Oscar Entry: ಆಸ್ಕರ್ ಸ್ಪರ್ಧೆಗೆ ಭಾರತದಿಂದ ಕರಣ್ ಜೋಹರ್ ನಿರ್ಮಾಣದ ‘ಹೋಮ್‌ಬೌಂಡ್’ ಚಿತ್ರ ಆಯ್ಕೆ
ನಿರ್ದೇಶಕ ನೀರಜ್ ಘಯ್ವಾನ್ ಹೋಮ್‌ಬೌಂಡ್ ಚಿತ್ರವು ಭಾರತದಿಂದ ಆಸ್ಕರ್ ಸ್ಪರ್ಧೆಗೆ ಆಯ್ಕೆ ಆಗಿದೆ. ಈ ತಿಂಗಳ ಕೊನೆಯಲ್ಲಿ ಚಿತ್ರ ಬಿಡುಗಡೆಯಾಗುವ ಮುನ್ನ ಈ ಘೋಷಣೆ ಹೊರಬಿದ್ದಿದ್ದು, ಆಸ್ಕರ್ ಅಭಿಯಾನಕ್ಕೆ ವೇದಿಕೆ ಸಜ್ಜುಗೊಂಡಿದೆ. ಈ ಚಿತ್ರವನ್ನು ಕರಣ್ ಜೋಹರ್ ನಿರ್ಮಾಣ ಮಾಡಿದ್ದಾರೆ.

-

ಮುಂಬೈ: ನಿರ್ದೇಶಕ ನೀರಜ್ ಘಯ್ವಾನ್ ಹೋಮ್‌ಬೌಂಡ್ (Homebound) ಚಿತ್ರವು ಭಾರತದಿಂದ ಆಸ್ಕರ್ (Oscar Entry) ಸ್ಪರ್ಧೆಗೆ ಆಯ್ಕೆ ಆಗಿದೆ. ಈ ತಿಂಗಳ ಕೊನೆಯಲ್ಲಿ ಚಿತ್ರ ಬಿಡುಗಡೆಯಾಗುವ ಮುನ್ನ ಈ ಘೋಷಣೆ ಹೊರಬಿದ್ದಿದ್ದು, ಆಸ್ಕರ್ ಅಭಿಯಾನಕ್ಕೆ ವೇದಿಕೆ ಸಜ್ಜುಗೊಂಡಿದೆ. 2026ರ ಆಸ್ಕರ್ (Oscars) ಪ್ರಶಸ್ತಿಗಳ ಸ್ಪರ್ಧೆಯಲ್ಲಿ ‘ಅತ್ಯುತ್ತಮ ಅಂತಾರಾಷ್ಟ್ರೀಯ ಕಥಾಚಿತ್ರ’ ವಿಭಾಗಕ್ಕೆ ಭಾರತದಿಂದ ಹಿಂದಿ ಭಾಷೆಯ ಈ ಸಿನಿಮಾ ಅಧಿಕೃತವಾಗಿ ಆಯ್ಕೆ ಮಾಡಲಾಗಿದೆ. ಕರಣ್ ಜೋಹರ್ (Karan Johar) ಅವರ ‘ಧರ್ಮ ಪ್ರೊಡಕ್ಷನ್ಸ್’ ಮೂಲಕ ನಿರ್ಮಾಣ ಆಗಿರುವ ‘ಹೋಮ್‌ಬೌಂಡ್’ ಸಿನಿಮಾದಲ್ಲಿ ಇಶಾನ್ ಖಟ್ಟರ್, ವಿಶಾಲ್ ಜೇಥ್ವಾ, ಜಾನ್ವಿ ಕಪೂರ್ ಸೇರಿದಂತೆ ಹಲವು ತಾರಾ ಗಣವಿದೆ.
ಈ ಆಯ್ಕೆಯೊಂದಿಗೆ, ಮುಂದಿನ ವರ್ಷದ ಅಕಾಡೆಮಿ ಪ್ರಶಸ್ತಿಗಳಲ್ಲಿ ನಾಮನಿರ್ದೇಶನಕ್ಕಾಗಿ 100 ಕ್ಕೂ ಹೆಚ್ಚು ರಾಷ್ಟ್ರಗಳ ಸಲ್ಲಿಕೆಗಳ ಜೊತೆಗೆ ಹೋಮ್‌ಬೌಂಡ್ ಸ್ಪರ್ಧಿಸಲಿದೆ. ಇಲ್ಲಿಯವರೆಗೆ, ಕೇವಲ ಮೂರು ಭಾರತೀಯ ಚಲನಚಿತ್ರಗಳು, ಮದರ್ ಇಂಡಿಯಾ (1958), ಸಲಾಮ್ ಬಾಂಬೆ! (1989), ಮತ್ತು ಲಗಾನ್ (2002), ಈ ವಿಭಾಗದಲ್ಲಿ ನಾಮನಿರ್ದೇಶನಗಳನ್ನು ಪಡೆದಿವೆ. ಆದರೆ ಇದುವರೆಗೆ ಯಾವುದೇ ಚಿತ್ರ ಪ್ರಶಸ್ತಿಯನ್ನು ಬಾಚಿಕೊಂಡಿಲ್ಲ. ಭಾರತದಲ್ಲಿ ಇನ್ನೂ ಬಿಡುಗಡೆಯಾಗದಿದ್ದರೂ, ಹೋಮ್‌ಬೌಂಡ್ ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಛಾಪು ಮೂಡಿಸಿದೆ. ಈ ಚಿತ್ರವು ಮೇ ತಿಂಗಳಲ್ಲಿ ನಡೆದ ಕ್ಯಾನೆಸ್ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿತ್ತು.
We are proud to announce that Homebound is India's official entry for Best International Feature at the 98th Academy Awards.
— Dharma Productions (@DharmaMovies) September 19, 2025
In cinemas 26th September pic.twitter.com/Yiik8rhVAb
ನಂತರ 50 ನೇ ಟೊರೊಂಟೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ತಲುಪಿತು, ಪ್ರತಿಷ್ಠಿತ ಅಂತರರಾಷ್ಟ್ರೀಯ ಪೀಪಲ್ಸ್ ಚಾಯ್ಸ್ ಪ್ರಶಸ್ತಿ ವಿಭಾಗದಲ್ಲಿ ಎರಡನೇ ರನ್ನರ್ ಅಪ್ ಸ್ಥಾನಗಳಿಸಿತ್ತು. ‘ಹೋಮ್‌ಬೌಂಡ್’ ಸಿನಿಮಾ ಆಸ್ಕರ್ ಸ್ಪರ್ಧೆಗೆ ಭಾರತದಿಂದ ಅಧಿಕೃತವಾಗಿ ಆಯ್ಕೆ ಆಗಿದ್ದಕ್ಕೆ ಕರಣ್ ಜೋಹರ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ‘ಅಕಾಡೆಮಿ ಅವಾರ್ಡ್ಸ್ ಸ್ಪರ್ಧೆಗೆ ಭಾರತದ ಅಧಿಕೃತ ಎಂಟ್ರಿಯಾಗಿ ಹೋಮ್‌ಬೌಂಡ್ ಸಿನಿಮಾವನ್ನು ಆಯ್ಕೆ ಮಾಡಿರುವುದು ನಮಗೆ ತುಂಬಾ ಗೌರವ ತಂದಿದೆ. ನೀರಜ್ ಘಯ್ವಾನ್ ಅವರ ಈ ಸಿನಿಮಾ ಪ್ರಪಂಚದಾದ್ಯಂತ ಲಕ್ಷಾಂತರ ಹೃದಯಗಳಲ್ಲಿ ನೆಲೆ ಕಂಡುಕೊಳ್ಳುವುದು ಖಚಿತ’ ಎಂದು ಕರಣ್ ಜೋಹರ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ: Green Oscar Award: ಕರ್ನಾಟಕದ ಸೆಲ್ಕೋ ಸೋಲಾರ್ ಸಂಸ್ಥೆಗೆ ಪ್ರತಿಷ್ಠಿತ ಗ್ರೀನ್ ಆಸ್ಕರ್ ಪುರಸ್ಕಾರ
ನಿರ್ದೇಶಕ ನೀರಜ್ ಘಯ್ವಾನ್ ಅವರು ಸಹ ಸಂತಸ ವ್ಯಕ್ತಪಡಿಸಿದರು. ಆಸ್ಕರ್ ಸ್ಪರ್ಧೆಗೆ ಭಾರತದಿಂದ ಹೋಮ್‌ಬೌಂಡ್ ಸಿನಿಮಾ ಅಧಿಕೃತವಾಗಿ ಆಯ್ಕೆ ಆಗಿರುವುದಕ್ಕೆ ನನಗೆ ತುಂಬಾ ಗೌರವ ಎನಿಸುತ್ತಿದೆ. ನಮ್ಮ ಕಥೆಗಳನ್ನು ಜಗತ್ತಿಗೆ ಕೊಂಡೊಯ್ಯುವುದು ಮತ್ತು ಸಿನಿಮಾದ ಅತಿದೊಡ್ಡ ಜಾಗತಿಕ ವೇದಿಕೆಗಳಲ್ಲಿ ಒಂದರಲ್ಲಿ ಭಾರತವನ್ನು ಪ್ರತಿನಿಧಿಸುವುದು ಹೆಮ್ಮೆಯ ವಿಷಯವಾಗಿದೆ. ಇದಕ್ಕಾಗಿ ನಾನು ತುಂಬಾ ಕೃತಜ್ಞನಾಗಿದ್ದೇನೆ’ ಎಂದು ಅವರು ಹೇಳಿದ್ದಾರೆ.