ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Love Mocktail 3 OTT release: ತಂದೆ-ಮಗಳ ಭಾವನಾತ್ಮಕ ಜರ್ನಿ; 'ಲವ್ ಮಾಕ್ಟೇಲ್ 3' ಒಟಿಟಿ ರಿಲೀಸ್‌ ಡೇಟ್‌ ಅನೌನ್ಸ್‌

Love Mocktail 3 OTT release: 'ಲವ್‌ ಮಾಕ್ಟೇಲ್‌' ಮೊದಲ ಸೀಕ್ವೆಲ್‌ನಲ್ಲಿ ತುಂಟಾಟ, ತರ್ಲೆ ಮಾಡಿದ್ದ ಡಾರ್ಲಿಂಗ್ ಕೃಷ್ಣ, 'ಲವ್ ಮಾಕ್ಟೇಲ್ 2'ನಲ್ಲಿ ಭಾವನಾತ್ಮಕ ಸನ್ನಿವೇಶ ಇದ್ದಿತ್ತು. ನಕುಲ್ ಅಭ್ಯಂಕರ್ ಸಂಗೀತ ಸಂಯೋಜಿಸಿದ್ದಾರೆ, ರಾಚೆಲ್ ಡೇವಿಡ್, ಅಮೃತ ಅಯ್ಯಂಗಾರ್, ಸಂವೃತಾ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕ್ರಿಸ್‌ಮಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಮಿಲನ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಇದೀಗ ಸಿನಿಮಾದ ಒಟಿಟಿ ರಿಲೀಸ್‌ ಡೇಟ್‌ ಅನೌನ್ಸ್‌ ಆಗಿದೆ.

'ಲವ್ ಮಾಕ್ಟೇಲ್ 3' ಒಟಿಟಿ ರಿಲೀಸ್‌ ಡೇಟ್‌ ಅನೌನ್ಸ್‌!

ಲವ್ ಮಾಕ್ಟೇಲ್ 3 -

Yashaswi Devadiga
Yashaswi Devadiga May 1, 2026 10:46 AM

ಡಾರ್ಲಿಂಗ್ ಕೃಷ್ಣ (Darling Krishna) ನಟಿಸಿ, ನಿರ್ದೇಶಿಸಿರುವ ಸಿನಿಮಾ 'ಲವ್ ಮಾಕ್ಟೇಲ್ 3' (Love Mocktail 3) ಮಾರ್ಚ್ 19ರಂದು ತೆರೆ ಕಂಡಿತ್ತು. 'ಲವ್ ಮಾಕ್ಟೇಲ್' ಹಾಗೂ 'ಲವ್ ಮಾಕ್ಟೇಲ್ 2' ಸೀಕ್ವೆಲ್ ಇದು. ಲವ್ ಮಾಕ್‌ಟೇಲ್ 3 ಬಾಕ್ಸ್ ಆಫೀಸ್‌ನಲ್ಲಿ ಸೂಪರ್‌ಹಿಟ್ ಆಗಿ ಹೊರಹೊಮ್ಮಿತು. . ಕ್ರಿಸ್‌ಮಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಮಿಲನ ನಾಗರಾಜ್ (Milana Nagaraj) ಮತ್ತು ಡಾರ್ಲಿಂಗ್ ಕೃಷ್ಣ (Darling Krishna) ಈ ಚಿತ್ರವನ್ನು ನಿರ್ಮಿಸಿದ್ದಾರೆ. ಇದೀಗ ಸಿನಿಮಾದ ಒಟಿಟಿ (OTT Release Date) ರಿಲೀಸ್‌ ಡೇಟ್‌ ಅನೌನ್ಸ್‌ ಆಗಿದೆ.

'ಲವ್‌ ಮಾಕ್ಟೇಲ್‌' ಮೊದಲ ಸೀಕ್ವೆಲ್‌ನಲ್ಲಿ ತುಂಟಾಟ, ತರ್ಲೆ ಮಾಡಿದ್ದ ಡಾರ್ಲಿಂಗ್ ಕೃಷ್ಣ, 'ಲವ್ ಮಾಕ್ಟೇಲ್ 2'ನಲ್ಲಿ ಭಾವನಾತ್ಮಕ ಸನ್ನಿವೇಶ ಇದ್ದಿತ್ತು. ಮೊದಲ ಲವ್ ಮಾಕ್ಟೇಲ್‌ನಲ್ಲಿ ಕೃಷ್ಣನ ತುಂಟಾಟ ನೋಡುತ್ತೇವೆ. ಲವ್‌ ಮಾಕ್ಟೇಲ್‌ 2ನಲ್ಲಿ ಕೃಷ್ಣ ಖಿನ್ನತೆಗೆ ಜಾರಿದನ್ನು ನೋಡುತ್ತೇವೆ. ಲವ್ ಮಾಕ್ಟೇಲ್ 3ನಲ್ಲಿ ಒಬ್ಬ ತಂದೆಯಾಗಿ ಡಾರ್ಲಿಂಗ್ ಕೃಷ್ಣನ ಪ್ರಬುದ್ಧತೆ ಇದೆ ಎಂದು ಸಿನಿಮಾ ನೋಡಿದವರು ಅಭಿಪ್ರಾಯ ಪಟ್ಟಿದ್ದರು.

ಇದನ್ನೂ ಓದಿ: Bellamkonda Sai Sreenivas: ತಿರುಪತಿಯಲ್ಲಿ ಹಸೆಮಣೆ ಏರಿದ ಸ್ಟಾರ್ ನಟ

ನಕುಲ್ ಅಭ್ಯಂಕರ್ ಸಂಗೀತ ಸಂಯೋಜಿಸಿದ್ದಾರೆ, ರಾಚೆಲ್ ಡೇವಿಡ್, ಅಮೃತ ಅಯ್ಯಂಗಾರ್, ಸಂವೃತಾ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದೀಗ ಈ ಸಿನಿಮಾ ಜೀ ನಲ್ಲಿ ಸ್ಟ್ರೀಮಿಂಗ್‌ ಆಗಲಿದೆ.

ಎಲ್ಲಿ ಸ್ಟ್ರೀಮಿಂಗ್‌?

ಕೆಲವು ಕಥೆಗಳು ಹೃದಯಕ್ಕೆ ಹತ್ತಿರ, ಈ ಕಥೆ ಅದಕ್ಕೂ ಮಿಗಿಲು! ‘ಲವ್ ಮಾಕ್‌ಟೇಲ್ 3’ ಅಧಿಕೃತ ಟ್ರೇಲರ್ ಈಗ ನಿಮ್ಮ ಮುಂದೆ. ಆದಿಯ ಈ ಹೊಸ ಅಧ್ಯಾಯ ಕಣ್ತುಂಬಿಕೊಳ್ಳಿ ನಿಮ್ಮ ನೆಚ್ಚಿನ Z5 ಕನ್ನಡದಲ್ಲಿ ಎಂದು ಪೋಸ್ಟ್‌ ಹಂಚಿಕೊಂಡಿದೆ. ಮೇ 8ರಿಂದ ಸ್ಟ್ರೀಮಿಂಗ್‌ ಆಗಲಿದೆ.

ಬಿಡುಗಡೆಯಾದ ಮೊದಲ ದಿನದಿಂದಲೇ ‘ಲವ್ ಮಾಕ್ಟೇಲ್ 3’ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಈ ಸಿನಿಮಾದಲ್ಲಿನ ಎಮೋಷನಲ್ ಕಥೆಗೆ ಜನರು ಫಿದಾ ಆದರು.

ಈ ಚಿತ್ರ ದಿನದಿಂದ ದಿನಕ್ಕೆ ಉತ್ತಮ ಪ್ರದರ್ಶನ ಕಂಡಿತ್ತು. . ಭಾರಿ ನಿರೀಕ್ಷೆ ಮೂಡಿಸಿದ್ದ ‘ಧುರಂಧರ್ 2’ ಚಿತ್ರದ ಎದುರು ಕನ್ನಡದ ಈ ಸಿನಿಮಾ ರಿಲೀಸ್ ಆಗಬೇಕಿತ್ತು. ಪ್ರಬಲ ಪೈಪೋಟಿಯ ನಡುವೆಯೂ ಈ ಸಿನಿಮಾ ಯಶಸ್ವಿಯಾಗಿ 25 ದಿನಗಳನ್ನು ಪೂರೈಸಿಕೊಂಡಿತ್ತು.

ಇದನ್ನೂ ಓದಿ: Deepika Padukone: ʻಕಿಂಗ್ʼ ಚಿತ್ರೀಕರಣದ ಫೋಟೋ ಲೀಕ್‌; ದೀಪಿಕಾ- ಶಾರುಖ್‌ ಜೋಡಿ ಕಂಡು ಫ್ಯಾನ್ಸ್‌ ಖುಷ್‌

ಈ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಸಂವೃತಾ, ಅಮೃತಾ ಅಯ್ಯಂಗಾರ್, ದಿಲೀಪ್ ರಾಜ್, ರೇಚಲ್ ಡೇವಿಡ್, ಶ್ವೇತಾ ಪ್ರಸಾದ್, ನಯೇರಾ, ಜಗದೀಶ್, ಗಿರಿರಾಜ್, ಅಭಿಲಾಶ್, ದಳಪತಿ ಮುಂತಾದವರು ನಟಿಸಿದ್ದಾರೆ.