ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Billa Ranga Baasha: ಬಹುನಿರೀಕ್ಷಿತ ʼಬಿಲ್ಲ ರಂಗ ಭಾಷʼದ ಶೂಟಿಂಗ್‌ ಆರಂಭ; ಕಿಚ್ಚ ಸುದೀಪ್‌ ಹೊಸ ಅವತಾರಕ್ಕೆ ಫ್ಯಾನ್ಸ್‌ ಫಿದಾ

Kichcha Sudeepa: 2022ರಲ್ಲಿ ತೆರೆಕಂಡ ವಿಕ್ರಾಂತ್‌ ರೋಣದ ಯಶಸ್ಸಿನ ಬಳಿಕ ನಿರ್ದೇಶಕ ಅನೂಪ್‌ ಭಂಡಆರಿ ಮತ್ತು ಕಿಚ್ಚ ಸುದೀಪ್‌ ಮತ್ತೊಮ್ಮೆ ಒಂದಾಗುತ್ತಿರುವ ʼಬಿಲ್ಲ ರಂಗ ಭಾಷʼ ಸಿನಿಮಾದ ಶೂಟಿಂಗ್‌ ಆರಂಭವಾಗಿದೆ. ಸುದೀಪ್‌ ಪೋಸ್ಟರ್‌ ಹಂಚಿಕೊಂಡಿದ್ದು, ಫ್ಯಾನ್ಸ್‌ ಫಿದಾ ಆಗಿದ್ದಾರೆ.

ಸುದೀಪ್‌ ನಟನೆಯ ಬಹುನಿರೀಕ್ಷಿತ  ʼಬಿಲ್ಲ ರಂಗ ಭಾಷʼದ ಶೂಟಿಂಗ್‌ ಆರಂಭ

Profile Ramesh B Apr 16, 2025 1:28 PM

ಬೆಂಗಳೂರು: ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಮತ್ತೊಮ್ಮೆ ಸ್ಯಾಂಡಲ್‌ವುಡ್‌ ಸದ್ದು ಮಾಡಲು ಸಜ್ಜಾಗಿದೆ. ಬಹುನಿರೀಕ್ಷಿತ ಕಿಚ್ಚ ಸುದೀಪ್‌ (Kichcha Sudeepa) ನಟನೆಯ ʼಬಿಲ್ಲ ರಂಗ ಭಾಷʼ (Billa Ranga Baasha)ದ ಚಿತ್ರೀಕರಣ ಆರಂಭವಾಗಿದೆ. ʼವಿಕ್ರಾಂತ್‌ ರೋಣʼದ ಯಶಸ್ಸಿನ ನಂತರ ಅನೂಪ್‌ ಭಂಡಾರಿ (Anup Bhandari) ಮತ್ತು ಸುದೀಪ್‌ ಮತ್ತೊಮ್ಮೆ ಒಂದಾಗಿರುವ ಈ ಚಿತ್ರ ಘೋಷಣೆಯಾದಾಗಿನಿಂದಲೂ ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿತ್ತು. ಇದೀಗ ಕೊನೆಗೂ ಸಿನಿಮಾ ಸೆಟ್ಟೇರಿದ್ದು, ಸುದೀಪ್‌ ಹೊಸ ಪೋಸ್ಟರ್‌ ಹಂಚಿಕೊಂಡಿದ್ದಾರೆ.

ಹಿಮ ತುಂಬಿರುವ ಬೆಟ್ಟಗಳ ನಡುವೆ ಗಂಭೀರವಾಗಿ ಏನನ್ನೋ ನೋಡುತ್ತಿರುವ ಸುದೀಪ್‌ ಪೋಸ್ಟರ್‌ನಲ್ಲಿ ಗಮನ ಸೆಳೆದಿದ್ದಾರೆ. ಚಿತ್ರೀಕರಣ ಆರಂಭವಾಗಿದೆ ಎಂದು ಈ ಮೂಲಕ ಸುದೀಪ್‌ ಘೋಷಿಸಿದ್ದಾರೆ. ಅಲ್ಲಿಗೆ ಫ್ಯಾನ್ಸ್‌ ಬಹುದಿನಗಳಿಂದ ಕಾಯುತ್ತಿದ್ದ ಘಳಿಗೆ ಬಂದೇ ಬಿಟ್ಟಿದೆ.

ಕಿಚ್ಚ ಸುದೀಪ್‌ ಹಂಚಿಕೊಂಡಿರುವ ಪೋಸ್ಟರ್‌ ಇಲ್ಲಿದೆ:



ಈ ಸುದ್ದಿಯನ್ನೂ ಓದಿ: Kichcha Sudeep:‌ ಹೊಸ ಪೋಸ್ಟ್‌ ಮೂಲಕ 'ಬಿಲ್ಲ ರಂಗ ಬಾಷʼ ಸಿನಿಮಾ ಅಪ್‌ಡೇಟ್‌ ಕೊಟ್ಟ ಕಿಚ್ಚ ಸುದೀಪ್

ಮತ್ತೊಮ್ಮೆ ಒಂದಾದ ಹಿಟ್‌ ಜೋಡಿ

2022ರಲ್ಲಿ ತೆರೆಕಂಡ ʼವಿಕ್ರಾಂತ್‌ ರೋಣʼ ಚಿತ್ರ ಸುದೀಪ್‌ಗೆ ಹೊಸದೊಂದು ಇಮೇಜ್‌ ನೀಡಿತ್ತು. ಬಾಕ್ಸ್‌ ಆಫೀಸ್‌ನಲ್ಲಿ 100 ಕೋಟಿ ರೂ. ಗಳಿಸಿದ್ದಲ್ಲೇ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿತ್ತು. ಅನೂಪ್‌ ಭಂಡಾರಿ ಮತ್ತೊಮ್ಮೆ ಸಸ್ಪೆನ್ಸ್‌, ಥ್ರಿಲ್ಲರ್‌ ಕಥೆ ಹೇಳಿ ಗೆದ್ದಿದ್ದರು. ಜತೆಗೆ ಸುದೀಪ್‌ ಆ್ಯಕ್ಷನ್ ದೃಶ್ಯಗಳಲ್ಲಿಯೂ ಮಿಂಚಿದ್ದರು. ʼರಂಗಿ ತರಂಗʼದ ಮೂಲದ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟು, ಹೊಸ ಬಗೆಯ ಚಿತ್ರ ನೀಡಿ ಯಶಸ್ವಿಯಾಗಿದ್ದ ಅನೂಪ್‌, ʼವಿಕ್ರಾಂತ್‌ ರೋಣʼದಲ್ಲಿಯೂ ಪ್ರೇಕ್ಷಕರನ್ನು ರೋಮಾಂಚನಗೊಳಿಸಿದ್ದರು. ಖಡಕ್‌ ಪೊಲೀಸ್‌ ಆಫೀಸರ್‌ ಆಗಿ ಸುದೀಪ್‌ ಮತ್ತೊಮ್ಮೆ ಗಮನ ಸೆಳೆದಿದ್ದರು. ಜತೆಗೆ ನಿರೂಪ್‌ ಭಂಡಾರಿ ವಿಭಿನ್ನ ಪಾತ್ರದ ಮೂಲಕ ಸರ್‌ಪ್ರೈಸ್‌ ನೀಡಿದ್ದರು. ಹೀಗಾಗಿಯೇ ಅನೂಪ್‌ ಮತ್ತು ಸುದೀಪ್‌ ಮತ್ತೊಮ್ಮೆ ಒಂದಾಗುತ್ತಾರೆ ಎನ್ನುವಾಗಲೇ ಹೈಪ್‌ ಕಿಯೇಟ್‌ ಆಗಿತ್ತು.

ಭವಿಷ್ಯದ ಕಥೆ

ವಿಶೇಷ ಎಂದರೆ ʼಬಿಲ್ಲ ರಂಗ ಭಾಷʼದಲ್ಲಿ ಅನೂಪ್‌ ಪ್ರೇಕ್ಷಕರ ಎದುರು ಹೊಸದೊಂದು ಲೋಕವನ್ನು ತೆರೆಡಿಲಿದ್ದಾರೆ. ತಮ್ಮ ಹಿಂದಿನ ಚಿತ್ರಗಳ ಯಾವ ಛಾಯೆಯೂ ಇದರಲ್ಲಿ ಇರುವುದಿಲ್ಲ. ಪಕ್ಕಾ ಕಮರ್ಷಿಯಲ್‌ ಚಿತ್ರವನ್ನು ವಿಭಿನ್ನವಾಗಿ ಕಟ್ಟಿಕೊಡುವುದಾಗಿ ಹಿಂದೆಯೇ ಅವರು ತಿಳಿಸಿದ್ದರು. ಈ ಸೈನ್ಸ್‌ ಫಿಕ್ಷನ್‌ 2209ರ ಕಾಲಘಟ್ಟದಲ್ಲಿ ನಡೆಯಲಿದೆಯಂತೆ. ಅಂದರೆ 185 ವರ್ಷಗಳ ಬಳಿಕ ಏನಾಗಲಿದೆ ಎನ್ನುವುದನ್ನು ರೋಚಕವಾಗಿ ಅನೂಪ್‌ ಕಟ್ಟಿಕೊಡಲಿದ್ದಾರೆ. ಇದಕ್ಕಾಗಿ ಅವರು ಹಲವು ವರ್ಷಗಳ ಕಾಲ ಅಧ್ಯಯನ ನಡೆಸಿದ್ದಾರೆ. ಸಂಪೂರ್ಣ ಸಿದ್ಧರಾಗಿ ಇದೀಗ ಅಖಾಡಕ್ಕೆ ಇಳಿದಿದ್ದಾರೆ.

ಅದರ ಸೂಚನೆ ಎಂಬಂತೆ ಇದೀಗ ಮೂಡಿ ಬಂದಿರುವ ಪೋಸ್ಟರ್‌ ನೋಡಿ ಫ್ಯಾನ್ಸ್‌ ಥ್ರಿಲ್‌ ಆಗಿದ್ದಾರೆ. ಪ್ರೈಂ ಶೋ ಎಂಟರ್‌ಟೈನ್‌ಮೆಂಟ್‌ ಬ್ಯಾನರ್‌ ಅಡಿಯಲ್ಲಿ ನಿರಂಜನ್‌ ರೆಡ್ಡಿ ಮತ್ತು ಚೈತನ್ಯಾ ನಿರಂಜನ್‌ ರೆಡ್ಡಿ ʼಬಿಲ್ಲ ರಂಗ ಭಾಷʼ ಸಿನಿಮಾವನ್ನು ನಿರ್ಮಿಸಲಿದ್ದಾರೆ. ಬಹುಕೋಟಿ ರೂ. ವೆಚ್ಚದಲ್ಲಿ, ಹಾಲಿವುಡ್‌ ಶೈಲಿಯಲ್ಲಿ ಇದು ತಯಾರಾಗಲಿದೆ.

ಕೊನೆಗೂ ಸೆಟ್ಟೇರಿತು

2018ರಲ್ಲಿ ನಿರೂಪ್‌ ಅಭಿನಯದ ಅನೂಪ್‌ ನಿರ್ದೇಶನದ ʼರಾಜರಥʼ ರಿಲೀಸ್‌ ಆಗಿತ್ತು. ಈ ಚಿತ್ರಕ್ಕೆ ಸುದೀಪ್‌ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅದಾದ ಬಳಿಕ ಅನೂಪ್‌ ಸುದೀಪ್‌ ಬಳಿ ತೆರಳಿ ʼಅಶ್ವತ್ಥಾಮʼ ಮತ್ತು ʼಬಿಲ್ಲ ರಂಗ ಭಾಷʼದ ಕಥೆ ಹೇಳಿದ್ದರು. ಈ ಪೈಕಿ ಕಿಚ್ಚ ʼಬಿಲ್ಲ ರಂಗ ಬಾಷʼದ ಕಥೆಯನ್ನು ಬಹುವಾಗಿ ಮೆಚ್ಚು ಮೊದಲು ಇದನ್ನು ಮಾಡೋಣ ಎಂದು ಹೇಳಿದ್ದರು. ಆದರೆ ಬಜೆಟ್‌ ಅಧಿಕವಾಗಿದ್ದರಿಂದ ಇದು ಆಗ ಸೆಟ್ಟೇರಿರಲಿಲ್ಲ. ಹೀಗಾಗಿ ʼವಿಕ್ರಾಂತ್‌ ರೋಣʼ ತೆರೆಗೆ ಬಂದಿತ್ತು. ಇದೀಗ ಕೊನೆಗೂ ʼಬಿಲ್ಲ ರಂಗ ಭಾಷʼ ಸೆಟ್ಟೇರಿದ್ದು, ಚಿತ್ರದಲ್ಲಿ ಯಾರೆಲ್ಲ ನಟಿಸಲಿದ್ದಾರೆ ಎನ್ನುವ ವಿವರ ಸದ್ಯದಲ್ಲೇ ಹೊರ ಬೀಳಲಿದೆ.