Rashmika Mandanna: ಕೊನೆಗೂ ರಿವೀಲ್ ಆಯ್ತು ರಶ್ಮಿಕಾ-ವಿಜಯ್ ಎಂಗೇಜ್ಮೆಂಟ್; ಇಲ್ಲಿದೆ ನೋಡಿ ಫೋಟೋ
ನ್ಯಾಷನಲ್ ಕ್ರಶ್' ರಶ್ಮಿಕಾ ಮಂದಣ್ಣ ಅವರು ಟಾಲಿವುಡ್ ನಟ ವಿಜಯ್ ದೇವರಕೊಂಡ ಜೊತೆಗೆ ಲವ್‌ನಲ್ಲಿದ್ದಾರಾ ಅನ್ನೋ ಪ್ರಶ್ನೆ ಹಲವು ಬಾರಿ ಗಾಸಿಪ್ ವಲಯದಲ್ಲಿ ಕೇಳಿಬಂದಿದೆ. ಅದಕ್ಕೆ ಅವರೇ ಕಾರಣ ಅನ್ನೋದು ಕೂಡ ಗುಟ್ಟಾಗೇನು ಉಳಿದಿಲ್ಲ. ಹೌದು, ಇವರಿಬ್ಬರು ಡೇಟಿಂಗ್ ಮಾಡ್ತಿದ್ದಾರೆ ಅನ್ನೋದಕ್ಕೆ ಹಲವು ಸಾಕ್ಷಿಗಳು ಸಿಕ್ಕಿವೆ. ಇದೀಗ ಅವರಿಬ್ಬರಿಗೆ ಎಂಗೇಜ್ಮೆಂಟ್ ಆಗಿದೆ ಎನ್ನುವುದಕ್ಕೆ ಮತ್ತೊಂದು ಸಾಕ್ಷಿ ಸಿಕ್ಕಿದೆ.

-

ಬೆಂಗಳೂರು: ಕಿರಿಕ್ ಪಾರ್ಟಿ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಕನ್ನಡ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ಇಂದು ತೆಲುಗು, ತಮಿಳು, ಸೇರಿದಂತೆ ಬಾಲಿವುಡ್ ಅಲ್ಲಿಯೂ ಖ್ಯಾತ ನಟಿ ಎಂಬ ಹೆಗ್ಗಳಿಗೆ ಪಾತ್ರವಾಗಿದ್ದಾರೆ. ತಮ್ಮ ಫಿಲ್ಮ್ಗಳ ಮೂಲಕ ಆಗಾಗ ಸುದ್ದಿಯಲ್ಲಿರುವ ರಶ್ಮಿಕಾ ವೈಕ್ತಿಕ ವಿಚಾರವಾಗಿ ಪದೇ ಪದೇ ಸದ್ದು ಮಾಡುತ್ತಲೇ ಇರುತ್ತಾರೆ. ಹೌದು ವಿಜಯ್ ದೇವರಕೊಂಡ(Vijay Deverakonda) ಹಾಗೂ ರಶ್ಮಿಕಾ ಅವರ ಆಪ್ತತೆ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ಇಬ್ಬರ ಮಧ್ಯೆ ಒಳ್ಳೆಯ ಗೆಳೆತನ ಇದೆ. ಇವರು ತಮ್ಮ ಪ್ರೀತಿಯನ್ನು ಅಧಿಕೃತವಾಗಿ ಒಪ್ಪಿಕೊಂಡಿಲ್ಲ. ಹಾಗಂತ ಇವರು ಸುತ್ತಾಟ ಮಾಡೋದನ್ನು ನಿಲ್ಲಿಸಿಲ್ಲ. ಇವರ ಮಧ್ಯೆ ಪ್ರೀತಿ ಇದೆ ಎಂಬುದು ಜನರಿಗೆ ಸ್ಪಷ್ಟವಾಗುತ್ತಿದೆ. ಈಗ ಅಂಥದ್ದೇ ಘಟನೆ ಒಂದು ನಡೆದಿದೆ. ಇದರಲ್ಲಿ ವಿಜಯ್ ಹಾಗೂ ರಶ್ಮಿಕಾ ಅವರ ಎಂಗೇಜ್ಮೆಂಟ್ ರಿಂಗ್ ಇರುವು ವಿಡಿಯೋ ವೈರಲ್ ಆಗಿದೆ.
ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಕೆಲ ದಿನಗಳ ಹಿಂದೆ ಒಟ್ಟಿಗೆ ಕೆಫೆಯಲ್ಲಿ ಕಾಣಿಸಿಕೊಂಡಿದ್ದರು. ಕಳೆದ ವರ್ಷ ದೀಪಾವಳಿ ಹಬ್ಬವನ್ನು ರಶ್ಮಿಕಾ ಮಂದಣ್ಣ, ವಿಜಯ್ ಮನೆಯಲ್ಲಿ ಆಚರಿಸಿಕೊಂಡಿದ್ದರು. ಪುಷ್ಪಾ 2 (Pushpa 2) ಪ್ರಮೋಷನ್ ವೇಳೆ ರಶ್ಮಿಕಾ ಮಂದಣ್ಣಗೆ, ಪ್ರೀತಿ ಬಗ್ಗೆ ಕೇಳಲಾಗಿತ್ತು. ಆಗ ಹೆಸರು ಹೇಳದೆ, ಎಲ್ಲರಿಗೂ ಈ ವಿಷ್ಯ ಗೊತ್ತಿದೆ ಎಂದಿದ್ದರು ರಶ್ಮಿಕಾ. ಪುಷ್ಪಾ 2 ಸಿನಿಮಾವನ್ನು ವಿಜಯ್ ದೇವರಕೊಂಡ ಫ್ಯಾಮಿಲಿ ಜೊತೆ ರಶ್ಮಿಕಾ ವೀಕ್ಷಣೆ ಮಾಡಿದ್ದರು. ಈ ಎಲ್ಲ ಘಟನೆ ರಶ್ಮಿಕಾ ಹಾಗೂ ವಿಜಯ್ ಲವ್ ಮಾಡ್ತಿದ್ದಾರೆ ಎಂಬುದಕ್ಕೆ ಸ್ಪಷ್ಟನೆ ಸಿಕ್ಕಿತ್ತು. ಆದ್ರೆ ಈಗ ಇತ್ತೀಚೆಗೆ ರಶ್ಮಿಕಾ ಹಾಗೂ ವಿಜಯ್ ಇಬ್ಬರು ಎಂಗೇಜ್ಮೆಂಟ್ (Engagement) ಮಾಡ್ಕೊಂಡಿದ್ದಾರೆ, ಫೆಬ್ರವರಿಯಲ್ಲಿ ಮದುವೆ ಅನ್ನುವ ಸುದ್ದಿ ಹಬ್ಬಿದ ಬೆನ್ನಲ್ಲೇ ಅವರ ನಿಶ್ಚಿತಾರ್ಥ ಉಂಗುರದ ಫೋಟೋ ವೈರಲ್ ಆಗಿದೆ.
ಹೌದು ಕಿರಿಕ್ ಬೆಡಗಿ ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಅದರಲ್ಲಿ ರಶ್ಮಿಕಾ ತಮ್ಮ ನಾಯಿಯೊಂದಿಗೆ ಆಟವಾಡುವ, ಅದನ್ನು ಮುದ್ದಾಡುವ ದೃಶ್ಯ ಸೆರೆಯಾಗಿದೆ. ಆದ್ರೆ ಇಲ್ಲಿ ನಾಯಿಯ ಬದಲು ರಶ್ಮಿಕನಾ ಕೈಯಲ್ಲಿರುವ ಉಂಗುರ ಅಭಿಮಾನಿಗಳ ಗಮನ ಸೆಳೆದಿದ್ದು, ಇದು ನಿಶ್ಚಿತಾರ್ಥದ ಉಂಗುರವೇ ಎಂದು ಫ್ಯಾನ್ಸ್ ಕಮೆಂಟ್ ಮಾಡುತ್ತಿದ್ದಾರೆ. ಆಯುಷ್ಮಾನ್ ಖುರಾನಾ ಜೊತೆ ನಟಿಸಿರುವ ತಮ್ಮ ಮುಂದಿನ ಚಿತ್ರದ ಹಾಡಿನ ಕ್ಲಿಪ್ ಜೊತೆಗೆ ಈ ವೀಡಿಯೊ ಹಂಚಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಈ ಸುದ್ದಿಯನ್ನು ಓದಿ :Viral Video: ರಾಷ್ಟ್ರಪಿತ ಎನ್ನುವುದು ಅವಮಾನ; ಟಾಲಿವುಡ್ ನಟನ ವಿವಾದಾತ್ಮಕ ಹೇಳಿಕೆಗೆ ಭುಗಿಲೆದ್ದ ಆಕ್ರೋಶ
ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ಕಾಮೆಂಟ್‌ಗಳ ಮೂಲಕ ಅಭಿನಂದನೆಗಳ ಸುರಿಮಳೆ ಸುರಿಸಿದ್ದು, ಈ ರೀತಿಯಾಗಿ ನಿಶ್ಚಿತಾರ್ಥ ಆಗಿದೆ ಎಂದು ಅಧಿಕೃತ ಮಾಹಿತಿ ನೀಡುತ್ತಿದ್ದೀರಾ? ಎಂಬ ಪ್ರಶ್ನಿಸಿದ್ದಾರೆ. ಇದಕ್ಕೆ ಪುಷ್ಟಿ ನೀಡುವಂತೆ ವಿಜಯ್ ದೇವರಕೊಂಡ ಅವರ ಆಪ್ತರು ಎಂಗೇಜ್ಮೆಂಟ್ ಆಗಿರುವುದು ಸತ್ಯ ಎಂದು ದೃಢಪಡಿಸಿದ್ದಾರೆ. ಖಾಸಗಿಯಾಗಿ ಈ ಸಮಾರಂಭ ನಡೆದಿದ್ದು, ಬಹಳ ಆಪ್ತರ ಸಮ್ಮುಖದಲ್ಲಿ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಫೆಬ್ರವರಿ 2026ರಲ್ಲಿ ಮದುವೆ ನಡೆಯಲಿದೆಯೆಂದು ತಿಳಿದುಬಂದಿದೆ.
ಇನ್ನು ವಿಜಯ್ ಹಾಗೂ ರಶ್ಮಿಕಾ ತಾವಿಬ್ಬರು ಪ್ರೀತಿ ಮಾಡ್ತಿರೋದಾಗಿ ಎಲ್ಲಿಯೂ ಹೇಳಿಕೊಂಡಿಲ್ಲ. ಸಂದರ್ಶನವೊಂದರಲ್ಲಿ ವಿಜಯ್, ರಿಲೇಶನ್ಶಿಪ್ ನಲ್ಲಿ ಇರೋದಾಗಿ ಹೇಳಿದ್ದರು. ಸಹ ನಟಿ ಜೊತೆ ಸಂಬಂಧದಲ್ಲಿರುವ ಬಗ್ಗೆ ಹಾಗೂ ನಟಿಯರು ಮತ್ತು ಮದುವೆ ಬಗ್ಗೆ ಮಾತನಾಡಿದ್ದರು. ಆದ್ರೆ ಎಲ್ಲಿಯೂ ರಶ್ಮಿಕಾ ಹೆಸರನ್ನು ಬಾಯ್ಬಿಟ್ಟಿಲ್ಲ. ರಶ್ಮಿಕಾ ಕೂಡ, ವಿಜಯ್ ಪ್ರೀತಿ ಮಾಡ್ತಿರೋದಾಗಿ ಹೇಳಿಲ್ಲ. ಸದ್ಯ ವಿಜಯ್ ಹಾಗೂ ರಶ್ಮಿಕಾ, ಸಿನಿಮಾ ಶೂಟಿಂಗ್ ನಲ್ಲಿ ಬ್ಯೂಸಿಯಾಗಿದ್ದಾರೆ