ʻಹುಚ್ಚʼ ಸಿನಿಮಾ ಹೀರೋ ಥರ ಹೊಸ ಧಾರಾವಾಹಿಯಲ್ಲಿ ಮಿಂಚಲು ರೆಡಿಯಾದ ʻರಾಮಾಚಾರಿʼ ನಟ ರಿತ್ವಿಕ್ ಕೃಪಾಕರ್
'ರಾಮಾಚಾರಿ' ಧಾರಾವಾಹಿಯ ಮೂಲಕ ಮನೆಮಾತಾಗಿದ್ದ ನಟ ರಿತ್ವಿಕ್ ಕೃಪಾಕರ್, ಈಗ ಏಕಕಾಲದಲ್ಲಿ ಕಿರುತೆರೆ ಮತ್ತು ಹಿರಿತೆರೆಗೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಜೂನ್ ಕೊನೆಯ ವಾರದಲ್ಲಿ ಜನಪ್ರಿಯ ವಾಹಿನಿಯೊಂದರಲ್ಲಿ ರಿತ್ವಿಕ್ ಅವರ ಹೊಸ ಧಾರಾವಾಹಿ ಆರಂಭವಾಗಲಿದ್ದು, ಇಲ್ಲಿ ಅವರು 'ಹುಚ್ಚ' ಚಿತ್ರದ ಸುದೀಪ್ ಮಾದರಿಯ ರಗಡ್ ಲೋಕಲ್ ಹುಡುಗನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
-
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ʻರಾಮಾಚಾರಿʼ ಧಾರಾವಾಹಿಯು ಕಳೆದ ವರ್ಷ ಅಂತ್ಯವಾಗಿತ್ತು. ಬರೋಬ್ಬರಿ 1 ಸಾವಿರ ಸಂಚಿಕೆಗಳನ್ನು ಪೂರೈಸಿದ್ದ ʻರಾಮಾಚಾರಿʼ ಧಾರಾವಾಹಿಯಲ್ಲಿ ನಾಯಕನಾಗಿ ರಿತ್ವಿಕ್ ಕೃಪಾಕರ್ ಮತ್ತು ನಾಯಕಿಯಾಗಿ ಮೌನ ಗುಡ್ಡೆಮನೆ ನಟಿಸಿದ್ದರು. ಇದೀಗ ರಿತ್ವಿಕ್ ಹೊಸದೊಂದು ಪ್ರಾಜೆಕ್ಟ್ ಮೂಲಕ ಕನ್ನಡ ಕಿರುತೆರೆ ವೀಕ್ಷಕರನ್ನು ರಂಜಿಸಲು ಬರುತ್ತಿದ್ದಾರೆ. ಧಾರಾವಾಹಿ ಮಾತ್ರವಲ್ಲದೆ, ಸಿನಿಮಾರಂಗಕ್ಕೂ ಅವರೀಗ ಕಾಲಿಡುತ್ತಿದ್ದಾರೆ. ಈ ಬಗ್ಗೆ ವಿಶ್ವವಾಣಿ ಟಿವಿ ಜೊತೆ ಎಕ್ಸ್‌ಕ್ಲೂಸಿವ್ ಆಗಿ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
ನನ್ನ ಮೊದಲ ಧಾರಾವಾಹಿ ಸಾವಿರ ಸಂಚಿಕೆ ಪ್ರಸಾರ ಆಗಿದೆ
"ರಾಮಾಚಾರಿ ನನ್ನ ಜರ್ನಿಯ ಮೊದಲ ಹೆಜ್ಜೆ. ನಾಲ್ಕು ವರ್ಷಗಳಲ್ಲಿ ನನಗೆ ಅಷ್ಟೊಂದು ಪ್ರೀತಿ ಸಿಗುತ್ತದೆ ಎಂಬುದು ಗೊತ್ತಿರಲಿಲ್ಲ. ಅದು ಸಾವಿರ ಸಂಚಿಕೆ ತಲುಪಿತ್ತು. ಜನರ ಪ್ರೀತಿಗೆ ನಾನು ಧನ್ಯವಾದ ಹೇಳುತ್ತೇನೆ. ರಾಮಾಚಾರಿ ಆಗಿ ಎಲ್ಲರೂ ನನ್ನನ್ನು ನೋಡಿರುತ್ತಾರೆ. ಅದಕ್ಕೆ ಒಂದು ಚಿಕ್ಕ ಗ್ಯಾಪ್ ತೆಗೆದುಕೊಂಡೆ. ಈಗ ಒಂದು ಸಿನಿಮಾ ಶುರುವಾಗಿದೆ. ಜೊತೆಗೆ ಒಂದು ಸೀರಿಯಲ್ ಕೂಡ ಮಾಡುತ್ತಿದ್ದೇನೆ" ಎಂದು ನಟ ರಿತ್ವಿಕ್ ಕೃಪಾಕರ್ ತಿಳಿಸಿದ್ದಾರೆ.
Mouna Guddemane: ‘ರಾಮಾಚಾರಿ’ ಬಳಿಕ ಈ ಧಾರಾವಾಹಿಗೆ ನಾಯಕಿ? ಮೌನ ಗುಡ್ಡೆಮನೆಗೆ ಬಂಪರ್ ಆಫರ್!
ಜನಪ್ರಿಯ ವಾಹಿನಿಯಲ್ಲೇ ಹೊಸ ಸೀರಿಯಲ್
"ಜೂನ್ ಕೊನೇ ವಾರದಲ್ಲಿ ನನ್ನ ಹೊಸ ಧಾರಾವಾಹಿ ಪ್ರಸಾರ ಆರಂಭಿಸಲಿದೆ. ಜನಪ್ರಿಯ ವಾಹಿನಿಯಲ್ಲೇ ಆ ಸೀರಿಯಲ್ ಬರಲಿದೆ. ಇಷ್ಟು ಸಮಯ ಎಲ್ಲರೂ ರಾಮಾಚಾರಿ ಆಗಿ ನೋಡಿದ್ದಾರೆ. ಒಬ್ಬ ಸಂಪ್ರದಾಯ ಪಾಲಿಸುವ, ಪೌರೋಹಿತ್ಯ ಮಾಡಿಕೊಂಡಿರುವ ಒಬ್ಬ ಸಜ್ಜನ ಹುಡುಗನನ್ನಾಗಿ ಆ ಧಾರಾವಾಹಿಯಲ್ಲಿ ನೋಡಿದ್ದಾರೆ. ಆದರೆ, ಮುಂದೆ ಬರಲಿರುವ ಧಾರಾವಾಹಿಯಲ್ಲಿ ತುಂಬಾ ಭಿನ್ನವಾಗಿ ಕಾಣಿಸಿಕೊಳ್ಳಲಿದ್ದೇನೆ" ಎಂದು ರಿತ್ವಿಕ್ ಕೃಪಾಕರ್ ಹೇಳಿದ್ದಾರೆ.
Ramachari- Yajamana serial: ಯಜಮಾನ -ರಾಮಾಚಾರಿ ಸೀರಿಯಲ್ ಮಹಾಸಂಗಮದಲ್ಲಿ ಬಿಗ್ ಟ್ವಿಸ್ಟ್!
ತುಂಬಾ ರಗಡ್ ಪಾತ್ರ ಮಾಡಲಿದ್ದೇನೆ
"ನನ್ನ ಹೊಸ ಧಾರಾವಾಹಿಯಲ್ಲಿ ನಾನು ಹುಚ್ಚ ಸಿನಿಮಾದಲ್ಲಿ ಸುದೀಪ್ ಅವರು ಮಾಡಿದಂತಹ ಒಬ್ಬ ಲೋಕಲ್ ಹುಡುಗನ ಪಾತ್ರವನ್ನು ಮಾಡುತ್ತಿದ್ದೇನೆ. ತುಂಬಾ ರಗಡ್ ಆಗಿ ಕಾಣಿಸಿಕೊಳ್ಳಲಿದ್ದೇನೆ. ನನ್ನ ಈ ಅವತಾರವನ್ನು ಕೂಡ ಕನ್ನಡಿಗರು ನೋಡಿ ಹರಸಬೇಕು ಅಂತ ನಾನು ಮನವಿ ಮಾಡಿಕೊಳ್ಳುತ್ತೇನೆ. ನಾನು ಎಂದಿಗೂ ಸೋಶಿಯಲ್ ಮೀಡಿಯಾದಲ್ಲಿ ಕೇಳಿಬರುವ ಕಾಮೆಂಟ್‌ಗಳನ್ನು ಗಂಭೀರವಾಗಿ ತೆಗೆದುಕೊಳ್ಳಲ್ಲ. ಪಾಸಿಟಿವ್ ಆಗಲಿ, ನೆಗೆಟಿವ್ ಆಗಲಿ, ಅದು ನನಗೆ ಮುಖ್ಯವಲ್ಲ. ನನಗೆ ಜನರನ್ನು ರಂಜಿಸಬೇಕು ಎಂಬುದಷ್ಟೇ ಮುಖ್ಯ" ಎಂದು ರಿತ್ವಿಕ್ ಕೇಳಿಕೊಂಡಿದ್ದಾರೆ.
ರಾಮಾಚಾರಿ ನಟ ರಿತ್ವಿಕ್ ಸಂದರ್ಶನ
ಸಿನಿಮಾ ಮಾಡುವುದಕ್ಕೆ ರಿತ್ವಿಕ್ ತಯಾರಿ
"ನಾನು ಸಿನಿಮಾಕ್ಕಾಗಿ ತಯಾರಿ ಮಾಡಿಕೊಳ್ಳುತ್ತಿದ್ದೇನೆ. ಸಿನಿಮಾ ಮಾಡುವುದು ಧಾರಾವಾಹಿ ಮಾಡುವುದಕ್ಕಿಂತ ತುಂಬಾ ಭಿನ್ನವಾದ ಕೆಲಸ. ಈಗಾಗಲೇ ನಿರ್ದೇಶಕರು ಕಥೆಗಳನ್ನು ಹೇಳುತ್ತಿದ್ದಾರೆ. ಈಗಾಗಲೇ ಪ್ರಕ್ರಿಯೆ ನಡೆಯುತ್ತಿದೆ. ಈ ವರ್ಷದೊಳಗೆ ನಾನು ದೊಡ್ಡಪರದೆ ಮೇಲೆ ಕಾಣಿಸಿಕೊಳ್ಳುತ್ತೇನೆ. ಆ ಹೊಸ ಸಿನಿಮಾದಲ್ಲೂ ಕೂಡ ನಾನು ಬೇರೆ ಥರದ ಪಾತ್ರವನ್ನೇ ಮಾಡಲಿದ್ದೇನೆ" ಎಂದು ರಿತ್ವಿಕ್ ಹೇಳಿಕೊಂಡಿದ್ದಾರೆ.