BBK 12: ನಿಮ್ಮಿಬ್ಬರ ವಿಡಿಯೊ ಹಾಕ್ಲಾ? ರಾಶಿಕಾ - ಸೂರಜ್ಗೆ ಕಿಚ್ಚನ ನೇರ ಪ್ರಶ್ನೆ!
ಸೂರಜ್ ಅವರು ರಾಶಿಕಾಗೆ ಪ್ರಪೋಸ್ ಮಾಡಿದ್ದಾರೆ. ಎಪಿಸೋಡ್ನಲ್ಲಿ ಬಿಗ್ ಬಾಸ್ ಮನೆಯಲ್ಲಿ ಅಶ್ವಿನಿ ಗೌಡ-ರಕ್ಷಿತಾ ಶೆಟ್ಟಿ ಹಾಗೂ ಕಾವ್ಯಾ ನಡುವೆ ಜೋರಾಗಿ ಜಗಳ ನಡೆಯುತ್ತಿತ್ತು. ಆದರೆ. ಅತ್ತ ರಾಶಿಕಾ ಹಾಗೂ ಸೂರಜ್ ತಮ್ಮದೇ ಲೋಕದಲ್ಲಿ ಮುಳುಗಿ ಹೋಗಿದ್ದರು. ಈ ರೀತಿ ಮುಳುಗಿ ಹೋಗುವಾಗಲೇ ಸೂರಜ್ ಪ್ರಪೋಸ್ ಮಾಡಿಯೇ ಬಿಟ್ಟಿದ್ದಾರೆ. ಈ ಬಗ್ಗೆ ಸುದೀಪ್ ಅವರು ಪ್ರಸ್ತಾಪ ಮಾಡಿದರು.
bigg boss kannada -
Yashaswi Devadiga
Nov 2, 2025 7:18 PM
ಹ್ಯಾಂಡ್ಸಮ್ ಹಂಕ್ ಸೂರಜ್ ಸಿಂಗ್ ನಾಲ್ಕನೇ ವಾರ ದೊಡ್ಮನೆಗೆ ವೈಲ್ಡ್-ಕಾರ್ಡ್ ಮೂಲಕ ಎಂಟ್ರಿ ಕೊಟ್ಟರು. ಆಗ ಬಿಗ್ ಬಾಸ್ ಇವರಿಗೆ, ಈ ಮನೆಯ ಸುಂದರ ಸದಸ್ಯೆ ಯಾರು ಅವರಿಗೆ ಒಂದು ರೆಡ್ ರೋಸ್ ಕೊಡಿ ಎಂದು ಹೇಳಿದರು. ಸೂರಜ್ ತಕ್ಷಣವೇ ಕೆಂಪು ಗುಲಾಬಿಯನ್ನು ರಾಶಿಕಾಗೆ ನೀಡಿದ್ದಾರೆ. ಇಲ್ಲಿಂದ ರಾಶಿಕಾ ತಮ್ಮ ಆಟವನ್ನೇ ಮರೆತು ದಿನಪೂರ್ತಿ ಸೂರಜ್ ಜೊತೆಗೇ ಸಮಯ ಕಳೆಯುತ್ತಿದ್ದಾರೆ.
ಇದರ ಮಧ್ಯೆ ಎಪಿಸೋಡ್ನಲ್ಲಿ ಸೂರಜ್ ಅವರು ರಾಶಿಕಾಗೆ ಪ್ರಪೋಸ್ ಮಾಡಿದ್ದಾರೆ. ಎಪಿಸೋಡ್ನಲ್ಲಿ ಬಿಗ್ ಬಾಸ್ ಮನೆಯಲ್ಲಿ ಅಶ್ವಿನಿ ಗೌಡ-ರಕ್ಷಿತಾ ಶೆಟ್ಟಿ ಹಾಗೂ ಕಾವ್ಯಾ ಸೈವ ನಡುವೆ ಜೋರಾಗಿ ಜಗಳ ನಡೆಯುತ್ತಿತ್ತು. ಆದರೆ. ಅತ್ತ ರಾಶಿಕಾ ಹಾಗೂ ಸೂರಜ್ ತಮ್ಮದೇ ಲೋಕದಲ್ಲಿ ಮುಳುಗಿ ಹೋಗಿದ್ದರು.
ಈ ರೀತಿ ಮುಳುಗಿ ಹೋಗುವಾಗಲೇ ಸೂರಜ್ ಪ್ರಪೋಸ್ ಮಾಡಿಯೇ ಬಿಟ್ಟಿದ್ದಾರೆ. ಸೂರಜ್ ಅವರು ನೇರವಾಗಿ ‘ಐ ಲವ್ ಯೂ’ ಎಂದು ಹೇಳಿದ್ದಾರೆ. ದಿಢೀರ್ ಈ ವರ್ಡ್ ಕೇಳಿ ರಾಶಿಕಾ ಶಾಕ್ ಆದರು. ಎಲ್ಲರೂ ರಾಶಿಕಾ ಇದಕ್ಕೆ ಲವ್ ಯೂ ಟೂ ಎನ್ನುತ್ತಾರೆ ಎಂದೇ ನಿರೀಕ್ಷಿಸಲಾಗಿತ್ತು. ಆದರೆ, ರಾಶಿಕಾ ಅವರು, ‘ನನಗೆ ಅದರಲ್ಲಿ ಆಸಕ್ತಿ ಇಲ್ಲ’ ಎಂದು ರಿಜೆಕ್ಟ್ ಮಾಡಿದ್ದಾರೆ.
ಈ ಬಗ್ಗೆ ಈಗ ವಾರದ ಪಂಚಾಯ್ತಿಯಲ್ಲಿ ಕಿಚ್ಚ ಸುದೀಪ್ ಅವರು ಮಾತನಾಡಿದ್ದಾರೆ.
ಬಿಗ್ ಬಾಸ್ ಮನೆಯಗೆ ಸೂರಜ್ ಸಿಂಗ್ ಅವರು ವೈಲ್ಡ್ ಕಾರ್ಡ್ ಎಂಟ್ರಿ ನೀಡಿದಾಗಿನಿಂದಲೂ ರಾಶಿಕಾ ಶೆಟ್ಟಿ ಜೊತೆ ಒಂದೊಳ್ಳೆ ಬಾಂಡಿಂಗ್ ಬೆಳೆಸಿಕೊಂಡಿದ್ದಾರೆ. ಇಬ್ಬರು ಒಬ್ಬರಿಗೊಬ್ಬರು ಬಿಟ್ಟಿರಲಾರದಷ್ಟು ಆತ್ಮೀಯತೆ ತೋರುತ್ತಾರೆ. ಸದ್ಯ ಇವರಿಬ್ಬರ ಪರಸ್ಪರ ಐ ಲವ್ ಯೂ ಹೇಳಿಕೊಂಡಿದ್ದರ ಬಗ್ಗೆ ಸುದೀಪ್ ಮಾತನಾಡಿದ್ದಾರೆ.
ಕಿಚ್ಚ ಸುದೀಪ್ ಮಾತನಾಡಿ, ದೊಡ್ಡ ಜಗಳವಾಗತ್ತೆ, ಆಗ್ತಾನೆ ಇರತ್ತೆ. ಇವರಿಬ್ಬರು ಮಾತ್ರ ಏನು ಗೊತ್ತಿಲ್ಲದ ಹಾಗೇ ಇರ್ತಾರೆ. ಆಗಲಿ ಬಿಡಿ, ನಮ್ಮ ಕೆಲಸ ನಾವು ನೊಡೋಣ ಅನ್ನೋ ಥರ ಇರ್ತಾರೆ ಎಂದಿದ್ದಾರೆ. ಆಗ ಸುಧಿ ಅವರು ಸೂರಜ್ ರಾಶಿಕಾ ಹೆಸರು ತೆಗೆದುಕೊಂಡರು. ಒಂದು ಕಡೆ ಅಶ್ವಿನಿ ಅವರು ಯಾರೂ ನನ್ನ ಪರ ಮಾತಾಡ್ತಾ ಇಲ್ಲ ಅಂತ ಇರುವಾಗ, ಈ ಕಡೆ ಈ ಲವ್ ಯೂ ಯು ಲವ್ ಮಿ ಅಂತ ಅವರ ಸ್ನೇಹಿತೆ ಎಂದಿದ್ದಾರೆ. ಅದಕ್ಕೆ ಸೂರಜ್ ಅವರು ಹಾಗೇನೂ ಇಲ್ಲ ಎಂದಿದ್ದಾರೆ. ಅದಕ್ಕೆ ಕಿಚ್ಚ ಅವರು ವಿಡಿಯೋ ಪ್ಲೇ ಮಾಡಿಸಲಾ ಎಂದು ಕಾಲೆಳೆದರು.
ಸೂರಜ್ ಬಂದ ಎರಡನೇ ದಿನವೇ ರಾಶಿಕಾ ಕೈ ಕೈ ಹಿಡಿದುಕೊಂಡು ಮಾತನಾಡಲು ಆರಂಭಿಸಿದ್ದರು. ಪ್ರೀತಿ ವಿಚಾರವನ್ನು ದಾಳವಾಗಿ ಬಳಕೆ ಮಾಡಿಕೊಂಡು ಗೆಲ್ಲಲು ಅವರು ಪ್ಲ್ಯಾನ್ ರೂಪಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹೇಳಲಾಯಿತು.
ಅಲ್ಲದೆ ರಾಶಿಕಾ ಶೆಟ್ಟಿ ಅವರೇ ಸೂರಜ್ ಬಳಿ ಬಂದು, ಯಾರಾದರೂ ಏನಾದರೂ ಹೇಳ್ತಾರಾ ಅಂತ ತಲೆ ಕೆಡಿಸಿಕೊಳ್ಳಬೇಡ, ನೀನು ನನ್ನ ಜೊತೆ ಮಾತಾಡು, ನಾನು ಏನೂ ಅಂದುಕೊಳ್ಳಲ್ಲ ಎಂದು ಹೇಳಿದ್ದರು. ರಾಶಿಕಾ ಆ ವಾರ ಪೂರ್ತಿ ಸೂರಜ್ ಜೊತೆಗೇ ಇದ್ದರು.
ಸೋಷಿಯಲ್ ಮೀಡಿಯಾ ಚರ್ಚೆಗಳ ಪ್ರಕಾರ ಮಲ್ಲಮ್ಮ ಹೋಗಬಹುದು ಎನ್ನಲಾಗುತ್ತಿದೆ. ಜೊತೆಗೆ ಮನೆಯಿಂದ ಹೊರ ಬರಬಹುದಾದ ಎಲ್ಲ ಸಾಧ್ಯತೆಗಳಿರೋದು ಕಂಟೆಸ್ಟೆಂಟ್ ಧ್ರುವಂತ್ ಎನ್ನಲಾಗುತ್ತಿದೆ. ಏಕೆಂದರೆ ಅವರ ಆಟದ ಬಗ್ಗೆ ನೆಟ್ಟಿಗರು ಅಸಮಾಧಾನ ಹೊರ ಹಾಕಿದ್ದಾರೆ.