ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ರಶ್ಮಿಕಾ ಮಂದಣ್ಣ - ವಿಜಯ್‌ ದೇವರಕೊಂಡ ಮದುವೆಯಲ್ಲಿ ಮೊಬೈಲ್‌ ಫೋನ್‌ ಬ್ಯಾನ್!‌ ಫೋಟೋಗ್ರಾಫರ್ಸ್‌ ಟೀಮ್‌ಗೂ ಕಟ್ಟುನಿಟ್ಟಿನ ರೂಲ್ಸ್!‌

ರಾಜಸ್ಥಾನದ ಉದಯಪುರದಲ್ಲಿ ಫೆಬ್ರವರಿ 26 ರಂದು ರಶ್ಮಿಕಾ ಮಂದಣ್ಣ ಮತ್ತು ವಿಜಯ್‌ ದೇವರಕೊಂಡ ಅವರ ಮದುವೆಯು ಅದ್ದೂರಿಯಾಗಿ ನೆರವೇರಲಿದೆ. ಈ ಖಾಸಗಿ ಸಮಾರಂಭದಲ್ಲಿ ಮೊಬೈಲ್ ಫೋನ್ ಬಳಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದ್ದು, ಫೋಟೋ ಮತ್ತು ವಿಡಿಯೋಗಳು ಸೋರಿಕೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.

ರಶ್ಮಿಕಾ-ವಿಜಯ್ ಮದುವೆಯಲ್ಲಿ ಮೊಬೈಲ್ ಬ್ಯಾನ್; ಇಷ್ಟೊಂದು ಕಠಿಣ ಕ್ರಮ ಯಾಕೆ?

-

Avinash GR
Avinash GR Feb 17, 2026 3:46 PM

ರಶ್ಮಿಕಾ ಮಂದಣ್ಣ ಮತ್ತು ವಿಜಯ್‌ ದೇವರಕೊಂಡ ಅವರ ಮದುವೆಯು ಇದೆ ಫೆ.26ರಂದು ರಾಜಸ್ಥಾನದ ಉದಯಪುರ ಅರಮನೆಯಲ್ಲಿ ನಡೆಯಲಿದೆ ಎಂಬ ಖಚಿತ ಮಾಹಿತಿ ಕೇಳಿಬಂದಿದೆ. ಈ ಮದುವೆಯು ತುಂಬ ಖಾಸಗಿಯಾಗಿ ನಡೆಯಲಿದ್ದು, ಯಾವುದೇ ಸೆಲೆಬ್ರಿಟಿಗಳಿಗೆ ಈ ಮದುವೆಯಲ್ಲಿ ಆಹ್ವಾನ ನೀಡಿಲ್ಲ. ಬದಲಿಗೆ, ರಶ್ಮಿಕಾ ಮತ್ತು ವಿಜಯ್‌ ಕುಟುಂಬಸ್ಥರು, ಸ್ನೇಹಿತರು ಹಾಗೂ ಕೆಲವೇ ಕೆಲವು ಆಪ್ತರ ಸಮ್ಮುಖದಲ್ಲಿ ಮಾತ್ರ ಭಾಗಿಯಾಗಲಿದ್ದಾರೆ ಎಂದು ಹೇಳಲಾಗಿದೆ ಮತ್ತು ಈ ಮದುವೆ ಬಹಳ ಸರಳವಾಗಿ ನಡೆಯಲಿದೆಯಂತೆ

ಮೊಬೈಲ್‌ ಫೋನ್‌ ಬ್ಯಾನ್‌

ಇನ್ನು, ಈ ಮದುವೆಯಲ್ಲಿ ಮೊಬೈಲ್‌ ಫೋನ್‌ ಬ್ಯಾನ್‌ ಮಾಡಲಾಗಿದೆ. ಮದುವೆಗೆ ಆಗಮಿಸುವವರು ಮೊಬೈಲ್‌ ತರುವಂತಿಲ್ಲ. ಯಾವುದೇ ಫೋಟೋ ಮತ್ತು ವಿಡಿಯೋ ವೈರಲ್‌ ಆಗಬಾರದು ಎಂದು ಕಾರಣಕ್ಕೆ ಈ ನಿಯಮ ಮಾಡಲಾಗಿದೆ. "ಅತಿಥಿಗಳ ಪಟ್ಟಿ ತುಂಬಾ ಚಿಕ್ಕದಾಗಿದೆ ಮತ್ತು ಅಲ್ಲಿ ಕಟ್ಟುನಿಟ್ಟಾದ 'ನೋ-ಫೋನ್ ಪಾಲಿಸಿ' (ಮೊಬೈಲ್ ನಿಷೇಧ) ಜಾರಿಯಲ್ಲಿರುತ್ತದೆ. ಫೋಟೋಗ್ರಫಿ ತಂಡದವರಿಂದಲೂ ಗೌಪ್ಯತಾ ಒಪ್ಪಂದಕ್ಕೆ ಸಹಿ ಹಾಕಿಸಿಕೊಳ್ಳಲಾಗಿದೆ" ಎಂದು ಮೂಲವೊಂದು ತಿಳಿಸಿದೆ. ಯಾವುದೇ ಕಾರಣಕ್ಕೂ ಅವರು ರಶ್ಮಿಕಾ ಮತ್ತು ವಿಜಯ್‌ ಮದುವೆ ಫೋಟೋಗಳನ್ನು ಎಲ್ಲಿಯೂ ಶೇರ್‌ ಮಾಡುವಂತಿಲ್ಲ ಎಂದು ಈ ಒಪ್ಪಂದದಲ್ಲಿ ತಿಳಿಸಲಾಗಿದೆ.

Rashmika-Vijay Wedding: ರಶ್ಮಿಕಾ-ವಿಜಯ್ ದೇವರಕೊಂಡ ಮದುವೆ ಸಿದ್ಧತೆ ಜೋರು? ವಿಡಿಯೋದಲ್ಲಿದೆ ಮಹಾಸತ್ಯ!

ಈಗಾಗಲೇ ಮದುವೆ ಸಿದ್ಧತೆಗಳು ಭರದಿಂದ ಸಾಗಿದ್ದು, ಫೆಬ್ರವರಿ 24 ರಿಂದಲೇ ಮದುವೆ ಶಾಸ್ತ್ರಗಳು ಶುರುವಾಗಲಿದ್ದು, ಫೆಬ್ರವರಿ 26 ರಂದು ಮುಹೂರ್ತ ನಡೆಯಲಿದೆ. ಇನ್ನು, ಮದುವೆಯ ಮುಖ್ಯ ಸಮಾರಂಭಕ್ಕೆ ಚಿತ್ರರಂಗದ ಸಹೋದ್ಯೋಗಿಗಳು ಅಥವಾ ಸಹನಟರಿಗೆ ಆಹ್ವಾನ ನೀಡಿಲ್ಲವಂತೆ. ಆದರೆ, ಮಾರ್ಚ್ 4 ರಂದು ಹೈದರಾಬಾದ್‌ನಲ್ಲಿ ಅದ್ದೂರಿ ಆರತಕ್ಷತೆ ನಡೆಯುವ ನಿರೀಕ್ಷೆಯಿದೆ. ಅಂದು ಚಿತ್ರರಂಗದ ಗಣ್ಯರು ಆಗಮಿಸುವ ಸಾಧ್ಯತೆ ಇದೆ.

Rashmika Mandanna: ಬರಹಗಾರರು, ನಿರ್ದೇಶಕರು ಮಹಿಳೆಯರಿಗಾಗಿಯೇ ಅರ್ಥಪೂರ್ಣ ಪಾತ್ರಗಳನ್ನು ಸೃಷ್ಟಿಸಬೇಕು; ರಶ್ಮಿಕಾ ಮಂದಣ್ಣ

ರಶ್ಮಿಕಾ ಹೀಗೆ ಹೇಳಿದ್ರಾ?

ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಮದುವೆ ಆಮಂತ್ರಣ ಪತ್ರಿಕೆ ಹರಿದಾಡುತ್ತಿದ್ದರೂ, ಮದುವೆ ವಿಚಾರ ಮಾತ್ರ ಇನ್ನೂ ಗುಟ್ಟಾಗಿಯೇ ಉಳಿದಿದೆ. ಈಚೆಗೆ ವಿಮಾನ ನಿಲ್ದಾಣವೊಂದರಲ್ಲಿ ರಶ್ಮಿಕಾಗೆ ಮಾಧ್ಯಮದವರು ಶುಭಾಶಯ ತಿಳಿಸಿದ್ದರು! ಆಗ ರಶ್ಮಿಕಾ, "ನೀವು ಯಾವುದರ ಬಗ್ಗೆ ಮಾತನಾಡುತ್ತಿದ್ದೀರಿ ಅಂತ ನಂಗೆ ಅರ್ಥ ಆಗುತ್ತಿಲ್ಲ" ಎಂದು ಹೇಳಿದ್ದಾರಂತೆ!

ಸಿನಿಮಾ ವಿಚಾರಕ್ಕೆ ಬರುವುದಾದರೆ, 'ಗೀತ ಗೋವಿಂದಂ' ಮತ್ತು 'ಡಿಯರ್ ಕಾಮ್ರೇಡ್' ಅಂತಹ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಪ್ರಸ್ತುತ 'ರಣಬಲಿ' ಚಿತ್ರಕ್ಕಾಗಿ ಮೂರನೇ ಬಾರಿಗೆ ಒಂದಾಗಿದ್ದಾರೆ. ಇನ್ನು, ಕಳೆದ ವರ್ಷ ಅಕ್ಟೋಬರ್‌ನಲ್ಲಿ ಇವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಸುದ್ದಿಗಳೂ ಹಬ್ಬಿದ್ದವು. ಆಗಲೂ ಇವರಿಬ್ಬರು ಅಧಿಕೃತವಾಗಿ ಎಲ್ಲೂ ಪ್ರತಿಕ್ರಿಯಿಸಿಲ್ಲ.