ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Ravichandran Hamsalekha: ನಮ್ಮಲ್ಲಿ ಬಿರುಕು ಬಿಟ್ಟಾಗ ಹಲವರು ಸಂಭ್ರಮಿಸಿದ್ದೇ ಹೆಚ್ಚು! ರವಿಚಂದ್ರನ್ ಮುಕ್ತ ಮಾತು

Ravichandran Hamsalekha: ಕ್ರೇಜಿ ಸ್ಟಾರ್ ರವಿಚಂದ್ರನ್ಹಾ ಗೂ ನಾದಬ್ರಹ್ಮ ಹಂಸಲೇಖ ಇಬ್ಬರೂ ಬೇರೆಯಾದಾಗ ಅವರ ಅಭಿಮಾನಿಗಳಿಗೆ ನಿರಾಸೆಯಾಗಿತ್ತು. ಆದರೆ, ಸುಮಾರು ಒಂದೂವರೆ ಎರಡು ದಶಕಗಳಿಂದ ಈ ಜೋಡಿ ಒಟ್ಟಿಗೆ ಸಿನಿಮಾ ಮಾಡಿಯೇ ಇಲ್ಲ. ಒಂದೇ ಒಂದು ಹಾಡು ಬಂದಿಲ್ಲ. ಆದರೆ ಈಗ ಅವರು ಒಂದಾಗಿದ್ದಾರೆ. ವೇದಿಕೆಯಲ್ಲಿ ಒಟ್ಟಿಗೆ ಕುಳಿತು ಆ ದಿನಗಳನ್ನು ಮೆಲುಕು ಹಾಕಿದ್ದಾರೆ. ತಮ್ಮಿಬ್ಬರ ಜರ್ನಿ ಬಗ್ಗೆ, ದೂರ ಆಗಿದ್ದರ ಬಗ್ಗೆ ಮಾತಾಡಿದ್ದಾರೆ.

ನಮ್ಮಲ್ಲಿ ಬಿರುಕು ಬಿಟ್ಟಾಗ ಹಲವರು ಸಂಭ್ರಮಿಸಿದ್ದೇ ಹೆಚ್ಚು! ರವಿಚಂದ್ರನ್

ರವಿಚಂದ್ರನ್‌- ಹಂಸಲೇಖ -

Yashaswi Devadiga
Yashaswi Devadiga Mar 21, 2026 9:02 AM

ಕ್ರೇಜಿ ಸ್ಟಾರ್ ರವಿಚಂದ್ರನ್ (Ravichandran) ಹಾಗೂ ನಾದಬ್ರಹ್ಮ ಹಂಸಲೇಖ (Hamsalekha) ಇಬ್ಬರೂ ಬೇರೆಯಾದಾಗ ಅವರ ಅಭಿಮಾನಿಗಳಿಗೆ ನಿರಾಸೆಯಾಗಿತ್ತು. ಆದರೆ, ಸುಮಾರು ಒಂದೂವರೆ ಎರಡು ದಶಕಗಳಿಂದ ಈ ಜೋಡಿ ಒಟ್ಟಿಗೆ ಸಿನಿಮಾ ಮಾಡಿಯೇ ಇಲ್ಲ. ಒಂದೇ ಒಂದು ಹಾಡು ಬಂದಿಲ್ಲ. ಆದರೆ ಈಗ ಅವರು ಒಂದಾಗಿದ್ದಾರೆ. ವೇದಿಕೆಯಲ್ಲಿ ಒಟ್ಟಿಗೆ ಕುಳಿತು ಆ ದಿನಗಳನ್ನು ಮೆಲುಕು ಹಾಕಿದ್ದಾರೆ. ಸಿನಿಮಾ ಅಲ್ಲದೇ ಹೋದರೂ, ಇಬ್ಬರೂ ಒಂದೇ ವೇದಿಕೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. 'ಕ್ರೇಜಿ ಬ್ರಹ್ಮ' ಕಾನ್ಸರ್ಟ್ ಮೂಲಕ ಮತ್ತೆ ಸಿನಿಪ್ರೇಮಿಗಳನ್ನ, ಸಂಗೀತ ಪ್ರಿಯರನ್ನು ರಂಜಿಸಲಿದ್ದಾರೆ. ತಮ್ಮಿಬ್ಬರ ಜರ್ನಿ (Journey) ಬಗ್ಗೆ, ದೂರ ಆಗಿದ್ದರ ಬಗ್ಗೆ ಮಾತಾಡಿದ್ದಾರೆ.

ಬಿರುಕು ಬಿಟ್ಟಾಗ ಸಂಭ್ರಮಿಸಿದರು

ರವಿಚಂದ್ರನ್‌ ಮಾತನಾಡಿ, ಹೇಗೆ ಸಿನಿಮಾ ಮಾಡಿದ್ವಿ ಅದೆಲ್ಲ ಹಂಚಿಕೊಳ್ಳಲು ಒಟ್ಟಾಗಿ ಬಂದ್ದೇವೆ. ಆಡಿಯೋ , ವಿಷ್ಯುಯಲ್‌ ನಮ್ಮಿಬ್ಬರ ಕಾಂಬಿನೇಶನ್‌ ಸಿಂಕ್‌ ಮಾಡಿತ್ತು. ನಾವು ಯಾವತ್ತೂ ಹೆಗಲ ಮೇಲೆ ಕೈ ಹಾಕ್ಕೊಂಡು ತಿರುಗಾಡಿದವರು ಅಲ್ಲ. ಕೆಲಸ ಮುಗಿಸಿ ಸೀದಾ ಮನೆಗೆ ಹೋಗ್ತಾ ಇದ್ದೀವಿ. ಇನ್ನು ಇಂದಿನ ಇಂಡಸ್ಟ್ರಿಯಲ್ಲಿ ಆ ಚಾಲೆಂಜಿಂಗ್‌ ಬೇಕು.

ಇದನ್ನೂ ಓದಿ: Maatrubhumi Movie: ಸಲ್ಮಾನ್ ಖಾನ್ `ಮಾತೃಭೂಮಿ' ಬಿಡುಗಡೆ ವಿಳಂಬ ಆಗ್ತಾ ಇರೋದು ಏಕೆ? ಇಲ್ಲಿದೆ ಕಾರಣ

ನಮ್ಮಿಬ್ಬರಲ್ಲಿ ಬಿರುಕು ಬಿಟ್ಟಾಗ ಸಂಭ್ರಮಿಸಿದವರು ಜಾಸ್ತಿ. ಕಾರಣಾಂತರಗಳಿಂದ ಬಿರುಕು ಬರತ್ತೆ. ಬಿರುಕು ಬಂದಾಗ ಅದರ ಮೌಲ್ಯ ಗೊತ್ತಾಗತ್ತೆ. 40 ವರ್ಷಗಳಿಂದ ಏನು ಗೊತ್ತೇ ಇರಲಿಲ್ಲ. ಹಂಸಲೇಖ ಬರೆದು ಕೊಟ್ಟ ಮೇಲೆ ಗೊತ್ತಾಯ್ತು. ಪ್ರತಿ ಸಾಹಿತ್ಯಕ್ಕೆ ಭಾವನೆ ಕೊಟ್ಟಿದ್ದೇ ಅವರು. ಇವತ್ತಿಗೂ ನಾವಿಬ್ಬರೂ ಕೂತು ಜಗಳ ಆಡಿಲ್ಲ. ಇವತ್ತು ಕೂಡ ನಾನು ಏನಾದರೂ ಜಾಸ್ತಿ ನಕ್ಕಿದ್ದೀನಿ ಅಂದ್ರೆ ಅದು ಹಂಸಲೇಖ ಜೋತೆ ಇದ್ದಾಗ ಮಾತ್ರ.

ನನ್ನ ಮತ್ತು ಇವರ ನಡುವೆ ಚಿಕ್ಕ ಬೆಂಕಿ ಶುರುವಾಗಿತ್ತು

ಚಾಲೆಂಜ್‌ ಆಗ ಹೇಗಿತ್ತು ಅಂದರೆ, ಆಗ ಹೀಗೆ ಹಾಡು ಬೇಕು ಅಂದರೆ ಹಾಗೇ ಮಾಡೋರು. ಫಸ್ಟ್‌ ಪಲ್ಲವಿ ಬರೆದಿದ್ದೇ ಸೋನೆ ಸೋನೆ ಸಾಂಗ್‌. ಆಗಲೇ ನನ್ನ ಮತ್ತು ಇವರ ನಡುವೆ ಚಿಕ್ಕ ಬೆಂಕಿ ಶುರುವಾಗಿತ್ತು. ಹಾಡಿಗೆ ಹಂಸಲೇಖ ಅವರು 40 ಪಲ್ಲವಿ ಬರೆದರು. ನಾನು ಎಲ್ಲವನ್ನೂ ತಿರಸ್ಕರಿಸಿದೆ. ಕೊನೆಗೆ ಮೊದಲು ಬರೆದಿದ್ದನ್ನೆ ಒಪ್ಪಿಕೊಂಡೆ. ನಮ್ಮ ಸ್ನೇಹ ನಮ್ಮ ಕೆಲಸದಲ್ಲಿ ಕಾಣಿಸುತ್ತದೆ’ಎಂದು ರವಿಚಂದ್ರನ್ ಅವರು ಹೇಳಿದ್ದಾರೆ.

ನಮ್ಮ ಹೃದಯದಲ್ಲಿ ಬಿರುಕು ಬಿಟ್ಟಾಗ ಅಕ್ಕಪಕ್ಕದವರು ಸಂಭ್ರಮಿಸಿದ್ದೇ ಜಾಸ್ತಿ. ನಿಮ್ಮಲ್ಲಿ ಬಿರುಕು ಬೇಕು ಸೇರ್ಕೊಳ್ಳಿ ಅಂತ ಹೇಳೋದಕ್ಕೆ ಇಷ್ಟು ಜನ ಸೇರ್ಕೊಂಡಿದ್ದು ಇದೇ ಮೊದಲು. ಇವತ್ತಿಗೂ ನಮ್ಮಿಬ್ಬರ ಹಾಡುಗಳೇ ಹೆಚ್ಚು ರೀಲ್ಸ್ ಆಗುತ್ತಿವೆ. ಇವತ್ತಿಗೂ ನಾವಿಬ್ಬರೂ ಬೆಸ್ಟ್ ಫ್ರೆಂಡ್ಸ್, ಬೆಸ್ಟ್ ಲವರ್ಸ್.

ಇದನ್ನೂ ಓದಿ: Dhurandhar 2 collection: ಸಿಗ್ತಿಲ್ಲ ಟಿಕೆಟ್, ʻಧುರಂಧರ್‌ʼ ಕ್ರೇಜ್ ಭಾರೀ ಜೋರು! ಗಳಿಕೆ ಎಷ್ಟು?

ಸುಮಾರು 15 ವರ್ಷಗಳಿಂದ ನೀವಿಬ್ಬರೂ ಯಾಕೆ ಸಿನಿಮಾ ಮಾಡುತ್ತಿಲ್ಲ ಅಂತ ಒಂದೇ ಪ್ರಶ್ನೆ. ವೇದಿಕೆಯಲ್ಲಿಯೇ ಬರುತ್ತೇವೆ. ಒಟ್ಟಾಗಿ ನಾವು ಮಾಡಿದ ಕೆಲಸಗಳನ್ನು ನೆನಪಿಸಿಕೊಳ್ಳುತ್ತೇವೆ ಎಂದರು. ಆದರೆ ನಾವಿಬ್ಬರೂ ಬೀದಿಲಿ ರಂಪಾಟ ಮಾಡ್ತಾ ಇರಲಿಲ್ಲ. ಆದರೀಗ ಅದು ಶುರು ಆಗಿದೆ ಎಂದರು.