ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಅಶ್ಲೀಲ ಕಾಮೆಂಟ್ ಕೇಸ್, ಮುಚ್ಚಿದ ಕೊಠಡಿಯಲ್ಲಿ ವಿಚಾರಣೆ! ʻಈ ಹೋರಾಟ ನನಗಾಗಿ ಅಲ್ಲ, ಎಲ್ಲಾ ಹೆಣ್ಣುಮಕ್ಕಳಿಗಾಗಿ..ʼ ಎಂದ ನಟಿ ರಮ್ಯಾ

ಇನ್‌ಸ್ಟಾಗ್ರಾಮ್‌ನಲ್ಲಿ ಅಶ್ಲೀಲ ಕಾಮೆಂಟ್ ಮಾಡಿದ್ದ 11 ಆರೋಪಿಗಳ ವಿರುದ್ಧ ನಟಿ ರಮ್ಯಾ ಸಾಕ್ಷ್ಯ ಒದಗಿಸಿದ್ದಾರೆ. ಬೆಂಗಳೂರಿನ 46ನೇ ಸಿಸಿಹೆಚ್ ಕೋರ್ಟ್‌ಗೆ ಹಾಜರಾದ ಅವರು, ಮುಚ್ಚಿದ ಕೊಠಡಿಯಲ್ಲಿ ನ್ಯಾಯಾಧೀಶರ ಮುಂದೆ ಮಾಹಿತಿ ನೀಡಿದರು. "ಈ ಹೋರಾಟವು ಕೇವಲ ತನಗಾಗಿ ಅಲ್ಲ, ಎಲ್ಲಾ ಹೆಣ್ಣುಮಕ್ಕಳ ಸುರಕ್ಷತೆಗಾಗಿ" ಎಂದು ರಮ್ಯಾ ಹೇಳಿದ್ದಾರೆ.

ಅಶ್ಲೀಲ ಕಾಮೆಂಟ್ ಕೇಸ್: ಕೋರ್ಟ್‌ಗೆ ಹಾಜರಾದ ನಟಿ ರಮ್ಯಾ ಹೇಳಿದ್ದೇನು?

-

Avinash GR
Avinash GR Mar 10, 2026 7:56 PM

ನಟಿ ರಮ್ಯಾ ಅವರು ತಮಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಸಂದೇಶ ಹಾಗೂ ಕಾಮೆಂಟ್‌ ಮಾಡುತ್ತಿದ್ದಾರೆ ಎಂದು ಆರೋಪಿಸಿ, ಕೆಲವು ಇನ್‌ಸ್ಟಾಗ್ರಾಮ್‌ ಬಳಕೆದಾರರ ಮೇಲೆ ದೂರು ದಾಖಲಿಸಿದ್ದರು. ಆ ಸಂಬಂಧ ಪೊಲೀಸರು 11 ಮಂದಿ ಆರೋಪಿಗಳನ್ನು ಬಂಧಿಸಿದ್ದರು. ಅವರ ವಿರುದ್ಧ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದು, ಇಂದಿನಿಂದ ಬೆಂಗಳೂರಿನ 46ನೇ ಸಿಸಿಹೆಚ್ ಕೋರ್ಟ್‌ ವಿಚಾರಣೆ ಆರಂಭವಾಗಿದೆ.

ಕೋರ್ಟ್‌ಗೆ ಹಾಜರಾದ ನಟಿ ರಮ್ಯಾ ಅವರು ಫಿರ್ಯಾದಿ ಹೇಳಿಕೆ ದಾಖಲಿಸಿದ್ದಾರೆ. ತಮ್ಮ ವೃತ್ತಿ ಜೀವನ, ರಾಜಕೀಯ ಜೀವನದ ಮಾಹಿತಿ ನೀಡಿದ ರಮ್ಯಾ, ಇನ್‌ಸ್ಟಾಗ್ರಾಂ ಅಕೌಂಟ್ ಮತ್ತು ಆರೋಪಿಗಳು ಇನ್‌ಸ್ಟಾಗ್ರಾಂ ಮೂಲಕ ಕಳುಹಿಸಿದ್ದ ಸಂದೇಶದ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ಇದೊಂದು ಸೂಕ್ಷ್ಮ ಪ್ರಕರಣವೆಂದು ಮುಚ್ಚಿದ ಕೊಠಡಿಯಲ್ಲಿ ನ್ಯಾಯಾಧೀಶರಾದ ಈ. ರಾಜೀವ ಗೌಡ ವಿಚಾರಣೆಯನ್ನು ನಡೆಸಿದರು.

Actress Ramya: ನಟಿ ರಮ್ಯಾಗೆ ಅಶ್ಲೀಲ ಕಮೆಂಟ್‌ ಪ್ರಕರಣ: 380 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ

ಮಾಧ್ಯಮಗಳ ಎದುರು ರಮ್ಯಾ ಹೇಳಿದ್ದೇನು?

"ಇವತ್ತು ಸಾಕ್ಷ್ಯಾಧಾರಗಳನ್ನು ಕೊಡಲು ಹೇಳಿದ್ದರು. ಕೊಟ್ಟಿದ್ದೇವೆ, ಮುಂದಿನ ವಿಚಾರಣೆಯಲ್ಲಿ ಕ್ರಾಸ್‌ ಎಕ್ಸಾಮಿನೇಷನ್‌ಗೆ ಕರೆದಿದ್ದಾರೆ. ನನಗೂ ಈ ಥರ ಮಾಡಬೇಕು ಅಂತ ಆಸೆ ಏನಿಲ್ಲ. ಅವರನ್ನು ನೋಡಿದಾಗ ನನಗೂ ಬೇಜಾರಾಗುತ್ತದೆ. ಆದರೆ ಇದನ್ನು ನಾನು ನನಗಾಗಿ ಮಾಡುತ್ತಿಲ್ಲ. ಹೆಣ್ಣು ಮಕ್ಕಳಿಗೆ ಸೋಶಿಯಲ್‌ ಮೀಡಿಯಾದಲ್ಲಿ ತುಂಬಾ ಟ್ರೋಲ್‌ ಮಾಡ್ತಾರೆ, ಕಿರುಕುಳ ಕೊಡ್ತಾರೆ. ಇದನ್ನು ನಿಲ್ಲಿಸಬೇಕು, ಸೋಶಿಯಲ್‌ ಮೀಡಿಯಾದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆ ಬೇಕು ಎಂಬ ಕಾರಣಕ್ಕೆ ನಾನು ಇದನ್ನು ಮಾಡುತ್ತಿದ್ದೇನೆ" ಎಂದು ರಮ್ಯಾ ಹೇಳಿದ್ದಾರೆ.

Actress Ramya: ವಿನಯ್‌ ರಾಜ್‌ಕುಮಾರ್‌ ಜತೆಗಿನ ಫೋಟೊ ವೈರಲ್‌ ಆದ ಬೆನ್ನಲ್ಲೇ ರಮ್ಯಾ ಸ್ಪಷ್ಟನೆ

"ನಾನು ಎಲ್ಲಾ ಹೆಣ್ಣು ಮಕ್ಕಳಿಗಾಗಿ ಫೈಟ್‌ ಮಾಡುತ್ತಿದ್ದೇನೆ. ನನಗಾಗಿ ಅಲ್ಲ. ಒಂದು ವೇಳೆ ನನಗೋಸ್ಕರ ಆಗಿದ್ದರೆ, ನಾನು ಯಾವಾಗಲೋ ಕೇಸ್‌ ಅನ್ನು ವಾಪಸ್‌ ಪಡೆಯುತ್ತಿದ್ದೆ. ಯಾರಿಗೂ ಶಿಕ್ಷೆ ಆಗುವುದು ನನಗೆ ವೈಯಕ್ತಿಕವಾಗಿ ಇಷ್ಟವಿಲ್ಲ. ಆದರೆ ನಾನು ಇಂದು ಸುಮ್ನಾದರೆ ಮುಂದೆ ಇನ್ನಷ್ಟು ಹೆಣ್ಣು ಮಕ್ಕಳಿಗೆ ಟ್ರೋಲ್‌ ಮಾಡುತ್ತಾರೆ. ರೇಪ್‌ ಮಾಡುತ್ತೇನೆ, ಕೊಲೆ ಮಾಡುತ್ತೇನೆ ಅಂತ ಬೆದರಿಕೆ ಹಾಕೋದು, ಬೆತ್ತಲೆ ಫೋಟೋಗಳನ್ನು ಕಳಿಸೋದನ್ನು ಅವರು ನಿಲ್ಲಿಸೋದಿಲ್ಲ. ಈ ಎಲ್ಲಾ ಕಾರಣಕ್ಕಾಗಿ ನಾನು ನಿಂತಿದ್ದೇನೆ" ಎಂದು ರಮ್ಯಾ ಹೇಳಿದ್ದಾರೆ.