ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shine Tom Chacko: ಹೋಟೆಲ್ ಕಿಟಕಿಯಿಂದ ಜಿಗಿದು ಎಸ್ಕೇಪ್‌ ಆಗಿದ್ದ ಮಲಯಾಳಂ ನಟ ಅರೆಸ್ಟ್‌- ವಿಡಿಯೋ ವೈರಲ್‌

ಮಾದಕವಸ್ತು ನಿಗ್ರಹ ದಳದ ದಾಳಿಯ ಸಮಯದಲ್ಲಿ ಕೊಚ್ಚಿಯ ಹೋಟೆಲ್ ಕೊಠಡಿಯಿಂದ ಪರಾರಿಯಾಗಿದ್ದ ಮಲಯಾಳಂ ನಟ ಶೈನ್ ಟಾಮ್ ಚಾಕೊ ಎರಡು ದಿನಗಳ ನಂತರ ಪೊಲೀಸರ ಮುಂದೆ ಹಾಜರಾಗಿದ್ದಾರೆ ಎಂದು ತಿಳಿದು ಬಂದಿದೆ. ಶೈನ್ ಟಾಮ್ ಚಾಕೊ ಬುಧವಾರ ರಾತ್ರಿ ಕೊಚ್ಚಿಯ ಹೋಟೆಲ್‌ನ ಮೂರನೇ ಮಹಡಿಯಿಂದ ಹಾರಿದ್ದಾರೆ ಎಂದು ತಿಳಿದು ಬಂದಿದೆ.

ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಟೆಲ್ ಕಿಟಕಿಯಿಂದ ಜಿಗಿದ ನಟ

Profile Vishakha Bhat Apr 19, 2025 3:05 PM

ಕೊಚ್ಚಿ: ಮಾದಕವಸ್ತು ನಿಗ್ರಹ ದಳದ ದಾಳಿಯ ಸಮಯದಲ್ಲಿ ಕೊಚ್ಚಿಯ ಹೋಟೆಲ್ ಕೊಠಡಿಯಿಂದ ಪರಾರಿಯಾಗಿದ್ದ ಮಲಯಾಳಂ ನಟ ಶೈನ್ ಟಾಮ್ ಚಾಕೊ ಎರಡು ದಿನಗಳ ನಂತರ ಪೊಲೀಸರ ಮುಂದೆ ಹಾಜರಾಗಿದ್ದಾರೆ ಎಂದು ತಿಳಿದು ಬಂದಿದೆ. ಶೈನ್ ಟಾಮ್ ಚಾಕೊ ಬುಧವಾರ ರಾತ್ರಿ ಕೊಚ್ಚಿಯ ಹೋಟೆಲ್‌ನ ಮೂರನೇ ಮಹಡಿಯಿಂದ ಹಾರಿದ್ದಾರೆ ಎಂದು ತಿಳಿದು ಬಂದಿದೆ. ಬೆಳಿಗ್ಗೆ 10ಗಂಟೆಗೆ ಶೈನ್ ಎರ್ನಾಕುಲಂ ಉತ್ತರ ಠಾಣೆಯ ಪೊಲೀಸರ ಮುಂದೆ ವಕೀಲರ ಜೊತೆ ಹಾಜರಾಗಿದ್ದಾರೆ. ವರದಿಗಳ ಪ್ರಕಾರ, ಕೊಚ್ಚಿ ನಗರ ಎಸಿಪಿ ಸಿ ಜಯಕುಮಾರ್ ನೇತೃತ್ವದ ತಂಡ ಅವರನ್ನು ವಿಚಾರಣೆ ನಡೆಸಲಿದೆ.

ಪೊಲೀಸರು ಕೋಣೆಗೆ ಪ್ರವೇಶಿಸುತ್ತಿದ್ದಂತೆ ನಟ ಎರಡನೇ ಮಹಡಿಯ ಪ್ಯಾರಪೆಟ್‌ಗೆ ಇಳಿದು ನಂತರ ಹೋಟೆಲ್‌ನ ಈಜುಕೊಳಕ್ಕೆ ಹಾರಿದ್ದಾನೆ ಎಂದು ವರದಿಯಾಗಿದೆ. ನಂತರ ಅವರು ಹೋಟೆಲ್‌ನ ಲಾಬಿಯಿಂದ ಓಡಿಹೋಗಿ ನಂತರ ನಾಪತ್ತೆಯಾಗುತ್ತಿರುವುದು ಸಿಸಿಟಿವಿಯಲ್ಲಿ ಕಂಡುಬಂದಿದೆ. ನಟನ ಕೋಣೆಯಲ್ಲಿ ಯಾವುದೇ ಮಾದಕ ದ್ರವ್ಯಗಳು ಪತ್ತೆಯಾಗಿಲ್ಲವಾದರೂ, ಅವರು ಆ ರೀತಿ ಹೆದರಿ ಓಡಿ ಹೋಗಿದ್ದರಿಂದ ಪೊಲೀಸರು ಅನುಮಾನಗೊಂಡು ಸಮನ್ಸ್ ಜಾರಿ ಮಾಡಬಹುದು ಎಂದು ಊಹಿಸಲಾಗಿದೆ. ನಟ ಮಾದಕ ದ್ರವ್ಯ ಸೇವಿಸಿಬಹುದು ಎಂದು ಊಹಿಸಲಾಗಿದೆ.



ಜಿಲ್ಲಾ ಮಾದಕ ದ್ರವ್ಯ ವಿರೋಧಿ ವಿಶೇಷ ಕ್ರಿಯಾ ಪಡೆ (DANSAF) ತಂಡ ನಡೆಸಿದ ತಪಾಸಣೆಯ ಸಮಯದಲ್ಲಿ ಈ ಘಟನೆ ನಡೆದಿದೆ. ಈ ಮೊದಲು ʼಸೂತ್ರವಾಕ್ಯಂ' ಚಿತ್ರದ ಸೆಟ್‌ನಲ್ಲಿ ತಮ್ಮೊಂದಿಗೆ ಅಸಭ್ಯವಾಗಿ ವರ್ತಿಸಿದ್ದರು ಎಂದು ನಟಿ ವಿನ್ಸಿ ಅಲೋಶಿಯಸ್ ಮಲಯಾಳಂ ಚಲನಚಿತ್ರ ಮಂಡಳಿಗೆ ಶೈನ್‌ ವಿರುದ್ಧ ದೂರು ನೀಡಿದ್ದರು.

ಈ ಸುದ್ದಿಯನ್ನೂ ಓದಿ: Drugs Seized : ಗುಜರಾತ್ ಕರಾವಳಿಯಲ್ಲಿ 1800 ಕೋಟಿ ರೂ. ಮೌಲ್ಯದ 300 ಕೆಜಿ ಮಾದಕ ವಸ್ತುಗಳು ವಶ

ಏತನ್ಮಧ್ಯೆ, ಶೈನ್ ತಾಯಿ ಮಾರಿಯಾ ಮಾಧ್ಯಮಗಳಿಗೆ ತಮ್ಮ ಮಗ ಭಯದಿಂದ ಓಡಿಹೋಗಿರಬಹುದು ಎಂದು ಹೇಳಿದರು. "ಅವರು (DANSAF ತಂಡ) ಅವನ ಕೋಣೆಯಲ್ಲಿ ಏನಾದರೂ ಕಂಡಿದೆಯೇ? ಇಲ್ಲ. ಸುಮ್ಮನೇ ಆಪಾದನೆ ಮಾಡಲಾಗುತ್ತಿದೆ. ಆತ ಭಯಭೀತನಾಗಿರಬಹುದು ಎಂದು ಅವರು ಹೇಳಿದ್ದಾರೆ. ಮಾದಕ ದ್ರವ್ಯಗಳನ್ನು ಹೊಂದಿದ್ದ ಆರೋಪದ ಮೇಲೆ ಶೈನ್ ಅವರನ್ನು 2015 ರಲ್ಲಿ ಬಂಧಿಸಲಾಗಿತ್ತು. ಫೆಬ್ರವರಿ 2025 ರಲ್ಲಿ, ಶೈನ್ ಮತ್ತು ಇತರ ಎಲ್ಲಾ ಆರೋಪಿಗಳನ್ನು ಎರ್ನಾಕುಲಂ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಖುಲಾಸೆಗೊಳಿಸಿತು.