ಬ್ಲಾಕ್‌ಬಸ್ಟರ್ ‘ಪ್ರೇಮದ ಊರಲಿ’ ಚಿತ್ರಕ್ಕೆ ಈ ಮೊದಲು ಕನ್ನಡದ ಜನಪ್ರಿಯ ನಟಿಯೊಬ್ಬರ ಹೆಸರನ್ನಿಟ್ಟಿದ್ದ ಚಿತ್ರತಂಡ; ಯಾರು ಆ ಹೀರೋಯಿನ್?
Premada Oorali Movie: ಮನೋಜ್ ಕುಮಾರ್ ನಿರ್ದೇಶನದ ‘ಪ್ರೇಮದ ಊರಲಿ’ ಚಿತ್ರವು ಸ್ಯಾಂಡಲ್‌ವುಡ್ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದ್ದು, ಕೇವಲ ಹತ್ತೇ ದಿನಗಳಲ್ಲಿ ಬರೋಬ್ಬರಿ 15 ಕೋಟಿ ಗಳಿಸಿ ಮಂಕಾಗಿದ್ದ ಚಿತ್ರರಂಗಕ್ಕೆ ಸಂಚಲನ ತಂದಿದೆ. ಅಂದಹಾಗೆ, ಚಿತ್ರತಂಡ ಮೊದಲು ಈ ಚಿತ್ರಕ್ಕೆ ಬೇರೆಯದೇ ಶೀರ್ಷಿಕೆ ಇಡಲು ಯೋಜಿಸಿತ್ತು; ಅಷ್ಟೇ ಅಲ್ಲ, ಅದು ಕನ್ನಡದ ಜನಪ್ರಿಯ ನಟಿಯೊಬ್ಬರ ಹೆಸರಾಗಿತ್ತು!
-
ಸ್ಯಾಂಡಲ್‌ವುಡ್‌ನಲ್ಲಿ ಸದ್ಯ ಮನೋಜ್ ಕುಮಾರ್ ನಿರ್ದೇಶನದ ‘ಪ್ರೇಮದ ಊರಲಿ’ ಚಿತ್ರದ ಅಬ್ಬರ ಜೋರಾಗಿದೆ. ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿರುವ ಈ ಸಿನಿಮಾ, ಇತ್ತೀಚಿನ ದಿನಗಳಲ್ಲಿ ಮಂಕಾಗಿದ್ದ ಕನ್ನಡ ಚಿತ್ರರಂಗಕ್ಕೆ ಹೊಸ ಹುರುಪು ತಂದುಕೊಟ್ಟಿದೆ. ಪ್ರೇಕ್ಷಕರ ಮನಗೆದ್ದು ಭರ್ಜರಿ ಕಮಾಯಿ ಮಾಡುತ್ತಿರುವ ಈ ಸಿನಿಮಾದ ಬಗ್ಗೆ ಇದೀಗ ಮತ್ತೊಂದು ಕುತೂಹಲಕಾರಿ ವಿಚಾರ ಹೊರಬಿದ್ದಿದೆ. ಅದೇನೆಂದರೆ, ಚಿತ್ರತಂಡ ಮೊದಲು ಈ ಚಿತ್ರಕ್ಕೆ ಬೇರೆಯದೇ ಶೀರ್ಷಿಕೆ ಇಡಲು ಯೋಜಿಸಿತ್ತು; ಅಷ್ಟೇ ಅಲ್ಲ, ಅದು ಕನ್ನಡದ ಜನಪ್ರಿಯ ನಟಿಯೊಬ್ಬರ ಹೆಸರಾಗಿತ್ತು!
‘ರುಕ್ಮಿಣಿ ವಸಂತ’ ಶೀರ್ಷಿಕೆಯ ಹಿಂದಿತ್ತು ರೋಚಕ ಕಥೆ!
ಹೌದು, ಚಿತ್ರತಂಡ ಆರಂಭದಲ್ಲಿ ಈ ಚಿತ್ರಕ್ಕೆ ‘ರುಕ್ಮಿಣಿ ವಸಂತ’ ಎಂದೇ ನಾಮಕರಣ ಮಾಡಿತ್ತು. ಕನ್ನಡ ಮಾತ್ರವಲ್ಲದೆ ಪರಭಾಷೆಗಳಲ್ಲೂ ಸ್ಟಾರ್ ನಟಿಯಾಗಿ ಮಿಂಚುತ್ತಿರುವ ರುಕ್ಮಿಣಿ ವಸಂತ್ ಅವರ ಹೆಸರನ್ನೇ ಶೀರ್ಷಿಕೆಯನ್ನಾಗಿ ಆರಿಸಿಕೊಂಡಿದ್ದು ಸಹಜವಾಗಿಯೇ ಚಿತ್ರರಂಗದಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿತ್ತು. ಆದರೆ ಈ ಹೆಸರು ಇಡಲು ಪ್ರಚಾರ ಕಾರಣವಾಗಿರಲಿಲ್ಲ, ಚಿತ್ರದ ಕಥೆಯಲ್ಲೂ ಬಲವಾದ ಕಾರಣವಿತ್ತು.
ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ಒಂದು ಪಾತ್ರಕ್ಕೆ ‘ರುಕ್ಮಿಣಿ’ ಹಾಗೂ ಮತ್ತೊಂದು ಪಾತ್ರಕ್ಕೆ ‘ವಸಂತ’ ಎಂದು ಹೆಸರಿಡಲಾಗಿತ್ತು. ಈ ಎರಡೂ ಪಾತ್ರಗಳ ಹೆಸರುಗಳನ್ನು ಜೋಡಿಸಿ ‘ರುಕ್ಮಿಣಿ ವಸಂತ’ ಎಂದು ಕರೆಯಲಾಗಿತ್ತು. ಸದ್ಯ ತೆರೆಯ ಮೇಲೆ ನಟಿ ತಪಸ್ವಿನಿ ಪೂಣಚ್ಚ ‘ರುಕ್ಮಿಣಿ’ಯಾಗಿ ಮಿಂಚಿದ್ದರೆ, ನಟಿ ರಮಿಕಾ ಶಿವು ‘ವಸಂತ’ ಪಾತ್ರಕ್ಕೆ ಜೀವ ತುಂಬಿದ್ದಾರೆ.
ಈ ಹಿಂದೆ ರಿಲೀಸ್ ಆಗಿದ್ದ ಪೋಸ್ಟರ್
Shri Mahadev has now taken on the name Shree Ram! Here's the first look poster of his upcoming film, '𝐑𝐮𝐤𝐦𝐢𝐧𝐢 𝐕𝐚𝐬𝐚𝐧𝐭𝐡𝐚' #ShreeRama #HBDShreeRama #RukminiVasantha https://t.co/cpjI2Z32cN
— Bhargavi (@IamHCB) September 7, 2024
ರುಕ್ಮಿಣಿ ವಸಂತ್‌ಗೆ ಹೋಗಿತ್ತಾ ಆಫರ್?
ನಿರ್ದೇಶಕ ಮನೋಜ್ ಕುಮಾರ್ ಅವರಿಗೆ ನಟಿ ರುಕ್ಮಿಣಿ ವಸಂತ್ ಅವರ ನಟನೆ ಹಾಗೂ ವ್ಯಕ್ತಿತ್ವದ ಮೇಲೆ ಅಪಾರ ಅಭಿಮಾನ. ಈ ಕಾರಣಕ್ಕಾಗಿಯೇ ಚಿತ್ರದ ಪ್ರಮುಖ ಪಾತ್ರವೊಂದಕ್ಕೆ ಖುದ್ದು ರುಕ್ಮಿಣಿ ವಸಂತ್ ಅವರನ್ನೇ ನಾಯಕಿಯನ್ನಾಗಿ ಕರೆತರಬೇಕೆಂಬುದು ಅವರ ತೀವ್ರ ಆಸೆಯಾಗಿತ್ತು. ಇದಕ್ಕಾಗಿ ಚಿತ್ರತಂಡ ಪ್ರಯತ್ನಿಸಿತಾದರೂ, ದಿನಾಂಕಗಳ ಹೊಂದಾಣಿಕೆ ಕೊರತೆ ಹಾಗೂ ಕಾಲ್‌ಶೀಟ್ ಸಮಸ್ಯೆಗಳಿಂದಾಗಿ ಅವರನ್ನು ಸಂಪರ್ಕಿಸಿ ಅಂತಿಮಗೊಳಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಅವರನ್ನು ಕರೆತರುವ ಯೋಜನೆ ಕೈಗೂಡದಿದ್ದರೂ, ಅವರ ಹೆಸರಿನ ಮೇಲಿನ ಪ್ರೀತಿಯಿಂದಾಗಿ ಇಬ್ಬರು ನಾಯಕಿಯರ ಪಾತ್ರಗಳಿಗೆ ‘ರುಕ್ಮಿಣಿ’ ಮತ್ತು ‘ವಸಂತ’ ಎಂದು ಹೆಸರಿಟ್ಟು, ನಂತರ ಚಿತ್ರಕ್ಕೆ ‘ಪ್ರೇಮದ ಊರಲಿ’ ಎಂದು ಅಂತಿಮ ಶೀರ್ಷಿಕೆ ನೀಡಲಾಯಿತಂತೆ.
Premada Oorali Review: ಅಬ್ಬರವಿಲ್ಲದ ಹಳ್ಳಿ ಸೊಗಡಿನ ಮನಮುಟ್ಟುವ ಅಪ್ಪ- ಮಗನ ಬಾಂಧವ್ಯದ ಕಥೆ
ಬಾಕ್ಸ್ ಆಫೀಸ್‌ನಲ್ಲಿ ಮುಂದುವರಿದ ಕಲೆಕ್ಷನ್ ಸುನಾಮಿ
ಚಿತ್ರಮಂದಿರಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿರುವ ‘ಪ್ರೇಮದ ಊರಲಿ’ ಕೇವಲ 10 ದಿನಗಳಲ್ಲಿ ಬರೋಬ್ಬರಿ 15 ಕೋಟಿ ರೂಪಾಯಿ ಗಳಿಸಿ ಮುನ್ನುಗ್ಗುತ್ತಿದೆ. ಅಕ್ಟೋಬರ್ 15ರ ವರೆಗೆ ಯಾವುದೇ ದೊಡ್ಡ ಬಜೆಟ್‌ನ ಅಥವಾ ತಾರಾಗಣದ ಚಿತ್ರಗಳು ತೆರೆಕಾಣುತ್ತಿಲ್ಲವಾದ್ದರಿಂದ ಚಿತ್ರಕ್ಕೆ ಯಾವುದೇ ಪ್ರಬಲ ಪೈಪೋಟಿ ಇಲ್ಲದಂತಾಗಿದೆ. ಸದ್ಯದ ಟ್ರೆಂಡ್ ಮುಂದುವರಿದರೆ ಮುಂಬರುವ ದಿನಗಳಲ್ಲಿ ಚಿತ್ರ ಅನಾಯಾಸವಾಗಿ ಇನ್ನೂ 15 ರಿಂದ 20 ಕೋಟಿ ರೂಪಾಯಿ ಬಾಚಿಕೊಳ್ಳಲಿದೆ ಎನ್ನಲಾಗುತ್ತಿದೆ.