ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Aamir Khan: ತೆರೆ ಮೇಲೆ ಬರಲಿದೆ ಮೇಘಾಲಯ ಮರ್ಡರ್‌ ಕೇಸ್‌; ಸೋನಂ- ರಾಜಾ ಸ್ಟೋರಿ ಮಾಡ್ತಾರಾ ಆಮಿರ್‌ ಖಾನ್?‌

ತಾರೆ ಜಮೀನ್ ಪರ್, ದಂಗಲ್‌ನಂತಹ ಹಿಟ್‌ ಚಿತ್ರಗಳನ್ನು ನೀಡಿದ ಅಮಿರ್‌ ಖಾನ್‌ ಇದೀಗ ಮತ್ತೊಂದು ಸಿನಿಮಾ ಮಾಡಲು ರೆಡಿ ಆಗಿದ್ದಾರೆ. ವರದಿಗಳ ಪ್ರಕಾರ ಮೇಘಾಲಯದ ಹನಿಮೂನ್‌ ಮರ್ಡರ್‌ ಕೇಸ್‌ ಮೇಲೆ ಸಿನಿಮಾ ಮಾಡಬಹುದು ಎಂದು ಹೇಳಲಾಗುತ್ತಿದೆ. ಈ ಮರ್ಡರ್ ಮಿಸ್ಟರಿ ಥ್ರಿಲ್ಲರ್ ಕಥೆಯಾಗಬಹುದು.

ತೆರೆ ಮೇಲೆ ಬರಲಿದೆ ಮೇಘಾಲಯ ಮರ್ಡರ್‌ ಕೇಸ್‌

Profile Vishakha Bhat Jul 21, 2025 4:34 PM

ಮುಂಬೈ: ತಾರೆ ಜಮೀನ್ ಪರ್, ದಂಗಲ್‌ನಂತಹ ಹಿಟ್‌ ಚಿತ್ರಗಳನ್ನು ನೀಡಿದ ಅಮಿರ್‌ ಖಾನ್‌ (Aamir Khan) ಇದೀಗ ಮತ್ತೊಂದು ಸಿನಿಮಾ ಮಾಡಲು ರೆಡಿ ಆಗಿದ್ದಾರೆ. ವರದಿಗಳ ಪ್ರಕಾರ ಮೇಘಾಲಯದ ಹನಿಮೂನ್‌ ಮರ್ಡರ್‌ ( Meghalaya Murder) ಕೇಸ್‌ ಮೇಲೆ ಸಿನಿಮಾ ಮಾಡಬಹುದು ಎಂದು ಹೇಳಲಾಗುತ್ತಿದೆ. ಈ ಮರ್ಡರ್ ಮಿಸ್ಟರಿ ಥ್ರಿಲ್ಲರ್ ಕಥೆಯಾಗಬಹುದು. ಕೊಲೆ ಆರೋಪಿ ಸೋನಮ್‌ ಹಾಗೂ ಕೊಲೆಯಾದ ರಾಜಾ ರಘುವಂಶಿ ಪ್ರಕರಣದ ಡಿಟೇಲ್ಸ್‌ನ್ನು ಅಮಿರ್‌ ಖಾನ್‌ ತಿಳಿದು ಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ನಟ-ನಿರ್ಮಾಪಕರಾದ ಆಮಿರ್‌ ಖಾನ್‌ ನೈಜ ಹಾಗೂ ಹೊಸತನದ ಕತೆಗಳನ್ನು ತೆರೆ ಮೇಲೆ ತರುವುದರಲ್ಲಿ ಎಕ್ಸ್‌ಪರ್ಟ್‌ ಆಗಿದ್ದಾರೆ.

ಮೇಘಾಲಯ ಕೊಲೆ ಪ್ರಕರಣದ ನವೀಕರಣಗಳನ್ನು ಅಮೀರ್ ಖಾನ್ ನಿಕಟವಾಗಿ ಅನುಸರಿಸುತ್ತಿದ್ದಾರೆ. ಅವರು ವೈಯಕ್ತಿಕವಾಗಿ ತಮ್ಮ ಆಪ್ತ ವಲಯದೊಂದಿಗೆ ವಿವರಗಳನ್ನು ಪತ್ತೆಹಚ್ಚಿದ್ದಾರೆ ಮತ್ತು ಚರ್ಚಿಸಿದ್ದಾರೆ. ಆದಾಗ್ಯೂ, ನಿರ್ಮಾಣ ಸಂಸ್ಥೆಯಿಂದಾಗಲಿ ಅಥವಾ ನಟರಿಂದಾಗಲಿ ಯಾವುದೇ ಅಧಿಕೃತ ದೃಢೀಕರಣ ಬಂದಿಲ್ಲ. ಯೋಜನೆಯು ರೂಪ ಪಡೆಯುತ್ತಿದ್ದಂತೆ ಹೆಚ್ಚಿನ ನವೀಕರಣಗಳನ್ನು ನಿರೀಕ್ಷಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಮೇಘಾಲಯಕ್ಕೆ ಹನಿಮೂನ್‌ಗೆ ಹೋದ ಇಂದೋರ್‌ ದಂಪತಿ ಮಿಸ್ಸಿಂಗ್‌ ಕೇಸ್‌ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಪತ್ನಿ ಸೋನಮ್‌ ತನ್ನ ಪತಿ ರಾಜಾ ರಘುವಂಶಿಯ ಕೊಲೆಗೆ ಸುಪಾರಿ ನೀಡಿದ್ದಳು. ನಾಪತ್ತೆಯಾಗಿದ್ದ ಹಂತಕಿ ಮತ್ತು ಆಕೆಯ ಮೂವರು ಸಹಚರರನ್ನು ಪೊಲೀಸರು ಅರೆಸ್ಟ್‌ ಮಾಡಿದ್ದರು. ನಂತರ ವಿಚಾರಣೆ ವೇಳೆ ಸುಪಾರಿ ಕಿಲ್ಲರ್‌ಗಳು ಆರೋಪಿ ಸೋನಂ ತನ್ನ ಪತಿ ರಾಜಾ ರಘುವಂಶಿ ಹತ್ಯೆಗೆ ಸುಪಾರಿ ಕೊಟ್ಟಿದ್ದಳು ಎಂಬುದನ್ನು ಒಪ್ಪಿಕೊಂಡಿದ್ದರು. ಮೇಘಾಲಯಕ್ಕೆ ಹನಿಮೂನ್‌ಗೆಂದು ತೆರಳಿದ್ದ ನವದಂಪತಿ ರಾಜಾ ಮತ್ತು ಸೋನಂ, ಮೇ 23 ರಂದು ನೊಂಗ್ರಿಯಾಟ್ ಗ್ರಾಮದ ಹೋಮ್‌ಸ್ಟೇಯಿಂದ ಚೆಕ್‌ಔಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಕಾಣೆಯಾಗಿದ್ದರು. ಒಂಬತ್ತು ದಿನಗಳ ಬಳಿಕ, ಪತಿ 30 ವರ್ಷದ ರಾಜಾ ರಘುವಂಶಿ (Raja Raghuvanshi) ಮೃತದೇಹ ಜೂನ್ 2 ರಂದು ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯ ಸೊಹ್ರಾ ಪ್ರದೇಶದ ಜಲಪಾತದ ಬಳಿಯ ಕಂದಕದಲ್ಲಿ ಪತ್ತೆಯಾಗಿತ್ತು.

ಈ ಸುದ್ದಿಯನ್ನೂ ಓದಿ: Sonam Raghuvanshi: ಮೇಘಾಲಯ ಹತ್ಯೆ ಪ್ರಕರಣ: ಆರೋಪಿ ಸೋನಮ್ ರಘುವಂಶಿ ಗರ್ಭಿಣಿಯಲ್ಲ

11 ದಿನಗಳ ಹುಡುಕಾಟದ ಬಳಿಕ ಶಿಲ್ಲಾಂಗ್ ಪೊಲೀಸರು ಆಳವಾದ ಕಂದಕವೊಂದರಲ್ಲಿ ರಾಜಾ ರಘುವಂಶಿ ಅವರ ಮೃತದೇಹವನ್ನು ಪತ್ತೆ ಹಚ್ಚಿದ್ದರು. ಅವರನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಲಾಗಿದೆ ಎಂದು ದೃಢಪಡಿಸಿದ್ದರು.