ಅವರ ಪಾತ್ರಕ್ಕೆ ನಿರೀಕ್ಷಿತ ಮಟ್ಟದ ಪ್ರಾಮುಖ್ಯತೆ ಸಿಕ್ಕಿಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಇಡೀ ಕಥೆ ನಾಯಕನ ಸುತ್ತಲೇ ತಿರುಗುವುದರಿಂದ, ನಾಯಕಿಯ ಪಾತ್ರ ಕೇವಲ ಗ್ಲಾಮರ್‌ಗಷ್ಟೇ ಸೀಮಿತವಾಗಿದೆ ಮತ್ತು ಆ ಪಾತ್ರದ ವಿನ್ಯಾಸ ಕೂಡ ತೀರಾ ದುರ್ಬಲವಾಗಿದೆ ಎಂದು ಪ್ರೇಕ್ಷಕರು ಹಾಗೂ ಚಿತ್ರ ವಿಮರ್ಶಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
Janhvi Kapoor: 'ಪೆದ್ದಿ' ಚಿತ್ರದಲ್ಲಿ ಜಾನ್ವಿ ಪಾತ್ರಕ್ಕೆ ಅಗೌರವ! ಏನಿದು ಚರ್ಚೆ?
ಪ್ರಚಾರದಿಂದ ದೂರ ಉಳಿದ ಜಾನು
ಈ ಸಿನಿಮಾದಲ್ಲಿ ಜಾನ್ವಿ ಅವರಿದ್ದ ಕೆಲವು ಆಕ್ಷೇಪಾರ್ಹ ಹಾಗೂ ಶೃಂಗಾರಭರಿತ ದೃಶ್ಯಗಳಿಗೆ ಪ್ರೇಕ್ಷಕರಿಂದ ತೀವ್ರ ವ್ಯರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಚಿತ್ರತಂಡವು ಆ ದೃಶ್ಯಗಳನ್ನು ಸಿನಿಮಾದಿಂದಲೇ ಕತ್ತರಿಸಿ ತೆಗೆದುಹಾಕಬೇಕಾಯಿತು. ಇದೀಗ ಇಷ್ಟೊಂದು ಭಾರಿ ಮೊತ್ತದ ಸಂಭಾವನೆ ಪಡೆದು, ಇಂತಹ ಪ್ರಾಮುಖ್ಯತೆ ಇಲ್ಲದ ಪಾತ್ರದಲ್ಲಿ ನಟಿಸುವ ಅಗತ್ಯ ಜಾನ್ವಿಗೆ ಏನಿತ್ತು ಎಂಬ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬಂದಿವೆ. ಇನ್ನು, ಇನ್ನು ಸಿನಿಮಾದ ಪ್ರಮೋಷನ್‌ಗಳಲ್ಲೂ ಜಾನ್ವಿ ಎಲ್ಲೂ ಹೆಚ್ಚಾಗಿ ಕಾಣಿಸಿಕೊಳ್ಳದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ತಮ್ಮ ಪಾತ್ರಕ್ಕೆ ಬಂದ ನೆಗೆಟಿವ್ ಫೀಡ್‌ಬ್ಯಾಕ್‌ನಿಂದಾಗಿಯೇ ಅವರು ಪ್ರಚಾರದಿಂದ ದೂರ ಉಳಿದಿದ್ದಾರೆಯೇ ಎಂಬ ಪ್ರಶ್ನೆಗಳು ಮೂಡುತ್ತಿವೆ.