Pragya Jaiswal: ವೈಟ್ ಬಾಡಿಸೂಟ್ನಲ್ಲಿ ಪ್ರಗ್ಯಾ ಜೈಸ್ವಾಲ್ ಸೆಕ್ಸಿ ಲುಕ್; ಪಡ್ಡೆ ಹುಡುಗರು ಫಿದಾ
Pragya Jaiswal Look: ನಟಿ ಪ್ರಗ್ಯಾ ಜೈಸ್ವಾಲ್ ತನ್ನ ಅಧ್ಬುತ ಫ್ಯಾಷನ್ ಲುಕ್ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಮತ್ತೊಮ್ಮೆ ಸದ್ದು ಮಾಡಿದ್ದಾರೆ. ತೆಲುಗು ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಅವರು ಈ ಬಾರಿ ಬಿಳಿ ಬಣ್ಣದ ಹಾಟ್ ಬಾಡಿಸೂಟ್ನಲ್ಲಿ ಫೋಟೊಶೂಟ್ ಮಾಡಿಕೊಂಡಿದ್ದು ಅಭಿಮಾನಿಗಳು ಫಿದಾ ಆಗಿದ್ದಾರೆ.

Pragya Jaiswal -


ಬಿಗ್ ಬಾಸ್ ಖ್ಯಾತಿಯ ಅಭಿಜಿತ್ ಅಭಿನಯದ 'ಮಿರ್ಚಿ ಲಾಂಟಿ ಕುರ್ರಾಡು' ಚಿತ್ರದ ಮೂಲಕ ಟಾಲಿವುಡ್ಗೆ ಪ್ರಗ್ಯಾ ಜೈಸ್ವಾಲ್ ಎಂಟ್ರಿ ನೀಡಿದರು. ತೆಲುಗಿನ ಹಲವು ಸ್ಟಾರ್ ನಟರೊಂದಿಗೆ ತೆರೆಹಂಚಿ ಕೊಂಡಿರುವ ಪ್ರಗ್ಯಾ ʼಅಖಂಡʼ ಸಿನಿಮಾದಲ್ಲಿ ಬಾಲಕೃಷ್ಣ ಜತೆಗೂ ನಟಿಸಿ ಗಮನ ಸೆಳೆದರು.

ಪ್ರಗ್ಯಾ ಜೈಸ್ವಾಲ್ ಸಿನಿಮಾ ಅಲ್ಲದೆ ತಮ್ಮ ಫ್ಯಾಷನ್ ಮತ್ತು ಗ್ಲಾಮರ್ನಿಂದಲೂ ಜನಪ್ರಿಯರಾಗಿದ್ದಾರೆ. ಸದ್ಯ ಅವರ ಹೊಸ ಗ್ಲಾಮರಸ್ ಫೋಟೊಶೂಟ್ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದ್ದು ಲೈಕ್ಸ್, ಕಮೆಂಟ್ಗಳ ಸುರಿಮಳೆಯೇ ಆಗುತ್ತಿದೆ.

ಪ್ರಗ್ಯಾ ಜೈಸ್ವಾಲ್ ಬಿಳಿ ಬಣ್ಣವಿರುವ ಡೀಪ್ ನೆಕ್ಲೈನ್ನ ಬಾಡಿಸೂಟ್ ಧರಿಸಿದ್ದಾರೆ. ಇದಕ್ಕೆ ಮ್ಯಾಚಿಂಗ್ ಆಗುವಂತೆ ಬಿಳಿ ಓವರ್ಕೋಟ್ ಮತ್ತು ನ್ಯೂಡ್ ಬಣ್ಣದ ಹೀಲ್ಸ್ ಹಾಕಿ ಬಹಳ ಸ್ಟೈಲಿಶ್ ಆಗಿ ಕಂಡಿದ್ದಾರೆ.

ಈ ಸೆಕ್ಸಿ ಲುಕ್ಗೆ ಗೋಲ್ಡ್ ಬ್ಯಾಂಗಲ್ಸ್ ಮತ್ತು ಮಿನಿಮಲ್ ಮೇಕಪ್ ಪರ್ಫೆಕ್ಟ್ ಆಗಿ ಮ್ಯಾಚ್ ಆಗಿದೆ. 'ಲಾಂಗ್ ಸ್ಟೋರಿ ಶಾರ್ಟ್' ಎಂದು ಈ ಫೋಟೊಗಳಿಗೆ ಕ್ಯಾಪ್ಷನ್ ನೀಡಿದ್ದು ಈ ಪೋಸ್ಟ್ಗೆ ನೆಟ್ಟಿಗರು 'ವೆರಿ ಹಾಟ್' ಮತ್ತು 'ಸೆಕ್ಸಿ' ಎಂದು ಕಮೆಂಟ್ ಮಾಡಿದ್ದಾರೆ.

ಪ್ರಗ್ಯಾ ಜೈಸ್ವಾಲ್ ಮಾಡೆಲ್ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದಾರೆ. ವರುಣ್ ತೇಜ್ ಅವರೊಂದಿಗೆ ನಟಿಸಿದ್ದ'ಕಂಚೆ' ಚಿತ್ರದ ಅವರಿಗೆ ದೊಡ್ಡ ಬ್ರೇಕ್ ನೀಡಿತು. ಈ ಚಿತ್ರಕ್ಕಾಗಿ ಹಲವು ಪ್ರಶಸ್ತಿಗಳನ್ನು ಸಹ ಗಿಟ್ಟಿಸಿಕೊಂಡಿದ್ದಾರೆ.

ʼʼಅಖಂಡ, ʼಜಯ ಜಾನಕಿ ನಾಯಕʼ ಮತ್ತು ʼದಾಕು ಮಹಾರಾಜ್ʼನಂತಹ ಹಿಟ್ ತೆಲುಗು ಚಿತ್ರಗಳಲ್ಲಿ ಇವರು ಕಾಣಿಸಿಕೊಂಡಿದ್ದಾರೆ. ಸಿನಿಮಾಗಳ ಹೊರತಾಗಿ, ತಮ್ಮ ಗ್ಲಾಮರಸ್ ಫ್ಯಾಷನ್ ಸೆನ್ಸ್ ಮತ್ತು ಸ್ಟೈಲಿಶ್ ಲುಕ್ನಿಂದಲೂ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ.