Mahesh Babu: ʻವಾರಣಾಸಿʼ ಸಿನಿಮಾದಲ್ಲಿ ಶಿವಭಕ್ತನಾದ ಪ್ರಕಾಶ್ ರಾಜ್; ಪಾತ್ರದ ಗುಟ್ಟು ರಟ್ಟಾಗಿ ಹೋಯ್ತಾ?
Varanasi Movie: ನಟ ಪ್ರಕಾಶ್ ರಾಜ್ ಅವರು ವಾರಣಾಸಿ ಚಿತ್ರದಲ್ಲಿ ಶಿವಭಕ್ತನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಮಹೇಶ್ ಬಾಬು ಅವರ ತಂದೆಯಾಗಿಯೂ ಪ್ರಕಾಶ್ ರಾಜ್ ಕಾಣಿಸಿಕೊಳ್ಳಬಹುದು ಎನ್ನಲಾಗಿದೆ. ಪ್ರಿಯಾಂಕಾ ಚೋಪ್ರಾ ಮತ್ತು ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರಗಳಲ್ಲಿರುವ ಈ ಸಿನಿಮಾವು 2027ರ ಏಪ್ರಿಲ್ 7 ರಂದು ತೆರೆಕಾಣಲಿದೆ.
-
ರಾಜಮೌಳಿ ಮತ್ತು ಮಹೇಶ್ ಬಾಬು ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ 'ವಾರಣಾಸಿ' ಸಿನಿಮಾಗೆ ಬಿರುಸಿನ ಶೂಟಿಂಗ್ ನಡೆಯುತ್ತಿದೆ. ಸಿನಿಪ್ರೇಮಿಗಳು ಈ ಸಿನಿಮಾಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದಾರೆ. 2027ರ ಏಪ್ರಿಲ್ 7ರಂದು ಈ ಚಿತ್ರ ತೆರೆಕಾಣಲಿದೆ. ಈವರೆಗೂ ಚಿತ್ರದ ಬಗ್ಗೆ ಯಾವುದೇ ಮಾಹಿತಿಗಳು ಸೋರಿಕೆ ಆಗದಂತೆ ಚಿತ್ರತಂಡ ಕುತೂಹಲ ಕಾಯ್ದುಕೊಂಡಿದೆ. ಇದೀಗ ಒಂದೇ ಒಂದೊಂದೇ ಮಾಹಿತಿಗಳು ಹೊರಬೀಳುತ್ತಿವೆ.
ವಾರಣಾಸಿ ಸಿನಿಮಾದಲ್ಲಿ ಪ್ರಕಾಶ್ ರಾಜ್
ಹೌದು, 'ವಾರಣಾಸಿ' ಸಿನಿಮಾದಲ್ಲಿ ಪ್ರಕಾಶ್ ರಾಜ್ ಕಾಣಿಸಿಕೊಂಡಿದ್ದಾರೆ. ಈಚೆಗೆ ಒಂದು ಶೆಡ್ಯೂಲ್ ಶೂಟಿಂಗ್ ಮುಗಿಸಿದ್ದ ಪ್ರಕಾಶ್ ರಾಜ್, "ಅದ್ಭುತವಾದ ಶೆಡ್ಯೂಲ್ ಮುಗಿದಿದೆ, ಇದು ನನ್ನಲ್ಲಿನ ನಟನ ಹಸಿವನ್ನು ನೀಗಿಸಿದೆ" ಎಂದಿದ್ದಾರೆ. ಈಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, "ರಾಜಮೌಳಿ, ಮಹೇಶ್ ಬಾಬು, ಪೃಥ್ವಿರಾಜ್ ಸುಕುಮಾರನ್ ಮತ್ತು ಪ್ರಿಯಾಂಕಾ ಚೋಪ್ರಾ ಅವರಿಗೆ ಧನ್ಯವಾದಗಳು. ನಿಮ್ಮೊಂದಿಗೆ ಕೆಲಸ ಮಾಡಿದ್ದು ತುಂಬಾ ಉತ್ಸಾಹ ನೀಡಿದೆ. ಮುಂದಿನ ಶೆಡ್ಯೂಲ್‌ಗಾಗಿ ಆಸಕ್ತಿಯಿಂದ ಕಾಯುತ್ತಿದ್ದೇನೆ" ಎಂದು ಅವರು ತಿಳಿಸಿದ್ದಾರೆ.
Spirit Movie: ದೀಪಿಕಾ ಬೆನ್ನಲ್ಲೇ ʻಸ್ಪಿರಿಟ್ʼನಿಂದ ಪ್ರಕಾಶ್ ರಾಜ್ ಔಟ್? ಕಾರಣ ಇದು
ಮಹೇಶ್ ತಂದೆ ಪಾತ್ರ?
ಅಂದಹಾಗೆ, 'ವಾರಣಾಸಿ' ಸಿನಿಮಾದಲ್ಲಿ ಮಹೇಶ್ ಬಾಬು ತಂದೆಯ ಪಾತ್ರದಲ್ಲಿ ಪ್ರಕಾಶ್ ರಾಜ್ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಆದರೆ ಆ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲವಾದರೂ, "ಈ ಸಿನಿಮಾದಲ್ಲಿ ನಾನು ಒಬ್ಬ ಪರಮ ಶಿವಭಕ್ತನ ಪಾತ್ರ ನಿರ್ವಹಿಸುತ್ತಿದ್ದೇನೆ" ಎಂದು ಪ್ರಕಾಶ್ ರಾಜ್ ತಿಳಿಸಿದ್ದಾರೆ. ಇದರ ಜೊತೆಗೆ ಹಿಂದಿಯ ಅಜಯ್ ದೇವ್‌ಗನ್ ನಟನೆಯ 'ದೃಶ್ಯಂ 3' ಚಿತ್ರದಲ್ಲೂ ಪ್ರಕಾಶ್ ರಾಜ್ ಅವರು ಪ್ರಮುಖ ಪಾತ್ರ ಮಾಡುತ್ತಿದ್ದಾರೆ.
ಅಂದಹಾಗೆ, ಪ್ರಕಾಶ್ ರಾಜ್ ಈ ಹಿಂದೆ ರಾಜಮೌಳಿ ನಿರ್ದೇಶನದ 'ವಿಕ್ರಮಾರ್ಕುಡು' ಚಿತ್ರದಲ್ಲಿ ನಟಿಸಿದ್ದರು. ಅತ್ತ ಮಹೇಶ್ ಬಾಬು ಅವರೊಂದಿಗೆ ಹಲವು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಅವರಿಬ್ಬರದ್ದು ಹಿಟ್ ಕಾಂಬಿನೇಷನ್ ಅನ್ನೋದರಲ್ಲಿ ಡೌಟೇ ಇಲ್ಲ. 'ರಾಜಕುಮಾರುಡು' ಚಿತ್ರದಿಂದ ಈಚೆಗೆ ಬಂದ 'ಗುಂಟೂರು ಖಾರಂ' ಚಿತ್ರದವರೆಗೂ ನಟಿಸಿದ್ದಾರೆ. ಇನ್ನು, ಈ ಹಿಂದೆ 'ಢಮರುಕಂ' ಸಿನಿಮಾದಲ್ಲಿ ಶಿವನ ಪಾತ್ರದಲ್ಲಿ ಪ್ರಕಾಶ್ ರಾಜ್ ಕಾಣಿಸಿಕೊಂಡಿದ್ದರು. ವಾರಣಾಸಿಯಲ್ಲಿ ಈಗ ಶಿವಭಕ್ತನಾಗಿ ಕಾಣಿಸಿಕೊಳ್ಳಲಿರುವುದು ವಿಶೇಷ.
ಯಾರಿಗೆ ಯಾವ ಪಾತ್ರಗಳು?
'ವಾರಣಾಸಿ' ಸಿನಿಮಾದಲ್ಲಿ ಮಹೇಶ್ ಬಾಬು 'ರುದ್ರ'ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರಿಯಾಂಕಾ ಚೋಪ್ರಾ 'ಮಂದಾಕಿನಿ'ಯಾಗಿ ಹಾಗೂ ಪೃಥ್ವಿರಾಜ್ ಸುಕುಮಾರನ್ 'ಕುಂಭ'ನಾಗಿ ನಟಿಸುತ್ತಿದ್ದಾರೆ. ಇಲ್ಲಿಯವರೆಗೆ ರಾಜಮೌಳಿ ಈ ಮೂರು ಪ್ರಮುಖ ಪಾತ್ರಗಳನ್ನು ಮಾತ್ರ ಬಹಿರಂಗಪಡಿಸಿದ್ದಾರೆ. ಈ ಮೂವರ ಫಸ್ಟ್ ಲುಕ್‌ಗಳನ್ನು ಕೂಡ ಬಿಡುಗಡೆ ಮಾಡಿದ್ದಾರೆ. ಟೈಟಲ್ ಟೀಸರ್ ಮೂಲಕ 'ವಾರಣಾಸಿ ವರ್ಲ್ಡ್' ಹೇಗಿರಲಿದೆ ಮತ್ತು ಯಾವ ರೇಂಜ್‌ನಲ್ಲಿ ಇರಲಿದೆ ಎಂಬುದರ ಸಣ್ಣ ಝಲಕ್ ತೋರಿಸಿದ್ದಾರೆ. ಅಂದಹಾಗೆ, ಈ ಸಿನಿಮಾಲ್ಲಿ ಕೆಲ ಸಮಯ ರಾಮಾಯಣದ ಎಪಿಸೋಡ್ ಇರಲಿದೆಯಂತೆ.