ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಪೀಟರ್‌ ಸಿನಿಮಾದ ಟೀಸರ್‌ ಔಟ್‌- ಹೊಸ ಅವತಾರದಲ್ಲಿ ರಾಜೇಶ್‌ ಧ್ರುವ!

ಕಿರುತೆರೆ ಹಾಗೂ ಸಿನಿಮಾಗಳಲ್ಲಿ ಛಾಪು ಮೂಡಿಸಿರುವ ನಟ ರಾಜೇಶ್‌ ಧ್ರುವ ಹೀರೋ ಆಗಿರುವ ಅಭಿನಯಿಸಿರುವ ಹೊಸ ಸಿನಿಮಾ‌ ಪೀಟರ್. ಈಗಾಗಲೆ ಪೋಸ್ಟರ್ ಹಾಗೂ ಹಾಡಿನ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಈ ಚಿತ್ರದ ಕುತೂಹಲಕಾರಿ ಟೀಸರ್ ಬಿಡುಗಡೆಯಾಗಿದೆ. ನಟ ರಾಜೇಶ್‍ ಧ್ರುವ, ಕಳೆದ ವರ್ಷ 'ಬಾಲಾಜಿ ಫೋಟೋ ಸ್ಟುಡಿಯೋ' ಎಂಬ ಚಿತ್ರವನ್ನು (Cinema) ನಿರ್ದೇಶಿಸವುದರ ಜೊತೆಗೆ, ಅದರಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದರು.

ಪೀಟರ್‌ ಸಿನಿಮಾದ ಟೀಸರ್‌ ಔಟ್‌- ಹೊಸ ಅವತಾರದಲ್ಲಿ ರಾಜೇಶ್‌ ಧ್ರುವ!

Petere Teaser -

Yashaswi Devadiga Yashaswi Devadiga Nov 2, 2025 10:52 AM

'ಅಗ್ನಿಸಾಕ್ಷಿ', 'ನಂದಿನಿ' ಮುಂತಾದ ಧಾರಾವಾಹಿಗಳಲ್ಲಿ (Serial) ಜನಪ್ರಿಯರಾಗಿದ್ದ ನಟ ರಾಜೇಶ್‍ ಧ್ರುವ, ಕಳೆದ ವರ್ಷ 'ಬಾಲಾಜಿ ಫೋಟೋ ಸ್ಟುಡಿಯೋ' ಎಂಬ ಚಿತ್ರವನ್ನು (Cinema) ನಿರ್ದೇಶಿಸವುದರ ಜೊತೆಗೆ, ಅದರಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದರು.

ಕಿರುತೆರೆ ಹಾಗೂ ಸಿನಿಮಾಗಳಲ್ಲಿ ಛಾಪು ಮೂಡಿಸಿರುವ ನಟ ರಾಜೇಶ್‌ ಧ್ರುವ ಹೀರೋ ಆಗಿರುವ ಅಭಿನಯಿಸಿರುವ ಹೊಸ ಸಿನಿಮಾ‌ ಪೀಟರ್. ಈಗಾಗಲೆ ಪೋಸ್ಟರ್ ಹಾಗೂ ಹಾಡಿನ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಈ ಚಿತ್ರದ ಕುತೂಹಲಕಾರಿ ಟೀಸರ್ ಬಿಡುಗಡೆಯಾಗಿದೆ. ಥಿಂಕ್ ಮ್ಯೂಸಿಕ್ ಕನ್ನಡ ಯೂಟ್ಯೂಬ್ ನಲ್ಲಿ ಪೀಟರ್ ಸಿನಿಮಾದ ಆಕರ್ಷಕ ಟೀಸರ್ ಅನಾವರಣ ಮಾಡಲಾಗಿದೆ. ಸಸ್ಪೆನ್ಸ್ ಥ್ರಿಲ್ಲರ್‌ ಡ್ರಾಮಾ ಹಾಗೂ ಪ್ರೀತಿ- ಫ್ಯಾಮಿಲಿ ಕಂಟೆಂಟ್ ಜೊತೆಗೆ ಚೆಂಡೆ ಮೇಳವನ್ನು ಇಟ್ಕೊಂಡು ಟೀಸರ್ ಕಟ್ ಮಾಡಿದ್ದಾರೆ. ರಾಜೇಶ್ ಧ್ರುವ, ಪ್ರತಿಮಾ ನಾಯಕ್ , ಜಾನ್ವಿ ರಾಯಲ, ರಘು ಪಾಂಡೇಶ್ವರ ಇಲ್ಲಿ‌ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: Shah Rukh Khan: ಶಾರುಖ್ ಖಾನ್​ಗೆ 60ರ ಸಂಭ್ರಮ; ಮನ್ನತ್ ಎದುರು ಜನವೋ ಜನ

‘ದೂರದರ್ಶನ’ ಚಿತ್ರ ಖ್ಯಾತಿಯ ನಿರ್ದೇಶಕ ಸುಕೇಶ್‌ ಶೆಟ್ಟಿ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಈ ಬಾರಿ ಸುಕೇಶ್ ಸೆನ್ಸಿಟಿವ್ ಸಸ್ಪೆನ್ಸ್ ಡ್ರಾಮಾ ಕಥಾಹಂದವರನ್ನು ಪ್ರೇಕ್ಷಕರಿಗೆ ಉಣ ಬಡಿಸಲಿದ್ದಾರೆ. ಟೀಸರ್ ಮೂಲಕ ಮತ್ತಷ್ಟು ಚಿತ್ರದ ಮೇಲೆ ಭರವಸೆ ಹೆಚ್ಚಾಗಿದೆ.



ಸಿನಿಮಾದಲ್ಲಿ ಜಾನ್ವಿ ರಾಯಲ, ರವೀಕ್ಷಾ ಶೆಟ್ಟಿ, ಪ್ರತಿಮಾ ನಾಯಕ್, ರಘು ಪಾಂಡೇಶ್ವರ್, ರಾಮ ನಾಡಗೌಡ, ವರುಣ್ ಪಟೇಲ್ ತಾರಾಬಳಗದಲ್ಲಿದ್ದಾರೆ.

ಕನ್ನಡ ಚಿತ್ರರಂಗದ ಖ್ಯಾತ ಸೌಂಡ್ ಇಂಜಿನಿಯರ್ ರವಿ ಹೀರೆಮಠ್ ಹಾಗೂ ರಾಕೇಶ್ ಹೆಗಡೆ ವೃದ್ಧಿ ಸ್ಟುಡಿಯೊಸ್ ಬ್ಯಾನರ್ ನಡಿ ಪೀಟರ್ ಸಿನಿಮಾ ನಿರ್ಮಿಸಿದ್ದಾರೆ. ಗುರುಪ್ರಸಾದ್ ನರ್ನಾಡ್ ಛಾಯಾಗ್ರಹಣ, ನವೀನ್ ಶೆಟ್ಟಿ ಸಂಕಲನ, ದೇವರಾಜ್ ಕಲಾ ನಿರ್ದೇಶನ ಚಿತ್ರಕ್ಕಿದೆ. ಬಹು ಭಾಷೆಯಲ್ಲಿ ಪೀಟರ್ ಸಿನಿಮಾ ತೆರೆಗೆ ಬರಲಿದೆ.



ಇದನ್ನೂ ಓದಿ: ಇದೊಂದೇ ಕಾರಣಕ್ಕೆ ಕಿಚ್ಚನ ಚಪ್ಪಾಳೆ ಮಿಸ್‌ ಮಾಡಿಕೊಂಡ ರಕ್ಷಿತಾ! ತಪ್ಪಾಗಿದ್ದೆಲ್ಲಿ? ಕಿಚ್ಚನ ಕ್ಲಾಸ್‌

ಸುಕೇಶ್ ಶೆಟ್ಟಿ ಈ ಮುಂಚೆ ಸಿನಿಮಾ ಕುರಿತು ಮಾತನಾಡಿ, ಪೀಟರ್ ಸಿನಿಮಾ ಸಿಕ್ಕಾಪಟ್ಟೆ ಭರವಸೆ ಹುಟ್ಟಿಸಿದೆ. ಜನ ಏನು ನಿರೀಕ್ಷೆ ಇಟ್ಟುಕೊಂಡಿದ್ದಾರೋ, ಅದನ್ನ ಎಲ್ಲ ರೀತಿಯಲ್ಲೂ ಪೂರೈಸಲು ಕೆಲಸ ಮಾಡಿದ್ದೇವೆ. ಎಲ್ಲರೂ ಒಂದು ತಂಡವಾಗಿ ಕೆಲಸ ಮಾಡಿದ್ದೇವೆ. ಬಹುತೇಕ ಚಿತ್ರೀಕರಣ ಮಳೆಯಲ್ಲೇ ನಡೆದಿದೆ. ಸಿನಿಮಾಕ್ಕೆ ಅದರ ಮ್ಯೂಸಿಕ್ ಪ್ಲಸ್ ಪಾಯಿಂಟ್ ಆಗಬೇಕು. ನಾವೂ ಕೂಡ ಟ್ರೆಂಡಿಂಗ್ ಹಾಡು ನೀಡಬೇಕು ಎಂಬ ಉದ್ದೇಶದಿಂದ ರಿತ್ವಿಕ್ ಕೆಲಸ ಮಾಡಿದ್ದಾರೆ. ಇಷ್ಟು ಕೆಲಸಕ್ಕೆ ಬೆಂಬಲವಾಗಿ ನಿಂತವರು ನಮ್ಮ ನಿರ್ಮಾಪಕರು. ನಾಲ್ಕು ಭಾಷೆಯಲ್ಲಿ ಚಿತ್ರ ತೆರೆಗೆ ಬರ್ತಿದೆ. ಥಿಂಕ್ ಮ್ಯೂಸಿಕ್ ಖರೀದಿಸಿದ‌ ಮೊದಲ ಸಿನಿಮಾ ಹಾಡು ಪೀಟರ್. ಈ‌ ಮೂಲಕ ಪೀಟರ್ ಚಿತ್ರ ಮೊದಲ ಗೆಲುವು ಪಡೆದಿದೆ ಎಂದು ಹೇಳಿದ್ದರು.