BBK 12 Common People: ಈ ಬಾರಿ ಬಿಗ್ ಬಾಸ್ ಕನ್ನಡ ಮನೆಯೊಳಗೆ ನೀವೂ ಹೋಗಬಹುದು: ಜಸ್ಟ್ ಹೀಗೆ ಮಾಡಿ ಸಾಕು
ಈ ಬಾರಿ ಬಿಗ್ ಬಾಸ್‌ಗೆ ಜನಸಾಮಾನ್ಯರಿಗೂ ಎಂಟ್ರಿಯಿದೆ ಎಂದು ಕಲರ್ಸ್‌ಕನ್ನಡ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದೆ. ಹೌದು.. ಈ ಬಾರಿ ನೀವು ಬಿಗ್ ಬಾಸ್ ಕನ್ನಡದ ಮನೆಗೆ ಎಂಟ್ರಿ ಕೊಡಬಹುದು ಆದರೆ ಸ್ಪರ್ಧಿಯಾಗಿ ಅಲ್ಲ, ಬದಲಿಗೆ ಅತಿಥಿಯಾಗಿ. ಇದು ಹೇಗೆ?, ಇದಕ್ಕಾಗಿ ಏನೆಲ್ಲ ಮಾಡಬೇಕು? ಎಂಬ ಮಾಹಿತಿ ಇಲ್ಲಿದೆ.

BBK 12 Common People -

ಕನ್ನಡದ ಜನಪ್ರಿಯ ಹಾಗೂ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 12 (Bigg Boss Kannada) ಆರಂಭಕ್ಕೆ ದಿನಗಣನೆ ಶುರುವಾಗಿದೆ. ಇದೇ ಸೆಪ್ಟೆಂಬರ್ 28 ರಿಂದ ದೊಡ್ಮನೆ ಆಟ ಶುರುವಾಗಿದೆ. ಇತ್ತೀಚೆಗಷ್ಟೆ ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬದ ದಿನ ಬಿಗ್ ಬಾಸ್ ಕನ್ನಡ ಸೀಸನ್ 12ರ ಮೊದಲ ಪ್ರೋಮೋವನ್ನು ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿತು. ಇದರಲ್ಲಿ ಸುದೀಪ್ ಸಖತ್ ಸೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಇದೀಗ ಬಿಗ್ ಬಾಸ್ ಕಡೆಯಿಂದ ಮತ್ತೊಂದು ದೊಡ್ಡ ಅಪ್ಡೇಟ್ ಹೊರಬಿದ್ದಿದೆ.
ಬಿಗ್ ಬಾಸ್ ಶೋ ಅನ್ನು ಈ ಬಾರಿ ಕಿಚ್ಚ ಸುದೀಪ್ ಅವರೇ ಹೋಸ್ಟ್ ಮಾಡಲಿರುವುದು ಎಲ್ಲರಿಗೂ ತಿಳಿದಿದೆ. ಆದರೆ ಯಾವೆಲ್ಲಾ ಕಂಟೆಸ್ಟೆಂಟ್ ಈ ಬಾರಿ ಬಿಗ್ ಬಾಸ್ ಮನೆಗೆ ಹೋಗಬಹುದು ಎಂಬ ಪ್ರಶ್ನೆ ಮಾತ್ರ ಎಲ್ಲರಲ್ಲಿಯೂ ಇನ್ನೂ ಹಾಗೇ ಕುತೂಹಲಕಾರಿಯಾಗಿ ಉಳಿದಿದೆ. ಸೋಷಿಯಲ್ ಮೀಡಿಯಾದಲ್ಲಿ ಒಂದಿಷ್ಟು ಹೆಸರು ಓಡಾಡುತ್ತಿದ್ದರೂ ಖಚಿತ ಮಾಹಿತಿ ಇಲ್ಲ. ಇದರ ನಡುವೆ ಈ ಬಾರಿ ಬಿಗ್ ಬಾಸ್‌ಗೆ ಜನಸಾಮಾನ್ಯರಿಗೂ ಎಂಟ್ರಿಯಿದೆ ಎಂದು ಕಲರ್ಸ್‌ಕನ್ನಡ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದೆ.
ಹೌದು.. ಈ ಬಾರಿ ನೀವು ಬಿಗ್ ಬಾಸ್ ಕನ್ನಡದ ಮನೆಗೆ ಎಂಟ್ರಿ ಕೊಡಬಹುದು ಆದರೆ ಸ್ಪರ್ಧಿಯಾಗಿ ಅಲ್ಲ, ಬದಲಿಗೆ ಅತಿಥಿಯಾಗಿ. ನನ್ನ ಪ್ರೀತಿಯ ಸಮಸ್ತ ಕುಟುಂಬಕ್ಕೆ, ಬಿಗ್ ಬಾಸ್ ಮನೆಗೆ ಸ್ವಾಗತ ಎಂದು ಕಿಚ್ಚ ಸುದೀಪ್ ಅವರು ಹೇಳಿಕೊಂಡಿದ್ದಾರೆ. ಜೊತೆಗೆ ‘‘ಪ್ರೀತಿಯ ಕನ್ನಡಿಗರಿಗೆ ಒಂದು ಅತಿದೊಡ್ಡ ಅವಕಾಶ. ಸೋಮವಾರದಿಂದ ಶುಕ್ರವಾರ ಸಂಜೆ 6ರಿಂದ ರಾತ್ರಿ 10:30ರ ತನಕ ಕಲರ್ಸ್ ಕನ್ನಡ ಸೀರಿಯಲ್ಸ್ ನೋಡಿ. ಪ್ರತೀ ಸೀರಿಯಲ್‌ನಲ್ಲಿಯೂ ಕೇಳುವ ಎಲ್ಲಾ ಪ್ರಶ್ನೆಗಳಿಗೂ ಜಿಯೋ ಹಾಟ್‌ಸ್ಟಾರ್ ನಲ್ಲಿ ಸರಿಯಾಗಿ ಉತ್ತರಿಸಿ. ಲಕ್ಕಿ ವಿನ್ನರ್ಸ್‌ಗೆ ಬಿಗ್ ಬಾಸ್ ಮನೆಗೆ ಅತಿಥಿಗಳಾಗಿ ಹೋಗುವ ಸೂಪರ್ ಡೂಪರ್ ಚಾನ್ಸ್ ಎಂದು ವಿಡಿಯೋದಲ್ಲಿ ಹೇಳಲಾಗಿದೆ.
ಬಿಗ್ ಬಾಸ್ ಮನೆಗೆ ಅತಿಥಿಯಾಗಿ ಎಂಟ್ರಿ ಕೊಡಲು ಅದ್ಭುತ ಅವಕಾಶ!
— Colors Kannada (@ColorsKannada) September 6, 2025
ಬಿಗ್ ಬಾಸ್ GRAND OPENING | ಸೆಪ್ಟೆಂಬರ್ 28#BiggBossKannada12 #BBK12 #ColorsKannada #AdeBeruHosaChiguru #ಕಲರ್ಫುಲ್ಕತೆ #colorfulstory #KicchaSudeep #CKPromo pic.twitter.com/om5smqU15c
ಸಂಜೆ 6 ರಿಂದ 10:30ರ ವರೆಗ ಪ್ರಸಾರವಾಗುವ ದೃಷ್ಟಿ ಬೊಟ್ಟು, ಪ್ರೇಮಕಾವ್ಯ, ಭಾಗ್ಯಲಕ್ಷ್ಮೀ, ಮುದ್ದು ಸೊಸೆ, ನಿನಗಾಗಿ, ಭಾರ್ಗವಿ ಎಲ್.ಎಲ್.ಬಿ, ನಂದ ಗೋಕುಲ, ಯಜಮಾನ ಮತ್ತು ರಾಮಾಚಾರಿ ಧಾರಾವಾಹಿಗಳನ್ನು ನೋಡಿ ಅದರಲ್ಲಿ ಕೇಳಿದ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿ ಬಿಗ್ ಬಾಸ್ ಮನೆಗೆ ನೀವೂ ಹೋಗಬಹುದು. ಈ ಮೂಲಕ ವಾಹಿನಿಯು ತನ್ನ ಸೀರಿಯಲ್ TRP ಹೆಚ್ಚಿಸುವ ಪ್ಲ್ಯಾನ್ ಜೊತೆಗೆ, ಬಿಗ್ ಬಾಸ್‌ಗೆ ಜನಸಾಮಾನ್ಯರಿಗೂ ಅವಕಾಶ ನೀಡಲು ಹೊರಟಿದೆ.
JaiLalitha Serial: ರಾಕಿಂಗ್ ಸ್ಟಾರ್ ಯಶ್ನ ಮದುವೆ ಆಗೋ ಕನಸು: ಬರುತ್ತಿದೆ ಹೊಸ ಸೀರಿಯಲ್ ಜೈಲಲಿತಾ