Bhagya Lakshmi Serial: ಪೂಜಾ ಮದುವೆ ಸಂಭ್ರಮದಲ್ಲಿ ಲಕ್ಷ್ಮೀ ಕೈಯಲ್ಲಿದ್ದ ಮಗು ಯಾರದ್ದು ಗೊತ್ತೇ?: ಇಲ್ಲಿದೆ ನೋಡಿ
ಲಕ್ಷ್ಮೀ ಮಗುವನ್ನು ಹಿಡಿದುಕೊಂಡು ಪೂಜಾ - ಕಿಶನ್ ಮದುವೆಗೆ ಆಗಮಿಸಿದ್ದಳು. ಆದರೆ, ನಿಜ ಜೀವನದಲ್ಲಿ ಲಕ್ಷ್ಮೀ/ ಭೂಮಿಕಾ ರಮೇಶ್ ಇನ್ನೂ ಸಿಂಗಲ್, ಅವರಿಗೆ ಮದುವೆ ಆಗಿಲ್ಲ. ಹೀಗಿರುವಾಗ ಲಕ್ಷ್ಮೀ ಕೈಯಲ್ಲಿದ್ದ ಆ ಮಗು ಯಾರದ್ದು ಎಂಬ ಕುತೂಹಲ ಎಲ್ಲರಲ್ಲಿತ್ತು.

Bhagya lakshmi serial

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi serial) ಧಾರಾವಾಹಿಯಲ್ಲಿ ಪೂಜಾ-ಕಿಶನ್ ಮದುವೆ ಎಲ್ಲರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆದಿದೆ. ಭಾಗ್ಯಾಗೆ ಎದುರಾಗಿದ್ದ ಎಲ್ಲ ಸಂಕಷ್ಟ ದೂರವಾಗಿ ಆದೀಶ್ವರ್ ಕೂಡ ತನ್ನ ತಪ್ಪನ್ನೆಲ್ಲ ಒಪ್ಪಿಕೊಂಡು ಮದುವೆ ಸುಗಮವಾಗಿ ಆಗುವಂತೆ ಮಾಡಿದ್ದಾರೆ. ಈ ಮದುವೆಯ ವಿಶೇಷತೆ ಎಂದರೆ ಇದಕ್ಕೆ ಭಾಗ್ಯ ತಂಗಿ ಲಕ್ಷ್ಮೀ ಹಾಗೂ ಆಕೆಯ ಪತಿ ವೈಷ್ಣವ್ ಕೂಡ ಬಂದಿದ್ದರು. ತನ್ನ ಮುದ್ದಾದ ಮಗುವನ್ನು ಹಿಡಿದುಕೊಂಡು ಲಕ್ಷ್ಮೀ ಮದುವೆಗೆ ಹಾಜರಾಗಿದ್ದಳು.
ಲಕ್ಷ್ಮೀ ಗಂಡ ವೈಷ್ಣವ್ ಒಂದು ದಿನ ಮುಂಚೆಯೇ ಈ ಮದುವೆಗೆ ಬಂದಿದ್ದ. ಬಳಿಕ ಲಕ್ಷ್ಮೀ ತನ್ನ ಮಗು ಹಿಡಿದುಕೊಂಡು ಮದುವೆಗೆ ಬಂದಿದ್ದಳು. ಭಾಗ್ಯ ಹಾಗೂ ಲಕ್ಷ್ಮೀ ಇಬ್ಬರೂ ಅಕ್ಕ-ತಂಗಿಯರು. ಲಕ್ಷ್ಮೀ - ವೈಷ್ಣವ್ ಮದುವೆ ನಡೆದ ಮೇಲೆ ಭಾಗ್ಯಲಕ್ಷ್ಮೀ ಸಂಸಾರ ಎರಡು ಭಾಗವಾಯಿತು. ಲಕ್ಷ್ಮೀ ಸಂಸಾರದ ಕಥೆ ಲಕ್ಷ್ಮೀ ಬಾರಮ್ಮ ಸೀರಿಯಲ್ ಆಯ್ತು. ಕೆಲ ತಿಂಗಳ ಹಿಂದೆ ಲಕ್ಷ್ಮೀ ಬಾರಮ್ಮ ಎಂಡ್ ಆಯ್ತು. ಈ ಧಾರಾವಾಹಿಯ ಕ್ಲೈಮ್ಯಾಕ್ಸ್‌ನಲ್ಲಿ ಲಕ್ಷ್ಮೀ ಗರ್ಭಿಣಿಯಾಗಿದ್ದಳು.
ಹೀಗಾಗಿ ಲಕ್ಷ್ಮೀ ಮಗುವನ್ನು ಹಿಡಿದುಕೊಂಡು ಪೂಜಾ - ಕಿಶನ್ ಮದುವೆಗೆ ಆಗಮಿಸಿದ್ದಳು. ಆದರೆ, ನಿಜ ಜೀವನದಲ್ಲಿ ಲಕ್ಷ್ಮೀ/ ಭೂಮಿಕಾ ರಮೇಶ್ ಇನ್ನೂ ಸಿಂಗಲ್, ಅವರಿಗೆ ಮದುವೆ ಆಗಿಲ್ಲ. ಹೀಗಿರುವಾಗ ಲಕ್ಷ್ಮೀ ಕೈಯಲ್ಲಿದ್ದ ಆ ಮಗು ಯಾರದ್ದು ಎಂಬ ಕುತೂಹಲ ಎಲ್ಲರಲ್ಲಿತ್ತು. ಕಲರ್ಸ್ ಬಿಡುಗಡೆ ಮಾಡಿದ ಪ್ರೊಮೋಗೆ ಅನೇಕರು ಅದು ಯಾರ ಮಗು ಎಂದು ಕಮೆಂಟ್ ಮಾಡಿದ್ದರು. ಇದೀಗ ಅದಕ್ಕೆ ಉತ್ತರ ಸಿಕ್ಕಿದೆ.
ಈ ಪಾಪು ಜೊತೆ ಭಾಗ್ಯ ಉರ್ಫ್ ಸುಷ್ಮಾ ಕೆ.ರಾವ್ ಅವರು ಕ್ಯೂಟ್ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ನೀರಿನಲ್ಲಿ ಪಾಪುವಿನ ಕಾಲವನ್ನು ಮುಳುಗಿಸುತ್ತಾ ಅದು ನಗುವಂತೆ ಮಾಡಿದ್ದಾರೆ. ಈ ಕ್ಯೂಟ್ ವಿಡಿಯೋ ನೋಡಿ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. ಅಷ್ಟೇ ಅಲ್ಲದೆ ಸುಷ್ಮಾ ಅವರು ಹಂಚಿಕೊಂಡ ಈ ವಿಡಿಯೋಕ್ಕೆ ಅಭಿಮಾನಿಯೊಬ್ಬರು, ಈ ಮಗು ಅಸಲಿಗೆ ಯಾರದ್ದು ಎಂದು ಪ್ರಶ್ನಿಸುತ್ತಿದ್ದಾರೆ. ಇದಕ್ಕೆ ಉತ್ತರಿಸಿದ ಸುಷ್ಮಾ ಇದು ಭೂಮಿಕಾಳ ಸಹೋದರನದ್ದು ಎಂದು ಹೇಳಿದ್ದಾರೆ. ಅಲ್ಲಿಗೆ ಈ ಮಗು ಲಕ್ಷ್ಮೀ ಪಾತ್ರಧಾರಿ ಭೂಮಿಕಾ ರಮೇಶ್ ಅವರ ಸಹೋದರನದ್ದು ಎನ್ನುವುದು ತಿಳಿದಿದೆ.
Bhagya Lakshmi Serial: ಕೊನೆಗೂ ನಡೆಯಿತು ಪೂಜಾ-ಕಿಶನ್ ಮದುವೆ: ಮಾತುಕೊಟ್ಟ ಆದೀಶ್ವರ್