ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Katrina Kaif: ಕತ್ರಿನಾ ಕೈಫ್ ಬಾಡಿ ಶೇಮಿಂಗ್: ನಟಿಯ ಬೆಂಬಲಕ್ಕೆ ನಿಂತ ರಮ್ಯಾ

Katrina Kaif: ತಾಯಿ ಆಗಿರುವ ಕತ್ರಿನಾ ಕೈಫ್ ಸಹಜವಾಗಿ ಅವರ ತೂಕ ಏರಿಕೆಯಾಗಿದ್ದು, ಇತ್ತೀಚೆಗೆ ಅಂಬಾನಿ ನಿವಾಸದ ಗಣೇಶೋತ್ಸವಕ್ಕೆ ಪತಿ ವಿಕ್ಕಿ ಕೌಶಲ್ ಜೊತೆ ಆಗಮಿಸಿದ್ದ ವೇಳೆ ಅವರು ಕ್ಯಾಮೆರಾ ಕಣ್ಣುಗಳಿಗೆ ಪೋಸ್ ಕೊಟ್ಟಿದ್ದರು. ಕತ್ರಿನಾ ಅವರ ದೇಹಾಕಾರವನ್ನು ಟೀಕೆ ಮಾಡಿದ್ದರು. ಇದೀಗ ನಟಿ, ಮಾಜಿ ಸಂಸದೆ ರಮ್ಯಾ ಸಹ ಕತ್ರಿನಾ ಕೈಫ್ ಪರವಾಗಿ ಪೋಸ್ಟ್ ಹಂಚಿಕೊಂಡು ಅವರಿಗೆ ಬೆಂಬಲ ಸೂಚಿಸಿದ್ದಾರೆ.

ಕತ್ರಿನಾ ಕೈಫ್ ಬಾಡಿ ಶೇಮಿಂಗ್: ನಟಿಯ ಬೆಂಬಲಕ್ಕೆ ನಿಂತ ರಮ್ಯಾ

ಕತ್ರಿನಾ ಕೈಫ್‌ -

Yashaswi Devadiga
Yashaswi Devadiga Sep 18, 2026 9:01 PM

ತಾಯಿ ಆಗಿರುವ ಕತ್ರಿನಾ ಕೈಫ್ (Katrina Kaif) ಸಹಜವಾಗಿ ಅವರ ತೂಕ ಏರಿಕೆಯಾಗಿದ್ದು, ಇತ್ತೀಚೆಗೆ ಅಂಬಾನಿ ನಿವಾಸದ ಗಣೇಶೋತ್ಸವಕ್ಕೆ ಪತಿ ವಿಕ್ಕಿ ಕೌಶಲ್ ಜೊತೆ ಆಗಮಿಸಿದ್ದ ವೇಳೆ ಅವರು ಕ್ಯಾಮೆರಾ ಕಣ್ಣುಗಳಿಗೆ ಪೋಸ್ ಕೊಟ್ಟಿದ್ದರು. ಕತ್ರಿನಾ ಅವರ ದೇಹಾಕಾರವನ್ನು ಟೀಕೆ ಮಾಡಿದ್ದರು. ಇದೀಗ ನಟಿ, ಮಾಜಿ ಸಂಸದೆ ರಮ್ಯಾ (Ramya) ಸಹ ಕತ್ರಿನಾ ಕೈಫ್ ಪರವಾಗಿ ಪೋಸ್ಟ್ ಹಂಚಿಕೊಂಡು ಅವರಿಗೆ ಬೆಂಬಲ ಸೂಚಿಸಿದ್ದಾರೆ.

ನಟಿ ಮತ್ತು ಮಾಜಿ ಸಂಸದೆ ರಮ್ಯಾ ಅವರು ತಮ್ಮ ಎಕ್ಸ್ ಖಾತೆಯ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ʻಪ್ರೈಮ್ ಹಂತʼ (ಅತ್ಯುತ್ತಮ ಹಂತ) ಮತ್ತು ʻಮುಕ್ತಾಯದ ಹಂತʼ ಎಂದು ವಿಂಗಡಿಸಿ ಪೋಸ್ಟ್ ಹಾಕುವ ವಿಚಾರದ ವಿರುದ್ಧ ಅವರು ಕಿಡಿಕಾರಿದ್ದಾರೆ. , ‘ಆಕೆಯ ‘ಪ್ರೈಮ್’ (ವೃತ್ತಿಯ ಉತ್ತುಂಗ) ಯಾವುದು? ಮಹಿಳೆ ಎಕ್ಸ್​​ಪೈರಿ ಡೇಟ್​​ ಜೊತೆಗೆ ಬರುತ್ತಾಳೇನು? ಮಹಿಳೆಯ ದೇಹ ಬದಲಾಗುತ್ತಿರುತ್ತದೆ. ಗರ್ಭಾವಸ್ಥೆ, ಹೆರಿಗೆಯ ಬಳಿಕ, ಋತುಸ್ರಾವ ನಿಲ್ಲುವ ಸಂದರ್ಭ ಹೀಗೆ ಬೇರೆ ಬೇರೆ ಸಂದರ್ಭದಲ್ಲಿ ದೇಹದ ಪರಿಸ್ಥಿತಿ ಬದಲಾಗುತ್ತಲೇ ಇರುತ್ತದೆ. ಹಾಗೆಂದು ಅದು ಆಕೆಯ ಪತನ ಅಲ್ಲ ಬದಲಿಗೆ ಆಕೆ ಬದುಕುವ ಶೈಲಿಯೇ ಅದು. ‘ಪೈಂ’ ಎಂದು ನೀವು ಕರೆಯುತ್ತಿರುವುದು ನಿಜವಾಗಿಯೂ ಪ್ರೈಂ ಅಲ್ಲ. ಸಪೂರ ಸೊಂಟ ಇದ್ದೊಡನೆ ಅದು ನಟಿಯೊಬ್ಬಳ ಉತ್ತುಂಗದ ಸಮಯ ಎಂದೇನೂ ಅಲ್ಲ’ ಎಂದಿದ್ದಾರೆ ನಟಿ.

ಇದನ್ನೂ ಓದಿ: Amruthadhaare Serial: ಹೊಸ ರೂಪ - ಹೊಸ ತಿರುವು! ಭೂಮಿಕಾ ಪ್ರತಿರೂಪ, ಯಾರಿದು ದೀಪಿಕಾ ?



. ʼಅತ್ಯುತ್ತಮ ಹಂತʼ ಎಂದರೆ ಕೇವಲ ಸಣ್ಣ ಸೊಂಟದ ಅಳತೆಯಲ್ಲ; ಅದು ಶಕ್ತಿ, ವಿವೇಕ, ಕೆಲಸ, ಸಂತೋಷ ಮತ್ತು ಆಕೆ ಕಟ್ಟಿಕೊಂಡಿರುವ ಎಲ್ಲವೂ ಆಗಿದೆ. ಕತ್ರಿನಾ ಸದ್ಯ ತಮ್ಮ ಅತ್ಯುತ್ತಮ ಹಂತದಲ್ಲಿದ್ದಾರೆ. ಪ್ರತಿಯೊಬ್ಬ ಮಹಿಳೆಯೂ ಹುಟ್ಟಿದ ದಿನದಿಂದ ಹಿಡಿದು ಜೀವನದ ಕೊನೆಯ ದಿನದವರೆಗೂ ಅತ್ಯುತ್ತಮ ಹಂತದಲ್ಲಿಯೇ ಇರುತ್ತಾಳೆ ಎಂದಿದ್ದಾರೆ.

ಆದರೆ ಅವಳ ಬ್ಯಾಂಕ್ ಬ್ಯಾಲೆನ್ಸ್ ನೋಡಿ” ಎನ್ನುವವರಿಗೆ — ಹಣ ಕಡಿಮೆ ಇರುವ ಮಹಿಳೆಯನ್ನು ದೇಹದ ಬಗ್ಗೆ ಅವಮಾನಿಸಬಹುದೇ? ಅಥವಾ “ಅವಳಿಗೆ ಮಗು ಆಗಿದೆ, ಆದ್ದರಿಂದ ತೂಕ ಸರಿ” ಎಂದರೆ ಮಗು ಆಗಿರದಿದ್ದರೆ ಸರಿಯಾಗುತ್ತಿರಲಿಲ್ಲವೇ? ಇದು ಎಂಥಾ ಬಕವಾಸ್ ಸಮರ್ಥನೆ?ಮಹಿಳೆಯ ದೇಹಕ್ಕೆ ಬ್ಯಾಂಕ್ ಬ್ಯಾಲೆನ್ಸ್ ಬೇಕಾಗಿಲ್ಲ, ಅಥವಾ ಅವಮಾನ ಮಾಡಬಾರದು ಎಂದು ಹೇಳಲು ಯಾವುದೇ ಕಾರಣವೂ ಬೇಕಾಗಿಲ್ಲ.

ಇದನ್ನೂ ಓದಿ: Bigg Boss Kannada 13: ಟಾಸ್ಕ್‌ನಲ್ಲಿ ಮೋಸ ಮಾಡಿದ್ರಾ ಗಗನ್‌ ಚಿನ್ನಪ್ಪ?

ಯಾವುದೇ ಷರತ್ತುಗಳಿಲ್ಲ, ಯಾವುದೇ ವಿನಾಯಿತಿಗಳಿಲ್ಲ. ದೇಹದ ಆಕಾರವನ್ನು ನೋಡಿ ಅವಮಾನಿಸುವುದು ತಪ್ಪು. ಅಷ್ಟೇ ಎಂದು ರಮ್ಯಾ ತಮ್ಮ ಪೋಸ್ಟ್ ನಲ್ಲಿ ಸ್ಪಷ್ಪಪಡಿಸಿದ್ದಾರೆ.