ಜೀ ಕನ್ನಡದ ವಾಹಿನಿಯ ‘ಜೋಡಿ ನಂ.1’ ರಿಯಾಲಿಟಿ ಶೋಗೆ ಗ್ರ್ಯಾಂಡ್ ಫಿನಾಲೆ; ಟ್ರೋಫಿಗಾಗಿ ಪೈಪೋಟಿ ನಡೆಸುವ ಟಾಪ್ 10 ಕಪಲ್‌ಗಳ ಲಿಸ್ಟ್ ಇಲ್ಲಿದೆ
ಜೀ ಕನ್ನಡ ವಾಹಿನಿಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ‘ಜೋಡಿ ನಂ.1’ ಯಶಸ್ವಿ 14 ವಾರಗಳ ಪಯಣ ಮುಗಿಸಿ ಗ್ರ್ಯಾಂಡ್ ಫಿನಾಲೆಗೆ ಸಜ್ಜಾಗಿದೆ. ಜುಲೈ 11 ಮತ್ತು 12ರ ವಾರಾಂತ್ಯದ ರಾತ್ರಿ 9 ಗಂಟೆಗೆ ಈ ಮಹಾ ಸಂಚಿಕೆ ಪ್ರಸಾರವಾಗಲಿದ್ದು, ಕೋಟೆ ಪ್ರಭಾಕರ್, ಗೀತಾ ಭಟ್ ಸೇರಿದಂತೆ 10 ಸೆಲೆಬ್ರಿಟಿ ಜೋಡಿಗಳು ಟ್ರೋಫಿಗಾಗಿ ಪೈಪೋಟಿ ನಡೆಸಲಿದ್ದಾರೆ.
-
ಸದಭಿರುಚಿ ಹಾಗೂ ವಿನೂತನ ಕಾರ್ಯಕ್ರಮಗಳ ಮೂಲಕ ಕನ್ನಡಿಗರ ನೆಚ್ಚಿನ ವಾಹಿನಿಯಾಗಿರುವ ‘ಜೀ ಕನ್ನಡ’ ದಾಂಪತ್ಯದ ಹಿನ್ನೆಲೆಯಲ್ಲಿ ಹೊಸ ದಾಖಲೆ ಬರೆದ ತನ್ನ ರಿಯಾಲಿಟಿ ಶೋ ‘ಜೋಡಿ ನಂ.1’ ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆಗೆ ಸಜ್ಜಾಗಿದೆ. ಕಳೆದ 14 ವಾರಗಳು, 105 ದಿನಗಳ ಕಾಲ ವಿನೂತನ ಟಾಸ್ಕ್‌ಗಳು, ಭರಪೂರ ಮನರಂಜನೆ ಹಾಗೂ ಭಾವುಕತೆಯ ಕ್ಷಣಗಳ ಮೂಲಕ ಮನೆಮನ ಗೆದ್ದಿದ್ದ ಈ ರಿಯಾಲಿಟಿ ಶೋ, ಇದೀಗ ಅಂತಿಮ ಹಂತಕ್ಕೆ ತಲುಪಿದೆ.
ಜುಲೈ 11 ಮತ್ತು 12ರ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಈ ಮಹಾ ಸಂಭ್ರಮದ ಗ್ರ್ಯಾಂಡ್ ಫಿನಾಲೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. 30 ವರ್ಷದ ಹಿರಿಯ ದಾಂಪತ್ಯದ ಜೋಡಿಯಿಂದ ಹಿಡಿದು, ಈಗಷ್ಟೇ ಮದುವೆಯಾದ 3 ತಿಂಗಳ ಮುದ್ದಾದ ಜೋಡಿಗಳವರೆಗೆ ಒಟ್ಟು 10 ಸೆಲೆಬ್ರಿಟಿ ಜೋಡಿಗಳು ಈ ವೇದಿಕೆಯಲ್ಲಿ ತಮ್ಮ ಬದುಕಿನ ಸವಾಲು, ನಗು, ಅಳು, ಪ್ರೀತಿ ಮತ್ತು ಪರಸ್ಪರ ನಂಬಿಕೆಯ ಪಯಣವನ್ನು ಹಂಚಿಕೊಂಡು ಪ್ರೇಕ್ಷಕರ ಮನ ಗೆದ್ದಿದ್ದರು. ಇದೀಗ ಆ ಹತ್ತು ಜೋಡಿಗಳಲ್ಲಿ ಪ್ರತಿಷ್ಠಿತ ಚಾಂಪಿಯನ್ ಪಟ್ಟ ಯಾರ ಮುಡಿಗೆ ಏರಲಿದೆ ಎಂಬ ಕುತೂಹಲಕ್ಕೆ ಅಂತಿಮ ತೆರೆ ಬೀಳಲಿದೆ.
ತೀರ್ಪುಗಾರರು ಮತ್ತು ನಿರೂಪಕರ ಜುಗಲ್‌ಬಂದಿ
ಈ ಕಾರ್ಯಕ್ರಮದಲ್ಲಿ ನಟಿ ಮಾಳವಿಕಾ ಅವಿನಾಶ್, ಲವ್ಲಿ ಸ್ಟಾರ್ ಪ್ರೇಮ್, ರಾಜೇಶ್ ನಟರಂಗ ಹಾಗೂ ಛಾಯಾಸಿಂಗ್ ಅವರು ತೀರ್ಪುಗಾರರಾಗಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಇನ್ನು ಇಡೀ ಶೋಗೆ ಮೆರುಗು ತಂದು, ಹಾಸ್ಯ ಹಾಗೂ ಲವಲವಿಕೆಯ ಮಾತುಗಳ ಮೂಲಕ ಇಡೀ ಸೀಸನ್ ಅನ್ನು ಯಶಸ್ವಿಯಾಗಿ ಮುನ್ನಡೆಸಿದ ಕುರಿ ಪ್ರತಾಪ್ ಹಾಗೂ ಶ್ವೇತಾ ಚೆಂಗಪ್ಪ ಅವರ ನಿರೂಪಣೆ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು.
ʻಸರಿಗಮಪ ಲಿಟಲ್ ಚಾಂಪ್ಸ್ʼ ಶೋ ಆರಂಭಕ್ಕೆ ಮುಹೂರ್ತ ಫಿಕ್ಸ್: ಜೀ ಕನ್ನಡದಲ್ಲಿ ಪುಟಾಣಿಗಳ ಸ್ವರ ಸಂಭ್ರಮ
ಫೈನಲ್ ತಲುಪಿದ ಹತ್ತು ಜೋಡಿಗಳು
ಪ್ರತಿಷ್ಠಿತ ಟ್ರೋಫಿಗಾಗಿ ಪೈಪೋಟಿ ನಡೆಸಲಿರುವ ಅಂತಿಮ ಜೋಡಿಗಳ ಪಟ್ಟಿ ಹೀಗಿದೆ.
ಅಭಿಲಾಷ್ - ಅಪೂರ್ವ
ಕೋಟೆ ಪ್ರಭಾಕರ್ - ಮಾಲತಿ
ಗೀತಾ ಭಾರತಿ ಭಟ್ - ರಾಜಾರಾಮ್ ಭಟ್
ರಜಿನಿ - ಅರುಣ್
ರುದ್ರ ಮಾಸ್ಟರ್ - ನಿರೀಕ್ಷಾ
ಮಿಮಿಕ್ರಿ ಗೋಪಿ - ಉಷಾರಾಣಿ
ಧನರಾಜ್ - ಪ್ರಜ್ಞಾ
ಜಗಪ್ಪ - ಸುಶ್ಮಿತಾ
ಬಾಳು ಬೆಳಗುಂದಿ - ಮಾಲಾಶ್ರೀ
ನಯನ - ಸುಹಾಸ್
ಅದ್ಭುತ ಸಂಚಿಕೆಗಳು, ರೋಚಕ ಟಾಸ್ಕ್‌ಗಳು ಹಾಗೂ ಭಾವನಾತ್ಮಕ ಕ್ಷಣಗಳೊಂದಿಗೆ ನಗು ಮತ್ತು ಅಚ್ಚರಿ ಮೂಡಿಸಲಿರುವ ‘ಜೋಡಿ ನಂ.1’ ಗ್ರ್ಯಾಂಡ್ ಫಿನಾಲೆಯ ಅದ್ದೂರಿ ಮನರಂಜನೆಯನ್ನು ಕಣ್ತುಂಬಿಕೊಳ್ಳಲು ಕಿರುತೆರೆ ವೀಕ್ಷಕರು ಕಾಯುತ್ತಿದ್ದಾರೆ.