ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Karisma Kapoor: ಮಾಜಿ ಪತಿಯ ಆಸ್ತಿಯಲ್ಲಿ ಸಮಪಾಲು ಸಿಗಲು ಹೈಕೋರ್ಟ್ ಮೊರೆಹೋದ ನಟಿ ಕರಿಷ್ಮಾ ಕಪೂರ್

ನಟಿ ಕರಿಷ್ಮಾ ಕಪೂರ್ ತಮ್ಮ ಮಕ್ಕಳಾದ ಸಮೈರಾ ಮತ್ತು ಕಿಯಾನ್ ಪರವಾಗಿ ದಿವಂಗತ ಮಾಜಿ ಪತಿ, ಉದ್ಯಮಿ ಸಂಜಯ್ ಕಪೂರ್ ಅವರ ಆಸ್ತಿಯಲ್ಲಿ ಪಾಲು ಪಡೆಯಲು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಸಂಜಯ್ ಅವರ ಮೂರನೇ ಪತ್ನಿ, ಪ್ರಿಯಾ ಸಚ್‌ದೇವ್ ವಿಲ್ ಅನ್ನು ನಕಲಿ ಮಾಡಿದ್ದಾರೆ. ಈ ವಿಲ್‌ ಕಾನೂನುಬದ್ಧ ಸಹಿಯನ್ನು ಹೊಂದಿಲ್ಲ, ಅದನ್ನು ಸಂಪೂರ್ಣ ನಕಲಿ ಮಾಡಲಾಗಿದೆ ಎಂದು ಪ್ರಿಯಾ ವಿರುದ್ಧ ದೆಹಲಿ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದಾರೆ.

ಮಾಜಿ ಪತಿಯಿಂದ ಆಸ್ತಿ ಪಡೆಯಲು ಹೈಕೋರ್ಟ್ ಮೆಟ್ಟಿಲೇರಿದ ಕರಿಷ್ಮಾ

Karisma Kapoor -

Profile Pushpa Kumari Sep 10, 2025 2:37 PM

ನವದೆಹಲಿ: ಬಾಲಿವುಡ್ ನ ಖ್ಯಾತ ನಟಿ ಕರಿಷ್ಮಾ ಕಪೂರ್ (Karisma Kapoor) ಅವರ ಮಾಜಿ ಪತಿ ಸಂಜಯ್ ಕಪೂರ್ (Sunjay Kapur) ಇತ್ತೀಚೆಗೆ ಅಕಾಲಿಕ ಮರಣ ಹೊಂದಿದ್ದಾರೆ. ಸಂಜಯ್ ಕಪೂರ್ ಆಟೋ ಮೋಟಿವ್ ಬಿಡಿಭಾಗ ಉತ್ಪಾದನಾ ಸಂಸ್ಥೆಯಾದ ಸೋನಾ ಕಮ್ ಸ್ಟಾರ್‌ನ ಅಧ್ಯಕ್ಷರಾಗಿದ್ದರು. ಈ ಕಂಪನಿ ಪ್ರಪಂಚದಲ್ಲೇ ತನ್ನ ಪ್ರಾಬಲ್ಯ ಹೊಂದಿದೆ. ಕಂಪನಿಯ ಶೇರ್ ವ್ಯವಹಾರವೆಲ್ಲ ಬಹುತೇಕ ಸಂಜಯ್ ಅವರದ್ದೇ ಆಗಿದೆ. ಹೀಗಾಗಿ ಸಂಜಯ್ ಕಪೂರ್ ಮನೆಯಲ್ಲಿ ಆಸ್ತಿ ವಿವಾದ ಏರ್ಪಡುತ್ತಲೇ ಇದೆ. ಸಂಜಯ್ ಅವರ ಸಹೋದರಿ ಮಂದಿರಾ ಕಪೂರ್ ಮತ್ತು ಸಂಜಯ್ ಅವರ ಮೂರನೇ ಪತ್ನಿ ಪ್ರಿಯಾ ಸಚ್‌ ದೇವ್ ಸೇರಿದಂತೆ ಅನೇಕರು ಆಸ್ತಿಯಲ್ಲಿ ಪಾಲುಬೇಕು ಎಂದು ಪಟ್ಟು ಹಿಡಿದಿದ್ದಾರೆ. ಇದೀಗ ನಟಿ ಕರಿಷ್ಮಾ ಕಪೂರ್ ಕೂಡ ಆಸ್ತಿಯಲ್ಲಿ ಪಾಲು ನೀಡುವಂತೆ ದೆಹಲಿ ಹೈಕೋರ್ಟ್‌ಗೆ ಮನವಿಯನ್ನು ಸಲ್ಲಿಸಿದ್ದಾರೆ ಎಂಬ ಮಾಹಿತಿಯೊಂದು ಸೋಶಿ ಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ತಮ್ಮ ಮಕ್ಕಳಿಗೆ ಆಸ್ತಿಯಲ್ಲಿ ಸಮಪಾಲು ಬೇಕು ಎಂದು ದೆಹಲಿಯ ಕೋರ್ಟ್‌ನಲ್ಲಿ ಅವರು ಅಪೀಲು ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.

ಕರಿಷ್ಮಾ ಕಪೂರ್ ತಮ್ಮ ಮಕ್ಕಳಾದ ಸಮೈರಾ ಮತ್ತು ಕಿಯಾನ್ ಪರವಾಗಿ ದಿವಂಗತ ಮಾಜಿ ಪತಿ, ಉದ್ಯಮಿ ಸಂಜಯ್ ಕಪೂರ್ ಅವರ ಆಸ್ತಿಯಲ್ಲಿ ಪಾಲು ಪಡೆಯಲು ನ್ಯಾಯಾಲಯದ ಮೊರೆ ಹೋಗಿದ್ದಾರೆ. ನಟಿ ಕರಿಷ್ಮಾ ತಮ್ಮ ಇಬ್ಬರೂ ಮಕ್ಕಳ ಹೆಸರಿನಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸಂಜಯ್ ಅವರ ಮೂರನೇ ಪತ್ನಿ, ಪ್ರಿಯಾ ಸಚ್‌ದೇವ್ ಅವರು ಸಂಜಯ್ ಅವರ ವಿಲ್ ಅನ್ನು ನಕಲಿ ಮಾಡಿದ್ದಾರೆ. ಸಂಜಯ್ ಮಾಡಿದ ವಿಲ್‌ನಲ್ಲಿ ಕಾನೂನು ಬದ್ಧ ಸಹಿಯನ್ನು ಇಲ್ಲ, ಅದನ್ನು ಸಂಪೂರ್ಣ ನಕಲಿ ಮಾಡಲಾಗಿದೆ ಎಂದು ಪ್ರಿಯಾ ವಿರುದ್ಧ ದೆಹಲಿ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದಾರೆ.

ಆಸ್ತಿ ವಿಭಜನೆ, ಖಾತೆಗಳ ಸಂಪೂರ್ಣ ಮಾಹಿತಿಯನ್ನು ಪ್ರಿಯಾ ತಮಗೆ ನೀಡಲು ನಿರಾಕರಿಸಿದ್ದಾರೆ. ಮಕ್ಕಳಿಗೆ ಆಸ್ತಿಯ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ಅವರು ವಾದಿಸುತ್ತಿದ್ದಾರೆ. ಪ್ರಿಯಾ ಅವರು ಸಂಜಯ್ ವಿಲ್‌ನ ಮೂಲ ಪ್ರತಿಯನ್ನು ಇದುವರೆಗೂ ತೋರಿಸಿಲ್ಲ ಅಥವಾ ಅದರ ಪ್ರತಿಯನ್ನು ಕೂಡ ಒದಗಿಸಿಲ್ಲ ಎಂದು ಕರಿಷ್ಮಾ ತಮ್ಮ ಮಕ್ಕಳ ಪರವಾಗಿ ಹೂಡಿದ್ದ ಪ್ರಕರಣದಲ್ಲಿ ಉಲ್ಲೇಖಿಸಿದ್ದಾರೆ. ಈ ಮೂಲಕ ಕಾನೂನು ಪ್ರಕಾರವೇ ದಾಖಲೆಯ ಪ್ರತಿಯನ್ನು ನೀಡುವಂತೆ ವಿನಂತಿಸಿದ್ದಾರೆ.

ಇದನ್ನು ಓದಿ:Hello 123 Movie: ʼಹಲೋ 123' ಮೂಲಕ ಸ್ಯಾಂಡಲ್‌ವುಡ್‌ಗೆ ಭುವನ್‌ ಪೊನ್ನಣ್ಣ ರೀ ಎಂಟ್ರಿ; ಯೋಗರಾಜ್‌ ಭಟ್‌ ಸಾಥ್‌

ಇದರ ಜತೆಗೆ ಸಂಜಯ್ ಅವರ ಮೂರನೇ ಪತ್ನಿ ಪ್ರಿಯಾ ಸಚ್‌ದೇವ್ ಕೂಡ ತಮ್ಮ ಪತಿಯ ಮರಣದ ನಂತರ ಆಸ್ತಿಗಾಗಿ ಅನೇಕ ದಾಖಲೆ ಮುಂದಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರಿಯಾ ಅವರ ಪುತ್ರಿ ಸಫೀರಾ ತಮ್ಮ 'ಚತ್ವಾಲ್' ಎಂಬ ಉಪನಾಮವನ್ನು 'ಕಪೂರ್' ಎಂದು ಬದಲಾಯಿಸಿದ್ದಾರೆ ಎಂದು ಕೂಡ ವರದಿಯಾಗಿದೆ. ಇದು ಕೇವಲ ಸಾಂಕೇತಿಕವಾಗಿರದೆ, ಆನುವಂಶಿಕ ಆಧಾರದ ಮೇಲೆ ಆಸ್ತಿಯಲ್ಲಿ ತನ್ನ ಪಾಲನ್ನು ಪಡೆಯಬೇಕೆಂಬ ಕಾರಣಕ್ಕೆ ಈ ಕಾರ್ಯತಂತ್ರ ಮಾಡಿರಬಹುದು ಎಂದು ಹೇಳಲಾಗುತ್ತಿದೆ.

ಸಂಜಯ್ ಹೆಸರಲ್ಲಿ ಬರೋಬ್ಬರಿ 30,000 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಆಸ್ತಿ ಇದೆ ಎಂದು ಹೇಳಲಾಗುತ್ತಿದೆ. ಈ ವರ್ಷದ ಜೂನ್ 12ರಂದು ಲಂಡನ್‌ನಲ್ಲಿ ಪೋಲೊ ಆಡುವಾಗ ಅವರು ನಿಧನರಾದರು. ಸಂಜಯ್ ತಾಯಿ, ಸಹೋದರಿ, ಮೂರನೇ ಪತ್ನಿ ಆಸ್ತಿಗಾಗಿ ತಕರಾರು ಎತ್ತಿದ್ದರು. ಈಗ ಕರಿಷ್ಮಾ ಕೂಡ ತಮ್ಮ ಮಕ್ಕಳಿಗೂ ಆಸ್ತಿ ಪಾಲು ನೀಡುವಂತೆ ಮನವಿ ಮಾಡಿದ್ದಾರೆ.‌ ಸಂಜಯ್ ಕಪೂರ್ ಆಸ್ತಿಯನ್ನು ಸಮಾನವಾಗಿ ಹಂಚುವಂತೆ ಕೂಡ ಕೇಳಿಕೊಂಡಿದ್ದಾರೆ ಎನ್ನಲಾಗಿದೆ.