ಕನ್ನಡಿಗರ ಹೋರಾಟಕ್ಕೆ ಸಂದ ಜಯ; ಬೆಂಗಳೂರಿಗರ ವಿರುದ್ಧ ಆಕ್ಷೇಪಾರ್ಹ ಪದ ಬಳಸಿದ ‘ಲೋಕಃʼ ಮಲಯಾಳಂ ಚಿತ್ರತಂಡದಿಂದ ಕ್ಷಮೆಯಾಚನೆ
Lokah Chapter 1: Chandra Movie: ದಕ್ಷಿಣ ಭಾರತದ ಜನಪ್ರಿಯ ನಟಿ ಕಲ್ಯಾಣಿ ಪ್ರಿಯದರ್ಶನ್ ಅಭಿನಯದ ಮಲಯಾಳಂ ಚಿತ್ರ ‘ಲೋಕಃ: ಚಾಪ್ಟರ್ 1- ಚಂದ್ರ’ ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡುತ್ತಿದೆ. ಈ ಮಧ್ಯೆ ಚಿತ್ರದಲ್ಲಿರುವ ಕನ್ನಡಿಗರಿಗೆ ಅವಮಾನ ಮಾಡುವ ಸಂಭಾಷಣೆ ವಿರುದ್ದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಚಿತ್ರತಂಡ ಕ್ಷಮೆ ಕೋರಿದೆ.

-

ಬೆಂಗಳೂರು: ‘ಲೋಕಃ: ಚಾಪ್ಟರ್ 1- ಚಂದ್ರ’ (Lokah Chapter 1: Chandra Movie) ಮಲಯಾಳಂ ಚಿತ್ರ ಸದ್ಯ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುತ್ತಿದೆ. ಚಿತ್ರ ರಿಲೀಸ್ ಆಗಿ 5 ದಿನಗಳಲ್ಲಿ ಜಾಗತಿಕವಾಗಿ 81 ಕೋಟಿ ರೂ. ದೋಚಿಕೊಂಡಿದೆ. ಸದ್ಯದಲ್ಲೇ 100 ಕೋಟಿ ರೂ. ಕ್ಲಬ್ ಸೇರಲಿದೆ. ಕಲ್ಯಾಣಿ ಪ್ರಿಯದರ್ಶನ್ (Kalyani Priyadarshan)-ನಲ್ಸನ್ (Naslen) ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಈ ಸೂಪರ್‌ಹೀರೊ ಚಿತ್ರವನ್ನು ಡೊಮನಿಕ್ ಅರುಣ್ ನಿರ್ದೇಶಿಸಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಕಂಡ ಈ ಸಿನಿಮಾದಲ್ಲಿನ ಕಲ್ಯಾಣಿ ಅಭಿನಯಕ್ಕೆ ಪ್ರೇಕ್ಷಕರು ಮನ ಸೋತಿದ್ದಾರೆ. ಈ ಚಿತ್ರದ ಶೂಟಿಂಗ್ ಬಹುತೇಕ ಬೆಂಗಳೂರಿನಲ್ಲೇ ನಡೆದಿದೆ. ಈ ಮಧ್ಯೆ ಚಿತ್ರದಲ್ಲಿ ಬೆಂಗಳೂರಿಗರಿಗೆ ಅವಮಾನ ಮಾಡುವ ಪದ ಬಳಕೆ ಆಗಿದೆ. ಅಲ್ಲದೆ, ಬೆಂಗಳೂರೆಂದರೆ ಕೇವಲ ಕ್ರೈಂ, ಪಾರ್ಟಿ, ಡ್ರಗ್ಸ್‌ಗಳಿಗೆ ಸೀಮಿತ ಎನ್ನುವ ರೀತಿ ಚಿತ್ರಿಸಲಾಗಿದೆ ಎನ್ನುವ ಆರೋಪ ಕೇಳಿ ಬಂದಿದ್ದು, ಇದಕ್ಕೆ ಕನ್ನಡಿಗರು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ ಚಿತ್ರತಂಡ ಕ್ಷಮೆ ಕೋರಿದೆ.
ಚಿತ್ರದಲ್ಲಿ ʼʼಬೆಂಗಳೂರಿನವರು ಡಗಾರ್‌ಗಳುʼʼ ಎನ್ನುವ ಪದ ಬಳಕೆ ಮಾಡಲಾಗಿತ್ತು. ಇದು ಹಲವರ ಕೆಂಗಣ್ಣಿಗೆ ಗುರಿಯಾಗಿತ್ತು. ಕನ್ನಡದ ಪ್ರತಿಭಾವಂತ ನಿರ್ದೇಶಕರಲ್ಲಿ ಒಬ್ಬರಾದ ಮಂಸೋರೆ ಮತ್ತಿತರರು ಇದರ ವಿರುದ್ಧ ಧ್ವನಿ ಎತ್ತಿದ್ದರು. ʼʼಕನ್ನಡ ಚಿತ್ರ ʼಭೀಮʼ, ಮಲಯಾಳಂನ ʼಆಫೀಸರ್ ಆನ್ ಡ್ಯೂಟಿʼ, ʼಆವೇಶಮ್ʼ ಮತ್ತು ಈಗ ‘ಲೋಕಃʼನಲ್ಲಿ ಬೆಂಗಳೂರನ್ನು ಡ್ರಗ್ಸ್ ಮತ್ತು ಅಪರಾಧಗಳ ರಾಜಧಾನಿ ಎಂದು ಬಿಂಬಿಸಲಾಗಿದೆ. ಒಂದುಕಾಲದಲ್ಲಿ ಬೆಂಗಳೂರನ್ನು ಉತ್ತಮ ನಗರವಾಗಿ ಚಿತ್ರೀಕರಿಸಲಾಗುತ್ತಿತ್ತು. ಅನಿಯಂತ್ರಿತ ವಲಸೆಯಿಂದಾಗಿ ಬೆಂಗಳೂರಿಗೆ ಇಂತಹ ಸ್ಥಿತಿ ಬಂದಿದೆʼʼ ಎಂದು ಮಂಸೋರೆ ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Kiccha Sudeepa: ಕಿಚ್ಚನ ಹುಟ್ಟು ಹಬ್ಬಕ್ಕೆ ಮತ್ತೊಂದು ಗಿಫ್ಟ್; ಬಿಲ್ಲ ರಂಗ ಬಾಷಾದ ಫಸ್ಟ್ ಲುಕ್ ರಿಲೀಸ್
According to movies like Kannada Bhima, Malayalam films Officer on Duty, Avesham, and now Lokah,Bengaluru is being portrayed as the capital of drugs and crime.Once upon a time,it was represented in movies as a beautiful town,has come to such a state due to uncontrolled migration.
— ಮಂಸೋರೆ/ManSoRe (@mansore25) September 1, 2025
ಜತೆಗೆ ಮಲಯಾಳಂ ಸಿನಿಮಾಗಳು ಹಿಂದೂಫೋಬಿಯಾವನ್ನು ಒಳಗೊಂಡಿರುತ್ತವೆ ಎಂದು ಇನ್ನೊಬ್ಬರು ಆರೋಪಿಸಿದ್ದಾರೆ. ‘ಲೋಕಃʼ ಚಿತ್ರದಲ್ಲಿಯೂ ಇದು ಪುನರಾವರ್ತನೆಯಾಗಿದೆ ಎಂದು ಹೇಳಿ ಅದಕ್ಕಿರುವ ಕಾರಣವನ್ನು ಪಟ್ಟಿ ಮಾಡಿದ್ದಾರೆ.
- ಹಿಂದೂ ರಾಜನೊಬ್ಬ ಹಿಂದೂ ದೇವಾಲಯವನ್ನು ನಾಶಪಡಿಸುತ್ತಾನೆ.
- ಕ್ರಿಶ್ಚಿಯನ್ ಮಿಷನರಿಗಳು ಆಪತ್ಬಾಂಧವರಂತೆ ಕಂಡು ಬರುತ್ತದೆ.
- ಗಣಪತಿ ವಿಗ್ರಹವನ್ನು ನೋಡಿದಾಗ ನಾಯಕಿ ಮುಖ ಸಿಂಡರಿಸುತ್ತಾಳೆ.
- ಹಿಂದೂ ದೇವರ ಫೋಟೊದ ಮುಂದೆ ಹಿಂದೂ ಖಳನಾಯಕ ತನ್ನ ತಾಯಿಯನ್ನು ಹತ್ಯೆ ಮಾಡುತ್ತಾನೆ.
Mollywood can't make a proper movie without hinduphobia !
— Revenge mode (@Pora_Babu) August 30, 2025
- Hindu king burns hindu temple
- Christian missionaries are saviours
- Actress gave a disgusting expression when she saw a vinayak idol
- Villain is a hindu who keels his mother in front of hindu god pictures #Lokah pic.twitter.com/yt08adUVxO
ದುಲ್ಖರ್ ಸಲ್ಮಾನ್ ನಿರ್ಮಾಣದ ಈ ಸಿನಿಮಾದ ವಿರುದ್ಧ ಇನ್ನೊಬ್ಬರು ಎಕ್ಸ್ ಮೂಲಕ ಕಿಡಿ ಕಾರಿದ್ದಾರೆ. ಅದಕ್ಕೆ ಕಾರಣವನ್ನೂ ನೀಡಿದ್ದಾರೆ.
- ‘ಲೋಕಃʼ ಚಿತ್ರವನ್ನು ಯಾಕಾಗಿ ಬೆಂಗಳೂರು ಮತ್ತು ಕರ್ನಾಟಕದಲ್ಲಿ ಚಿತ್ರೀಕರಿಸಲಾಗಿದೆ?
- ಮಲಯಾಳಂ ಮಾತನಾಡುವವರು ಯಾಕಾಗಿ ಅಪರಾಧ ಎಸಗುತ್ತಿಲ್ಲ?
- ಪಾತ್ರಧಾರಿಗಳೆಲ್ಲ ಯಾಕೆ ತಮಿಳು ಮಿಶ್ರಿತ ಕನ್ನಡ ಮಾತನಾಡುತ್ತಾರೆ? ಎಂದು ಪ್ರಶ್ನಿಸಿದ್ದಾರೆ.
ಹೀಗೆ ಕನ್ನಡಿಗರು ಚಿತ್ರದ ವಿರುದ್ಧ ಮುಗಿಬಿದ್ದಿದ್ದರು. ಇದೀಗ ಚಿತ್ರತಂಡ ಕೊನೆಗೂ ಕ್ಷಮೆ ಕೋರಿದ್ದು, ಕನ್ನಡಿಗರ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ.
ಸುಮಾರು 30 ಕೋಟಿ ರೂ. ಬಜೆಟ್‌ನಲ್ಲಿ ತಯಾರಾದ ಈ ಚಿತ್ರ ಮಲಯಾಳಂನ ಮೊದಲ ಮಹಿಳಾ ಸೂಪರ್ ಹೀರೊ ಸಿನಿಮಾ ಎನಿಸಿಕೊಂಡಿದೆ. ಕಲ್ಯಾಣಿ ಅಭಿನಯಕ್ಕೆ ಸೆಲೆಬ್ರಿಟಿಗಳು, ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ. ಸುಮಾರು 20 ವರ್ಷಗಳ ಬಳಿಕ ಚಂದ್ರ (ಕಲ್ಯಾಣಿ) ಸ್ವೂಡನ್‌ನಿಂದ ಬೆಂಗಳೂರಿಗೆ ಹಿಂದಿರುಗುತ್ತಾಳೆ. ಆಕೆ ಸಂಜೆ ಬೀದಿಯಲ್ಲಿ ಓಡಾಡುತ್ತಿರುವಾಗ ಸನ್ನಿ (ನಲ್ಸನ್) ಮತ್ತು ವೇಣು (ಚಂದು ಸಲೀಂ ಕುಮಾರ್) ಕಣ್ಣಿಗೆ ಬೀಳುತ್ತಾಳೆ. ಆಗ ಅವರಿಗೆ ಆಕೆಯ ಭೂತಕಾಲ ನೆನಪಿಗೆ ಬರುತ್ತದೆ. ಮುಂದೆ ಅವಳ ಜೀವನದ ನಡೆಯುವ ಘಟನೆಗಳೇ ಚಿತ್ರದ ಕಥೆ.